Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
ದೇಶದಲ್ಲಿ ನಡೆದ ಮೊದಲ ಚುನಾವಣೆ ಕುರಿತ ಅಚ್ಚರಿಗಳು ಇಲ್ಲಿವೆ..! ಅಂದು ಗೆದ್ದಿದ್ಯಾರು..? ಯಾವ ಪಕ್ಷ?
ವಿಶ್ವದ ಅತೀ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ಭಾರತದಲ್ಲಿ ಪ್ರಜಾಪ್ರಭುತ್ವದ ಹಬ್ಬವೆಂದೇ ಕರೆಯಲಾಗುವ ಚುನಾವಣೆ ನಡೆಯಲಿದೆ. ಹೀಗಾಗಿ ದೇಶದಲ್ಲಿ ಚುನಾವಣಾ ಪೂರ್ವ ಸಿದ್ಧತೆ ಭರದಿಂದ ಸಾಗಿದೆ. ಭಾರತದ ತನ್ನ ಚುನಾವಣಾ ಮಾದರಿಯಿಂದ ವಿಶ್ವದ ಅನೇಕ ರಾಷ್ಟ್ರಗಳಿಗೆ ಪ್ರೇರಣೆ, ಮಾದರಿಯಾಗಿದೆ.
ಅತೀ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಂದಿಗೂ ಅತ್ಯಂತ ದೊಡ್ಡ ಹಬ್ಬವಾಗಿ ಚುನಾವಣೆ ನಡೆದುಕೊಂಡು ಬಂದಿದೆ. ಚುನಾವಣೆಗೆ ನಡೆಸಲು ಕೇಂದ್ರ ಚುನಾವಣಾ ಆಯೋಗ ವರ್ಷದ ಮೊದಲೇ ನಡೆಸುತ್ತದೆ. ಸ್ವತಂತ್ರ ಸಂಸ್ಥೆಯಾಗಿ ಇದು ಕಾರ್ಯನಿರ್ವಹಿಸುತ್ತದೆ. ಹಾಗೆ ಎಲ್ಲಾ ಪಕ್ಷದ ನಾಯಕರು ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬರಲು ಭರ್ಜರಿ ಸಿದ್ಧತೆ ನಡೆಸಿದ್ದಾರೆ.

ಇನ್ನೊಂದೆಡೆ ಈ ಬಾರಿಯ ಚುನಾವಣೆ ಭಾರೀ ಕುತೂಹಲ ಮೂಡಿಸಿದ್ದು, ಯಾವ ಪಕ್ಷ ಅಧಿಕಾರ ಹಿಡಿಯಬೇಕು ಎಂಬುದನ್ನು ನಿರ್ಧರಿಸಲು ಮತದಾರ ತನ್ನ ಹಕ್ಕು ಚಲಾಯಿಸಲಿದ್ದಾನೆ. ಭಾರತದಲ್ಲಿ ನಡೆಯುವ ಗೌಪ್ಯ ಮತದಾನ ಪ್ರಕ್ರಿಯೆ ವಿಶ್ವದ ಹಲವು ರಾಷ್ಟ್ರಗಳು ಅಳವಡಿಸಿಕೊಂಡಿವೆ. ಹಾಗಾದರೆ ಭಾರತದ ಚುನಾವಣೆಯ ಕುರಿತ 10 ಅಚ್ಚರಿ ಹುಟ್ಟಿಸುವ ವಿಚಾರಗಳನ್ನು ನಾವಿಂದು ಹೇಳಲಿದ್ದೇವೆ ನೋಡಿ.
ನಮ್ಮ ಮೊದಲ ಸಾರ್ವತ್ರಿಕ ಚುನಾವಣೆ ನಡೆದಿದ್ದು ಯಾವಾಗ? ಮೊದಲ ಚುನಾವಣೆಗೆ ಖರ್ಚಾಗಿದ್ದು ಎಷ್ಟು, ಆ ಚುನಾವಣೆಯಲ್ಲಿ ಗೆದ್ದಿದ್ದು ಯಾರು? ಹೀಗೆ ಹತ್ತಾರು ವಿಚಾರಗಳನ್ನು ನೋಡೋಣ.
- ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಚುನಾವಣೆ ಆರಂಭವಾಗಿದ್ದು, ಅಕ್ಟೋಬರ್ 1951ರಲ್ಲಿ ಸ್ವಾತಂತ್ರಗೊಂಡ ಬಳಿಕ ಭಾರತವು ತನ್ನದೇ ಸಂವಿಧಾನ ಪಡೆಯಿತು. ಇದಾದ ಬಳಿಕ ಮೊಟ್ಟ ಮೊದಲ ಬಾರಿಗೆ ಸಾರ್ವತ್ರಿಕ ಚುನಾವಣೆ ಎದುರಿಸಿತು. ಅಚ್ಚರಿ ಅಂದ್ರೆ ಈ ಚುನಾವಣೆ ಬರೋಬ್ಬರಿ 4 ತಿಂಗಳ ಕಾಲ ನಡೆದಿತ್ತು. ಫೆಬ್ರವರಿ 1952ರಲ್ಲಿ ಈ ಮೊದಲ ಚುನಾವಣೆ ಕೊನೆಗೊಂಡಿತ್ತು.
- ಈ ಚುನಾವಣೆಯಲ್ಲಿ ಬರೋಬರಬಿ 1,874 ಮಂದಿ ಅಭ್ಯರ್ಥಿಗಳು ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದರು. ಈ ವೇಳೆಗಾಗಲೇ ಭಾರತದಲ್ಲಿ ಸುಮಾರು 53 ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದವು.
- ಈ ವೇಳೆಗೆ ಭಾರತದ ಜನಸಂಖ್ಯೆ ನೀವು ಊಹಿಸದಷ್ಟಿತ್ತು. ಅಂದ್ರೆ ಭಾರತದ ಒಟ್ಟಾರೆ ಜನಸಂಖ್ಯೆ ಕೇವಲ 36 ಕೋಟಿ ಇತ್ತು. ಇದರಲ್ಲಿ ಕೇವಲ 17.32 ಕೋಟಿ ಜನರು ಮಾತ್ರ ಚುನಾವಣೆಯಲ್ಲಿ ಭಾಗಿಯಾಗುತ್ತಿದ್ದರು. ಜೊತೆಗೆ ಈ ವೇಳೆಗೆ ದೇಶದಲ್ಲಿ 489 ಲೋಕಸಭೆ ಸೀಟ್‌ಗಳಿದ್ದವು.
- ಇನ್ನೊಂದು ಅಚ್ಚರಿ ಎಂದರೆ ಈ ಮಹಿಳಾ ಬೂತ್‌ಗಳು ಎಂಬುದನ್ನು ನೀವೀಗ ಕೇಳಿರಬಹುದು. ಆದರೆ ಭಾರತದ ಮೊಟ್ಟ ಮೊದಲ ಚುನಾವಣೆಯಲ್ಲೇ ಮಹಿಳೆಯರಿಗೆಂದೇ ಪ್ರತ್ಯೇಕ ಬೂತ್‌ನ ವ್ಯವಸ್ಥೆ ಮಾಡಲಾಗಿತ್ತು. ಸುಮಾರು 27, 527 ಬೂತ್‌ಗಳು ಮಹಿಳೆಯರಿಗಾಗಿ ಮೀಸಲಿಡಲಾಗಿತ್ತು. ಒಟ್ಟಾರೆಯಾಗಿ ದೇಶಾದ್ಯಂತ 1,96,084 ಬೂತ್‌ಗಳನ್ನು ತೆರೆಯಲಾಗಿತ್ತು.
- ಹಿಮಾಚಲ್ ಪ್ರದೇಶದ ತಾಲೂಕು ಕೇಂದ್ರವಾಗಿದ್ದ ಚಿನಿ ಎಂಬ ಊರಿನಲ್ಲಿ ದೇಶದ ಮೊಟ್ಟ ಮೊದಲ ಮತದಾನ ನಡೆದಿತ್ತು. ಇನ್ನು ದೇಶದ ಮೊಟ್ಟ ಮೊದಲ ಚುನಾವಣೆಯಲ್ಲಿ ಸುಮಾರು 45.7ರಷ್ಟು ಮತದಾನವಾಗಿತ್ತು. ಇತ್ತೀಚಿಗೆ ಈ ಮತದಾನದ ಶೇಕಡಾವಾರು ಪ್ರಮಾಣ ಹೆಚ್ಚಳವಾಗುತ್ತಿದೆ. ಆದರೆ ವಿಧಾನಸಭೆ ಚುನಾವಣೆಗಳಲ್ಲಿ ಕೆಲ ರಾಜ್ಯದ ಮತದಾನದ ಪ್ರಮಾಣ ಕಡಿಮೆಯಾಗಿಯೇ ಇರುತ್ತದೆ.
- ಮೊದಲ ಚುನಾವಣೆಯ ಫಲಿತಾಂಶವು 1952 ಫೆಬ್ರವರಿಯಲ್ಲಿ ಘೋಷಣೆಯಾಯಿತು. ಈ ದಿನವನ್ನು ಪ್ರಜಾಪ್ರಭುತ್ವದ ಆರಂಭದ ಎಲೆ ಎಂದು ಕರೆಯಲಾಯಿತು. ಈ ಚುನಾವಣೆಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಬರೋಬ್ಬರಿ 364 ಸೀಟ್‌ಗಳಲ್ಲಿ ಜಯ ದಾಖಲಿಸಿತು. ಜೊತೆಗೆ ಜವಹರಲಾಲ್ ನೆಹರು ಅವರು ಪ್ರಧಾನಿಯಾಗಿ ಆಯ್ಕೆಯಾದರು.
- ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ ಈ ಚುನಾವಣೆಯಲ್ಲಿ 16 ಸೀಟ್ ಗೆದ್ದು ಎರಡನೇ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಇವರ ಜೊತೆ ಜಯಪ್ರಕಾಶ್ ನಾರಾಯಣ್ ಹಾಗೂ ರಾಮ್ ಮನೋಹರ್ ಲೋಹಿಯಾ ಅವರ ಸೋಶಿಯಲಿಸ್ಟ್ ಪಾರ್ಟಿ 12 ಸೀಟ್ ಗೆದ್ದು ಮೂರನೇ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು.



Click it and Unblock the Notifications
