Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ತಾಯಿಯಿಂದ ಬೇರ್ಪಟ್ಟಿದ್ದ ಮರಿ ಆನೆ ರಕ್ಷಣೆ..! ಸಿನಿಮಾ ಮಾಡಬಹುದು ಎಂದ ಆನಂದ್ ಮಹೀಂದ್ರ
ಆನೆಗಳು ಆಹಾರ ಅರಸಿ ಕಾಡಿನಿಂದ ನಾಡಿನತ್ತ ಹೆಜ್ಜೆ ಹಾಕುತ್ತಿರುತ್ತವೆ. ಅಲ್ಲದೆ ರೈತರಿಗೂ ಬಹಳಷ್ಟು ನಷ್ಟಕ್ಕೆ ಕಾರಣವಾಗುತ್ತವೆ. ಆದರೆ ಅವುಗಳು ಸಹ ಮಾನವರಂತೆಯೇ ಸಮೂಹದೊಂದಿಗೆ ಬದುಕುತ್ತವೆ. ಹಾಗೆ ಆಹಾರ ಅರಸಿ ಹೆಜ್ಜೆಹಾಕುತ್ತಿದ್ದ ಆನೆಯೊಂದು ತನ್ನ ಮರಿಯನ್ನು ಕಳೆದುಕೊಂಡಿತ್ತು. ತಾಯಿಯಿಂದ ಬೇರ್ಪಟ್ಟಿದ್ದ ಮರಿ ಆನೆ ಕಾಡಿನಲ್ಲಿ ಅಡ್ಡಾದಿಡ್ಡಿ ಅಲೆದಾಡುತ್ತಾ ತಾಯಿಗಾಗಿ ಪರದಾಡುತ್ತಿತ್ತು.
ಮನುಷ್ಯರಂತೆ ಪ್ರಾಣಿಗಳಿಗೂ ಭಾವನೆಗಳಿರುತ್ತವೆ. ಅದಲ್ಲದೆ, ಮನುಷ್ಯರಾಗಿರಲಿ ಅಥವಾ ಪ್ರಾಣಿಯಾಗಿರಲಿ ಅವರಲ್ಲಿ ಒಂದೇ ಒಂದು ವಿಷಯ ಯಾವಾಗಲೂ ಸಾಮ್ಯತೆ ಇರುತ್ತದೆ, ಅದು ತಾಯಿಯ ಪ್ರೀತಿ. ಮರಿಯೊಂದು ದಾರಿ ತಪ್ಪಿದಾಗ ತಾಯಿ ಆನೆ ಕಾಡಿನಲ್ಲಿ ಹುಡುಕಾಡಿದೆ. ಈ ನಡುವೆ ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸ ಮಾಡಿ ಮರಿಯನ್ನು ಮತ್ತೆ ತಾಯಿಯೊಂದಿಗೆ ಸೇರಿಸಿರುವ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ.

ತಮಿಳುನಾಡಿನ ಪೋಲಾಚ್ಚಿಯ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ತಾಯಿಯಿಂದ ಮರಿ ಆನೆಯೊಂದು ತಪ್ಪಿಸಿಕೊಂಡಿತ್ತು. ತಕ್ಷಣ ಎಚ್ಚೆತ್ತ ಅರಣ್ಯ ಸಿಬ್ಬಂದಿ ಮರಿಯನ್ನು ರಕ್ಷಿಸುವ ಕಾರ್ಯಚರಣೆಗಿಳಿದರು. ಹಾಗೆ ತಾಯಿ ಆನೆಯನ್ನು ದಟ್ಟ ಕಾಡಿನಲ್ಲಿ ಹುಡುಕಲು ತಂಡಗಳ ರಚಿಸಿದರು. ಅಲ್ಲದೆ ಹೊಂದವೊಂದರಲ್ಲಿ ಸಿಲುಕಿದ್ದ ಮರಿಯಾನೆಯನ್ನು ರಕ್ಷಣೆಗೂ ಮುಂದಾದರು.
ತಾಯಿ ಆನೆ ಮರಿಯ ಹುಡುಕಾಟದಲ್ಲಿತ್ತು. ಆದರೆ ತಾಯಿ ಆನೆಯನ್ನು ಹುಡುಕಲು ಅರಣ್ಯ ಸಿಬ್ಬಂದಿ ಅತ್ಯಾಧುನಿಕ ಡ್ರೋನ್‌ಗಳ ಬಳಸಿದ್ದರು. ಕೊನೆಗೂ ತಾಯಿ ಆನೆ ಅರಣ್ಯದ ಮಧ್ಯಭಾಗದಲ್ಲಿರುವುದು ಡ್ರೋನ್ ಕ್ಯಾಮರಾದಲ್ಲಿ ಪತ್ತೆಯಾಗಿತ್ತು. ಹೀಗಾಗಿ ಮರಿಯಾನೆಯನ್ನು ಕಟ್ಟಿಕೊಂಡ ತಂಡ ತಾಯಿ ಆನೆ ಇದ್ದ ಜಾಗಕ್ಕೆ ತೆರಳಲು ಸಿದ್ದಗೊಂಡಿತ್ತು.
ಆನೆಗಳು ಸಂಘ ಜೀವಿಗಳು ಮತ್ತು ಅವು ಹಿಂಡು ಹಿಂಡುಗಳಲ್ಲಿ ಚಲಿಸುತ್ತವೆ. ಆದಾಗ್ಯೂ, ಕೆಲವೊಮ್ಮೆ ಮರಿಗಳು ತಮ್ಮ ಹಿಂಡಿನಿಂದ ಬೇರ್ಪಟ್ಟು ಮತ್ತೆ ಒಂದಾಗಬೇಕಾದ ಸಂದರ್ಭ ಎದುರಾಗುತ್ತದೆ. ಅಂತಹ ಒಂದು ರಕ್ಷಣಾ ಕಾರ್ಯಾಚರಣೆಯಲ್ಲಿ, ತಮಿಳುನಾಡಿನ ಆನಮಲೈ ಹುಲಿ ಸಂರಕ್ಷಿತ ಪ್ರದೇಶದ (ಎಟಿಆರ್) ಅರಣ್ಯ ಅಧಿಕಾರಿಗಳು ಕಳೆದುಹೋದ ಆನೆ ಮರಿಯನ್ನು ಯಶಸ್ವಿಯಾಗಿ ರಕ್ಷಿಸಿದರು. ಈ ಆನೆ ಮರಿಯ ವಯಸ್ಸು ಸುಮಾರು 4 ರಿಂದ 5 ತಿಂಗಳು ಎಂದು ಅಂದಾಜಿಸಲಾಗಿತ್ತು.
ಮರಿ ಬೇರ್ಪಟ್ಟ ಹಿಂಡನ್ನು ಪತ್ತೆಹಚ್ಚಲು ಶೋಧ ತಂಡವನ್ನು ಕಳುಹಿಸಲಾಗಿದೆ ಮತ್ತು ಡ್ರೋನ್ ಸಹಾಯದಿಂದ ಸುಮಾರು 3 ಕಿಮೀ ದೂರದಲ್ಲಿ ಹಿಂಡನ್ನು ಗುರುತಿಸಲಾಗಿತ್ತು. ಮರಿ ಆನೆಯನ್ನು ಕಾಡಿನಲ್ಲಿ ಕರೆದೊಯ್ಯುವುದು ಅಷ್ಟು ಸುಲಭದ ಮಾತಲ್ಲ. ಈ ವೇಳೆ ಹಲವು ರೀತಿಯ ಸಮಸ್ಯೆಗಳು, ಸವಾಲು ಎದುರಾಗಿತ್ತು. ಅರಣ್ಯ ಸಿಬ್ಬಂದಿ ತಮ್ಮ ಪ್ರಾಣ ಲೆಕ್ಕಿಸದೆ ನದಿಯನ್ನು ದಾಟಿದ್ದಾರೆ. ಬೆಟ್ಟಗಳ ಹತ್ತಿ ಇಳಿದಿದ್ದಾರೆ, ಕಡಿದಾದ ದಾರಿಯಲ್ಲಿ ಮರಿಯಾನೆಯೊಂದಿಗೆ ಸಾಗಿದ್ದಾರೆ.
ತಾಯಿ ಆನೆಯನ್ನು ಕಂಡುಹಿಡಿದ ಅರಣ್ಯ ಸಿಬ್ಬಂದಿ ಮರಿಯಾನೆಯ ಮೇಲೆ ಕೆಸರನ್ನು ಎರಚಿದ್ದಾರೆ. ಒಮ್ಮೆ ಮಾನವರ ಸಂಪರ್ಕಕ್ಕೆ ಬಂದ ಆನೆಯನ್ನು ಮತ್ತೆ ಅದೇ ಹಿಂಡುಗಳು ಸೇರಿಸಿಕೊಳ್ಳದೆ ಇರಬಹುದು. ಹೀಗಾಗಿ ಮರಿ ಆನೆಯ ರಕ್ಷಣೆ ವೇಳೆ ಸಿಬ್ಬಂದಿ ಅದನ್ನು ಕೈಯಿಂದ ಮುಟ್ಟಿದ್ದರು. ಈ ಅಚ್ಚುಗಳು, ಗುರುತುಗಳನ್ನು ಕೆಸರು ಮಣ್ಣು ಹಾಕಿ ಮರೆ ಮಾಚಲಾಗಿತ್ತು. ಬಳಿಕವಷ್ಟೇ ತಾಯಿ ಆನೆಯೊಂದಿಗೆ ಸೇರಿಸಲಾಯಿತು.
ಆನೆ ಮರಿ ಸಹ ತಾಯಿಯನ್ನು ಸೇರಿಕೊಳ್ಳುವ ಹಂಬಲದಲ್ಲಿ ಅರಣ್ಯ ಸಿಬ್ಬಂದಿಯೊಂದಿಗೆ ಹೆಜ್ಜೆ ಹಾಕಿದೆ. ಈ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಮರಿಯಾನೆ ತನ್ನ ತಾಯಿಯನ್ನ ಕಂಡ ತಕ್ಷಣ ಅದರ ಹಿಂದೆ ಓಡಿದೆ. ಬಳಿಕ ಎರಡೂ ಆನೆಗಳು ಜೊತೆ ಜೊತೆಗೆ ಹಜ್ಜೆ ಹಾಕುತ್ತಿರುವುದು ಸಹ ವಿಡಿಯೋದಲ್ಲಿ ಕಾಣಬಹುದಾಗಿದೆ.
ಈ ವಿಡಿಯೋ ಹಂಚಿಕೊಂಡಿರುವ ಉದ್ಯಮಿ ಆನಂದ್ ಮಹೀಂದ್ರ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅವರ ಕಾರ್ಯ ಮೆಚ್ಚಿ ಅಭಿನಂದನೆ ಸಲ್ಲಿಸಿದ್ದಾರೆ. ಜೊತೆಗೆ ಈ ಕಾರ್ಯಚರಣೆ ಒಂದು ಕಿರು ಚಿತ್ರ ಮಾಡಲು ಯೋಗ್ಯವಿದೆ ಎಂದು ಸಲಹೆ ಸಹ ನೀಡಿದ್ದಾರೆ.



Click it and Unblock the Notifications
