Latest Updates
-
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು ಒಟ್ಟಾಗಿ ಕುಳಿತು ಈ ಕೆಲಸ ಮಾಡಿದರೆ ಟೆನ್ಷನ್ ಫ್ರೀ! -
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ!
ಅಂಬಾನಿ ಪುತ್ರನ ವಿವಾಹದಲ್ಲಿ 2,500 ಬಗೆಯ ಖಾದ್ಯ..! ಇನ್ನೂ ಏನೇನಿದೆ ಗೊತ್ತಾ?
ವಿಶ್ವ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಉದ್ಯಮಿ ಮುಖೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿಯ ವಿವಾಹ ಮಹೋತ್ಸವ ದೇಶದೆಲ್ಲೆಡೆ ಈಗ ಭಾರೀ ಸದ್ದು ಮಾಡುತ್ತಿದೆ. ನಾಳೆಯಿಂದ ಮೂರು ದಿನಗಳ ಕಾಲ ಮದುವೆ ಕಾರ್ಯಕ್ರಮಗಳು ನಡೆಯಲಿದ್ದು, ಈಗಾಗಲೇ ಶಾಸ್ತ್ರಗಳಿಂದ ಗಮನ ಸೆಳೆಯುತ್ತಿದೆ.
ಇನ್ನು ದೇಶದ ಶ್ರೀಮಂತ ಮದುವೆ ಕಾರ್ಯಕ್ರಮ ಅಂದಮೇಲೆ ಅಲ್ಲಿ ಜನ ಅಚ್ಚರಿ ಪಡುವ ಹತ್ತಾರು ವಿಷಯಗಳಿರುತ್ತವೆ. ಅದರಲ್ಲೂ ಊಟ, ಉಪಚಾರದ ವಿಚಾರದಲ್ಲಿ ಈ ಮದುವೆ ವಿಶ್ವದ ಗಮನ ಸೆಳೆಯುತ್ತಿದೆ. ಗುಜರಾತ್‌ನ ಜಾಮ್ ನಗರದಲ್ಲಿ ಈ ಮದುವೆ ಮಾರ್ಯಕ್ರಮ ನಡೆಯಲಿದ್ದು, ಮದುವೆಯಲ್ಲಿ ಭಾಗಿಯಾಗುವ ಗಣ್ಯರಿಗೂ ಭರ್ಜರಿ ಭೋಜನ ಕಾದಿದೆ.
ಈ ವಿವಾಹಕ್ಕೆ ಸಾವಿರಾರು ಬಗೆಯ ಆಹಾರ ಪದಾರ್ಥಗಳ ತಯಾರಿಸಲು ಸಾವಿರಾರು ಬಾಣಸಿಗರು ಭಾಗಿಯಾಗಲಿದ್ದಾರೆ. ಜೊತೆಗೆ ಸಾವಿರಾರು ಬಗೆಯ ತಿನಿಸುಗಳು ಇರಲಿದೆಯಂತೆ. ಹಾಗಾದರೆ ಈ ಮದುವೆ ಸಮಾರಂಭದ ವಿಶೇಷತೆಗಳೇನು? ಆ ಭೋಜನಕೂಟದಲ್ಲಿ ಏನೆಲ್ಲಾ ಇರಲಿದೆ ಎಂಬುದನ್ನು ನೋಡೋಣ.

ಈ ಮದುವೆ ಸಮಾರಂಭಕ್ಕೆ 25ಕ್ಕೂ ಹೆಚ್ಚು ಬಾಣಸಿಗರ ತಂಡ ಕೆಲಸ ಮಾಡಲಿದೆಯಂತೆ. ಪಾರ್ಸಿ, ಥಾಯ್, ಮೆಕ್ಸಿಕನ್, ಜಪಾನೀಸ್, ಇಂದೋರಿ ಬಗೆಯ ಆಹಾರಗಳು ಇರಲಿವೆಯಂತೆ. ಮೂರು ದಿನಗಳ ಅವಧಿಯಲ್ಲಿ, ಒಟ್ಟು 2,500 ಖಾದ್ಯಗಳು ಮೆನುವಿನಲ್ಲಿ ಇರುತ್ತವೆ ಮತ್ತು ಕಾರ್ಯಗಳಿಗಾಗಿ ಯಾವುದೇ ತಿಂಡಿಗಳು ಮತ್ತೊಂದು ದಿನ ಮಾಡುವುದಿಲ್ಲವಂತೆ.
ಬೆಳಗಿನ ತಿಂಡಿಗೆ ಸುಮಾರು 70ಕ್ಕೂ ಹೆಚ್ಚು ಆಯ್ಕೆಗಳಿರಲಿದೆಯಂತೆ. ಊಟಕ್ಕೆ 250 ಕ್ಕೂ ಹೆಚ್ಚು ಆಯ್ಕೆಗಳು ಮತ್ತು ರಾತ್ರಿಯ ಊಟಕ್ಕೆ 250 ಕ್ಕೂ ಹೆಚ್ಚು ಆಯ್ಕೆಗಳು ಇರಲಿದೆ ಎಂದು ವರದಿಯಾಗಿದೆ. ಅತಿಥಿಗಳಿಗೆ ಸಸ್ಯಾಹಾರಿ ಭಕ್ಷ್ಯಗಳಿಗಾಗಿ ವಿಶೇಷ ವ್ಯವಸ್ಥೆ ಕೂಡ ಇದೆ.
ಅಂಬಾನಿ ಪುತ್ರನ ಹುಡುಗಿ ಯಾರು ಗೊತ್ತಾ?
ಭಾರತದ ಶ್ರೀಮಂತ ಉದ್ಯಮಿಯ ಪುತ್ರ ಕೈ ಹಿಡಿಯುತ್ತಿರುವ ಆಕೆ ಯಾರು ಎಂಬ ಕುತೂಹಲ ಎಲ್ಲರಲ್ಲೂ ಇತ್ತು. ಆಕೆಯೂ ಸಹ ಶ್ರೀಮಂತ ಮನೆತನದ ಮಗಳಾಗಿದ್ದಾಳೆ. ಎನ್ಕೋರ್ ಹೆಲ್ತ್‌ಕೇರ್‌ನ ಸಿಇಒ ವೀರೆನ್ ಮರ್ಚೆಂಟ್ ಮತ್ತು ಉದ್ಯಮಿ ಶೈಲಾ ಮರ್ಚೆಂಟ್ ಅವರ ಕಿರಿಯ ಪುತ್ರಿ ಆಗಿದ್ದಾರೆ. ಹಲವು ದಿನಗಳಿಂದಲೇ ಮದುವೆ ತಯಾರಿ ಜೋರಾಗಿ ನಡೆಯುತ್ತಿದೆ. ಎನ್ಕೋರ್ ಹೆಲ್ತ್‌ಕೇರ್ ಬರೋಬ್ಬರಿ 2 ಸಾವಿರ ಕೋಟಿ ಮೌಲ್ಯದ ಸಂಸ್ಥೆಯಾಗಿದೆ.
ಮದುವೆಗೆ ಯಾರೆಲ್ಲಾ ಬರುತ್ತಿದ್ದಾರೆ?
ಶ್ರೀಮಂತ ಉದ್ಯಮಿಯ ಮಗನ ಮದುವೆ ಅಂದ್ರೆ ಅಲ್ಲಿ ಶ್ರೀಮಂತರೇ ತುಂಬಿರುತ್ತಾರೆ. ಅಂಬಾನಿ ಪುತ್ರನ ಮದುವೆಗೆ ವಿಶ್ವದ ಗಣ್ಯರಿಗೂ ಆಹ್ವಾನ ನೀಡಲಾಗಿದೆಯಂತೆ. ಅದರಲ್ಲಿ ಮೈಕ್ರೋಸಾಫ್ಟ್ ಸಿಇಓ ಬಿಲ್‌ಗೇಟ್ಸ್, ಹಾಗೂ ಮೆಟಾ ಕಂಪನಿ ಮುಖ್ಯ ಕಾರ್ಯ ನಿರ್ವಾಹಕ ಮಾರ್ಕ್ ಜುಕರ್‌ಬರ್ಗ್ ಸಹ ಭಾಗಿಯಾಗಲಿದ್ದಾರೆ ಎಂದು ವರದಿಯಾಗಿದೆ.
ಇವರ ಜೊತೆ ಮಾಧ್ಯಮ ವರದಿಗಳ ಪ್ರಕಾರ, ಆಲ್ಫಾಬೆಟ್ ಸಿಇಒ ಸುಂದರ್ ಪಿಚೈ, ಲ್ಟ್ ಡಿಸ್ನಿ ಸಿಇಒ ಬಾಬ್ ಇಗರ್, ಮೋರ್ಗನ್ ಸ್ಟಾನ್ಲಿ ಸಿಇಒ ಟೆಡ್ ಪಿಕ್, ಅಡೋಬ್ ಸಿಇಒ ಶಂತನು ನಾರಾಯಣ್, ಬ್ಲ್ಯಾಕ್‌ರಾಕ್ ಸಿಇಒ ಲ್ಯಾರಿ ಫಿಂಕ್, ಬ್ಯಾಂಕ್ ಆಫ್ ಅಮೇರಿಕಾ ಅಧ್ಯಕ್ಷ ಬ್ರಿಯಾನ್ ಥಾಮಸ್ ಮೊಯ್ನಿಹಾನ್ ಹಾಜರಿರಲಿದ್ದಾರೆ ಎನ್ನಲಾಗಿದೆ. ಇವರ ಜೊತೆಗೆ ಬಾಲಿವುಡ್‌ನ ಬಹುತೇಕ ಎಲ್ಲರಿಗೂ ಆಹ್ವಾನವಿದ್ದು, ಎಲ್ಲರು ಭಾಗಿಯಾಗುವ ನಿರೀಕ್ಷೆ ಇದೆ.
51 ಸಾವಿರ ಜನರಿಗೆ ಊಟ
ನಿನ್ನೆ ಜಾಮ್‌ನಗರದ ರಿಲಯನ್ಸ್ ಟೌನ್‌ಶಿಪ್ ಬಳಿಯ ಜೋಗ್ವಾಡ್ ಗ್ರಾಮದಲ್ಲಿ ಸಾಂಪ್ರದಾಯಿಕ ಗುಜರಾತಿ ಭೋಜನಕೂಟ ಏರ್ಪಡಿಸಲಾಗಿತ್ತು. ಕೆಲವು ದಿನಗಳವರೆಗೆ ಈ ಸಮಾರಂಭ ಮುಂದುವರೆಯಲಿದೆ ಎಂದು ತಿಳಿದುಬಂದಿದೆ. ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹಪೂರ್ವ ಆಚರಣೆಗಳಿಗಾಗಿ ಸ್ಥಳೀಯ ಸಮುದಾಯದ ಆಶೀರ್ವಾದ ಪಡೆಯಲು ಅಂಬಾನಿ ಕುಟುಂಬವು ಅನ್ನ ಸೇವೆಯನ್ನು ಆಯೋಜಿಸಿದೆ.



Click it and Unblock the Notifications