Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಭೂಮಿಯ ಬೆಳವಣಿಗೆ ದೂರದಿಂದಲೇ ನೋಡುತ್ತಿವೆ ಏಲಿಯನ್‌ಗಳು: ವಿಜ್ಞಾನಿ ಮಂಡಿಸಿದ ಹೊಸ ಸಿದ್ದಾಂತ!
ಏಲಿಯನ್ ಇರುವಿಕೆಯ ಕುರಿತಾಗಿ ಮೊದಲಿನಿಂದಲೂ ಹಲವು ಸಿದ್ದಾಂತಗಳು, ಊಹೆಗಳು, ನಂಬಲಸಾಧ್ಯ ವಿಚಾರಗಳು ಕೇಳಿಬರುತ್ತಲೇ ಇರುತ್ತವೆ. ನಮ್ಮ ಸೌರಮಂಡಲ ಹೊರತುಪಡಿಸಿ ಅದರ ಹೊರಗೆ ಜೀವವೈವಿಧ್ಯತೆ ಇದೆ ಎಂಬುದೇ ದೊಡ್ಡ ಅಚ್ಚರಿಯಾಗಿದೆ. ಇದನ್ನು ಸಾಬೀತು ಪಡಿಸುವ ಕಾರ್ಯ ನಡೆಯುತ್ತಲೇ ಇದೆ. ಆದ್ರೆ ಅದಕ್ಕೆ ಪೂರಕ ವಿಚಾರಗಳು ಸಿಗುತ್ತಿದ್ದರೂ ಸಾಬೀತುಪಡಿಸಲು ಇನ್ನೂ ದೊಡ್ಡ ಮಟ್ಟದ ಸಾಕ್ಷಿಗಳ ಅಗತ್ಯವಿದೆ.
ವಿಜ್ಞಾನಿಗಳು ಬಹಳ ಹಿಂದಿನಿಂದಲೂ ಅನ್ಯಲೋಕದ ಜೀವಿಗಳ ಸಾಕ್ಷಿಯಾಗಿ ಹಾರುವ ತಟ್ಟೆಗಳು ಅಥವಾ ಯುಎಫ್‌ಓಗಳ ಹಿಂದೆ ಬಿದ್ದಿರುವುದು ನೋಡಬಹುದು. ಆಗಾಗ ಈ ಕುರಿತಾದ ಹೊಸ ಹೊಸ ವಿಡಿಯೋಗಳು ಸುದ್ದಿಗಳು ಹರಿದಾಡುತ್ತವೆ. ಆದ್ರೆ ಕಾರ್ಲ್ಟನ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಅಲೆಕ್ಸ್ ಎಲ್ಲೆರಿ ಈಗ ಹೊಸ ಸಿದ್ದಾಂತವೊಂದನ್ನು ಮುಂದಿಟ್ಟಿದ್ದಾರೆ.

ಈ ಏಲಿಯನ್‌ಗಳು ನಾವಂದುಕೊಂಡಂತೆ ತಟ್ಟೆ ಆಕಾರದ ವಾಹನಗಳು ಗೋಳಾಕಾರದ ವಾಹನಗಳ ಬಳಸುವ ಬದಲಾಗಿ ಅವು ಕ್ಷುದ್ರಗ್ರಹಗಳು, ಚಂದ್ರನ ಅವಶೇಷಗಳು, ಧುಮಕೇತುಗಳು ಸೇರಿ ಹಲವು ವಸ್ತುಗಳ ರೂಪದಲ್ಲಿ ಭೂಮಿ ತಲುಪಿರಬಹುದು, ಅಥವಾ ನಮ್ಮ ಮೇಲೆ ನಿಗಾ ಇಟ್ಟಿರಬಹುದು ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
ಏಲಿಯನ್‌ಗಳು ಮೂಲಭೂತವಾಗಿ ಹೈಬರ್ನೇಟಿಂಗ್ ಆಗಿರಬಹುದು ಎಂದಿದ್ದಾರೆ. ಹೈಬರ್‌ನೇಟಿಂಗ್ ಅಂದರೆ ಯಾವುದೇ ಚಲನೆ ಇಲ್ಲದೆ ಇರುವ ಸ್ಥಿತಿ ಆಗಿರಲಿದೆ. ಅವು ಸಾಂದರ್ಭಿಕವಾಗಿ ಭೂಮಿ ಮತ್ತು ಅದರ ವಿಕಸನಗೊಳ್ಳುತ್ತಿರುವ ಜೀವನವನ್ನು ವೀಕ್ಷಿಸಲು ಮೇಲ್ಮೈಗೆ ಬರಬಹುದು. ಭೂಮಿ ಮೇಲಿನ ಜೀವನವು ಹೆಚ್ಚು ಸಂಕೀರ್ಣವಾಗುತ್ತಿದ್ದಂತೆ, ಶೋಧಕಗಳ ವೀಕ್ಷಣಾ ಅವಧಿಗಳು ಹೆಚ್ಚಾಗಿ ಆಗಬಹುದು. ಕಳೆದ ಎರಡು ಮಿಲಿಯನ್ ವರ್ಷಗಳ ಮಾನವರ ಬೆಳವಣಿಗೆಯನ್ನು ಅವು ದೂರದಿಂದಲೇ ವೀಕ್ಷಿಸುತ್ತಿವೆ ಎಂದಿದ್ದಾರೆ.
ನಾವು ಬಾಹ್ಯಾಕಾಶದಲ್ಲಿ ರೇಡಿಯೋ ತರಂಗಳು, ಅಥವಾ ಏಲಿಯನ್‌ಗಳ ವಾಹನ ಪತ್ತೆ ಮಾಡುವ ಬದಲಾಗಿ, ಆಕಾಶಕಾಯಗಳು, ಚಂದ್ರನ ಮೇಲೆ ಯಾವುದಾದರು ಚಟುವಟಿಕೆಗಳು ಉಂಟಾಗಿವೆಯೇ ಎಂಬುದನ್ನು ನೋಡಬೇಕು, ಹಾಗೆ ಅವುಗಳ ತಾಂತ್ರಿಕ ಕುರುಹುಗಳು ಈ ಸ್ಥಳದಲ್ಲಿ ಸಿಗಲಿದೆಯೇ ಎಂಬುದನ್ನು ಪರಿಶೀಲಿಸುವುದು ಬಹುಮುಖ್ಯ ಎಂದು ಅವರು ಸಲಹೆ ನೀಡಿದ್ದಾರೆ.
ನಮ್ಮ ಸೌರವ್ಯೂಹದಲ್ಲಿ ಅವುಗಳ ಚಲನೆ ಇರಬಹುದು, ಆದ್ರೆ ಗಮನಿಸುವುದು ಕಷ್ಟವಾಗಿದೆ. ಅವು ಚಂದ್ರನ ಕುಳಿಗಳಲ್ಲಿ ಅಥವಾ ಕ್ಷುದ್ರಗ್ರಹ ಪಟ್ಟಿ ಮತ್ತು ಕೈಪರ್ ಪಟ್ಟಿಯಲ್ಲಿ ಅಡಗಿರಬಹುದು ಎಂದಿದ್ದಾರೆ. ಮಾನವರಂತೆ ಅವುಗಳು ಕೂಡ ಚಂದ್ರನ ಮೇಲೆ ಬಹಳ ಕುತೂಹಲ ಇಟ್ಟುಕೊಂಡಿರಬಹುದು. ಹೀಗಾಗಿ ಚಂದ್ರನ ಕಡಿಮೆ ಗುರುತ್ವಾಕರ್ಷಣೆ ಬಲ ಏಳಿಯನ್‌ಗಳಿಗೆ ಸುಲಭವಾಗಿ ಪ್ರಯಾಣಿಸಲು ಅನುವು ಮಾಡಿಕೊಡಲಿದೆ. ಹಾಗೆ ಅಲ್ಲಿಯೇ ಹೆಚ್ಚಿನ ಪ್ರಮಾಣದ ಅಲ್ಯೂಮಿನಿಯಂ ಪ್ರಮಾಣ ಹೆಚ್ಚಿರುವ ಕಾರಣ ಅವುಗಳಿಗೆ ಅಗತ್ಯವಾದ ಸಂಶೋದನೆಗೆ ನೆರವಾಗಿರಬಹುದು ಎಂದಿದ್ದಾರೆ.
ಇದಕ್ಕಾಗಿಯೇ ನಾವು ಚಂದ್ರನ ಮೇಲೆ ಒಂದು ವೀಕ್ಷಣ ಘಟಕ ಅಥವಾ ಪರಮಾಣು ರಿಯಾಕ್ಟರ್ ಅನ್ನು ನಿರ್ಮಿಸುವುದರಿಂದ ಭವಿಷ್ಯದಲ್ಲಿ ಅನ್ವೇಷಿಸಬಹುದಾದ ರಾಸಾಯನಿಕ ಸಹಿಗಳನ್ನು ಪಡೆಯಬಹುದು ಎಂದಿದ್ದಾರೆ. ನಮ್ಮ ಸೌರ ಮಂಡಲ ಬಹಳ ವಿಶಾಲವಾಗಿದೆ. ಆದರೆ ನಾವು ಕಡಿಮೆ ಮಟ್ಟದಲ್ಲಿ ಅಧ್ಯಯನ ನಡೆಸಿದ್ದೇವೆ. ಏಲಿಯನ್‌ಗಳ ಪತ್ತೆಗಾಗಿ ನಾವು ಅನ್ಯಗ್ರಹವಾಗಲಿ, ಹಾರುತಟ್ಟೆಗಳ ಮೇಲೆ ಗಮನ ಹರಿಸುವ ಬದಲಾಗಿ ಅವುಗಳ ಇರುವಿಕೆಗೆ ಸಾಧ್ಯವಿರುವಂತಹ ಚಂದ್ರ, ಉಲ್ಕೆಗಳು, ಕ್ಷುದ್ರಗ್ರಹಳ ಮೇಲೆ ಗಮನವಿಡಬೇಕಿದೆ ಎಂದಿದ್ದಾರೆ.
ಹಾಗೆ ಏಲಿಯನ್‌ಗಳು ನಮ್ಮ ಸೌರಮಂಡಲದಲ್ಲಿ ಇಲ್ಲದಿದ್ದರೂ ಭೂಮಿಯ ವಿಕಸನದ ಮೇಲೆ ನಿಗಾ ಇಟ್ಟಿವೆ. ಮಾನವನ ಬುದ್ಧಿವಂತಿಕೆ ಹಾಗೆ ಬೆಳವಣಿಗೆಯನ್ನು ದೂರದಿಂದಲೇ ನಿಗಾಇಡುವ ಕೆಲಸ ಮಾಡುತ್ತಿವೆ ಎಂದು ಅವರು ಹೇಳಿದ್ದಾರೆ. ಸದ್ಯ ಏಳಿಯನ್ ಇರುವಿಕೆಯ ಸಂಬಂಧ ಹೊಸ ಸಿದ್ದಾಂತ ನೀಡಿರುವ ಅವರು ಮುಂದಿನ ದಿನಗಳಲ್ಲಿ ಮತ್ತಷ್ಟು ಅಧ್ಯಯನಗಳು ನಡೆದಾಗ ಪ್ರಬಲ ಸಾಕ್ಷಿಗಳು ಸಿಗಬಹುದು ಎಂದು ಊಹಿಸಿದ್ದಾರೆ.



Click it and Unblock the Notifications











