Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಅನಂತ್ ಅಂಬಾನಿ ಮದುವೆಗೆ ಖರ್ಚಾಗುತ್ತಿದೆ ಸುಮಾರು 6000 ಕೋಟಿ: ಆದ್ರೂ ಅಂಬಾನಿಗೆ ನಷ್ಟವಾಗಲ್ಲ ಒಂದು ರುಪಾಯಿ!
ಭಾರತದಲ್ಲಿ ಮಾತ್ರ ವಿದೇಶದಲ್ಲಿಯೂ ಗಮನ ಸೆಳೆದಿದೆ ಅನಂತ್ ಅಂಬಾನಿ ಮದುವೆ. ಒಂದು ಸಾವಿರ ಕೋಟಿಗಿಂತಲೂ ಅಧಿಕ ಖರ್ಚು ಮಾಡಿ ಕೊನೆಯ ಮಗನ ಮದುವೆಯ ಪ್ರೀವೆಡ್ಡಿಂಗ್ ಮಾಡಿದ್ದ ಮುಖೇಶ್ ಅಂಬಾನಿ -ನೀತಾ ಅಂಬಾನಿ ಮದುವೆಗೆ 4000-5000 ಕೋಟಿ ರುಪಾಯಿ ಹಣ ಖರ್ಚು ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇದು ನಿಜವೂ ಇರಬಹುದು ಆ ಅದ್ಧೂರಿ ನೋಡಿದಾಗ, ಒಂದೊಂದು ಸೆಲೆಬ್ರಿಟಿಗೆ ಅವರು ಕೊಡುತ್ತಿರುವ ಕೋಟಿಗಟ್ಟಲೆ ಹಣ ನೋಡುವಾಗ ಅಬ್ಬಾ ಮದುವೆಗೆ ಎಷ್ಟೊಂದು ಖರ್ಚು ಮಾಡುತ್ತಿದ್ದಾರೆ ಎಂದನಿಸದೆ ಇರಲ್ಲ.

ಆದರೆ ಶ್ರೀಮಂತರು ಒಂದೇ ರುಪಾಯಿ ಆದರೂ ಅದನ್ನು ಯೋಚಿಸದೆ ಖರ್ಚು ಮಾಡಲ್ಲ, ಖರ್ಚು ಮಾಡು ಹಣ ಮತ್ತೊಂದು ರೂಪದಲ್ಲಿ ಪಡೆಯುವುದು ಹೇಗೆ ಎಂದು ಗೊತ್ತಿರುತ್ತದೆ, ಹಾಗಾಗಿ ಅವರ ಶ್ರೀಮಂತಿಕೆ ಹೆಚ್ಚಾಗುತ್ತದೆ ಹೊರತು ಕಡಿಮೆಯಾಗುವುದಿಲ್ಲ ಎಂಬ ಮಾತಿದೆ, ಅಂಬಾನಿ ವಿಷಯದಲ್ಲಿ ಅದು ನಿಜವಾಗಿದೆಯೇ? ಸಾಮಾನ್ಯ ಜನರು ನಮ್ಮಿಂದ ಮುಯ್ಯಿ ತಗೊಂಡು ಅಂಬಾನಿ ತನ್ನ ಮಗ ಮದುವೆ ಮಾಡುತ್ತಿದ್ದಾರೆ ಎಂಬುವುದರ ಹಿಂದಿನ ಲಾಜಿಕ್ ಏನು? ಅದಕ್ಕೆ ಹೇಳುವುದು ನೋಡಿ ಅಂಬಾನಿ ತಲೆ ಆ ರೀತಿ ಯೋಚಿಸುತ್ತಿರುವುದಕ್ಕೆ ಅವರು ಏಷ್ಯಾದ ಶ್ರೀಮಂತನಾಗಿರುವುದು.
ಅಂಬಾನಿ ಮಗನ ಮದುವೆ ಅಷ್ಟೊಂದು ಗ್ರ್ಯಾಂಡ್ ಆಗಿ ನಡೆಯುತ್ತಿರುವಾಗ ಜನ ನಮ್ಮ ಮುಯ್ಯಿಯ ಹಣ ಎಂದು ಟ್ರೋಲ್ ಮಾಡುತ್ತಿರುವುದೇಕೆ?
ಜಿಯೋ ಸಿಮ್ ಅನ್ನು ಫ್ರೀ ಫ್ರೀ ಎಂದು ಕೊಟ್ಟ ಮುಖೇಶ್ ಅಂಬಾನಿ ಅದರ ರೀಚಾರ್ಜ್ ಬೆಲೆ ಜಾಸ್ತಿ ಮಾಡುತ್ತಾ ಬಂದಿದ್ದರು, ಆದರೆ ಇತ್ತೀಚೆಗೆ ಜಿಯೋ ರೀಚಾರ್ಜ್ ಏಕದಂ ಹೆಚ್ಚಾಗಿರುವುದನ್ನು ನೋಡಿ ಸಾಮಾನ್ಯ ಜನರು ಕಂಗಲಾಗಿದ್ದಾರೆ. ಇಷ್ಟೊಂದ ಹಣವನ್ನು ನೆಟ್‌ಪ್ಯಾಕ್‌ಗೆ ಹಾಕಲು ಕಷ್ಟ ಅಂತಿದ್ದಾರೆ, ಆದರೆ ಬೇರೆ ಆಯ್ಕೆ ಸದ್ಯಕ್ಕೆ ಅವರ ಮುಂದಿಲ್ಲ, ಹೀಗಾಗಿ ಅನಿವಾರ್ಯವಾಗಿ ಜಿಯೋ ಸೂಚಿಸುವ ದುಡ್ಡು ಕೊಟ್ಟು ರೀಚಾರ್ಜ್ ಮಾಡಿಕೊಳ್ಳಲೇಬೇಕಾದ ಅನಿವಾರ್ಯತೆ. ಮಗನ ಮದುವೆ ಸಮಯದಲ್ಲಿ ಹಣ ಹೆಚ್ಚು ಮಾಡಿರುವುದರಿಂದ ಜನರು ಅಂಬಾನಿ ನಮ್ಮಿಂದ ಹಣ ಪಡೆದು ಮದುವೆ ಮಾಡುತ್ತಿದ್ದಾರೆ ಎಂದು ಟ್ರೋಲ್ ಮಾಡುತ್ತಿದ್ದಾರೆ.
ಜನರ ಲೆಕ್ಕಾಚಾರ ಹೀಗಿದೆ ನೋಡಿ:
ಮೊಬೈಲ್, ಟಿವಿ ಹೀಗೆ ರೀಚಾರ್ಜ್ ಬೆಲೆ ಹೆಚ್ಚಾಗಿದೆ, ಒಬ್ಬರು ಹೀಗೆ ವಿವರಿಸಿದ್ದಾರೆ. 666 ರುಪಾಯಿ ಇತ್ತು, ಈಗ 799 ಆಗಿದೆ, 133 ಹೆಚ್ಚಾಗಿದೆ, ನಮ್ಮನ್ನು ಕೇಳದೆ ಅಂಬಾನಿ ಅವರ ಮಗನ ಮದುವೆಗೆ ಅವರೇ ಮುಯ್ಯಿ ಹಾಕಿಸಿಕೊಂಡಿದ್ದಾರೆ. 46 ಕೋಟಿ ಜಿಯೋ ಬಳಕೆದಾರರಿದ್ದಾರೆ ಅವರಿಂದ 133 ಹೆಚ್ಚು ಬಂದರೆ ಅಲ್ಲಿಗೆ 6118 ಕೋಟಿ ಬರುತ್ತದೆ, ಮಗನ ಮದುವೆಗೆ ಅಂಬಾನಿ ಖರ್ಚು ಮಾಡುತ್ತಿರುವುದು 6000 ಕೋಟಿಯಾದರೂ ಆ ಹಣ ಒಂದೇ ತಿಂಗಳಿನಲ್ಲಿ ಬಂದಾಯ್ತು.
ಅಂಬಾನಿ ಮದುವೆಗೆ ಖರ್ಚು ಮಾಡುತ್ತಿರುವುದು ತನ್ನ ಸಂಪತ್ತಿನ ಶೇ. 1ರಷ್ಟು
ಎಲ್ಲರೂ ಅಂಬಾನಿ ಮಗನ ಮದುವೆಗೆ ಖರ್ಚು ಮಾಡುತ್ತಿರುವ ರೀತಿ ನೋಡಿ ಬೆರಗಾಗಿದ್ದಾರೆ. ಒಬ್ಬ ಹಾಡುಗಾರನಿಗೆ ಕೊಟ್ಟಿರುವುದು 83 ಕೋಟಿ, ಒಂದು ಮದುವೆ ಆಮಂತ್ರಣ ಪತ್ರಿಕೆಗೆ 6-7 ಲಕ್ಷ ಹೀಗೆ ಎಲ್ಲದರಲ್ಲಿಯೂ ಲಕ್ಷುರಿ, ಆದರೆ ಇಷ್ಟೆಲ್ಲಾ ಹಣ ಖರ್ಚಾಗುತ್ತಿದ್ದರೂ ಅಂಬಾನಿಗೆ ಅದು ಲೆಕ್ಕಕ್ಕೆ ಬರಲ್ಲ, ಏಕೆಂದರೆ ಅಂಬಾನಿ ಬಳಿ ಅಷ್ಟೊಂದು ಸಂಪತ್ತು ಇದೆ. ಇದೀಗ ರೀಚಾರ್ಜ್ ಬೆಲೆ ಕೂಡ ಹೆಚ್ಚು ಮಾಡಿ ಇನ್ನೂ ಪ್ರಾಫಿಟ್ ಮಾಡಿಕೊಂಡಿದ್ದಾರೆ, ಹಾಗಾಗಿ ಅಂಬಾನಿ ಅಷ್ಟೊಂದು ದುಡ್ಡು ಖರ್ಚು ಮಾಡಿದರೆ ಮುಂದೆ ಅವರಿಗೆ ಹೊಡೆತ ಬೀಳಲ್ವವೇ ಎಂದೆಲ್ಲಾ ಯೋಚಿಸಬೇಡಿ, ಅದೇನಿದ್ದರೂ ನಮಗೆ ... ವರ್ಷದಲ್ಲಿ 5 ಲಕ್ಷ ದುಡಿಯುತ್ತೇವೆ ಆಡಂಬರ ತೋರಿಸಲು ಇನ್ನೊಂದು 5 ಲಕ್ಷ ಸಾಲ ಮಾಡಿ ಒದ್ದಾಡುತ್ತೇವೆ, ಆದರೆ ಅಂಬಾನಿ ಒಂದು ರುಪಾಯಿಯಿಂದ ಒಂದು ಲಕ್ಷ ಮಾಡುವುದು ಹೇಗೆ ಎಂದು ಯೋಚಿಸುತ್ತಿರುತ್ತಾರೆ.
ಅದ್ಧೂರಿ ಮದುವೆ ಹಿಂದೆ ಟ್ಯಾಕ್ಸ್ ಲೆಕ್ಕಚಾರವೂ ಇದೆಯಂತೆ
ಹೌದು ಬಿಗ್‌ಬಾಸ್‌ನಲ್ಲಿ 50 ಲಕ್ಷ ಬಹುಮಾನ ಅಂತ ಇರುತ್ತದೆ, ಟ್ಯಾಕ್ಸ್ ಎಲ್ಲಾ ಕಟ್ಟಾಗಿ ಕೈ ಸೇರುವುದು 35 ಲಕ್ಷದಷ್ಟು, ಹೀಗೆ ನಮಗೆ ಸಿಗುವ ಯಾವುದೇ ಉಡುಗೊರೆಯಾದರೂ ಟ್ಯಾಕ್ಸ್ ಕಟ್ಟಬೇಕು. ಈ ಲಾಟರಿಯಿಂದ ಎರಡು ಕೋಟಿ ಮನೆ ಫ್ರೀಯಾಗಿ ಸಿಕ್ಕರೂ ಅದಕ್ಕೂ 75 ಲಕ್ಷದಷ್ಟು ಟ್ಯಾಕ್ಸ್ ಇರುತ್ತದೆ, ಆದರೆ ಮದುವೆಯ ಉಡುಗೊರೆಯಲ್ಲಿ ಯಾವುದೇ ಟ್ಯಾಕ್ಸ್ ಇಲ್ಲ, ಅದು ಎಷ್ಟೇ ದೊಡ್ಡ ಮೊತ್ತವಾದರೂ ಸರಿ. ಹಾಗಾಗಿ ಅಂಬಾನಿ ಸಾವಿರಾರು ಕೋಟಿಯ ಆಸ್ತಿ ಮಗನ ಮದುವೆಗೆ ಉಡುಗೊರೆ ಕೊಟ್ಟರು ಎಂದರೆ ಅಲ್ಲಿಯೂ ಟ್ಯಾಕ್ಸ್ ಉಳಿತಾಯ ಆಗಿರುತ್ತದೆ.
ಈಗ ಹೇಳಿ ನಾವು ಸ್ವಲ್ಪ ಅಂಬಾನಿ ರೀತಿ ಯೋಚಿಸಲು ಕಲಿತರ ಈ ಬೆಲೆ ಏರಿಕೆಯ ಕಾಲದಲ್ಲಿ ಬದುಕಿಕೊಳ್ಳುತ್ತೇವೆ ಅಲ್ವಾ?



Click it and Unblock the Notifications
