Latest Updates
-
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು ಒಟ್ಟಾಗಿ ಕುಳಿತು ಈ ಕೆಲಸ ಮಾಡಿದರೆ ಟೆನ್ಷನ್ ಫ್ರೀ! -
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ!
ಅನ್ಯಗ್ರಹ ಜೀವಿಗಳು ನಮ್ಮನ್ನು ನೋಡುತ್ತಿವೆ...ಆದರೆ ಹೇಗೆ ಗೊತ್ತಾ? ವಿಜ್ಞಾನಿಗಳು ಬಿಚ್ಚಿಟ್ಟ ಅಚ್ಚರಿ..!
ಜಗತ್ತಿನಲ್ಲಿ ಏಲಿಯನ್‌ಗಳ ಬಗೆಗಿನ ಕುತೂಹಲ ಕಡಿಮೆಯಾಗುತ್ತಲೇ ಇಲ್ಲ. ಅನ್ಯಗ್ರಹ ಜೀವಿಗಳ ಕುರಿತು ನಿತ್ಯವು ಒಂದಲ್ಲಾ ಒಂದು ಕಥೆಗಳು ಕಣ್ಣ ಮುಂದೆ ಬರುತ್ತಲೇ ಇವೆ. ಹತ್ತಾರು ವರ್ಷದಿಂದ ಈ ಕುರಿತ ಸಿನಿಮಾಗಳು ಜನರ ನಿಬ್ಬೆರಗಾಗಿಸಿವೆ. ಅಲ್ಲದೆ ಹಲವು ಕಡೆ ಏಲಿಯನ್‌ಗಳು ಕಾಣಿಸಿಕೊಂಡವು ಎಂಬ ವರದಿಗಳಾಗುತ್ತವೆ. ಇದೆಲ್ಲವೂ ಭೂಮಿ ಮೇಲಿರುವ ಜೀವಿಗಳಿಗೆ ಅನ್ಯಗ್ರಹ ಜೀವಿಗಳ ಕುರಿತು ಇರುವ ಕುತೂಹಲವನ್ನು ಇನ್ನಷ್ಟು ಹೆಚ್ಚಿಸಿವೆ.
ಆದರೆ ಇತ್ತೀಚಿಗೆ ತಜ್ಞರ ತಂಡವೊಂದು ನೀಡಿರುವ ಹೇಳಿಕೆ ಇಡೀ ವಿಶ್ವದ ಗಮನ ಸೆಳೆದಿದೆ. ಅನ್ಯಗ್ರಹ ಜೀವಿಗಳ ಬಗ್ಗೆ ಅಧ್ಯಯನ ಮಾಡುವ ವಿಜ್ಞಾನಿಗಳ ಗುಂಪು ಪ್ರಪಂಚದಾದ್ಯಂತ ಇದೆ ಎಂಬುದು ಗಮನಿಸಬೇಕಾದ ಸಂಗತಿ. ಇತ್ತೀಚಿನ ಅಧ್ಯಯನದ ಪ್ರಕಾರ, ಅಲ್ಟ್ರಾ-ಅಡ್ವಾನ್ಸ್ಡ್ ಟೆಲಿಸ್ಕೋಪ್‌ಗಳೊಂದಿಗೆ ಲಕ್ಷ ಲಕ್ಷ ಬೆಳಕಿನ ವರ್ಷಗಳ ದೂರದಿಂದ ನಮ್ಮನ್ನು ವೀಕ್ಷಿಸುತ್ತಿದ್ದಾರಂತೆ.
ಹೌದು ಈ ರೀತಿಯ ಹೇಳಿಕೆ ನೀಡಿರುವುದು ತಜ್ಞರ ತಂಡ. ಅನ್ಯಗ್ರಹ ಜೀವಿಗಳು ಲಕ್ಷ ಲಕ್ಷ ಬೆಳಕಿನ ವೇಗದ ದೂರದಲ್ಲಿವೆ. ನಮ್ಮಲ್ಲಿ ಅಷ್ಟು ತಂತ್ರಜ್ಞಾನವಿನ್ನೂ ಬೆಳವಣಿಗೆಯೇ ಆಗಿಲ್ಲ. ಆದರೆ ಅನ್ಯಗ್ರಹ ಜೀವಿಗಳು ನಮಗಿಂತಲೂ ಸಾವಿರಾರು ಪಟ್ಟು ಹೆಚ್ಚು ತಂತ್ರಜ್ಞಾನದಲ್ಲಿ ಮುಂದಿವೆ ಎಂದಿದ್ದಾರೆ.
ಹೀಗಾಗಿ ಅವು ನಮ್ಮನ್ನು ಅಲ್ಟ್ರಾ-ಅಡ್ವಾನ್ಸ್ಡ್ ಟೆಲಿಸ್ಕೋಪ್‌ಗಳ ಸಹಾಯದಿಂದ ನೋಡುತ್ತಿವೆ ಎಂದಿದ್ದಾರೆ. ಆದರೆ ಇಲ್ಲೊಂದು ಅಚ್ಚರಿ ಇದೆ. ಅವು ನಮ್ಮನ್ನು ರಿಯಲ್ ಟೈಮ್‌ನಲ್ಲಿ ನೋಡಲು ಸಾಧ್ಯವಿಲ್ಲ. ಆದರೆ ಕನಿಷ್ಠ 3,000 ವರ್ಷಗಳ ತಡವಾಗಿ ನಾವು ಕಾಣಿಸುತ್ತೇವೆ. ಏಕೆಂದರೆ ಅಷ್ಟು ದೂರದಲ್ಲಿರುವುದರಿಂದ ತಡವಾಗಿ ಅವುಗಳಿಗೆ ನಾವು ಕಾಣುತ್ತೇವೆ. ಅಂದರೆ ಈ ಕ್ಷಣ ನಮ್ಮ ಕಡೆ ಟೆಲಿಸ್ಕೋಪ್‌ನಲ್ಲಿ ನೋಡಿದರೆ ಆ ಮಾಹಿತಿ ತಲುಪುವ ಹೊತ್ತಿಗೆ ನಮ್ಮ 3 ಸಾವಿರ ವರ್ಷ ಮುಂದಕ್ಕೆ ಹೋಗಿರುತ್ತೇವೆ ಎಂಬುದು ವಿಜ್ಞಾನಿಗಳ ವಾದವಾಗಿದೆ.
ಅನ್ಯಗ್ರಹ ಜೀವಿಗಳು ಸಹಸ್ರಾರು ವರ್ಷಗಳ ನಂತರ ಪ್ರಚಲಿತ ಘಟನೆಗಳನ್ನು ನೋಡುವುದಕ್ಕೆ ಕಾರಣವೆಂದರೆ ಅವುಗಳನ್ನು ತಲುಪಲು ಕನಿಷ್ಠ 3,000 ಬೆಳಕಿನ ವರ್ಷಗಳ ಪ್ರಯಾಣ ತೆಗೆದುಕೊಳ್ಳುತ್ತದೆ ಎಂದು ಅಧ್ಯಯನವು ಕಂಡುಹಿಡಿದಿದೆ. ಹಾಗಾಗಿ, ಈಗ ಅನ್ಯಗ್ರಹ ಜೀವಿಗಳು ನೋಡುತ್ತಿರುವುದು ನಮ್ಮ ಪೂರ್ವಜರನ್ನು. ವಿಜ್ಞಾನಿಗಳು ಅವರು ರೋಮನ್, ಯೆಮೆನ್, ಭಾರತೀಯ ಮತ್ತು ಈಜಿಪ್ಟ್ ನಾಗರಿಕತೆಗಳನ್ನು ನೋಡಬಹುದು ಎಂದು ನಂಬುತ್ತಾರೆ.
ಆಕ್ಟಾ ಆಸ್ಟ್ರೋನಾಟಿಕಾದಲ್ಲಿ ಪ್ರಕಟವಾದ ಅಧ್ಯಯನವು "ನಾವು ಮುಂದುವರಿದ ಅನ್ಯಗ್ರಹದ ನಾಗರಿಕತೆಗಳಿಗೆ ಗೋಚರಿಸುತ್ತೇವೆಯೇ?" ಮತ್ತು SETI ಇನ್‌ಸ್ಟಿಟ್ಯೂಟ್‌ನಲ್ಲಿ ಸಂಶೋಧನಾ ಅಂಗಸಂಸ್ಥೆಯಾದ ZN ಒಸ್ಮನೋವ್ ಅವರಿಂದ ಲೇಖಕರು ಭೌತಶಾಸ್ತ್ರದ ನಿಯಮಗಳ ಆಧಾರದ ಮೇಲೆ 3000 ಜ್ಯೋತಿರ್ವರ್ಷಗಳು ಭೂಮಿಯ ಮೇಲಿನ ನಮ್ಮ ಚಟುವಟಿಕೆಗಳನ್ನು ಅನ್ಯಗ್ರಹ ಜೀವಿಗಳು ಪತ್ತೆ ಮಾಡಬಹುದಾದ ಗರಿಷ್ಠ ಅಂತರ ಎಂದು ಲೆಕ್ಕ ಹಾಕಿದ್ದಾರೆ.
ಅಧ್ಯಯನವು ಅನ್ಯಲೋಕದ ನಾಗರಿಕತೆಗಳನ್ನು ಅವುಗಳ ತಾಂತ್ರಿಕ ಮಟ್ಟಗಳ ಪ್ರಕಾರ ವರ್ಗೀಕರಿಸಿದೆ. ವರ್ಗಗಳು ಟೈಪ್-I, ಇದು ನಕ್ಷತ್ರದಿಂದ ಗ್ರಹವನ್ನು ತಲುಪುವ ಎಲ್ಲಾ ಶಕ್ತಿಯನ್ನು ಬಳಸುತ್ತದೆ; ಟೈಪ್-II, ಇದು ನಕ್ಷತ್ರದ ಎಲ್ಲಾ ಶಕ್ತಿಯನ್ನು ಬಳಸುತ್ತದೆ; ಮತ್ತು ಟೈಪ್-III, ಇದು ನಕ್ಷತ್ರಪುಂಜದ ಎಲ್ಲಾ ಶಕ್ತಿಯನ್ನು ಬಳಸುತ್ತದೆ.
ಒಟ್ಟಾರೆ ದೂರದ ನೀಲಿ ಗ್ರಹದಲ್ಲಿ ಅನ್ಯಗ್ರಹ ಜೀವಿಗಳು ನಮ್ಮನ್ನು ನೋಡಿತ್ತಿವೆ ಎಂಬುದು ವಿಜ್ಞಾನಿಗಳ ವಾದವಾಗಿದೆ. ಆದರೆ ಅದೆಷ್ಟು ನಿಖರಗವಾಗಿದೆ ಎಂಬುದು ತಿಳಿಯುವುದು ಕಷ್ಟಕರ. ಅಲ್ಲದೆ ಏಲಿಯನ್‌ಗಳ ಬಳಿ ಇಡೀ ಮಾನವ ವಿಜ್ಞಾನಕ್ಕೆ ಸಡ್ಡು ಹೊಡೆಯುವಂತಹ ತಂತ್ರಜ್ಞಾನಗಳು ಸಹ ಇರಬಹುದು, ನಮ್ಮನ್ನು ನೈಜ ಸಮಯದಲ್ಲೇ ಅವು ವೀಕ್ಷಿಸುತ್ತಿರಬಹುದು.




Click it and Unblock the Notifications