Latest Updates
-
ಭಾರತ-ಇಂಗ್ಲೆಂಡ್ ಪಂದ್ಯ ವೀಕ್ಷಿಸುವಾಗ ಬೆನ್ನು ನೋವು ಕಾಡುತ್ತಿದೆಯೇ? ಈ 8 ನಿಮಿಷದ ವ್ಯಾಯಾಮ ಟ್ರೈ ಮಾಡಿ! -
ಮದುವೆ ಸಂಭ್ರಮಕ್ಕೆ ಸಿದ್ಧರಾಗಿದ್ದೀರಾ? ಮಳೆಗಾಲದ ಮದುವೆಗೆ ಈ 5 ಟಿಪ್ಸ್ ಮರೆಯದಿರಿ! -
ಬೆಲೆ ಏರಿಕೆಯ ಬಿಸಿ: ಜೂನ್ CPI ವರದಿ ಮತ್ತು ನಿಮ್ಮ ಕಿಚನ್ ಬಜೆಟ್ ಉಳಿಸುವ ಸ್ಮಾರ್ಟ್ ಟಿಪ್ಸ್ -
ಸ್ವಿಗ್ಗಿ ಇನ್ಸ್ಟಾಮಾರ್ಟ್ ಗ್ರಾಹಕರಿಗೆ ಎಚ್ಚರಿಕೆ: ಹಾಲು, ಮೊಟ್ಟೆ ಖರೀದಿಸುವಾಗ ಈ ತಪ್ಪು ಮಾಡಬೇಡಿ! -
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್! -
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು
ಅಕ್ಷಯ ತೃತೀಯ 2023 : ಪಂಚಗ್ರಹಿ ಯೋಗದಿಂದಾಗಿ ಈ 5 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರಯಲಿದೆ
ಈ ಬಾರಿಯ ಅಕ್ಷಯ ತೃತೀಯದ ಶುಭ ಸಂದರ್ಭದಲ್ಲಿ ಮೇಷ ರಾಶಿಯಲ್ಲಿ ಸೂರ್ಯ, ಗುರು, ಬುಧ, ರಾಹು ಮತ್ತು ಯುರೇನಸ್ ಎಂಬ 5 ಗ್ರಹಗಳ ವಿಶಿಷ್ಟ ಸಂಯೋಜನೆಯಾಗಲಿದೆ. ಅದೇ ದಿನ ಚಂದ್ರ ಮತ್ತು ಶುಕ್ರ ವೃಷಭ ರಾಶಿಯಲ್ಲಿ ಬಹಳ ಮಂಗಳಕರ ಸ್ಥಾನದಲ್ಲಿರುತ್ತಾರೆ. ಹೀಗಾಗಿ ಮುಂಬರುವ ಅಕ್ಷಯ ತೃತಿಯವು ಈ 5 ರಾಶಿಗಳಿಗೆ ಅದೃಷ್ಟವನ್ನು ಹೊತ್ತು ತರಲಿದೆ. ಹಾಗಾದ್ರೆ ಆ ಐದು ರಾಶಿಗಳು ಯಾವುದು ಅನ್ನೋದನ್ನು ತಿಳಿಯೋಣ.

ಮೇಷ ರಾಶಿ
ಮೇಷ ರಾಶಿಯವರಿಗೆ ಅಕ್ಷಯ ತೃತೀಯವು ಮಂಗಳಕರ ಯೋಗವನ್ನು ಉಂಟು ಮಾಡಲಿದೆ. ಹೀಗಾಗಿ ಮೇಷ ರಾಶಿಯವರಿಗೆ ಆರ್ಥಿಕ ಲಾಭವಾಗಲಿದೆ. ನಿಮ್ಮ ಪ್ರಭಾವ ಹಾಗೂ ಪ್ರತಿಷ್ಠೆ ಹೆಚ್ಚಾಗುತ್ತದೆ. ಧಾರ್ಮಿಕ ಕಾರ್ಯಗಳನ್ನು ಮಾಡುತ್ತೀರಿ. ಇನ್ನೂ ದಾನ ಮತ್ತು ಶುಭ ಕಾರ್ಯಗಳಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಇದರ ಪ್ರಯೋಜನಗಳನ್ನು ನೀವು ಮುಂದಿನ ಜನ್ಮದಲ್ಲಿ ಪಡೆಯುತ್ತೀರಿ. ಹಣ ಮತ್ತು ಚಿನ್ನ ಕಾಕತಾಳಿಯ ಎಂಬಂತೆ ನಿಮಗೆ ಸಿಗಲಿದೆ.
ವೃಷಭ ರಾಶಿ
ಅಕ್ಷಯ ತೃತೀಯದಂದು ನಿಮ್ಮ ರಾಶಿಯ ಅಧಿಪತಿಯಾದ ಶುಕ್ರನು ವೃಷಭ ರಾಶಿಯಲ್ಲಿರೋದ್ರಿಂದ ರಾಜಯೋಗದ ಲಾಭವನ್ನು ಪಡೆಯುತ್ತೀರಿ. ಈ ರಾಶಿಯವರಿಗೆ ಈ ಅಕ್ಷಯ ತೃತೀಯದಂದು ವಸ್ತ್ರ, ಆಭರಣ ಮತ್ತು ಶಾರೀರಿಕ ಸುಖದ ಲಾಭ ದೊರೆಯುತ್ತದೆ. ಕಲೆ ಮತ್ತು ಸೃಜನಶೀಲ ಕ್ಷೇತ್ರಕ್ಕೆ ಸಂಬಂಧಿಸಿದ ಜನರು ತಮ್ಮ ಕಲೆಯಿಂದ ಮೆಚ್ಚುಗೆ ಮತ್ತು ಪ್ರಯೋಜನಗಳನ್ನು ಪಡೆಯುವ ಸಾಧ್ಯತೆ ಇದೆ. ಕುಟುಂಬದಿಂದ ವಾತ್ಸಲ್ಯ ಮತ್ತು ಪ್ರೀತಿ ಪಡೆಯುತ್ತೀರಿ. ಅನಿರೀಕ್ಷಿತ ಉಡುಗೊರೆಯನ್ನು ಕೂಡ ಪಡೆಯಬಹುದು.
ಕರ್ಕಾಟಕ ರಾಶಿ
ಕರ್ಕಾಟಕ ರಾಶಿಯವರಿಗೆ ಅಕ್ಷಯ ತೃತೀಯದ ಸಂದರ್ಭದಲ್ಲಿ ಸಂಪತ್ತು ಮತ್ತು ಸಮೃದ್ಧಿಯ ಯೋಗವಿದೆ. ನಿಮ್ಮ ರಾಶಿಯ ಅಧಿಪತಿಯು ಹನ್ನೊಂದನೇ ಮನೆಯಲ್ಲಿ ಶುಕ್ರನೊಂದಿಗೆ ಇರುತ್ತಾನೆ. ಮತ್ತು ಪಂಚಗ್ರಹಿ ಯೋಗವು ಹತ್ತನೇ ಮನೆಯಲ್ಲಿ ಇರುತ್ತದೆ. ಇದರಿಂದ ನಿಮಗೆ ಉದ್ಯೋಗದಲ್ಲಿ ಉತ್ತಮ ಅವಕಾಶಗಳು ಲಭ್ಯವಾಗುತ್ತದೆ. ಆರ್ಥಿಕ ಲಾಭ ಪಡೆಯುತ್ತೀರಿ. ಬೆಳ್ಳಿ ಮತ್ತು ವಜ್ರವು ಈ ಸಮಯದಲ್ಲಿ ನಿಮಗೆ ಪ್ರಯೋಜನಕಾರಿಯಾಗಲಿದೆ.
ಸಿಂಹ ರಾಶಿ
ಸಿಂಹ ರಾಶಿಯವರಿಗೆ ಅಕ್ಷಯ ತೃತೀಯವು ಈ ಬಾರಿ ಮಂಗಳಕರ ಮತ್ತು ಫಲಪ್ರದವಾಗಿರುತ್ತದೆ. ನಿಮ್ಮ ಎಲ್ಲಾ ಪ್ರಯತ್ನಗಳಿಗೆ ನೀವು ಮನೆಯ ಹಿರಿಯರಿಂದ ಸಹಕಾರ ಮತ್ತು ಆಶೀರ್ವಾದವನ್ನು ಪಡೆಯುತ್ತೀರಿ. ಸಮಾಜ ಮತ್ತು ಕುಟುಂಬದಲ್ಲಿ ನಿಮ್ಮ ಪ್ರಭಾವ ಹೆಚ್ಚಾಗುತ್ತದೆ. ಚಿನ್ನ ಅಥವಾ ತಾಮ್ರದ ವಸ್ತುಗಳನ್ನು ಖರೀದಿಸುವ ಮೂಲಕ ನೀವು ಈ ಅಕ್ಷಯ ತೃತೀಯವು ನಿಮಗೆ ಮಂಗಳಕರ ವಾಗಬಹುದು. ಸಿಂಹ ರಾಶಿಯ ಉದ್ಯಮಿಗಳು ಅಕ್ಷಯ ತೃತೀಯದಲ್ಲಿ ನಿರೀಕ್ಷೆಗಿಂತ ಹೆಚ್ಚಿನ ಆದಾಯವನ್ನು ಪಡೆಯುವ ಸಾಧ್ಯತೆಯಿದೆ.
ವೃಶ್ಚಿಕ ರಾಶಿ
ಈ ಅಕ್ಷಯ ತೃತೀಯವು ವೃಶ್ಚಿಕ ರಾಶಿಯವರಿಗೆ ಲಾಭದಾಯಕವಾಗಿರುತ್ತದೆ. ವಾಹನ ಖರೀದಿಗೆ ಪ್ರಯತ್ನಿಸುತ್ತಿರುವವರಿಗೆ ಇಂದು ಉತ್ತಮ ಕಾಲ. ಮನೆ ಮತ್ತು ಭೂಮಿಯಲ್ಲಿ ಹೂಡಿಕೆ ಮಾಡಲು ಬಯಸಿದರೆ ಅಕ್ಷಯ ತೃತಿಯದ ದಿನ ಯಾವುದೇ ನಿಶ್ಚಿಂತೆಯಿಂದ ಮಾಡಬಹುದು. ನಿಮ್ಮ ರಾಶಿಯ ಮೇಲೆ ಚಂದ್ರ ಮತ್ತು ಶುಕ್ರನ ಮಂಗಳಕರ ಅಂಶದಿಂದಾಗಿ ನೀವು ವ್ಯವಹಾರದಲ್ಲಿ ಉತ್ತಮ ಲಾಭವನ್ನು ಪಡೆಯುವ ಸಾಧ್ಯತೆಯಿದೆ. ನೀವು ನಿಮ್ಮ ತಾಯಿಯ ಕಡೆಯಿಂದ ಸಹಕಾರವನ್ನು ಪಡೆಯುತ್ತೀರಿ. ಪ್ರಯಾಣದ ಸಾಧ್ಯತೆಯಿದೆ.



Click it and Unblock the Notifications
