Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ಎಐ ಕ್ಷೇತ್ರಕ್ಕೆ ಕಾಲಿಟ್ಟ ಅಲಿಬಾಬಾ..! ಡೀಪ್‌ಸೀಕ್, ಚಾಟ್ ಜಿಪಿಟಿಗಿಂತ ಒಂದು ಕೈ ಮೇಲಂತೆ..!!
ಜಗತ್ತು ಈಗ ಎಐ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಹಿಂದೆ ಬಿದ್ದಿದೆ. ಓಪನ್ ಎಐಯಿಂದ ಹಿಡಿದು ಚೀನಾದ ಡೀಪ್‌ಸೀಕ್ ಇಡೀ ವಿಶ್ವದಾದ್ಯಂತ ಸುದ್ದಿಯಾಗುತ್ತಿದೆ. ಜನರು ಕೂಡ ಎಐ ತಂತ್ರಜ್ಞಾನದ ಕಡೆಗೆ ಹೆಚ್ಚು ಒಲವು ಹೊಂದಿರುವುದು ನೋಡಬಹುದು. ಹಾಗೆ ಎಲ್ಲಾ ಕಂಪನಿಗಳು ಈಗ ತಮ್ಮದೇ ಎಐ ತಂತ್ರಜ್ಞಾನ ಹೊರತರಲು ಮುಂದಾಗಿವೆ.
ಮೆಟಾ, ಎಲಾನ್ ಮಸ್ಕ್ ಅವರ ಎಕ್ಸ್, ಚಾಟ್ ಜಿಪಿಟಿ, ಡೀಪ್‌ಸೀಕ್ ಸದ್ದು ಮಾಡಿದ ನಡುವೆ ಈಗ ಈ ಕ್ಷೇತ್ರದಲ್ಲಿ ಬಲಿಷ್ಠರ ಹೆಸರು ಹೇಳಿಒಂದಿದೆ. ಚೀನಾದ ಡೀಪ್‌ಸೀಕ್ ಎಐ ಅಮೆರಿಕವನ್ನೇ ನಡುಗಿಸಿತ್ತು. ಅಮೆರಿಕದ ಟೆಕ್ ಷೇರು ಪಾಥಾಳಕ್ಕೆ ಕುಸಿದಿತ್ತು. ಹಾಗೆ ನೋಡ ನೋಡುತ್ತಾ ಡೀಪ್‌ಸೀಕ್ ಮನೆಮಾತಾಗಿದೆ. ಈ ನಡುವೆ ಈ ಸ್ಪರ್ಧೆಗೆ ದಿಗ್ಗಜ ಅಲಿಬಾಬಾ ಕೂಡ ಎಂಟ್ರಿಕೊಟ್ಟಿದ್ದಾರೆ.

ಚೀನಾದ ಬಹುದೊಡ್ಡ ಉದ್ಯಮಿ ಅಲಿಬಾಬಾ ಗ್ರೂಪ್‌ನಿಂದಲೂ ಹೊಸ ಎಐ ಹೊರಬಂದಿದೆ. ಅಲಿಬಾಬಾ ಬುಧವಾರ ತನ್ನ Qwen 2.5 ಕೃತಕ ಬುದ್ಧಿಮತ್ತೆ ಮಾದರಿಯನ್ನು ಪರಿಚಯಿಸಿದೆ. ಇದು DeepSeek-V3 ಅನ್ನು ಮೀರಿಸಿದೆ ಎಂದು ಹೇಳಿಕೊಳ್ಳಲಾಗಿದೆ.
Qwen 2.5-Max ಬಹುತೇಕ GPT-4o, DeepSeek-V3 ಮತ್ತು Llama-3.1-405B ಆವೃತ್ತಿಯನ್ನೂ ಮೀರಿದ ಬುದ್ದಿ ಶಕ್ತಿ ಹೊಂದಿದೆ ಎಂದು ಅಲಿಬಾಬಾ ಕ್ಲೌಡ್ ಘಟಕವು ತಮ್ಮ WeChat ಖಾತೆಯಲ್ಲಿ ಹೇಳಿಕೊಂಡಿದೆ. ಹಾಗೆ ಇದು ಓಪನ್ ಎಐ, ಮೆಟಾ ಎಐಗಿಂತಲೂ ಮುಕ್ತವಾದ ಮುಂದುವರಿದ ಮಾದರಿಯಾಗಿ ಹೊರಬಂದಿದೆ ಎಂದು ಹೇಳಿಕೊಂಡಿದೆ.
DeepSeek-V3 ಎಂಬ ಹೊಸ ಮಾದರಿಯು ಇದೆ ಜನವರಿ 20ರಂದು ಬಿಡುಗಡೆಯಾಗಿತ್ತು. ಇದು ಸಿಲಿಕಾನ್ ವ್ಯಾಲಿಯಲ್ಲಿ ಕುತೂಹಲದ ಜೊತೆಗೆ ಒಂದಿಷ್ಟು ಶಾಕ್‌ಗೆ ಕಾರಣವಾಗಿತ್ತು. ಅಮೆರಿಕದ ಷೇರು ಪೇಟೆ ಒಂದೇ ದಿನದಲ್ಲಿ ಕುಸಿದು ದೊಡ್ಡಣ್ಣನಿಗೆ ತಲೆನೋವು ತಂದಿತ್ತು. ಅತ್ಯಂತ ಕಡಿಮೆ ಮೊತ್ತದಲ್ಲಿ ಈ ಡೀಪ್‌ಸೀಕ್ ತಂತ್ರಜ್ಞಾನವನ್ನು ಚೀನಾ ಹೊರತಂದಿತ್ತು. ಇದು ಹೂಡಿಕೆದಾದರರ ಅಚ್ಚರಿಗೆ ಕಾರಣವಾಗಿತ್ತು. ಅಮೆರಿಕದ ಓಪನ್ ಎಐಗೆ ಹೋಲಿಸಿದರೆ ಇದು ಅತ್ಯಂತ ಕಡಿಮೆ ಹಣದಲ್ಲಿ ತಯಾರಾದ ಎಐ ತಂತ್ರಾಂಶವಾಗಿತ್ತು.
DeepSeek-R1 ಬಿಡುಗಡೆಯಾದ ಎರಡು ದಿನಗಳ ನಂತರ TikTok ಮಾಲೀಕತ್ವದ ಬೈಟ್‌ಡ್ಯಾನ್ಸ್ ತನ್ನ ಪ್ರಮುಖ AI ಮಾದರಿಗೆ ಹೊಸ ರೂಪ ಕೂಡ ನೀಡಿದೆ. ಬೈಟ್‌ಡ್ಯಾನ್ಸ್ ಚೀನಾದ ಅತ್ಯಂತ ದೊಡ್ಡ ಸೋಶಿಯಲ್ ನೆಟ್‌ವರ್ಕಿಂಗ್ ವ್ಯವಸ್ಥೆ ತನ್ನ ಹೆಸರಲ್ಲಿ ಇಟ್ಟುಕೊಂಡಿದೆ. ಟಿಕ್‌ಟಾಕ್‌ನಿಂದ ಹಿಡಿದು ದೊಡ್ಡ ದೊಡ್ಡ ಆಪ್‌ಗಳ ಮಾಲಿಕತ್ವ ಬೈಟ್‌ಡ್ಯಾನ್ಸ್ ಹೊಂದಿದೆ.
ಈ ಎಲ್ಲಾ AI ಗಳೂ ನೇರವಾಗಿ ಚಾಟ್ ಜಿಟಿಪಿಗೆ ಸ್ಪರ್ಧೆಯೊಡ್ಡುತ್ತಿವೆ. ಸುಲಭವಾಗಿ ಬಳಕೆಗೂ ಸಿಗುತ್ತಿವೆ. ಚೀನಾದಲ್ಲಿ ಸದ್ಯ ಎಐ ತಂತ್ರಾಂಶಗಳ ನಡುವೆ ಯುದ್ಧ ಘೋಷಣೆಯಾದಂತಾಗಿದೆ. ಪ್ರತಿಯೊಂದು ಕಂಪನಿಗಳು ತಮ್ಮದೇ ಎಐ ಮಾಡಲ್ ಹೊರತರಲು ಮುಂದಾಗಿವೆ. ಹಾಗೆ ಒಂದಕ್ಕಿಂತ ಒಂದು ಬಲಶಾಲಿಯಾದ ಹೆಚ್ಚು ವೇಗ ಮತ್ತು ನಿಖರ ಫಲಿತಾಂಶ ನೀಡುವಂತಹ ಎಐ ತರುತ್ತಿವೆ.
ಅಲಿಬಾಬಾದಂತಹ ದೊಡ್ಡ ಚೀನೀ ತಂತ್ರಜ್ಞಾನ ಕಂಪನಿಗಳು ಲಕ್ಷಾಂತರ ಉದ್ಯೋಗಿಗಳನ್ನು ಹೊಂದಿದ್ದರೂ, ಡೀಪ್‌ಸೀಕ್ ಸಂಶೋಧನಾ ಪ್ರಯೋಗಾಲಯದಂತೆ ಕಾರ್ಯನಿರ್ವಹಿಸುತ್ತದೆ. ಹಾಗೆ ಚೀನಾ ಈ ಎಐ ಉದ್ಯಮಕ್ಕೆ ಸಮಯಕ್ಕೆ ಸರಿಯಾಗಿ ಹೊಂದಿಕೊಂಡಿದೆ ಎಂದು ವಿವರಿಸಲಾಗಿದೆ. ಹಾಗೆ ಬಹುಬೇಗ ಇದೊಂದು ಬಹುದೊಡ್ಡ ಉದ್ಯಮವಾಗುತ್ತಿದೆ ಎಂದು ಭವಿಷ್ಯ ನುಡಿಯಲಾಗಿದೆ.
ಸದ್ಯ ಎಐ ಹೋರಾಟ ಯಾವಾಗ ಸಮಸ್ಯಾತ್ಮಕ ರೂಪಕ್ಕೆ ತಿರುಗಲಿದೆ ಎಂಬುದನ್ನು ಯಾರೂ ಕೂಡ ಊಹಿಸಿಲ್ಲ. ಮುಂದೊಂದು ದಿನ ಈ ಎಐ ಮಾಡೆಲ್‌ಗಳೇ ಜನರನ್ನು ನಿಯಂತ್ರಿಸುವ ಮಟ್ಟಕ್ಕೂ ಬೆಳೆಯಬಹುದು. ಹೀಗಾಗಿಯೇ ದೊಡ್ಡ ದೊಡ್ಡ ರಾಷ್ಟ್ರಗಳು ಈ ಎಐಗಳ ಮೇಲೆ ಕೋಟಿ ಕೋಟಿ ರೂಪಾಯಿ ಹೂಡಿಕೆಗೆ ಮುಂದಾಗಿವೆ.



Click it and Unblock the Notifications
