Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಮಂಗಳನ ಮೇಲೆ ಅನ್ಯಗ್ರಹದ ಕಲ್ಲು ಪತ್ತೆ..! 'ಜೀಬ್ರಾ ರಾಕ್' ಬಗ್ಗೆ ಗೊತ್ತಾ?
ಮಂಗಳನ ಮೇಲೆ ಅಧ್ಯಯನಗಳು ನಡೆಯುತ್ತಿರುವಂತೆ ಸಾಲು ಸಾಲು ಕುತೂಹಲಗಳು ನಡೆಯುತ್ತಲೇ ಇವೆ. ಒಂದೊಂದೆ ಅಚ್ಚರಿಯ ಮಾಹಿತಿಗಳು ಹೊರಬರುತ್ತಲೇ ಇದ್ದಾವೆ. ಮಂಗಳನ ಮೇಲೆ ನೀರಿನ ಮೂಲ ಪತ್ತೆಯಾಗುವುದರಿಂದ ಹಿಡಿದು ಬಹುತೇಕ ಯಾವೆಲ್ಲಾ ರಾಸಾಯನಿಕಗಳಿವೆ ಎಂಬುದು ಸಹ ಭಾರೀ ಕುತೂಹಲ ಮೂಡಿಸುವ ವಿಚಾರವಾಗಿದೆ.
ಇನ್ನು ನಾಸಾ ಕಳುಹಿಸಿರುವ ಪರ್ಸೆವೆರೆನ್ಸ್ ರೋವರ್ ಮಂಗಳನ ಅಂಗಳದಲ್ಲಿ ಇಂದಿಗೂ ಕೆಲಸ ಮಾಡುತ್ತಿದೆ. ಬರೋಬ್ಬರಿ 3 ವರ್ಷದಿಂದಲೂ ಪರ್ಸೆವೆರೆನ್ಸ್ ರೋವರ್ ಕೆಲಸ ಮಾಡುತ್ತಲೇ ಇದೆ. ಹೀಗಾಗಿ ಮಂಗಳಲ್ಲಿರುವ ಹಲವು ಕುತೂಹಲಗಳಿಗೆ ಈ ರೋವರ್ ಕೂಡ ಸಾಕ್ಷಿಯಾಗಿದೆ.

(Photo: NASA)
ಈಗ ಇದೇ ರೋವರ್ ಮತ್ತೊಂದು ಅಚ್ಚರಿಯ ವಿಚಾರ ಬಯಲಿಗೆ ತಂದಿದೆ. ಮಂಗಳನ ಮೇಲಿನ ರೋವರ್ ಚಲಿಸುವ ರಸ್ತೆಯಲ್ಲಿ ಒಂದು ವಿಶೇಷ ರೀತಿಯ ಕಲ್ಲು ಪತ್ತೆಯಾಗಿದೆ. ಇದನ್ನು ಜೀಬ್ರಾ ರಾಕ್ ಎಂದು ಕರೆಯಲಾಗಿದೆ. ಜೆಝೆರೋ ಎಂಬ ಕುಳಿಯ ಬಳಿಯಲ್ಲಿ ಈ ಜೀಬ್ರಾ ರಾಕ್ ಪತ್ತೆಯಾಗಿದೆ. ಇದರಲ್ಲಿ ಏನಿದೆ ವಿಶೇಷ ಎಂದು ನೀವು ಅಂದುಕೊಳ್ಳುತ್ತಿರಬಹುದು. ಆದರೆ ಈ ಕಲ್ಲಿನಲ್ಲಿ ವಿಶೇಷತೆ ಇದೆ.
ಅಚ್ಚರಿ ಎಂದರೆ ಈ ಕಲ್ಲು ಮಂಗಳ ಗ್ರಹಕ್ಕೆ ಸೇರಿದ ಕಲ್ಲು ಅಲ್ಲವಂತೆ. ನಾಸಾ ಹೇಳಿರುವ ಪ್ರಕಾರ ಈ ಕಲ್ಲಿನ ರಚನೆಗೂ ಮಂಗಳ ಗ್ರಹದಲ್ಲಿರುವ ರಾಸಾಯನಿಕಗಳಿಗೂ ಸಂಬಂಧವೇ ಇಲ್ಲ. ಅಂದರೆ ಈ ಕಲ್ಲು ಬೇರೊಂದು ಗ್ರಹಕ್ಕೆ ಸೇರಿರಬಹುದು ಎಂದಿದ್ದಾರೆ. ಈ ಕಲ್ಲಿನ ಮೇಲೆ ಕಪ್ಪು ಬಿಳುಪಿನ ರಚನೆ ಇದ್ದು, ಇದು ವಿವಿಧ ರಾಸಾಯನಿಕದ ಸಂಯುಕ್ತದಿಂದ ಉಂಟಾಗಿದೆ ಎಂದಿದ್ದಾರೆ.
ಹೇಳಿಕೆಯ ಪ್ರಕಾರ, ವಿಜ್ಞಾನಿಗಳು "ಫ್ರೇಯಾ ಕ್ಯಾಸಲ್" ಎಂದು ಕರೆದಿರುವ ಬಂಡೆಯು ಹಿಂದೆಂದೂ ನೋಡಿರದ ವಿನ್ಯಾಸವನ್ನು ಹೊಂದಿದೆ. ಈ ರಾಸಾಯನಿಕವು ಹೇಗೆ ಈ ಕಲ್ಲಿನಲ್ಲಿ ಸಂಯೋಜನೆಗೊಂಡಿದೆ ಎಂಬುದನ್ನು ಇನ್ನು ಪತ್ತೆ ಮಾಡಬೇಕಿದೆ.
ಈ ಬಂಡೆಯು ಸುಮಾರು 20 ಸೆಂ.ಮೀ ಅಡ್ಡಲಾಗಿ ಮತ್ತು ಪರ್ಯಾಯ ಕಪ್ಪು ಮತ್ತು ಬಿಳಿ ಪಟ್ಟೆಗಳೊಂದಿಗೆ ಆಕರ್ಷಕ ಮಾದರಿಯನ್ನು ಹೊಂದಿದೆ . ಇದು ಮೃದುವಾದ ಮೇಲ್ಮೈ ಹೊಂದಿರುವ ಕಲ್ಲಾಗಿರಬಹುದು ಎನ್ನಲಾಗಿದ್ದು, ಇದು ಬೇರೆ ಗ್ರಹದಿಂದ ಬಿದ್ದಿರಬಹುದು ಅಥವಾ ಮೇಲಿನಿಂದ ಬಿದ್ದಿದೆ. ಆದರೆ ಮಂಗಳನಲ್ಲಿಯೇ ರಚನೆಗೊಂಡ ಕಲ್ಲು ಇದಾಗಿಲ್ಲ ಎಂದು ಖಚಿತಪಡಿಸಲಾಗಿದೆ. ಆದರೆ ಬೇರೆ ಗ್ರಹದಿಂದ ಬಿದ್ದಿದೆಯೋ ಅಥವಾ ಕ್ಷೂದ್ರಗ್ರಹದಂತೆ ಬಂದು ಬಿದ್ದಿದ್ಯೋ ಎಂಬುದು ಮುಂದೆ ತಿಳಿದುಬರಬೇಕಿದೆ.
ಪರ್ಸೆವೆರೆನ್ಸ್ ರೋವರ್ ಮೊದಲ ಬಾರಿಗೆ ಫೆಬ್ರವರಿ 2021 ರಲ್ಲಿ ಜೆಜೆರೊ ಕ್ರೇಟರ್ ಮೂಲಕ ಮಂಗಳನ ಅಂಗಳಕ್ಕೆ ಇಳಿದಿತ್ತು, ಇದಕ್ಕು ಮೊದಲು ಕ್ಯೂರಿಯಾಸಿಟಿ ರೋವರ್ ಮಂಗಳನಲ್ಲಿತ್ತು. ಅದು 12 ವರ್ಷದಿಂದ ಮಂಗಳನ ಮೇಲೆ ಅಧ್ಯಯನ ನಡೆಯುತ್ತಲೇ ಇದೆ. ಇತ್ತೀಚಿಗೆ ಈ ಪರ್ಸೆವೆರೆನ್ಸ್ ರೋವರ್ ಅನ್ನು ಮಂಗಳನಲ್ಲಿಗೆ ಕಳುಹಿಸಲಾಗಿದೆ. ಈ ಎರಡೂ ರೋವರ್‌ಗಳು ಬೇರೆ ಬೇರೆ ಕೆಲಸ ಮಾಡುತ್ತವೆ.
ಇದೇ ಕ್ಯೂರಿಯಾಸಿಟಿ ರೋವರ್‌ನಿಂದ ಮಂಗಳ ಅಂಗಳದ ಮೊದಲ ಫೋಟೋ ಭೂಮಿಗೆ ಬಂದಿತ್ತು, ಮಂಗಳನಲ್ಲಿ ನೀರಿನ ಮೂಲ ಪತ್ತೆ ಮಾಡಿದ್ದು ಕೂಡ ಇದೇ ಕ್ಯೂರಿಯಾಸಿಟಿ.



Click it and Unblock the Notifications
