Latest Updates
-
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಮದುವೆಗೂ ಮುನ್ನ ಈ 48 ಗಂಟೆಗಳ ಚೆಕ್ಲಿಸ್ಟ್ ಮರೆಯದಿರಿ -
ಬಿಸಿಲ ಬೇಗೆಯಿಂದ ಪಾರಾಗಲು ಮನೆಯನ್ನು ತಂಪಾಗಿರಿಸುವ ಅದ್ಭುತ ಟಿಪ್ಸ್ -
ಬಿಸಿಲ ಬೇಗೆಯಿಂದ ಪಾರಾಗಲು ಈ ಪಾನೀಯಗಳೇ ಮದ್ದು! -
ಬಿಸಿಲ ಬೇಗೆಯಿಂದ ಪಾರಾಗಲು ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ -
ಬಿಸಿಲ ಬೇಗೆಯಿಂದ ಪಾರಾಗಲು ನಿಮ್ಮ ವ್ಯಾಯಾಮದ ಸಮಯ ಬದಲಾಯಿಸಿ
269 ಮಿಲಿಯನ್ ಸಬ್‌ಸ್ರೈಬರ್ ಪಡೆದ ವಿಶ್ವದ ಮೊದಲ ಯೂಟ್ಯೂಬರ್..! ಟಿ ಸೀರಿಸ್‌ಗೆ ಹಿನ್ನಡೆ
ಯೂಟ್ಯೂಬ್ ಚಾನಲ್ ಮಾಡಿಕೊಂಡು ಆರಾಮವಾಗಿ ಹಣ ಸಂಪಾದನೆ ಮಾಡಬೇಕು ಅನ್ನೋದು ಹಲವರ ಕನಸಾಗಿರುತ್ತೆ. ಆದ್ರೆ ಎಲ್ಲರು ಅದರಲ್ಲು ಯಶಸ್ವಿಯಾಗೋದಿಲ್ಲ. ಯಶಸ್ವಿಯಾದ ಕೆಲವು ಮಂದಿ ಅದರಲ್ಲಿ ಚಂದಾದಾರರ ಹೆಚ್ಚಿಕೊಳ್ಳಬೇಕು ಎಂದು ಸರ್ಕಸ್ ಮಾಡುತ್ತಾರೆ. ಅದು ಸಹ ತುಂಬಾನೆ ಕಷ್ಟದ ಕೆಲಸ.
ಆದ್ರೆ ಕೆಲವೊಬ್ಬರು ಯೂಟ್ಯೂಬ್ ನಿಂದಲೇ ಕೋಟಿ ಕೋಟಿ ಹಣ ಸಂಪಾದನೆ ಮಾಡುವವರು ಇದ್ದಾರೆ. ಅದರಲ್ಲಿ ಈ ಮಿಸ್ಟರ್ ಬೀಸ್ಟ್ ಸಹ ಒಬ್ಬ. ಆತ ಈಗ ವಿಶ್ವದ ಅತ್ಯಂತ ಹೆಚ್ಚು ಚಂದಾದಾರರ ಹೊಂದಿರುವ ಯೂಟ್ಯೂಬರ್ ಆಗಿ ಹೊರಹೊಮ್ಮಿದ್ದಾರೆ. ಅದರಲ್ಲೂ ಭಾರತದ ಟಿ ಸೀರಿಸ್ ಯೂಟ್ಯೂಬ್ ಚಾನಲ್ ಅನ್ನು ಹಿಂದಿಕ್ಕಿ ಈಗ ಮೊದಲ ಸ್ಥಾನಕ್ಕೇರಿದ್ದಾರೆ.

ಮಿಸ್ಟರ್ ಬೀಸ್ಟ್ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಜಿಮ್ಮಿ ಡೊನಾಲ್ಡ್‌ಸನ್, 2023 ರ ಆರಂಭದಲ್ಲಿ ಸ್ವೀಡಿಷ್ ಯೂಟ್ಯೂಬರ್ ಅನ್ನು ಬೆಂಬಲಿಸುವ ಉದ್ದೇಶವನ್ನು ಘೋಷಿಸಿದ ಮಿಸ್ಟರ್ ಬೀಸ್ಟ್, ಈ ಮೈಲಿಗಲ್ಲನ್ನು ಯಶಸ್ವಿಯಾಗಿ ಸಾಧಿಸಿದ್ದಾರೆ ಎಂದು ವರದಿಗಳು ದೃಢಪಡಿಸುತ್ತವೆ.
"6 ವರ್ಷಗಳ ನಂತರ ನಾವು ಅಂತಿಮವಾಗಿ ಪ್ಯೂಡಿಪಿಯ ಮೇಲೆ ಸೇಡು ತೀರಿಸಿಕೊಂಡಿದ್ದೇವೆ" ಎಂದು ಮಿಸ್ಟರ್ ಬೀಸ್ಟ್ ಅವರು ತಮ್ಮ ಮೈಲಿಗಲ್ಲು ಸಾಧನೆಯನ್ನು ಘೋಷಿಸಿದರು. ಈ ಮೊದಲು ಪ್ಯೂಡಿಪಿ ಕೂಡ ಅತ್ಯಧಿಕ ಚಂದಾದಾರರ ಹೊಂದಿದ್ದ ಯೂಟ್ಯೂಬರ್ ಆಗಿದ್ದ. ಆದರೆ ಟಿ ಸೀರಿಸ್ ಆತನನ್ನು ಹಿಂದಿಕ್ಕಿತು. ಆದರೆ ಈಗ ಟಿ ಸೀರಿಸ್ ಅನ್ನೇ ಹಿಂದಿಕ್ಕಿ ಮಿಸ್ಟರ್ ಬೀಸ್ಟ್ ಮೊದಲ ಸ್ಥಾನಕ್ಕೇರಿದ್ದಾನೆ. ಆತ ಯೂಟ್ಯೂಬ್ ಚಾನಲ್ ಆರಂಭಿಸಿದಾಗ ಕೇವಲ 13 ವರ್ಷ ವಯಸ್ಸಾಗಿತ್ತು.
ಮಿಸ್ಟರ್ ಬೀಸ್ಟ್ ಪೋಸ್ಟ್ ಅನ್ನು ಹಂಚಿಕೊಂಡ ಕೂಡಲೇ, ಇದು ಸುಮಾರು 10 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ. ಈ ಮಿಸ್ಟರ್ ಬೀಸ್ಟ್ ತನ್ನ ವಿಶಿಷ್ಟ ಕಾನ್ಸೆಪ್ಟ್ ಹಾಗೂ ವಿಭಿನ್ನ ಕಂಟೆಂಟ್ ಮೂಲಕ ಸುದ್ದಿಯಾಗಿರುವ ಯೂಟ್ಯೂಬರ್ ಆಗಿದ್ದಾನೆ. ಜೊತೆಗೆ ಈತ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಒಬ್ಬರಾದ ಎಲಾನ್ ಮಸ್ಕ್ ಗಮನ ಸೆಳೆದಿದ್ದು, ಮಸ್ಕ್ ಸಹ ಬೀಸ್ಟ್ ಸಾಧನೆಗೆ ಅಭಿನಂದನೆ ಸಲ್ಲಿಸಿದ್ದಾರೆ.
ಯಾರು ಈ ಮಿಸ್ಟರ್ ಬೀಸ್ಟ್?
ಕನ್ಸಾಸ್‌ನ ವಿಚಿತಾದಲ್ಲಿ ಜನಿಸಿದ ಜಿಮ್ಮಿ ಡೊನಾಲ್ಡ್‌ಸನ್ ಯೂಟ್ಯೂಬ್‌ನಲ್ಲಿ ಅತೀ ಕಡಮೆ ಸಮಯದಲ್ಲಿ ಯಶಸ್ವಿ ಗಳಿಸಿದ್ದವರು. 2012 ರಲ್ಲಿ ಅವರು ತಮ್ಮ YouTube ಚಾನೆಲ್ ಅನ್ನು ಪ್ರಾರಂಭಿಸಿದಾಗ ಅವರು ಕೇವಲ 13 ವರ್ಷ ವಯಸ್ಸಿನವರಾಗಿದ್ದರು. ಆದಾಗ್ಯೂ, 2017 ರಲ್ಲಿ ಅವರ ವೀಡಿಯೊವೊಂದು ಕೆಲವೇ ದಿನಗಳಲ್ಲಿ 10,000 ವೀಕ್ಷಣೆಗಳನ್ನು ಗಳಿಸಿತ್ತು.
ಡೊನಾಲ್ಡ್‌ಸನ್ ಅವರು ತಮ್ಮ ಯೂಟ್ಯೂಬ್ ಪ್ರಯಾಣದ ಸಮಯದಲ್ಲಿ ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳನ್ನು ಗೆದ್ದಿದ್ದಾರೆ, ಅದರಲ್ಲಿ ಕ್ರಿಯೇಟರ್ ಆಫ್ ದಿ ಇಯರ್ ಅವಾರ್ಡ್, ಅದೂ ಕೂಡ ಸತತವಾಗಿ ನಾಲ್ಕು ವರ್ಷಗಳು. 2023 ರಲ್ಲಿ, ಟೈಮ್ ಅವರನ್ನು ವಿಶ್ವದ 100 ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳಲ್ಲಿ ಒಬ್ಬರೆಂದು ಹೆಸರಿಸಿತು. ಅವರು 2022 ರಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಯೂಟ್ಯೂಬ್ ರಚನೆಕಾರರ ಫೋರ್ಬ್ಸ್ ಪಟ್ಟಿಯಲ್ಲಿದ್ದರು.
ಅವರು ಯೂಟ್ಯೂಬ್ ವಿಡಿಯೋಗಾಗಿ ಲಕ್ಷ ಲಕ್ಷ ರೂಪಾಯಿ ಖರ್ಚು ಮಾಡುತ್ತಾರೆ. ಒಂದಿಷ್ಟು ಹಣ ಅಗತ್ಯವಿದ್ದವರಿಗೂ ಹಂಚಿದ್ದಾರೆ. ಅವರ ಎಲ್ಲಾ ವಿಡಿಯೋಗಳಲ್ಲು ವಿಶೇಷತೇ ಇದ್ದೇ ಇರುತ್ತದೆ. ಎಲ್ಲಾ ವಿಡಿಯೋಗಳು ದುಬಾರಿಯಾಗಿ ಚಿತ್ರೀಕರಿಸಲ್ಪಟ್ಟಿರುತ್ತದೆ. ಹೀಗಾಗಿ ಅವರ ವಿಡಿಯೋಗಳು ಮಿಲಿಯನ್‌ಗೂ ಅಧಿಕ ವೀಕ್ಷಣೆ ಪಡೆಯುತ್ತವೆ.
ಮಿಸ್ಟರ್ ಬೀಸ್ಟ್ ಯೂಟ್ಯೂಬ್ ಚಾನಲ್‌ಗೆ ಈಗ ಬರೋಬ್ಬರಿ 269 ಮಿಲಿಯನ್ ಚಂದಾದಾರಾಗಿದ್ದಾರೆ. ಅದೇ ರೀತಿ ಟಿ ಸೀರಿಸ್‌ಗೆ 266 ಮಿಲಿಯನ್ ಚಂದಾದಾರರಿದ್ದಾರೆ.



Click it and Unblock the Notifications











