Latest Updates
-
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು! -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆಯ ಮಳೆನೀರು ಕೊಯ್ಲು ವ್ಯವಸ್ಥೆ ಹಾಳಾಗದಂತೆ ತಡೆಯುವುದು ಹೇಗೆ? -
ಮಳೆಗಾಲದಲ್ಲಿ ಮಕ್ಕಳ ಲಂಚ್ಬಾಕ್ಸ್ ಸುರಕ್ಷತೆ: ಆರೋಗ್ಯಕರ ಮತ್ತು ಹೈ-ಪ್ರೋಟೀನ್ ಆಹಾರದ ಟಿಪ್ಸ್ -
ಮುಂಬೈನಲ್ಲಿ ಭಾರೀ ಮಳೆ: ಇಂದು ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ, ಪೋಷಕರು ಗಮನಿಸಿ! -
ಕರಾವಳಿ ರೆಡ್ ಅಲರ್ಟ್: ಮನೆಯಲ್ಲೇ ಸುರಕ್ಷಿತವಾಗಿ ಫಿಟ್ ಆಗಿರಲು ಈ 12 ನಿಮಿಷಗಳ ವರ್ಕೌಟ್ ಟ್ರೈ ಮಾಡಿ!
50 ಜೋಡಿಗೆ ಮದುವೆ ಮಾಡಿಸಿದ ಅಂಬಾನಿ, ಮಗನ ಮದುವೆಗೆ ಮುನ್ನ ಈ ರೀತಿ ಮದುವೆ ಮಾಡಿಸಿದ್ದೇಕೆ?
ಭಾರತದ ಬಿಗ್ ಫ್ಯಾಟ್ ವೆಡ್ಡಿಂಗ್‌ಗಳಲ್ಲಿ ಒಂದಾಗಿರುವ ಅನಂತ್ ಅಂಬಾನಿ -ರಾಧಿಕಾ ಮರ್ಚೆಂಟ್ ಮದುವೆಗೆ ಎಲ್ಲಾ ಸಿದ್ಧತೆಗಳು ನಡೆಯತ್ತಿದೆ. ಇನ್ನೇನು ಎರಡು ವಾರ ಬಾಕಿದೆ, ಜುಲೈ 12ಕ್ಕೆ ಈ ಜೋಡಿ ಸಪ್ತಪದಿ ತುಳಿಯಲಿದ್ದಾರೆ. ಮದುವೆಗೆ ಮೊದಲೇ ಮುಖೇಶ್ ಕುಟುಂಬದವರು ಕೆಲವೊಂದು ಪರಿಹಾರ ಕಾರ್ಯ ಮಾಡುತ್ತಿರುವಂತೆ ಕಾಣುತ್ತಿದೆ.
ಮಗನ ಮದುವೆ ಬದುಕು ತುಂಬಾ ಚೆನ್ನಾಗಿರಲಿ ಎಂದು ಮುಖೇಶ್ ಕುಟುಂಬದವರು ಹಲವಾರು ಪೂಜೆಗಳನ್ನು ಮಾಡುತ್ತಿದ್ದಾರೆ, ದಾನಗಳನ್ನು ಮಾಡುತ್ತಿದ್ದಾರೆ. ಅವರು ಮದುವೆಯ ಮೊದಲ ಆಮಂತ್ರಣ ಪತ್ರಿಕೆ ನೀಡಿದ್ದು ಕಾಶಿ ವಿಶ್ವನಾಥನಿಗೆ. ಅದಾದ ಬಳಿಕ ಅನಂತ್ ಅಂಬಾನಿ ಕೂಡ ಹಲವು ದೇವಾಲಯಗಳಿಗೆ ಭೇಟಿ ನೀಡಿ ಪೂಜೆ ಮಾಡಿಸುತ್ತಿದ್ದಾರೆ.

ಮಗನ ಮದುವೆಗೆ ಮುನ್ನ ಬಡ 50 ಜೋಡಿಗೆ ಸಾಮೂಹಿಕ ಮದುವೆ
ಅಂಬಾನಿ ಕುಟುಂಬದವರು ಬಡ ಹುಡುಗ-ಹುಡುಗಿಗೆ ಮದುವೆ ಮಾಡಿಸಿ ಪೂಣ್ಯ ಕಟ್ಟಿಕೊಂಡಿದ್ದಾರೆ. ಈ ಮದುವೆಯನ್ನ ರಿಲೈಯನ್ಸ್ ಕಾರ್ಪೋರೇಟ್ ಪಾರ್ಕ್‌ನಲ್ಲಿ ಈ ಸಾಮೂಹಿಕ ಮದುವೆ ನಡೆಸಿಕೊಡಲಾಗಿದೆ. ಈ ಮದುವೆಯಲ್ಲಿ ಮುಖೇಶ್ ಅಂಬಾನಿ, ನೀತಾ ಅಂಬಾನಿ, ಆಕಾಶ್ ಅಂಬಾನಿ, ಶ್ಲೋಕಾ ಅಂಬಾನಿ, ಆನಂದ್ ಪಿರಾಮಾಳ್ ಭಾಗಿಯಾಗಿರುವುದನ್ನು ವೀಡಿಯೋದಲ್ಲಿ ನೋಡಬಹುದು.
ಚಿನ್ನದ ತಾಳಿ, ಬೆಳ್ಳಿ ಕಾಲುಂಗುರ, ಉಡುಪು ಕೊಡಿಸಿ ಮದುವೆ ಮಾಡಿಕೊಡಲಾಯ್ತು
ಈ ಸಾಮೂಹಿಕ ಮದುವೆಯಲ್ಲಿ ಚಿನ್ನದ ತಾಳಿ, ಬೆಳ್ಳಿಯ ಕಾಲುಂಗುರು, ನವವಧು-ನವವರನಿಗೆ ಉಡುಪುಗಳನ್ನು ಈ ಜೋಡಿಗಳಿಗೆ ಅಂಬಾನಿ ಕುಟುಂಬ ದಾನ ಮಾಡಿದ್ದಾರೆ. ಅಲ್ಲದೆ ಈ ಜೋಡಿಗೆ ಒಂದು ಕುಟುಂಬ ನಡೆಸಲು ಸ್ಟೌವ್, ಫ್ರಿಡ್ಜ್ ಹೀಗೆ ಮನೆಗೆ ಅಗ್ಯವಿರುವ ಸುಮಾರು 36 ಪರಿಕರಗಳನ್ನು ನೀಡಿದ್ದಾರೆ.
ಸಾಮೂಹಿಕ ಮದುವೆ ಮಾಡಿಸಿದರೆ ಪುಣ್ಯ ಲಭಿಸುವುದು ಎಂಬ ನಂಬಿಕೆ
ಹೌದು ತುಂಬಾ ಬಡ ಜೋಡಿಗೆ ಮದುವೆ ಮಾಡಿಸಿದರೆ ಅದರ ಪುಣ್ಯದ ಫಲ ಸಿಗುವುದು. ಕನ್ಯಾದಾನದ ಪುಣ್ಯದ ಫಲ ಸಿಗುವುದು. ತಮ್ಮ ಮಗನ ಮದುವೆಗೆ ಮುನ್ನ ಬಡ ಜೋಡಿಗಳಿಗೆ ತಾವೇ ಖರ್ಚು ಹಾಕಿ ಮದುವೆ ಮಾಡಿಸಿ ತಮ್ಮ ಮಗನ ವೈವಾಹಿಕ ಬದುಕು ಚೆನ್ನಾಗಿರಲಿ ಎಂಬ ಆಶೀರ್ವಾದ ಬೇಡಿದ್ದಾರೆ.
#WATCH | Navi Mumbai: Reliance Industries Chairman Mukesh Ambani and Nita Ambani present at the mass wedding of the underprivileged being organised as part of the wedding celebrations of Anant Ambani and Radhika Merchant. pic.twitter.com/CbHUMUZvZe
— ANI (@ANI) July 2, 2024
ಏಷ್ಯಾದ ಶ್ರೀಮಂತ ಉದ್ಯಮಿಯ ಮಗನ ಮದುವೆ ಸಂಭ್ರಮ ಶುರುವಾಗಿದೆ
ಅವರ ಬಗ್ಗೆ ತಿಳಿದು ನಮಗೇನು ಆಗಬೇಕು ಎಂದು ಹೇಳುವವರು ಕೂಡ ಅನಂತ್ ಅಂಬಾನಿ ಮದುವೆ ಹೇಗೆ ನಡೆಯಲಿದೆ ಎಂದು ತಿಳಿಯಲು ಆಸಕ್ತಿ ವ್ಯಕ್ತಪಡಿಸುತ್ತಾರೆ. ಅನಂತ್ ಅಂಬಾನಿಯ ಫ್ರೀ ವೆಡ್ಡಿಂಗ್ ಕಾರ್ಯಕ್ರಮ ಭಾರತ ಮಾತ್ರವಲ್ಲ ಇಡೀ ಜಗತ್ತಿನ ಗಮನ ಸೆಳೆದಿತ್ತು, ಅದರಂತೆ ಮದುವೆ ಎಷ್ಟೊಂದು ವಿಜೃಂಭಣೆಯಿಮದ ಇರಬಹುದು ಎಂಬ ಕುತೂಹಲ ಇದೆ.
ಜುಲೈ 12 ಕ್ಕೆ ಮದುವೆ: ಹಿಂದೂ ಸಂಪ್ರದಾಯದಂತೆ ಜುಲೈ 12ಕ್ಕೆ ಮದುವೆ ನಡೆಯಲಿದೆ.
ಜುಳೈ 13ಕ್ಕೆ ಶುಭ ಆಶೀರ್ವಾದ ಸಮಯ ನಡೆಯಲಿದೆ
ಜುಲೈ 14: ರಿಸೆಪ್ಷನ್ ಈ ದಿನದಂದು ನಡೆಯಲಿದ್ದು ಇದಕ್ಕೆ ಡ್ರೆಸ್‌ಕೋಡ್ ಕೂಡ ಇದೆ, ಈ ದಿನ ಎಲ್ಲರೂ ಭಾರತೀಯ ಉಡುಗೆಯಲ್ಲಿ ಬರುವಂತೆ ಹೇಳಲಾಗಿದೆ.
ಜಾಮ್ ನಗರದಲ್ಲಿ ಪ್ರೀವೆಡ್ಡಿಂಗ್ ನಡೆದಿತ್ತು ಅದಕ್ಕೆ ಕೋಟ್ಯಾಂತರ ರುಪಾಯಿ ಹಣ ಖರ್ಚು ಮಾಡಲಾಯಿತು. ರಿಹಾನಾ ಸೇರಿದಂತೆ ಹಲವು ಪ್ರಸಿದ್ಧ ಸೆಲೆಬ್ರಿಟಿಗಳಿಗೆ ಕೋಟ್ಯಾಂತರ ರುಪಾಯಿ ನೀಡಿ ಕರೆಸಲಾಗಿತ್ತು. ಮದುವೆಯಲ್ಲಿ ಭಾರತದ ಸಂಪ್ರದಾಯ ಇಡೀ ವಿಶ್ವವೇ ಗಮನಿಸಲಿದೆ.
ಎಲ್ಲರೂ ಅಂಬಾನಿ ಕುಟುಂಬದ ಮದುವೆ ಬಗ್ಗೆ ಮಾತನಾಡುತ್ತಿದ್ದಾರೆ, ಅಂಬಾನಿ ಅದ್ಧೂರಿಯಾಗಿ ಮದುವೆ ಮಾಡಿಸಿದರು ಎಂದು ಸಾಲ ಮಾಡಿ ಅದ್ಧೂರಿ ಮದುವೆ ಬಗ್ಗೆ ಯೋಚಿಸಬೇಡಿ, ಏಕೆಂದರೆ ಅಂಬಾನಿ ಈ ಅದ್ಧೂರಿ ಮದುವೆಗೆ ಖರ್ಚು ಮಾಡುತ್ತಿರುವುದು ತನ್ನ ಸಂಪತ್ತಿನ ಶೇ. 1ರಷ್ಟು ಮಾತ್ರ.



Click it and Unblock the Notifications