Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಈ ಟೌನ್‌ನಲ್ಲಿ ಇಂದು ವರ್ಷದ ಕೊನೆಯ ಸೂರ್ಯಾಸ್ತ ಇನ್ನು 65 ದಿನ ಸೂರ್ಯನ ಬೆಳಕೇ ಬೀಳಲ್ಲ
ರಾತ್ರಿ ಮಲಗುವಾಗ ಬೆಳಗ್ಗೆ ಎದ್ದಾಗ ಸೂರ್ಯೋದಯ ಕಾಣುತ್ತೇವೆ, ಆದರೆ ಈ ನಾಡಿನಲ್ಲಿ ಇಂದು ಕಂಡಂತೆ ಸೂರ್ಯೋದಯ ಕಾಣಬೇಕೆಂದರೆ ಬರೋಬರಿ 65 ದಿನಗಳವರೆಗೆ ಕಾಯಬೇಕು, ಸಂಪೂರ್ಣ ಕತ್ತಲಿಗೆ ಜಾರಲಿದೆ ಆ ಪ್ರದೇಶ. ಜಗತ್ತಿನ ಕೆಲವು ಪ್ರಕೃತಿ ವಿಸ್ಮಯಗಳಲ್ಲಿ ಇದೂ ಒಂದು. ಉಟ್ಕಿಯಾಗ್ವಿಕ್, ಅಲಾಸ್ಕಾ ಟೌನ್ ಮುಂದಿನ ಜನವರಿ ಕೊನೆಯವರೆಗೆ ಸೂರ್ಯನ ಬೆಳಕು ಕಾಣುವುದಿಲ್ಲ.
ಶನಿವಾರ ಅಲಾಸ್ಕಾ ಟೌನ್‌ನಲ್ಲಿ ರಾತ್ರಿಯಾಗಲಿದೆ, ಮುಂದಿನ 65 ದಿನ ಅಂದರೆ ಜನವರಿ 23, 2023ರವರೆಗೆ ಸೂರ್ಯೋದಯ ಕಾಣುವುದಿಲ್ಲ, ಏಕಿಲ್ಲಿ ಕತ್ತಲಿನ ಚಳಿಗಾಲ ಎಂದು ತಿಳಿಯಬೇಕೆಂದರೆ ಭೂಮಿಯ ಓರೆ ಬಗ್ಗೆ ತಿಳಿಯಬೇಕು. ಭೂಮಿ ತನ್ನ ಕಕ್ಷೆಯಲ್ಲಿ ಸುತ್ತುತ್ತಲೇ ಇರುತ್ತದೆ. ಉತ್ತರಾರ್ಧ ಗೋಳದಲ್ಲಿ ಅಲಾಕ್ಷ ಇದೆ.

ಈ ವರ್ಷ ಈ ಸಮಯದಲ್ಲಿ ಈ ಪ್ರದೇಶ ಸೂರ್ಯನಿಂದ ಸ್ವಲ್ಪ ಮೇಲ್ಭಾಗಕ್ಕೆ ಹೋಗುತ್ತದೆ. ಸೂರ್ಯ ಸಮನಾಂತರವಾಗಿ ಮೇಲಕ್ಕೆ ಬರುವುದೇ ಇಲ್ಲ, ಇಲ್ಲಿಗೆ ಸೂರ್ಯನ ಕಿರಣಗಳು ತಲುಪುವುದೇ ಇಲ್ಲ, ಇದರಿಂದಾಗಿ ಈ ಭಾಗದಲ್ಲಿ ಕತ್ತಲು ಇರುತ್ತದೆ.
ಮುಂದಿನ ಜನವರಿವರೆಗೆ ಇಲ್ಲಿ ಕತ್ತಲೆಯೇ....
ಈ ಪ್ರದೇಶದ ಮಾಹಿತಿ ಬಗ್ಗೆ ಹೇಳುವುದಾದರೆ
* ಇದು ಯುನೈಟೆಡ್ ಸ್ಟೇಟ್‌ನ ನಾರ್ಥನ್‌ಮೋಸ್ಟ್ ಸಿಟಿಯಲ್ಲಿದೆ
* Arctic Circleನಿಂದ 320 ಮೈಲ್ಸ್ ದೂರದಲ್ಲಿದೆ
* 4000ಕ್ಕೂ ಅಧಿಕ ಜನ ಇಲ್ಲಿ ವಾಸ ಮಾಡುತ್ತಾರೆ.
* ಇಲ್ಲಿ ನವೆಂಬರ್ 18, 19ರಂದು ಇಲ್ಲಿ ಸೂರ್ಯಾಸ್ತವಾದರೆ ನಂತರ ಇಲ್ಲಿ ಸೂರ್ಯಕಿರಣಗಳನ್ನು ಕಾಣಲು 65 ದಿನಗಳು ಕಾಯಬೇಕು.
* ಇಲ್ಲಿಯ ಜನರು ಬೇಟೆಯಾಡಿ ಬದುಕನ್ನು ನಡೆಸುತ್ತಾರೆ.
* ಇಲ್ಲಿ ಜನರು ಸುಮಾರು 8 ದಶಕಗಳಿಂದ ಜೀವಿಸುತ್ತಿದ್ದಾರೆ
* ಇಲ್ಲಿ ಬೇಸಿಗೆಯಲ್ಲಿ ತುಂಬಾನೇ ಸೆಕೆ ಇರುತ್ತದೆ, ಅದೇ ಚಳಿಗಾಲದಲ್ಲಿ 160 ದಿನಗಳಷ್ಟು ಸಮಯ ಸೊನ್ನೆಗಿಂತ ಕಡಿಮೆ ಉಷ್ಣಾಂಶ ಇರುತ್ತದೆ. ಆದ್ದರಿಂದ ಅತೀ ಉಷ್ಣಾಂಶ ಹಾಗೂ ಅತೀ ಕಡಿಮೆ ಉಷ್ಣಾಂಶ ಇರುವ ಪ್ರದೇಶ ಇದಾಗಿದೆ.
ಉಟ್ಕಿಯಾಗ್ವಿಕ್, ಅಲಾಸ್ಕಾ ನಗರದ ಜನರು ಪ್ರತಿ ವರ್ಷ ಸಂಭವಿಸುವ ಪೋಲಾರ್ ನೈಟ್‌ಗೆ ಒಗ್ಗಿಕೊಂಡಿದ್ದಾರೆ, ಅಲ್ಲದೆ ಅವರು ಇದನ್ನು ಸಂಭ್ರಮಿಸುತ್ತಾರೆ. ಸೂರ್ಯ ಮುಳುಗುವ ದಿನವನ್ನು ಎಲ್ಲರೂ ಆಚರಿಸುತ್ತಾ ಅದೇ ರೀತಿ ಎರಡು ತಿಂಗಳ ನಂತರ ಸೂರ್ಯೋದಯವನ್ನು ಬಹಳ ಸಂತೋಷದಿಂದ ಸ್ವಾಗತಿಸುತ್ತಾರೆ. ಇಲ್ಲಿಯ ಚಳಿಗೆ ಹೊಂದಿಕೊಳ್ಳಲು ಇಲ್ಲಿಯ ಜನರು ಸಕಲ ಸಿದ್ಧತೆ ಮಾಡಿಕೊಂಡಿರುತ್ತಾರೆ.



Click it and Unblock the Notifications
