Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
2 ದಶಕದ ಬಳಿಕ ವಿಶ್ವದ ಅತ್ಯಂತ ಚಿಕ್ಕ ಹಾವು ಪತ್ತೆ.! ಕೇವಲ 10 ಸೆಂ.ಮೀ ಉದ್ದವಿದೆ!
ನಾಗರ ಪಂಚಮಿ ಸಮಯದಲ್ಲಿ ನೀವು ಎಲ್ಲಿ ನೋಡಿದರೂ ಹಾವುಗಳ ಕುರಿತಾದ ಸುದ್ದಿ ಫೋಟೋಗಳ ನೋಡಿಯೇ ನೋಡುತ್ತೀರಿ, ಆದ್ರೆ ನಾವಿಂದು ವಿಶ್ವದ ಅತ್ಯಂತ ಸಣ್ಣ ಹಾವು 2 ದಶಕದ ಬಳಿಕ ಮರು ಜನ್ಮ ಪಡೆದಿರುವ ವಿಶೇಷ ಸುದ್ದಿ ಹೇಳಲಿದ್ದೇವೆ. ಹೌದು ಇದು ವಿಶ್ವದ ಅತ್ಯಂತ ಚಿಕ್ಕ ಹಾವು. ಈಗ ಬಾರ್ಬಡೋಸ್ ಥ್ರೆಡ್ ಸ್ನೇಕ್ ಅನ್ನು ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ.
ದಶಕದ ಹಿಂದೆ ನಮ್ಮ ಪರಿಸರದಿಂದ ನಾಶವಾಗಿದೆ ಎಂದು ಪಟ್ಟಿ ಮಾಡಲಾದ 4,800 ಪ್ರಭೇದಗಳಲ್ಲಿ ಈ ಸಣ್ಣ ಹಾವು ಕೂಡ ಒಂದಾಗಿದೆ. ಈ ಬಾರ್ಬಡೋಸ್ ಸ್ನೇಕ್ ವಿಶ್ವದ ಅತ್ಯಂತ ಸಣ್ಣ ಹಾವು ಎಂದು ಗುರುತಿಸಲಾಗಿದೆ. 2000ನೇ ಇಸವಿಯಲ್ಲಿ ಕೊನೆಯದಾಗಿ ಈ ಹಾವು ಪತ್ತೆಯಾಗಿತ್ತು. ಅದಾದ ಬಳಿಕ ಈ ಹಾವು ನಾಶವಾಗಿದೆ ಎಂದು ಭಾವಿಸಲಾಗಿತ್ತು.

ಕೇವಲ 10 ಸೆಂ.ಮೀ ಉದ್ದದ ಹಾವು!
ಈ ಬಾರ್ಬಡೋಸ್ ಥ್ರೆಡ್ ಸ್ನೇಕ್ ಕೇವಲ 10 ಸೆಂ.ಮೀ ಉದ್ದವಿದೆ. ಹಾಗೆ ತೆಳುವಾದ ದೇಹ ರಚನೆ ಹೊಂದಿದೆ. ಸಾಮಾನ್ಯವಾಗಿ ಬಾರ್ಬಡೋಸ್‌ನ ಕಾಡು ಪ್ರದೇಶದಲ್ಲಿ ಮಾತ್ರವೇ ಇವು ಕಂಡುಬರುತ್ತಿದ್ದವು. ಜಸ್ಟಿನ್ ಸ್ಟ್ರಿಂಗರ್ ಎಂಬ ವೈಲ್ಡ್ ಲೈಫ್ ಅಧಿಕಾರಿ ಮರದ ಬೇರುಗಳ ನಡುವೆ ಇದ್ದ ಕಲ್ಲನ್ನು ತಳ್ಳಿದಾಗ ಈ ಹಾವು ಪತ್ತೆಯಾಗಿದೆ.
ಈ ಹಾವನ್ನು ಹುಡುಕುವ ಉದ್ದೇಶದಿಂದ ಜಸ್ಟಿನ್ ಸ್ಟ್ರಿಂಗರ್ ಪರಿಸರ ಸಚಿವಾಲಯದ ಯೋಜನಾ ಅಧಿಕಾರಿ ಕಾನರ್ ಬ್ಲೇಡ್ಸ್ ಬರೋಬ್ಬರಿ ಒಂದು ವರ್ಷಕ್ಕೂ ಅಧಿಕ ಸಮಯ ಕಾಡು ಮೇಡು ಅಲೆದಾಡಿದ್ದಾರೆ. ಆದರೆ ಈ ಹಾವಿನ ಸುಳಿವು ಸಿಕ್ಕಿರಲಿಲ್ಲ. ಅವರು ಈ ಹಾವಿಗಾಗಿ ದೊಡ್ಡ ದೊಡ್ಡ ಕಲ್ಲು ಪರ್ವತಗಳು, ಕಾಡುಗಳಲ್ಲಿ ಅಲೆದಾಡಿದ್ದರು. ಆದ್ರೆ ಅವನತಿಯಾಗಿದ್ದ ಈ ಹಾವಿನ ಸುಳಿವು ಸಿಕ್ಕಿರಲಿಲ್ಲ.
1889 ರಲ್ಲಿ ಮೊದಲು ದಾಖಲಾಗಿದ್ದ ಬಾರ್ಬಡೋಸ್ ಥ್ರೆಡ್‌ಸ್ನೇಕ್ ಲೈಂಗಿಕವಾಗಿ ಸಂತಾನೋತ್ಪತ್ತಿ ಮಾಡುತ್ತದೆ ಎಂದು ತಿಳಿದುಬಂದಿದೆ. ಹೆಣ್ಣು ಹಾವುಗಳು ಒಮ್ಮೆ ಒಂದು ಮೊಟ್ಟೆಯನ್ನು ಮಾತ್ರವೇ ಇಡಲಿದೆ. ಇದರ ಮೊಟ್ಟೆಯು ಹಲ್ಲಿ ಮೊಟ್ಟೆಗಳಿಗಿಂತ ಚಿಕ್ಕದಾದ ಗಾತ್ರದಲ್ಲಿರಲಿದೆ. ಇದು ಗಂಡು ಹಾವಿನ ಸಂಪರ್ಕವೇ ಇಲ್ಲದೆ ಸಂತಾನೋತ್ಪತ್ತಿ ಮಾಡುವ ಹಾವಾಗಿದೆ. ಜಗತ್ತಿನ ಕೆಲವೇ ಸರಿಸೃಪಗಳು ಈ ರೀತಿ ಗಂಡು ಜೊತೆಗಾರನ ಸಂಪರ್ಕವಿಲ್ಲದೆ ಸಂತಾನೋತ್ಪತ್ತಿ ಮಾಡುವ ವಿಶೇಷ ಗುಣ ಹೊಂದಿರಲಿವೆ.
ಬಾರ್ಬಡೋಸ್ ಇಲ್ಲಿನ ಸ್ಥಳೀಯ ಕಾಡುಗಳಲ್ಲಿ ಶೇ 98ರಷ್ಟು ಮರೆಯಾಗಿದೆ. ಇದಕ್ಕೆ ಕೃಷಿ ಅಭಿವೃದ್ಧಿ, ಪರಿಸರ ನಾಶ, ಕಾಡುಗಳ ಕ್ರಮೇಣ ಇಳಿಕೆ ಹಾಗೆ ಅವುಗಳ ಅವಾಸಸ್ಥಾನ ನಷ್ಟವಾದ ಪರಿಣಾಮದಿಂದಾಗಿ ಇವು ಅಳವಿನಂಚಿಗೆ ತೆರಳಿವೆ ಎಂದು ಕಂಡುಕೊಳ್ಳಲಾಗಿದೆ. ಈ ಹಾವು ಮತ್ತೆ ನಾಶವಾಗುವ ಭೀತಿಯೂ ಇದೆ. ಹೀಗಾಗಿ ಅವುಗಳ ಆವಾಸ ಸ್ಥಾನ ಸೇರಿದಂತೆ ಪರಿಸರ ಸಂರಕ್ಷಣೆಯ ಮೂಲಕ ಉಳಿಸಬೇಕಾದ ಅನಿವಾರ್ಯತೆ ಈಗ ಎದುರಾಗಿದೆ.
ಈ ಹಾವಿನ ಅಚ್ಚರಿ ಏನು?
ಈ ಹಾವು ಹೆಚ್ಚಿನದಾಗಿ ಮಣ್ಣಿಗೆ ಅಂಟಿಕೊಂಡಂತೆ ಬದುಕುತ್ತದೆ. ಬೆಳಕಿಗೆ ಹೆಚ್ಚು ಹೊರ ಬರುವುದಿಲ್ಲ ಬಂಡೆಗಳ ಕೆಳಗೆ, ಮರದ ಬೇರಿನ ಕೆಳಗೆ ಇರುತ್ತದೆ. ಇದನ್ನು ಮಣ್ಣಿನ ಹಾವು ಎಂಬ ತಪ್ಪು ಕಲ್ಪನೆಯಿಂದ ಗುರುತಿಸುವುದು ಹೆಚ್ಚು. ಈ ಹಾವಿಗೆ ಕಣ್ಣು ಕಾಣಿಸುವುದಿಲ್ಲ. ಹೀಗಾಗಿ ಹೊರಗೆ ಕಾಣಿಸಿಕೊಳ್ಳುವುದಿಲ್ಲ ಅದು ಗೆದ್ದಲು ಹುಳು, ಗೆದ್ದಲಿನ ಮೊಟ್ಟೆಗಳ ಸೇವಿಸುತ್ತದೆ. ಆದ್ರೆ ಈ ಹಾವಿನಿಂದ ಬೇರೆ ಜೀವಿಗಳಿಗೆ ಅಪಾಯವಿಲ್ಲ, ಆದ್ರೆ ಈ ಹಾವನ್ನು ಬೇರೆ ಜೀವಿಗಳು ತಿನ್ನುವುದು ಹಾಗೆ ದಾಳಿ ಮಾಡುವುದು ಹೆಚ್ಚಾಗಿದೆ.



Click it and Unblock the Notifications
