Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಎಐ ಹೀಗೆಲ್ಲಾ ಬಳಸಿದ್ರೆ ಜೈಲು ಫಿಕ್ಸ್: ಯುವಕ ಮಾಡಿಕೊಂಡ ಯಡವಟ್ಟು!!
ಇತ್ತೀಚಿಗೆ ಎಐ (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್) ಎಷ್ಟು ಮುಂದುವರೆದಿದೆ ಅಂದ್ರೆ ವ್ಯಕ್ತಿಯೊಬ್ಬ ಮಾಡಬಹುದಾಗಿದ್ದ ಸಂಪೂರ್ಣ ಕೆಲಸವನ್ನು ಎಐ ಮಾಡುತ್ತಿದೆ. ಹೀಗಾಗಿ ಜಗತ್ತಿನಾದ್ಯಂತ ಉದ್ಯೋಗ ಕಡಿತದಂತಹ ಸಮಸ್ಯೆ ಎದುರಾಗಲು ಈ ಎಐ ಕೂಡ ಒಂದು ಕಾರಣವಾಗುತ್ತಿದೆ. ಹಾಗೆ ಎಐ ಬಳಸಿಕೊಂಡು ಹಲವು ಕೆಲಸಗಳು ಸುಲಭವೂ ಆಗಿದೆ.
ಹಾಗೆ ವ್ಯಕ್ತಿಯೊಬ್ಬ ದಿನವೆಲ್ಲಾ ಕಷ್ಟಪಟ್ಟು ಮಾಡುತ್ತಿದ್ದ ಕೆಲಸವು ಈಗ ನಿಮಿಷದಲ್ಲಿ ಮುಗಿಯಲು ಈ ಎಐ ಸಹಕಾರಿಯಾಗಿದೆ. ಆದ್ರೆ ಇದೆಲ್ಲದರ ಹೊರತಾಗಿ ಎಐ ದೊಡ್ಡ ತಲೆನೋವಿಗೂ ಕಾರಣವಾಗುತ್ತಿದೆ. ಆನ್‌ಲೈನ್‌ನಲ್ಲಿ ಎಐನಿಂದಾಗಿ ಅನುಕೂಲಕ್ಕಿಂತ ಅನಾನುಕೂಲಗಳು ಹೆಚ್ಚಾಗುತ್ತಿವೆ. ಅದ್ರಲ್ಲೂ ನಕಲಿ ಫೋಟೋ ಹಾಗೂ ವಿಡಿಯೋಗಳು ಹೇರಳವಾಗಿ ಹರಿದಾಡುವುದು ಕಂಡುಬರುತ್ತಿದೆ.

ಇನ್ನು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ಕೆಲವು ವಿಡಿಯೋಗಳು ಫೋಟೋಗಳು ಅಸಲಿಯಾ ಅಥವಾ ನಕಲಿಯಾ ಎಂಬಷ್ಟು ಗೊಂದಲ ಸೃಷ್ಟಿಸುತ್ತವೆ. ಎಐನಿಂದ ಮಾಡಲಾಗುವ ಕೆಲವು ವಿಡಿಯೋ ಹಾಗೂ ಫೋಟೋಗಳು ನೈಜತೆಗೆ ಬಹಳಷ್ಟು ಹತ್ತಿರವಾಗಿರುತ್ತವೆ. ಹೀಗಾಗಿ ಈ ಸಾಮಾಜಿಕ ಜಾಲತಾಣದಲ್ಲಿ ಹಲವು ವಿಡಿಯೋಗಳು ಎಐನಿಂದ ಮಾಡಲ್ಪಟ್ಟಿದ್ದರು ಜನರಲ್ಲಿ ಅಸಲಿ ಎಂದು ನಂಬಿಸುವಲ್ಲಿ ಯಶಸ್ವಿಯಾಗುತ್ತಿವೆ.
ಇನ್ನು ಇಲ್ಲೊಬ್ಬ ಯುವಕ ಮಾಡಿದ್ದ ಒಂದೇ ಒಂದು ಯಡವಟ್ಟು ಜೈಲಿಗೆ ಹೋಗುವಂತೆ ಮಾಡಿದೆ. ಹೌದು ಇಲ್ಲೊಬ್ಬ ಯುವಕ ಇರಲಾರದೆ ಇರುವೆ ಬಿಟ್ಟುಕೊಂಡಿದ್ದಾನೆ. ಉತ್ತರ ಪ್ರದೇಶದ ಲಖನೌನ ಗೋಮ್ತಿ ನಗರ ನಿವಾಸಿಯಾಗಿದ್ದ ಯುವಕ ಎಐ ಮೂಲಕ ಚಿರತೆ ಚಿತ್ರವನ್ನು ರಚಿಸಿ ಅದನ್ನು ಪೋಸ್ಟ್ ಮಾಡಿಕೊಂಡಿದ್ದ. ಅಷ್ಟೇ ಅಲ್ಲ ನನ್ನ ಮನೆ ಹತ್ತಿರ ಕಂಡಿದ್ದು ಎಂದು ಬರೆದುಕೊಂಡಿದ್ದ.
ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಸುತ್ತಲಿನ ಪ್ರದೇಶದ ಮಂದಿ ಮನೆಯಿಂದ ಹೊರಬರಲು ಭಯಪಟ್ಟಿದ್ದರು. ಹಾಗೆ ಅರಣ್ಯ ಇಲಾಖೆಗೆ ಕರೆ ಮಾಡಿ ಚಿರತೆ ಓಡಾಡುತ್ತಿದೆ ಸೆರೆಹಿಡಿಯುವಂತೆ ದೂರು ನೀಡಿದರು. ಇದನ್ನು ನಂಬಿಕ ಅರಣ್ಯ ಇಲಾಖೆ ದೊಡ್ಡ ತಂಡದೊಂದಿಗೆ ಈ ಪ್ರದೇಶದಲ್ಲಿ ಪರಿಶೀಲಿನೆಗೆ ಒಳಗಾಗಿತ್ತು.
ಆ ಪ್ರದೇಶದಲ್ಲಿನ ಹಲವು ಸಿಸಿಟಿವಿ ವಿಡಿಯೋಗಳನ್ನು ಪರಿಶೀಲನೆ ಮಾಡಲಾಗಿತ್ತು. ಆದ್ರೆ ಎಲ್ಲಿಯೂ ಚಿರತೆಯ ಸುಳಿವೇ ಇರಲಿಲ್ಲ. ಕೊನೆಯಲ್ಲಿ ಫೋಟೋ ಅಪ್‌ಲೋಡ್ ಮಾಡಿದ್ದ ಯುವಕ ಹಿಡಿದು ವಿಚಾರಿಸಿದಾಗ ಆತ ಎಐ ಮೂಲಕ ಈ ಫೋಟೋ ರಚಿಸಿದ್ದಾಗಿ ಒಪ್ಪಿಕೊಂಡಿದ್ದಾನೆ. ನಂತರ ಆತನನ್ನು ಠಾಣೆಗೆ ಕರೆದೊಯ್ಯಲಾಗಿದೆ.
ಇಂತಹ ಹಲವು ಪ್ರಕರಣಗಳು ದೇಶದಲ್ಲಿ ವರದಿಯಾಗುತ್ತಿವೆ. ಎಐ ಬಳಸಿ ಮಾಡುವಂತಹ ಫೋಟೋಗಳು, ವಿಡಿಯೋಗಳು ನಿಮಗೆ ಸಮಸ್ಯೆಗಳ ತರಬಹುದು. ಕೆಲವೊಮ್ಮೆ ನಿಮ್ಮನ್ನು ಜೈಲಿಗೆ ಕಳುಹಿಸಬಹುದು.
ಎಐ ಮತ್ತು ಗೂಗಲ್‌ನಲ್ಲಿ ಎಂದಿಗೂ ಈ ರೀತಿ ಸರ್ಚ್ ಮಾಡಲೇಬೇಡಿ
ಬಾಂಬ್ ತಯಾರಿಸುವುದು ಹೇಗೆ
ನೀವು ಗೂಗಲ್ ಹಾಗೆ ಎಐ ಬಳಸಿ ಈ ರೀತಿಯಾಗಿ ಬಾಂಬ್ ತಯಾರಿಸುವುದು ಹೇಗೆ ಅಂಬ ಕುರಿತು ಸರ್ಚ್ ಮಾಡಿದರೆ ನೀವು ಖಂಡಿತ ಜೈಲಿಗೆ ಹತ್ತಿರವಾಗುತ್ತೀರಿ. ರಾಷ್ಟ್ರೀಯ ಭದ್ರತಾ ಸಂಸ್ಥೆಗಳು ಶಸ್ತ್ರಾಸ್ತ್ರಗಳು ಮತ್ತು ಸ್ಫೋಟಕಗಳಿಗೆ ಸಂಬಂಧಿಸಿದ ಆನ್‌ಲೈನ್ ಚಟುವಟಿಕೆಯನ್ನು ಮೇಲ್ವಿಚಾರಣೆ ಮಾಡುತ್ತವೆ. ಈ ರೀತಿ ಸರ್ಚ್ ಮಾಡುವುದು ಅವರ ಗಮನಕ್ಕೂ ಬರಬಹುದು. ನೀವು ಕುತೂಹಲದಿಂದ ತಿಳಿದುಕೊಳ್ಳುವ ವಿಚಾರವಾಗಿ ಸರ್ಚ್ ಮಾಡಿದರೂ ಕೂಡ ತನಿಖೆ ಎದುರಿಸಬೇಕಾಗಬಹುದು.
ಹ್ಯಾಕಿಂಗ್
ನೀವು ಆನ್‌ಲೈನ್ ಹಾಗೆ ಎಐನಲ್ಲಿ ಹ್ಯಾಕಿಂಗ್ ಸಾಫ್ಟ್‌ವೇರ್ ಕುರಿತಾಗಿ ಸರ್ಚಿಂಗ್ ನಡೆಸಿದರು ಕೂಡ ನೀವು ಅಪಾಯದಲ್ಲಿ ಸಿಲುಕಬಹುದು.
ಹ್ಯಾಕಿಂಗ್ ಟ್ಯುಟೋರಿಯಲ್‌ಗಳು ಅಥವಾ ಪರಿಕರಗಳನ್ನು ಹುಡುಕುವುದು ನಿಮ್ಮನ್ನು ಕಾನೂನು ಪರಿಶೀಲನೆಗೆ ಒಳಪಡಿಸಬಹುದು. ಇದು ಸೈಬರ್ ಪ್ರಕರಣದ ಅಡಿಯಲ್ಲಿ ಬರುವುದರಿಂದ ನೀವು ಕಾನೂನು ಕ್ರಮ ಎದುರಿಸಬೇಕಾಗುತ್ತದೆ.
ಮಕ್ಕಳ ಆಶ್ಲೀಲತೆ
ಗೂಗಲ್ ಹಾಗೂ ಎಐ ಮೂಲಕ ನೀವು ಅಶ್ಲೀಲತೆಗೆ ಸಂಬಂಧಿಸಿದ ಸರ್ಚ್‌ಗಳ ಮಾಡುವುದು ಕೂಡ ಕಾನೂನು ಬಾಹಿರವಾಗಿದೆ. ಅದ್ರಲ್ಲೂ ಮಕ್ಕಳ ಸಂಬಂಧಿತ ಅಶ್ಲೀಲತೆಯನ್ನು ಸರ್ಚ್ ಮಾಡುವುದು ಅಪರಾಧ.



Click it and Unblock the Notifications
