Latest Updates
-
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ! -
ಚೆನ್ನೈ ಮಳೆ ಅಲರ್ಟ್: ಹೊರಗೆ ಹೋಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ
ಅಂಬಾನಿ, ಮಲ್ಯ ಅಲ್ಲ.. ಭಾರತದಲ್ಲಿ ಮೊದಲ ಖಾಸಗಿ ವಿಮಾನ ಈತನ ಬಳಿ ಇತ್ತು..!
ಅತೀ ಹೆಚ್ಚು ಕೋಟ್ಯಧಿಪತಿಗಳು ವಾಸವಿರುವ ದೇಶ ಯಾವುದು ಅಂದ್ರೆ ಎಲ್ಲರು ಅಮೆರಿಕ, ಯುಕೆ, ದುಬೈ ಎಂದು ಹೇಳುತ್ತಾರೆ. ಅದು ಸತ್ಯವೂ ಹೌದು. ಏಕೆಂದರೆ ಈಗ ಎಲ್ಲಾ ಉದ್ಯಮಿಗಲು ಈ ದೇಶದಲ್ಲಿಯೇ ನೆಲೆಸಿದ್ದಾರೆ. ಇನ್ನು ಭಾರತದಲ್ಲಿಯೂ ಕೋಟ್ಯಧಿಪತಿಗಳಿಗೇನು ಕಡಿಮೆ ಇಲ್ಲ. ವಿಶ್ವದ ಶ್ರೀಮಂತ ಉದ್ಯಮಿಗಳ ಪಟ್ಟಿಯಲ್ಲಿ ಭಾರತೀಯರು ಸಹ ಸ್ಥಾನ ಪಡೆದಿರುತ್ತಾರೆ.
ಇನ್ನು ಶ್ರೀಮಂತರು ಅಂದರ ಅಲ್ಲಿ ಐಷಾರಾಮಿ ಬದುಕಿನ ಕುರಿತು ಕೇಳಬೇಕಾ. ಆಳು ಕಾಳು ಕಾರು ಬಂಗಲೆ ಹೀಗೆ ಅವರಿಗೆ ಎಲ್ಲವು ಸುಲಭವಾಗಿ ಸಿಗುವ ವಸ್ತುಗಳೇ. ಅವರ ಐಷಾರಾಮಿ ಜೀವನವನ್ನು ಸಾಮಾನ್ಯರು ಕನಸು ಕಾಣುತ್ತಾರೆ.

ಇತ್ತೀಚಿನ ದಿನಗಳಲ್ಲಿ ತಮ್ಮ ಸಂಪತ್ತನ್ನು ತೋರ್ಪಡಿಸಲೆಂದೇ ಜನರು ಐಷಾರಾಮಿ ವಸ್ತುಗಳ ಖರೀದಿಸುವುದು ಸಹ ನಾವು ನೋಡಬಹುದು. ಆದ್ರೆ ನಿಮಗೆ ಗೊತ್ತಾ ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಖಾಸಗಿಯಾಗಿ ವಿಮಾನ ಹೊಂದಿದ್ದ ವ್ಯಕ್ತಿ ಯಾರು ಎಂದು? ಈಗ ಉದ್ಯಮಿಗಳು ತಮ್ಮ ಸ್ವಂತ ಲಘು ವಿಮಾನಗಳ ಹೊಂದಿದ್ದಾರೆ. ಸಿನಿಮಾ ನಟರ ಬಳಿಯೂ ಇರಲಿದೆ. ಆದರೆ ಶತಮಾನಗಳ ಹಿಂದೆ ರಾಜನೊಬ್ಬ ಭಾರತದ ಮೊಟ್ಟ ಮೊದಲ ಖಾಸಗಿ ವಿಮಾನ ಹೊಂದಿದ್ದ.
ಪಟಿಯಾಲಾದ ಮಹಾರಾಜ ಭೂಪಿಂದರ್ ಸಿಂಗ್ ಖಾಸಗಿ ಜೆಟ್ ಹೊಂದಿದ್ದ ಮೊದಲ ಭಾರತೀಯ. ಅವರ ಕಥೆಯು ರಾಜಮನೆತನದ ಐಷಾರಾಮಿ, ಮುಂದಾಲೋಚನೆ ಮತ್ತು ಜೀವನದ ಉತ್ಸಾಹದ ಆಕರ್ಷಕ ಮಿಶ್ರಣವಾಗಿದೆ.
ಮಹಾರಾಜ ಭೂಪಿಂದರ್ ಸಿಂಗ್ ಅವರು ಅಕ್ಟೋಬರ್ 12, 1891 ರಂದು ಪಟಿಯಾಲಾದ ಭವ್ಯವಾದ ಮೋತಿ ಬಾಗ್ ಅರಮನೆಯಲ್ಲಿ ಜನಿಸಿದರು. ನವೆಂಬರ್ 9, 1900 ರಂದು ಅವರ ತಂದೆ ಮಹಾರಾಜ ರಾಜಿಂದರ್ ಸಿಂಗ್ I ರ ಮರಣದ ನಂತರ ಅವರು ಒಂಬತ್ತನೇ ವಯಸ್ಸಿನಲ್ಲಿ ಪಂಜಾಬ್‌ನ ಪಟಿಯಾಲದ ರಾಜರಾಗಿ ಪಟ್ಟಾಭಿಷೇಕಕ್ಕೆ ಒಳಗಾದರು.
ಇಂಗ್ಲೆಂಡ್‌ನಿಂದಲೇ ಖಾಸಗಿ ವಿಮಾನ ತರಿಸಿದ್ದ ರಾಜ
1900 ರಿಂದ 1938 ರವರೆಗಿನ ಅವನ ಆಳ್ವಿಕೆಯು ಗಮನಾರ್ಹ ಪ್ರಗತಿ ಮತ್ತು ಅದ್ದೂರಿ ತನಕ್ಕೆ ಸಾಕ್ಷಿಯಾಗಿತ್ತು. ರಾಜ್ಯದಲ್ಲಿ ಸಂಪತ್ತು ಹಾಗೂ ಅವರ ವೈಯಕ್ತಿಕ ವರ್ಚಸ್ಸು ಸಹ ಹೆಚ್ಚಾಗಿತ್ತು, ಈ ವೇಳೆ ಅವರು ಭಾರತದ ಮೊಟ್ಟ ಮೊದಲ ಖಾಸಗಿ ಜೆಟ್ ಹೊಂದಿದ ರಾಜನಾಗಿ ಹೆಸರು ಪಡೆದರು.
1910ರಲ್ಲಿ, ಮಹಾರಾಜ ಭೂಪಿಂದರ್ ಸಿಂಗ್ ಖಾಸಗಿ ಜೆಟ್ ಅನ್ನು ಹೊಂದಿದ್ದ ಮೊದಲ ಭಾರತೀಯರಾದರು. ಅವರು ನೇರವಾಗಿ ಇಂಗ್ಲೆಂಡ್‌ನಿಂದಲೇ ವಿಮಾನವನ್ನು ಖರೀದಿಸಿದರು ಜೊತೆಗೆ ಪಟಿಯಾಲದಲ್ಲಿ ಏರ್‌ಸ್ಟ್ರಿಪ್ ಅನ್ನು ನಿರ್ಮಿಸಿದರು. ಈ ಮೂಲಕ ಬ್ರಿಟಿಷರಿಗೆ ಸೆಡ್ಡು ಹೊಡೆದಿದ್ದರು.
ಮಹಾರಾಜ ಭೂಪಿಂದರ್ ಸಿಂಗ್ ಅವರು ಆಡಳಿತಗಾರ ಮಾತ್ರವಲ್ಲದೆ ಅತ್ಯಾಸಕ್ತಿಯ ಕ್ರಿಕೆಟಿಗರೂ ಆಗಿದ್ದರು. ಅವರ ತಂಡ, ಪಟಿಯಾಲ XI, ಅದರ ಯುಗದ ಅತ್ಯುತ್ತಮ ತಂಡಗಳಲ್ಲಿ ಒಂದಾಗಿತ್ತು ಎಂಬ ಉಲ್ಲೇವಿದೆ.
ಅತೀ ದೊಡ್ಡ ಕುಟುಂಬ ಹೊಂದಿದ್ದ ಭೂಪಿಂದರ್ ಸಿಂಗ್
ಮಹಾರಾಜ ಭೂಪಿಂದರ್ ಸಿಂಗ್, ಹತ್ತು ಹೆಂಡತಿಯರ ಹೊಂದಿದ್ದರಂತೆ. ಜೊತೆಗೆ 88 ಮಕ್ಕಳ ತಂದೆಯಾಗಿದ್ದರು ಎಂಬ ಇತಿಹಾಸದ ಉಲ್ಲೇಖಗಳಿವೆ. ಅವರು ತಮ್ಮ 48 ನೇ ವಯಸ್ಸಿನಲ್ಲಿ ಮಾರ್ಚ್ 23, 1938 ರಂದು ನಿಧನರಾದರು. ಅವರ ಹಿರಿಯ ಮಗ ಯುವರಾಜ್ ಯಾದವೀಂದ್ರ ಸಿಂಗ್ ಅವರು 1948 ರಲ್ಲಿ ಭಾರತದ ರಾಜ್ಯ ರಚನೆಯಾಗುವವರೆಗೂ ಪಟಿಯಾಲಾದ ಕೊನೆಯ ಮಹಾರಾಜರಾಗಿ ಅಧಿಕಾರ ವಹಿಸಿಕೊಂಡರು. ಇಂದಿಗೂ ಈ ಮನೆತನ ಪಂಜಾಬ್ ಪ್ರಾಂತ್ಯದಲ್ಲಿ ನೆಲೆಸಿದೆ ಎಂದು ವರದಿಯಾಗಿದೆ. ಅಲ್ಲದೆ ಅಂದಿನ ಕಾಲದಲ್ಲಿದ್ದ ಶ್ರೀಮಂತ ಮನೆತನ ಇದಾಗಿತ್ತು.



Click it and Unblock the Notifications
