Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಇದಿನ್ನು ಆರಂಭವಷ್ಟೇ..!! ಲಂಡನ್‌ನಲ್ಲಿ ಅಂಬಾನಿ ಪೋಸ್ಟ್ ವೆಡ್ಡಿಂಗ್ ಸಮಾರಂಭ..!!?
ಏಷ್ಯಾದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಕಿರಿಯ ಪುತ್ರ ಅನಂತ್ ಅಂಬಾನಿ ಹಾಗೂ ರಾಧಿಕಾ ಮಚೆಂಟ್ ವಿವಾಹ ಅತ್ಯಂತ ಅದ್ದೂರಿಯಾಗಿ ನಡೆದಿದೆ. ವಿಶ್ವದ ಗಣ್ಯರು ಈ ಮದುವೆಗೆ ಸಾಕ್ಷಿಯಾಗಿದ್ದಾರೆ. ಆದ್ರೆ ಈ ಮದುವೆ ಕಾರ್ಯಕ್ರಮ ಶಾಸ್ತ್ರಗಳಿಂದ, ಗಣ್ಯರಿಂದ ಮಾತ್ರವಲ್ಲ ತನ್ನ ಅದ್ದೂರಿತನದಿಂದ ಸುದ್ದಿಯಾಗಿತ್ತಿದೆ.
ಈ ಮದುವೆಗೆ ಇಡೀ ಚಿತ್ರರಂಗ, ಉದ್ಯಮಿಗಳು ಅಷ್ಟೆ ಏಕೆ ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರರು ಸೇರಿ ನೂರಾರು ಮಂದಿ ಭಾಗಿಯಾಗಿದ್ದರು. ರಾಧಿಕಾ ಮರ್ಚೆಂಟ್ ತನ್ನ ಕುಟುಂಬಕ್ಕೆ ವಿದಾಯ ಹೇಳುವ ಕಾರ್ಯಕ್ರಮದಲ್ಲಿ ಮುಕೇಶ್ ಅಂಬಾನಿ ತುಂಬಾ ಭಾವುಕರಾಗಿದ್ದರು. ಇದಿಷ್ಟೇ ಅಲ್ಲ ಅಂಬಾನಿ ಕುಟುಂಬಸ್ಥರು ಅತಿಥಿಗಳಿಗೆ ನೀಡಿದ ಉಡುಗೊರೆಯು ಸುದ್ದಿಯಾಗಿತ್ತು.

ಅತಿಥಿಗಳಿಗೆ ಬರೋಬ್ಬರಿ 20 ಕೋಟಿ ರೂಪಾಯಿ ಮೌಲ್ಯದ ವಾಚ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ಆದ್ರೆ ಇನ್ನೊಂದು ಅಚ್ಚರಿ ಏನೆಂದರೆ ಸುಮಾರು 5 ತಿಂಗಳಿನಿಂದ ಈ ವಿವಾಹ ಕಾರ್ಯಕ್ರಮಗಳು ನಡೆಯುತ್ತಲೇ ಇದೆ, ಬರೋಬ್ಬರಿ 5 ಸಾವಿರ ಕೋಟಿ ರೂಪಾಯಿ ವೆಚ್ಚದ ಮದುವೆ ಇದು ಎನ್ನಲಾಗಿದೆ. ಅಲ್ಲದೆ ಅಂಬಾನಿ ಕುಟುಂಬದವರು ಧರಿಸಿದ್ದ ಬಟ್ಟೆ, ಶೂ, ಆಭರಣಗಳು ಜರ ಕಣ್ಣು ಕುಕ್ಕಿವೆ. ಅದ್ರಲ್ಲೂ ನೀತಾ ಅಂಬಾನಿ ಎಲ್ಲರ ಗಮನ ಸೆಳೆಯುವಂತಹ ಆಭರಣ ತೊಟ್ಟು ಮಿಂಚಿದ್ದರು.
ಇತ್ತ ಪ್ರಿ ವೆಡ್ಡಿಂಗ್ ಕಾರ್ಯಕ್ರಮಗಳೇ 2 ತಿಂಗಳು ನಡೆದಿತ್ತು. ಇತ್ತೀಚಿಗೆ ಇಟಲಿಯಲ್ಲಿ ವಿಜೃಂಭಣೆಯ ಪ್ರಿ ವೆಡ್ಡಿಂಗ್ ಸಹ ನಡೆದಿತ್ತು, ಆದ್ರೆ ಈಗ ಮದುವೆಯೂ ನಡೆದಿದೆ. ಇಷ್ಟಕ್ಕೆ ಈ ಕಾರ್ಯಕ್ರಮಗಳು ಕೊನೆಯಾಗುವ ಲಕ್ಷಣ ಕಾಣುತ್ತಿಲ್ಲ. ಈಗ ವಿವಾಹ ನಂತರ ಕಾರ್ಯಕ್ರಮವೊಂದು ನಡೆಯಲಿದೆ ಎಂದು ವರದಿಯಾಗುತ್ತಿದೆ.
ಹೌದು ಪೋಸ್ಟ್ ವೆಡ್ಡಿಂಗ್ ಕಾರ್ಯಕ್ರಮಕ್ಕೆ ಸದ್ದಿಲ್ಲದೆ ಸಿದ್ಧತೆ ನಡೆದಿದೆ ಎಂದು ವರದಿಯಾಗಿದೆ. ಅದು ಸಹ ಲಂಡನ್‌ನಲ್ಲಿ ಈ ಅದ್ದೂರಿ ಕಾರ್ಯಕ್ರಮ ನಡೆಯಲಿದೆಯಂತೆ. ಇದು ಕೋಟಿ ಕೋಟಿ ರೂಪಾಯಿ ವ್ಯಯವಾಗಲಿದ್ದು, ಕೆಲವೇ ಆಹ್ವಾನಿತರಿಗೆ ಮಾತ್ರ ಅವಕಾಶ ನೀಡಲಿದ್ದಾರೆ ಎಂದು ವರದಿಯಾಗಿದೆ.
ಅಂಬಾನಿ ತಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ 'ವಿವಾಹದ ನಂತರದ' ಸಮಾರಂಭಕ್ಕಾಗಿ ಶೀಘ್ರದಲ್ಲೇ ಲಂಡನ್‌ಗೆ ತೆರಳಲಿದ್ದಾರೆ. ಅಂಬಾನಿ ಕುಟುಂಬ ಒಂದು ವಾರದೊಳಗೆ ಲಂಡನ್‌ಗೆ ತೆರಳುವ ನಿರೀಕ್ಷೆಯಿದೆ ಎಂದು ಕುಟುಂಬದ ಹತ್ತಿರದ ಮೂಲಗಳು ತಿಳಿಸಿವೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ.
ಈ ಸುದ್ದಿ ಆನ್‌ಲೈನ್‌ನಲ್ಲಿ ಭಾರೀ ವೈರಲ್ ಆಗುತ್ತಿದೆ, ಅಂಬಾನಿ ಮದುವೆಯ ಸದ್ದಿ ಕೇಳಿ ಕಳೆದ 2 ತಿಂಗಳಿಂದ ಅಚ್ಚರಿಗೆ ಒಳಗಾಗಿದ್ದ ಮಂದಿ ಈಗ ಮತ್ತೊಂದು ಪೋಸ್ಟ್ ವೆಡ್ಡಿಂಗ್ ಕಾರ್ಯಕ್ರಮ ಹೇಗಿರಲಿದೆ ಎಂದು ಊಹಿಸಿಕೊಂಡು ಶಾಕ್‌ಗೆ ಒಳಗಾಗಿದ್ದಾರೆ.
ಕೆಲವರು ಈ ಮದುವೆ 2025ರ ವರೆಗೂ ನಡೆಯುವ ಸಂಭವವಿದೆ ಎಂದು ತಮಾಷೆ ಮಾಡಿದ್ದಾರೆ. ಮತ್ತೆ ಕೆಲವರು ಇದು ಒಂದು ದಿನದ, ಒಂದು ತಿಂಗಳ ಮದಿವೆಯಲ್ಲ ದಶಕದ ಮದುವೆ ಎನ್ನುತ್ತಿದ್ದಾರೆ. ಇತ್ತ ಅಂಬಾನಿ ಆಸ್ತಿ ಕರಗುವ ವರೆಗೂ ಈ ಮದುವೆ ಸಮಾರಂಭಗಳು ನಡೆಯುತ್ತಲೇ ಇರಲಿದೆ ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ.
ಕೆಲವರ ಪ್ರಕಾರ ಇದು ಕೊನೆಯ ಸಮಾರಂಭವಾಗಿರಲಿದ್ದು, ಇದಾದ ಬಳಿಕ ಮನೆಯಲ್ಲಿ ಮತ್ತೊಂದು ಅತಿಥಿಗಳ ಕೂಟ ನಡೆಯಲಿದೆ ಎಂದು ಊಹಿಸಿದ್ದಾರೆ. ಏಕೆಂದರೆ ಮುಂಬೈನ ಅವರ ನಿವಾಸದಲ್ಲಿ ಈವರೆಗೆ ಯಾವುದೇ ದೊಡ್ಡ ಕಾರ್ಯಕ್ರಮ ನಡೆದಿಲ್ಲ. ಅಲ್ಲಿ ದೊಡ್ಡ ಕಾರ್ಯಕ್ರಮ ನಡೆಯಲಿದೆ, ಅಲ್ಲಿಗೆ ಮದುವೆ ಸಂಪೂರ್ಣವಾಗಲಿದೆ ಎಂದು ಕಮೆಂಟ್ ಮಾಡುತ್ತಿದ್ದಾರೆ. ಆದರೆ ಲಂಡನ್‌ನಲ್ಲಿ ಕಾರ್ಯಕ್ರಮ ನಡೆಯಲಿದೆ ಎಂಬುದಕ್ಕೆ ಅಧಿಕೃತ ಹೇಳಿಕೆಯಾಗಲಿ, ದಿನಾಂಕವಾಗಲಿ ಪ್ರಕಟವಾಗಿಲ್ಲ.



Click it and Unblock the Notifications
