Latest Updates
-
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ! -
ಡೆಂಗ್ಯೂ ಭೀತಿ: ಕೇವಲ 10 ನಿಮಿಷದಲ್ಲಿ ನಿಮ್ಮ ಮನೆಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಿರಿ -
ಹಬ್ಬದ ಸೀಸನ್: ಕಲಬೆರಕೆ ಆಹಾರದಿಂದ ಎಚ್ಚರ! ಮಹಾರಾಷ್ಟ್ರ FDA ಕಠಿಣ ತಪಾಸಣೆ ಆರಂಭ -
ಶಿಕ್ಷಕರ ದಿನಾಚರಣೆ 2026: ನಿಮ್ಮ ಪೋಸ್ಟ್ ಟ್ರೆಂಡ್ ಆಗಲು ಬೆಸ್ಟ್ ಕ್ಯಾಪ್ಷನ್ಸ್ ಮತ್ತು ಗಿಫ್ಟ್ ಐಡಿಯಾಗಳು! -
ಮಳೆಗಾಲದ ಎಚ್ಚರಿಕೆ: ಹೊರಗೆ ವಾಕಿಂಗ್ ಹೋಗುವ ಮುನ್ನ ಈ ವಿಷಯ ಗಮನಿಸಿ, ಮನೆಯಲ್ಲೇ ಫಿಟ್ ಆಗಿರಿ -
ಗೃಹಹಿಂಸೆಯ ಸುಳಿಯಲ್ಲಿ ಸಿಲುಕಿದ್ದೀರಾ? ಸುರಕ್ಷಿತವಾಗಿ ಪಾರಾಗಲು ಈ ಮಾರ್ಗದರ್ಶಿ ಮತ್ತು ತುರ್ತು ಸಹಾಯವಾಣಿಗಳು ನಿಮಗೆ ನೆರವಾಗಲಿವೆ
ಚಂದ್ರನ ಜೊತೆಗೆ ಭೂಮಿಗಿದೆ ಮತ್ತೊಂದು ಸಂಗಾತಿ ಪತ್ತೆ: ಇದು ಅತ್ಯಂತ ಸಣ್ಣ ಕ್ಷುದ್ರಗ್ರಹ
ಭೂಮಿಯ ಸುತ್ತ ಯಾವೆಲ್ಲಾ ವಸ್ತುಗಳು ಸುತ್ತುತ್ತಿವೆ ಅಂದ್ರೆ ನಮ್ಮ ನೆನಪಿಗೆ ಬರೋದು ಚಂದ್ರ ಮಾತ್ರ. ಇದು ನಿಜವೂ ಹೌದು. ಭೂಮಿ ಸೂರ್ಯನ ಸುತ್ತ ಸುತ್ತಿದರೆ ಭೂಮಿ ಸುತ್ತ ಚಂದ್ರನು ಸುತ್ತುತ್ತಾನೆ. ಹಾಗೆ ಇದು ನಿರಂತರ ಪ್ರಕ್ರಿಯೆಯೂ ಆಗಿರಲಿದೆ. ಭೂಮಿಗೆ ಇರುವ ಏಕೈಕ ಉಪಗ್ರಹ ಅಂದ್ರೆ ಅದು ಚಂದ್ರ ಮಾತ್ರ. ಹಾಗೆ ಚಂದ್ರನು ಕೂಡ ಭೂಮಿಯ ಚಲನೆಗೆ ಬಹಳ ಮುಖ್ಯ ಅಂಶವಾಗಿದೆ.
ಆದ್ರೆ ಈಗ ಭೂಮಿ ಸುತ್ತಲೂ ಚಂದ್ರನ ಜೊತೆಗೆ ಈಗ ಮತ್ತೊಂದು ವಸ್ತು ಕೂಡ ಸುತ್ತುತ್ತಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಹವಾಯಿಯಲ್ಲಿರುವ ಪ್ಯಾನ್ ಸ್ಟಾರ್ಸ್ ವೀಕ್ಷಣಾಲಯದ ತಜ್ಞರು 1960ರ ದಶಕದಿಂದಲೂ ಭೂಮಿಯ ಸುತ್ತ ತಿರುಗುತ್ತಿರುವ 2025 PN7 ಎಂಬ ಅರೆ ಚಂದ್ರನನ್ನು ಗುರುತಿಸಿದ್ದಾರೆ ಎಂದು ತಿಳಿದುಬಂದಿದೆ.

ಈ ಕಾಸ್ಮಿಕ್ ಗ್ರಹವು ಮೂಲತಃ ಕ್ಷುದ್ರಗ್ರಹ ಎಂದು ತಿಳಿದುಬಂದಿದೆ. ಭೂಮಿಯ ಕ್ಷಕ್ಷೆಯಿಂದ ಹೊರಗೆ ಅಂದರೆ ಗ್ರಹಗಳ ಕಕ್ಷೆಯಲ್ಲಿ ಸೂರ್ಯನನ್ನು ಸುತ್ತುತ್ತಿದೆ ಎಂದು ವಿವರಿಸಿದ್ದಾರೆ. ಕೇವಲ 19 ಮೀಟರ್ (62 ಅಡಿ) ಅಗಲವಿರುವ ಕ್ಷುದ್ರಗ್ರಹವಿದು ಎಂದು ವಿಜ್ಞಾನಿಗಳು ಹೇಳಿದ್ದಾರೆ. ಇದು ಸುಮಾರು 60 ವರ್ಷಗಳಿಂದಲೂ ಭೂಮಿಯ ಸುತ್ತ ಸುತ್ತುತ್ತಿದೆ. ಇದು ಭೂಮಿಯಿಂದ ದೂರ ಸರಿಯಲು ಮುಂದಿನ 60 ವರ್ಷಗಳ ಕಾಲ ತೆಗೆದುಕೊಳ್ಳಲಿದೆ. ಇದು ಭೂಮಿಯ ಕಕ್ಷೆಯೊಳಗೆ ಇದ್ದ 7ನೇ ಅರೆ ಚಂದ್ರ ಎಂದು ಹೇಳಲಾಗಿದೆ.
ವಿಜ್ಞಾನಿಗಳು 1991 ರಲ್ಲಿ '1991 VG' ಅನ್ನು ಮೊದಲು ಕಂಡು ಹಿಡಿದರು ಇದು ಮೊದಲ ಅರೆ ಚಂದ್ರ ಎಂದು ಭಾವಿಸಲಾಗಿತ್ತು, ಬಳಿಕ ಇದೊಂದು ಕ್ಷುದ್ರಗ್ರಹ ಎಂದು ತಿಳಿದುಬಂದಿತ್ತು. ಇದಾದ ಬಳಿಕ 7 ಕ್ಷುದ್ರಗ್ರಹಗಳು ಭೂಮಿಯ ಕಕ್ಷೆಯಲ್ಲಿ ಪತ್ತೆಯಾಗಿವೆ. ಈ ಕ್ಷುದ್ರಗ್ರಹಗಳು ದೂರದರ್ಶಕದ ಮೂಲಕ ಕಂಡುಬರಲಿವೆ ಹಾಗೆ ಇವು ಭೂಮಿಯ ಗುರುತ್ವಾಕರ್ಷಣಾ ಬಲದೊಂದಿಗೆ ಸಂಬಂಧ ಹೊಂದಿಲ್ಲ ಎಂದು ತಿಳಿದುಬಂದಿದೆ.
ಈ ಹೊಸ ಕ್ಷುದ್ರಗ್ರಹವು ಭೂಮಿಯನ್ನು 60ಕ್ಕೂ ಹೆಚ್ಚು ವರ್ಷ ಸುತ್ತಬಹುದು ಎಂದು ಅಂದಾಜಿಸಲಾಗಿದೆ. ಆದ್ರೆ ಇದಕ್ಕೂ ಹೆಚ್ಚು ಸಮಯ ಕಾಮೊ ಒಲೆವಾ ಎಂಬ ಕ್ಷುದ್ರಗ್ರಹವು ಬರೋಬ್ಬರಿ 381 ವರ್ಷಗಳ ಕಾಲ ಸುತ್ತುಬರಲಿದೆ. 2025 PN7 ಭೂಮಿಯಿಂದ 2.8 ಮಿಲಿಯನ್ ಮೈಲುಗಳು (4.5 ಮಿಲಿಯನ್ ಕಿಮೀ) ಮತ್ತು 37 ಮಿಲಿಯನ್ ಮೈಲುಗಳು (59 ಮಿಲಿಯನ್ ಕಿಮೀ) ನಡುವೆ ವಿಶಾಲ ವ್ಯಾಪ್ತಿಯ ಅಂತರದಲ್ಲಿ ಸುತ್ತುವರೆದಿದೆ. ಇದರಿಂದ ಭೂಮಿಗೆ ಯಾವುದೇ ಹಾನಿ ಇಲ್ಲ ಎಂಬುದು ಕೂಡ ಸಮಾಧಾನಕರ ಸಂಗತಿಯಾಗಿದೆ.
2025ರಲ್ಲಿ ಪತ್ತೆಯಾದ ಈ ಕ್ಷುದ್ರಗ್ರಹವು ಅತ್ಯಂತ ಚಿಕ್ಕದು ಹಾಗೆ ಹೊಳಪು ಹೊಂದಿಲ್ಲ. ಭೂಮಿಯಿಂದ ದೂರದರ್ಶಕದಲ್ಲಿ ನೋಡಿದಾಗಲು ಇದನ್ನು ಪತ್ತೆ ಮಾಡುವುದು ಬಹಳ ಕಷ್ಟವಾಗಿದೆ. ಹೀಗಾಗಿಯೇ ಇದು ವರ್ಷಗಳಿಂದಲೂ ಪತ್ತೆ ಮಾಡಲಾಗಿರಲಿಲ್ಲ ಎಂದು ತಿಳಿದುಬಂದಿದೆ. ಇಂತಹ 7 ಕ್ಷುದ್ರಗಳು ಕೂಡ ನಿಗದಿತ ಸಮಯದ ಬಳಿಕ ಭೂಮಿಯಿಂದ ದೂರ ಸರಿಯಲು ಆರಂಭಿಸುತ್ತವೆ. ಇಂತಹ ಕ್ಷುದ್ರ ಗ್ರಹಗಳನ್ನು ಚಂದ್ರನ ಲಕ್ಷಣಗಳಿಗೆ ಹೋಲಿಸಲು ಬೇರೆ ಯಾವುದೇ ಕಾರಣಗಳಿಲ್ಲದಿದ್ದರೂ ಕಕ್ಷೆಯಲ್ಲಿ ಸುತ್ತುವರೆಯುವ ಕಾರಣದಿಂದ ಹೀಗೆ ಕರೆಯಲಾಗುತ್ತದೆ. ಆದ್ರೆ ಭೂಮಿಯ ಗುರುತ್ವಾಕರ್ಷಣೆಗೆ ಇವು ಸಂಬಂಧಪಟ್ಟಿಲ್ಲದ ಕಾರಣ ಯಾವುದೇ ಅಪಾಯಗಳಿಲ್ಲ ಎಂದು ವಿಜ್ಞಾನಿಗಳು ಹೇಳಿದ್ದಾರೆ.



Click it and Unblock the Notifications