Latest Updates
-
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು
ಅನಂತ್ ಅಂಬಾನಿ ಕೈಯಲ್ಲಿದೆ ವಿಶ್ವದ ದುಬಾರಿ ವಾಚ್..! ತಯಾರಿಕೆಗೆ 1 ಲಕ್ಷ ಗಂಟೆ ಬೇಕು..!!
ವಿಶ್ವದ ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬರಾಗಿರುವ ಮುಖೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ ಕಳೆದರೆಡು ವರ್ಷದಿಂದ ಸುದ್ದಿಯಲ್ಲಿದ್ದಾರೆ. ಅವರ ಐಷಾರಾಮಿ ಜೀವನ ಶೈಲಿ ಹಾಗೂ ಮದುವೆಯ ವಿಚಾರವಾಗಿ ಅವರು ಸುದ್ದಿಯಾಗಿದ್ದರು. ಅವರ ಮದುವೆ ಸಮಾರಂಭದಲ್ಲಿ ವಿಶ್ವದ ಅಗ್ರಗಣ್ಯ ಉದ್ಯಮಿಗಳು, ಶ್ರೀಮಂತರು ಆಗಮಿಸಿದ್ದರು, ಇದು ವಿಶ್ವದ ದುಬಾರಿ ವಿವಾಹದಲ್ಲಿ ಒಂದಾಗಿತ್ತು.
ಅನಂತ್ ಅಂಬಾನಿ ಅವರ ವಾಚ್‌ಗಳ ಕಲೆಕ್ಷನ್ ಕೋಟಿ ಕೋಟಿ ರೂಪಾಯಿ ಮೌಲ್ಯದ್ದಾಗಿದೆ. ಅಚ್ಚರಿ ಅಂಧರೆ ಅವರ ಒಂದು ವಾಚ್ ರೆಡಿ ಮಾಡಬೇಕಾದರೆ 100000 ಗಂಟೆಗಳ ಅಗತ್ಯವಿದೆ ಎಂಬ ಅಚ್ಚರಿಯ ಮಾಹಿತಿ ಹೊರಬಿದ್ದಿದೆ. ಹಾಗೆ ಇದುವರೆಗೆ ತಯಾರಿಸಿದ ಅತ್ಯಂತ ಸಂಕೀರ್ಣವಾದ ಗಡಿಯಾರಗಳಲ್ಲಿ ಒಂದಾಗಿದೆ.

ಅವರ ಒಂದು ವಾಚ್ ತಯಾರಿಕೆಗೆ ಇಷ್ಟೊಂದು ಸುದೀರ್ಘ ಸಮಯ ಹಿಡಿದಿದ್ದರೆ ಇನ್ನು ಅದರ ಬೆಲೆ ಎಷ್ಟು ಎಂದು ತಿಳಿದರೆ ನಿಮಗೆ ಶಾಕ್ ಆಗುವುದು ಖಚಿತ. ಅವರ ಬಳಿ ರಿಚರ್ಡ್ ಮಿಲ್ಲೆ, ಪಾಟೆಕ್ ಫಿಲಿಪ್ ಮತ್ತು ಆಡೆಮರ್ಸ್ ಪಿಗುಯೆಟ್‌ನಂತಹ ಐಷಾರಾಮಿ ಬ್ರಾಂಡ್‌ಗಳ ವಾಚ್‌ಗಳನ್ನು ಧರಿಸುತ್ತಾರೆ. ಅವರ ಮದುವೆಯಲ್ಲೂ ಅವರು ಧರಿಸಿದ್ದ ಕೋಟಿ ಕೋಟಿ ರೂಪಾಯಿಯ ವಾಚ್ ಎಲ್ಲರ ಕಣ್ಣು ಕುಕ್ಕಿತ್ತು.
ಅದರಲ್ಲೂ ಫೇಸ್‌ಬುಕ್ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್ ಕೂಡ ಅವರ ವಾಚ್ ಕುರಿತು ಚಾಟ್ ನಡೆಸಿದ್ರು. ಇದು ಬಹಳ ವೈರಲ್ ಆಗಿತ್ತು. ಹಾಗೆ ಅನಂತ್ ಅಂಬಾನಿ ಅವರ ವಾಚ್ ಕಲೆಕ್ಷನ್‌ಗಳ ಕುರಿತು ತಿಳಿದುಕೊಳ್ಳಲು ಎಲ್ಲರು ಉತ್ಸುಕರಾಗಿದ್ದರು.
ಅನಂತ್ ಅಂಬಾನಿ ಅವರ ಒಂದು ವಾಚ್ ಪ್ರಾಚೀನ ವೈಟ್ ಗೋಲ್ಡ್‌ನಿಂದ ಮಾಡಲ್ಪಟ್ಟಿದೆ. ಹಾಗೆ ಇದಕ್ಕೆ ಮೊಸಳೆ ಚರ್ಮದಿಂದ ಮಾಡಲಾದ ಬೆಲ್ಟ್‌ಗಳು, ಡಯಲ್ ಬಟನ್‌ಗಳು, ಹೊಳೆಯುವ ನೇವಿ ಬ್ಲೂ ಬಣ್ಣ ಹೊಂದಿರುವ ವಾಚ್ ತುಂಬಾನೆ ಫೇಮಸ್ ಆಗಿದೆ. ಇದನ್ನು ಸಾವಿರ ಗಂಟೆಗಳ ಕಾಲ ಕಸೂತಿ ಕೆಲಸಗಳ ಮೂಲಕ ರೆಡಿ ಮಾಡಲಾಗಿದೆ. ಅದರ ಒಳ ವಿನ್ಯಾಸವೂ ಕೂಡ ಕುಸುರಿ ಕೆಲಸದಿಂದ ಕೂಡಿದ್ದಲ್ಲದೆ, ವಿಶ್ವದ ಒಂದೇ ಒಂದು ವಾಚ್ ಇದಾಗಿದೆ.
ಅದರ ರಿವರ್ಸಿಬಲ್ ಕೇಸ್, ಹ್ಯಾಂಡ್-ಗಿಲೋಚೆ ಹಾಬ್‌ನೇಲ್ ಮಾದರಿಯಿಂದ ಅಲಂಕರಿಸಲ್ಪಟ್ಟಿದೆ, ಪೇಟೆಂಟ್ ರಿವರ್ಸಿಂಗ್ ಕಾರ್ಯವಿಧಾನವನ್ನು ಒಳಗೊಂಡಿದೆ. ಗಡಿಯಾರವು ಐದು ಚಿಮಿಂಗ್ ಮೋಡ್‌ಗಳನ್ನು ನೀಡುತ್ತದೆ, ಇದರಲ್ಲಿ ಎರಡು ಪೇಟೆಂಟ್ ಪಡೆದ ವಿಶ್ವ ಪ್ರಥಮ ವಾಚ್ ಇದಾಗಿರಲಿದೆ. ದಿನಾಂಕದ ಜೊತೆಗೆ ಅಲಾರಾಮ್ ಸೇರಿ ನಾವೇ ಎಲ್ಲಾ ಸೆಟ್ಟಿಂಗ್‌ಗಳನ್ನು ಸುಲಭವಾಗಿ ಮಾಡಬಹುದಾದ ಆಪ್ಷನ್‌ಗಳು ಕೂಡ ಇವೆ.
ಹಾಗಾದ್ರೆ ಈ ವಿಶ್ವದ ಅತ್ಯಂತ ವಿಶೇಷ ವಾಚ್‌ಗಳಲ್ಲಿ ಇದು ಕೂಡ ಒಂದಾಗಿದ್ದು, ಈ ಅಪರೂಪದ ವಾಚ್‌ನ ಬೆಲೆ 8 ಮಿಲಿಯನ್ ಡಾಲರ್ ಆಗಿದೆ. ಅಂದರೆ ಭಾರತೀಯ ರೂಪಾಯಿಯಲ್ಲಿ ಬರೋಬ್ಬರಿ 66.5 ಕೋಟಿ ರೂಪಾಯಿ ಆಗಲಿದೆ. ಇದು ವಿಶ್ವದ ದುಬಾರಿ ಬೆಲೆಯ ವಾಚ್‌ಗಳಲ್ಲಿ ಒಂದಾಗಿದೆ. ಇದನ್ನು ಅನಂತ್ ಅಂಬಾನಿ ಧರಿಸುತ್ತಾರೆ. ಹಾಗೆ ಈ ವಾಚ್ ಮಾಡಲು ಸುಮಾರು 1 ಲಕ್ಷ ಗಂಟೆಗಳ ಶ್ರಮ ವಹಿಸಲಾಗಿದೆ.
ಅನಂತ್ ಅಂಬಾನಿ ಬರಿ ವಾಚ್ ಕಲೆಕ್ಷನ್ ಬಗ್ಗೆ ಆಸಕ್ತಿ ಹೊಂದಿರುವುದು ಮಾತ್ರವಲ್ಲ ಐಷಾರಾಮಿ ಕಾರುಗಳ ಕಲೆಕ್ಷನ್ ಕೂಡ ಇದೆ, ವಿಶ್ವದ ದುಬಾರಿ ಕಾರುಗಳಲ್ಲಿ ಒಂದು ಅವರ ಬಳಿ ಇದೆ. ರೋಲ್ಸ್ ರಾಯ್ಸ್ ಕುಲ್ಲಿನನ್ ಎಂಬ ಸುಮಾರು 8.20 ಕೋಟಿ ರೂಪಾಯಿಯ ದುಬಾರಿ ಕಾರಿನಲ್ಲಿ ಅನಂತ್ ಅಂಬಾನಿ ಸುತ್ತಾಡುತ್ತಾರೆ. 6.95-7.95 ಕೋಟಿ ರೂ. ಮೌಲ್ಯದ ರೋಲ್ಸ್ ರಾಯ್ಸ್ ಘೋಸ್ಟ್, 5.23-8.45 ಕೋಟಿ ರೂ. ಮೌಲ್ಯದ ಬೆಂಟ್ಲಿ ಕಾಂಟಿನೆಂಟಲ್, 8.89 ಕೋಟಿ ರೂ. ಮೌಲ್ಯದ ಲಂಬೋರ್ಗಿನಿ ರೆವಲ್ಟೊ Mercedes-Benz G63 AMG, ರೇಂಜ್ ರೋವರ್ ವೋಗ್, ಫೆರಾರಿ SF90 ಸ್ಟ್ರಾಡೇಲ್ ಸೇರಿ ಹಲವು ದುಬಾರು ಕಾರು ಅವರ ಕಲೆಕ್ಷನ್‌ನಲ್ಲಿದೆ.



Click it and Unblock the Notifications
