Latest Updates
-
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ!
ಅಂಬಾನಿ ಮದುವೆಗೆ ಬಾಂಬ್ ಬೀಳುವ ಕಲ್ಪನೆ ಮಾಡಿ ಪೊಲೀಸ್ ಅತಿಥಿಯಾದ ಟೆಕ್ಕಿ!: ಅಂಬಾನಿ ಮದುವೆಯಿಂದ ನಮಗಾದ ನಷ್ಟವಾದರೂ ಏನು?
ಸುಮ್ಮನೆ ಇರರ್ಲಿಕ್ಕೆ ಆಗದೆ ಇರುವೆ ಬಿಟ್ಟುಕೊಂಡ ಎಂಬಂತಿದೆ ಈ ಟೆಕ್ಕಿಯ ಕತೆ, ಅಂಬಾನಿ ಮದುವೆ ನೋಡಿ ಹೊಟ್ಟೆ ಉರ್ಕೊಂಡ ಈತ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಸೋಷಿಯಲ್ ಮೀಡಿಯಾದಲ್ಲಿ ಏನು ಬೇಕಾದರೂ ಹಾಕಬಹುದು ಅಂದುಕೊಂಡಿದ್ದರೆ ಹೀಗೆ ಆಗುವುದು ನೋಡಿ, ಅನಂತ್ ಅಂಬಾನಿ ಮದುವೆಗೂ ಈತನನ್ನು ಜೈಲ್‌ನಲ್ಲಿ ಹಾಕಿರುವುದಕ್ಕೆ ಸಂಬಂಧವೇನು ಎಂದು ನೋಡುವುದಾದರೆ....

ಅಂಬಾನಿ ಮದುವೆಯಲ್ಲಿ ಬಾಂಬ್ ಬಿದ್ದರೆ ಹೇಗೆ ಎಂಬ ಕೆಟ್ಟ ಆಲೋಚನೆಯನ್ನು ಫೇಸ್‌ಬುಕ್‌ನಲ್ಲಿ ಹಾಕಿದ
@FFSFIR ಎಂಬ ಅಕೌಂಟ್‌ನಲ್ಲಿ "A shameless thought crept into my mind that if a bomb went off at Ambani's wedding, half the world would turn upside down. Trillions of dollars in one pin code." ನನ್ನ ತಲೆಯಲ್ಲಿ ಕೆಟ್ಟ ಆಲೋಚನೆ ಬಂದಿದ್ದು ಏನೆಂದರೆ ಒಂದು ವೇಳೆ ಅಂಬಾನಿ ಮದುವೆಯಲ್ಲಿ ಒಂದು ಬಾಂಬ್ ಬಿದ್ದರೆ ಇಡೀ ಪ್ರಪಂಚದ ಚಿತ್ರಣ ಬದಲಾಗುತ್ತದೆ, ಟ್ರಿಲಿಯನ್ ಡಾಲರ್ ಒಂದೇ ಪಿನ್‌ಕೋಡ್‌ನಲ್ಲಿ ಉಡೀಸ್ ಎಂಬರ್ಥದ ಪೋಸ್ಟ್ ಮಾಡಿದ್ದ, ಈ ಪೋಸ್ಟ್ ನೋಡಿದ ತಕ್ಷಣ ಎಚ್ಚೆತ್ತ ಪೊಲೀಸ್ ಇಲಾಖೆ ಆತನನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. 32 ವರ್ಷದ ಆತ ಹೆಸರು ವೈರಲ್ ಶಾ, ಗುಜರಾತ್‌ನ ವಡೋದರಾದವನು, ಅವನ ಮನೆಯಿಂದ ಆತನನ್ನು ಅರೆಸ್ಟ್ ಮಾಡಲಾಗಿದೆ.
ಅನಂತ್ ಅಂಬಾನಿಯ ಅದ್ಧೂರಿಯ ಮದುವೆ ನೋಡಿ ನೆಗೆಟಿವ್ ಕಮೆಂಟ್ ಮಾಡುವವರಿಗೇನೂ ಕಡಿಮೆ ಇಲ್ಲ
ಮುಖೇಶ್ ಅಂಬಾನಿ ತಮ್ಮ ಮಗನಿಗೆ ಹಣದ ಹೊಳೆ ಹರಿಸಿ ಮದುವೆ ಮಾಡುತ್ತಿದ್ದಾರೆ ಎಂದಾದರೆ ಅದು ಅವರ ಸಾಮರ್ಥ್ಯ ಎಂದು ಯಾರೂ ಯೋಚಿಸುತ್ತಿಲ್ಲ, ಅಂಬಾನಿಯ ಅದ್ಧೂರಿ ಮದುವೆಯನ್ನು ದೇಶದ ಖಜಾನೆಯ ಹಣದಿಂದ ನಡೆಸುತ್ತಿರುವಂತೆ ಕೆಟ್ಟ ಕೆಟ್ಟ ಕಮೆಂಟ್ ಮಾಡುತ್ತಿದ್ದಾರೆ. ಏಕೆ ಬೇಕಿತ್ತು ಇಷ್ಟು ದುಬಾರಿಯ ಮದುವೆ ಎನ್ನುತ್ತಿರುವವರು ತಮ್ಮ ಮದುವೆಯನ್ನು ಸಾಲ ಮಾಡಿ ಆಡಂಬರ ಮಾಡಿರುವುದನ್ನು ಮರೆತು ಹೋಗಿದ್ದಾರೆ, ಆದರೆ ಅಂಬಾನಿ ತನ್ನಲ್ಲಿರುವ ಆಸ್ತಿಯಲ್ಲಿ 0.5ರಷ್ಟು ಮಾತ್ರ ಮಗನ ಮದುವೆಗೆ ಖರ್ಚು ಮಾಡಿದ್ದಾರೆ, ಹೀಗಿದ್ದ ಮೇಲೆ ಅಷ್ಟು ಅದ್ಧೂರಿ ಮದುವೆ ನೋಡಿ ಹೊಟ್ಟೆ ಉರ್ಕೊಂಡರೆ ಏನು ಪ್ರಯೋಜನ.
ಅನಂತ್ ಅಂಬಾನಿ ಮದುವೆಗೆ ದೇಶ ವಿದೇಶದಿಂದ ಗಣ್ಯರು ಭಾಗವಹಿಸಿದ್ದರು
ಅನಂತ್ ಅಂಬಾನಿ ಮದುವೆಗೆ ಅನೇಕ ವಿದೇಶಿ ಗಣ್ಯರು, ಸೆಲೆಬ್ರಿಟಿಗಳು ಭಾಗವಹಿಸಿದ್ದರು. ಪಾಪ್, ಬಾಲಿವುಡ್, ಹಾಲಿವುಡ್ ಸೆಲೆಬ್ರಿಟಿಗಳಿಗೆ ಕೋಟಿ-ಕೋಟಿ ಕೊಟ್ಟು ತಮ್ಮ ಮಗನ ಮದುವೆಯಲ್ಲಿ ಕಾರ್ಯಕ್ರಮ ನೀಡಲು ಕರೆಸಿಕೊಂಡಿದ್ದರು. ಅನೇಲ ಸೆಲೆಬ್ರಿಟಿಗಳು ಭಾಗವಹಿಸಿದ್ದರು. ದೇಶದ ಪ್ರಧಾನಿ ಮೋದಿ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿನ ಗಣ್ಯರು ಅನಂತ್ ಅಂಬಾನಿ ಮದುವೆಗೆ ಭಾಗವಹಿಸಿದ್ದರಿಂದ ಅಷ್ಟೇ ಸುರಕ್ಷಿತಾ ಕ್ರಮವನ್ನು ಕೂಡ ಅನುಸರಿಸಲಾಗಿತ್ತು. ಅಂಬಾನಿ ಮದುವೆಯಲ್ಲಿ ಭಾಗಿಯಾಗಲು ಕೆಲವೊಂದು ಪ್ರೊಟೋಕಾಲ್ ಇತ್ತು, ಇಷ್ಟೆಲ್ಲಾ ಜಾಗ್ರತೆವಹಿಸಿದರೂ ಸೋಷಿಯಲ್ ಮೀಡಿಯಾದಲ್ಲಿ ಈ ರೀತಿ ಕೆಟ್ಟ ಆಲೋಚನೆಯ ಪೋಸ್ಟ್ ನೋಡಿದಾಗ ಅದನ್ನು ನಿರ್ಲಕ್ಷ್ಯ ಮಾಡಲು ಸಾಧ್ಯವಾಗುವುದಿಲ್ಲ. ಆತ ಜನರು ಅನಂತ್ ಅಂಬಾನಿಯನ್ನು ಟ್ರೋಲ್ ಮಾಡಿದಾಗ ಸುಮ್ಮನಾಗುವಂತೆ ಈ ರೀತಿ ಹಾಕಿದಾಗ ಸುಮ್ಮನಾಗುತ್ತಾರೆ ಎಂದು ಭಾವಿಸಿರಬಹುದು, ಅದರೆ ಪೊಲೀಸರು ಚೆನ್ನಾಗಿ ಬುದ್ಧಿ ಕಲಿಸಿದ್ದಾರೆ.
ಅಂಬಾನಿಯ ಆಡಂಬರದ ಮದುವೆ ನೋಡಿ ಹೊಟ್ಟೆಕಿಚ್ಚು ಪಡುವವರು ಅನಂತ್ ಅಂಬಾನಿಯ ಮೈ ತೂಕದ ಬಗ್ಗೆ ಮಾತನಾಡುತ್ತಿದ್ದಾರೆ
ರಾಧಿಕಾ ಮರ್ಚೆಂಟ್ ಹಾಗೂ ಅನಂತ್ ಅಂಬಾನಿಯ ಪ್ರೀತಿ ಈಗ ಮೂಡಿದ್ದಲ್ಲ, ಅವರಿಬ್ಬರು ಹದಿಹರೆಯದ ಪ್ರಾಯದಿಂದಲೇ ಪ್ರೀತಿಸುತ್ತಿದ್ದಾರೆ. ಅನಂತ್ ಅಂಬಾನಿ ಕೆಲ ಆರೋಗ್ಯ ಸಮಸ್ಯೆಯಿಂದಾಗಿ ಕಳೆದುಕೊಂಡ ಮೈ ತೂಕಕ್ಕಿಂತ ಹೆಚ್ಚಿನ ಮೈ ತೂಕ ಹೊಂದುವಂತಾಯ್ತು, ಈಗ ಮತ್ತೆ ತುಂಬಾನೇ ಮೈ ತೂಕ ಕಳೆದುಕೊಂಡಿದ್ದಾರೆ. ಆದರೆ ಇದೆಲ್ಲಾ ಅವರ ವೈಯಕ್ತಿಕ ವಿಚಾರ ಇದರಿಂದ ಸಾಮಾನ್ಯ ಜನರಿಗೆ ನಷ್ಟನೂ ಇಲ್ಲ, ಲಾಭನೂ ಇಲ್ಲ , ಸೋಷಿಯಲ್ ಮೀಡಿಯಾ ಇದೆ ಎಂಬ ಕಾರಣಕ್ಕೆ ಬಾಯಿಗೆ ಬಂದಂತೆ ಟ್ರೋಲ್ ಮಾಡುವುದು ಸರಿಯೇ?



Click it and Unblock the Notifications