Latest Updates
-
ಹವಾಮಾನ ಇಲಾಖೆ ಎಚ್ಚರಿಕೆ: ಇಂದಿನ ಮಳೆ-ಸಿಡಿಲಿನ ಆರ್ಭಟಕ್ಕೆ ನಿಮ್ಮ ದಿನಚರಿ ಬದಲಾಯಿಸಿಕೊಳ್ಳಿ! -
ನೀಟ್ 2026 ಪರೀಕ್ಷೆ ಮುಗಿದಿದೆ: ಪೋಷಕರ ಜೊತೆ ಮನಬಿಚ್ಚಿ ಮಾತನಾಡಿ ಒತ್ತಡವನ್ನು ದೂರ ಮಾಡುವುದು ಹೇಗೆ? -
IMD ರೆಡ್ ಅಲರ್ಟ್: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಬಾಲ್ಕನಿ ಮತ್ತು ಗಿಡಗಳು ಬಲಿಯಾಗದಿರಲಿ, ಈ ಕೆಲಸ ತಕ್ಷಣ ಮಾಡಿ! -
ಹೀಟ್ವೇವ್ ಎಫೆಕ್ಟ್: ಸುಡುವ ಬಿಸಿಲಿಗೆ ತಂಪಾಗಲು ಮಜ್ಜಿಗೆ, ಎಳನೀರು ಸಾಕಾ? ಇಲ್ಲಿದೆ ಆರೋಗ್ಯದ ಗುಟ್ಟು -
ಮೆಟ್ ಗಾಲಾ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯ ತಾರೆಯರ ಅಬ್ಬರ, ಲೈವ್ ನೋಡುವುದು ಹೇಗೆ? -
ಪಾರ್ಕ್ಗಳಲ್ಲಿ ನಗು-ಯೋಗದ ಅಲೆ: ಒತ್ತಡ ಮರೆಸಿ ದಿನವಿಡೀ ಎನರ್ಜಿಟಿಕ್ ಆಗಿರೋದು ಹೇಗೆ? -
ಮದುವೆ ಅಥವಾ ಡೇಟಿಂಗ್ ಪ್ಲಾನ್ ಮಾಡಿದ್ದೀರಾ? ಇಂದಿನ ಹವಾಮಾನದ ಅಬ್ಬರಕ್ಕೆ ನಿಮ್ಮ ತಯಾರಿ ಹೇಗಿರಲಿ? -
ಬಿರುಗಾಳಿ ಮಳೆಗೆ ನಿಮ್ಮ ಬಾಲ್ಕನಿ ಗಾರ್ಡನ್ ನಲುಗುತ್ತಿದೆಯೇ? ಗಿಡಗಳನ್ನು ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲ ಧಗೆಗೆ ಸುಸ್ತಾದ್ರಾ? ಈ ಪಾನೀಯಗಳಿದ್ದರೆ ಸಾಕು, ಬೇಸಿಗೆಯಲ್ಲೂ ಇರುತ್ತೀರಿ ಫ್ರೆಶ್! -
ಮೆಟ್ ಗಾಲಾ 2026: ಕರಣ್ ಜೋಹರ್ ಎಂಟ್ರಿಯಿಂದ ಫ್ಯಾಷನ್ ಲೋಕದಲ್ಲಿ ಸಂಚಲನ, ಭಾರತದಲ್ಲಿ ವೀಕ್ಷಿಸುವುದು ಹೇಗೆ?
ಭಾರತದಲ್ಲಿ ದತ್ತು ಸ್ವೀಕಾರ ಅಷ್ಟು ಸುಲಭವಲ್ಲ..! ಏನೆಲ್ಲಾ ನಿಯಮವಿದೆ ಗೊತ್ತಾ?
ಸೋಶಿಯಲ್ ಮಿಡಿಯಾ ಸ್ಟಾರ್ ಸೋನು ಶ್ರೀನಿವಾಸ್ ಗೌಡ ಈಗ ಹೆಣ್ಣು ಮಗು ದತ್ತು ಪಡೆದ ವಿಚಾರವಾಗಿ ಜೈಲು ಪಾಲಾಗಿದ್ದಾರೆ. ಇದೇ ವಿಚಾರ ಆನ್‌ಲೈನ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಬಿಗ್ ಬಾಸ್ ಅಂಗಳಕ್ಕೂ ತಲುಪಿದ್ದ ಸೋಶಿಯಲ್ ಮೀಡಿಯಾ ಸ್ಟಾರ್ ಸೋನು ಗೌಡ ಬಳಿಕ ಸಿನಿಮಾಗಳಲ್ಲೂ ನಟಿಸಿದ್ದರು. ಆದರೆ ಈಗ ಹೆಣ್ಣು ಮಗು ದತ್ತು ಪಡೆದ ವಿಚಾರದಲ್ಲಿ ಯಡವಟ್ಟು ಮಾಡಿಕೊಂಡು ತನಿಖೆ ಎದುರಿಸುತ್ತಿರುವ ವಿಚಾರ ನಿಮಗೆಲ್ಲಾ ತಿಳಿದಿದೆ.
ಸದ್ಯ ಆಕೆ ತನಿಖೆ ಎದುರಿಸುತ್ತಿದ್ದು, ನಾವಿಂದು ಈ ದತ್ತು ಪಡೆಯುವ ವಿಚಾರವಾಗಿ ತಿಳಿಯೋಣ. ಭಾರತದಲ್ಲಿ ದತ್ತು ಪಡೆಯಲು ಇರುವ ನಿಯಮಗಳೇನು? ಯಾರು ದತ್ತು ಪಡೆಯಬಹುದು? ಭಾರತದಲ್ಲಿ ಹೆಣ್ಣು ಮಕ್ಕಳ ದತ್ತು ವಿಚಾರ ಆಗಾಗ ಚರ್ಚೆ ಆಗುವುದೇಕೆ ಎಂಬೆಲ್ಲಾ ವಿಚಾರಗಳ ತಿಳಿದುಕೊಳ್ಳುವ ಪ್ರಯತ್ನ ಮಾಡೋಣ.

ಭಾರತದಲ್ಲಿ ಮಕ್ಕಳನ್ನು ದತ್ತು ಪಡೆಯುವ ಕುರಿತು ಕಾನೂನು ಮಾಡಲಾಗಿದೆ. ಹಿಂದೂ ದತ್ತು ಮತ್ತು ನಿರ್ವಹಣೆ ಕಾಯಿದೆ ಅಡಿಯಲ್ಲಿ ಈ ಎಲ್ಲಾ ಕಾನೂನುಗಳಿವೆ. 2021ರಿಂದ 23ರ ಒಳಗೆ 9,474 ಹೆಣ್ಣು ಮಕ್ಕಳು ಹಾಗೂ 6,012 ಗಂಡು ಮಕ್ಕಳನ್ನು ದತ್ತು ಪಡೆಯಲಾಗಿದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಹೆಣ್ಣು ಮಕ್ಕಳನ್ನು ದತ್ತು ಪಡೆಯುತ್ತಿರುವ ಸಂಖ್ಯೆ ಹೆಚ್ಚಾಗಿರುವುದು ಸ್ವಾಗತರ್ಹ ಬೆಳವಣಿಗೆಯಾಗಿದೆ.
ಈ ನಡುವೆ ದೇಶದ ಯಾವ ರಾಜ್ಯವು ಹೆಚ್ಚು ಮಕ್ಕಳನ್ನು ದತ್ತು ಪಡೆಯುತ್ತಿದೆ ಎಂಬ ವಿಚಾರದಲ್ಲಿ ಪಂಜಾಬ್ ಹಾಗೂ ಚಂಡೀಗಢ ಮುಂಚೂಣಿಯಲ್ಲಿವೆ.
6 ವರ್ಷಕ್ಕಿಂತ ಕಡಿಮೆ ವರ್ಷದ ಮಕ್ಕಳ ದತ್ತು ಹೆಚ್ಚು
ಇನ್ನು 6 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ದತ್ತು ಪಡೆಯುವವರ ಸಂಖ್ಯೆ ಹೆಚ್ಚಾಗಿದೆ ಎಂದು ವರದಿ ಹೇಳಿದೆ. ಸುಮಾರು ಶೇ.69.4ರಷ್ಟು ಮಂದಿ ಪೋಷಕರು 0ಯಿಂದ 2 ವರ್ಷ ಒಳಗಿನ ಮಕ್ಕಳನ್ನು ದತ್ತು ಪಡೆದಿದ್ದಾರೆ. ಶೇ.10.3ರಷ್ಟು ಪೋಷಕರು 2ರಂದ 4 ವರ್ಷ ವಯಸ್ಸಿನ ಮಕ್ಕಳ ದತ್ತು ಪಡೆದಿದ್ದಾರೆ. ಮತ್ತು ಶೇ.14.8 ರಷ್ಟು ಪೋಷಕರು 4 ರಿಂದ 6 ವರ್ಷದೊಳಗಿನ ಮಕ್ಕಳನ್ನು ದತ್ತು ಪಡೆದಿದ್ದಾರೆ ಎಂದು ವರದಿ ಹೇಳಿದೆ.
ಭಾರತದಲ್ಲಿ ದತ್ತು ಪಡೆಯುವ ನಿಯಮ ಏನು ಹೇಳುತ್ತದೆ?
ಭಾರತದಲ್ಲಿ ಮಕ್ಕಳನ್ನು ದತ್ತು ಪಡೆಯುವುದು ಅಷ್ಟೊಂದು ಸುಲಭವಲ್ಲ. ಅಲ್ಲಿ ಹತ್ತು ಹಲವು ನಿಯಮಗಳಿವೆ. ಇದೆಲ್ಲವು ಮಗುವಿನ ಭವಿಷ್ಯದ ದೃಷ್ಟಿಯಿಂದ ಜಾರಿ ಮಾಡಲಾಗಿದೆ. ಮಕ್ಕಳನ್ನು ದತ್ತು ಪಡೆಯುವವರು ವಿವಾಹವಾಗಿರಬೇಕು ಎಂದೇನಿಲ್ಲ ಅಥವಾ ಪುರುಷ, ಮಹಿಳೆ ಎಂಬ ಭಾವನೆಯೂ ಅಡ್ಡಿಯಾಗುವುದಿಲ್ಲ.
ಆದರೆ ಒಬ್ವನೇ ಇರುವ ಪುರುಷ ಹೆಣ್ಣು ಮಗುವನ್ನು ದತ್ತು ಪಡೆಯುವಂತಿಲ್ಲ. ಇನ್ನು ದಂಪತಿ ಮಕ್ಕಳನ್ನು ದತ್ತು ಪಡೆಯಬೇಕಾದರೆ ಅವರು ಮದುವೆಯಾಗಿ 2 ವರ್ಷ ದಾಂಪತ್ಯ ನಡೆಸಿರಬೇಕಾಗುತ್ತದೆ. ಜೊತೆ ದತ್ತು ಪಡೆಯಲು ಇಬ್ಬರ ಸಮ್ಮತಿ ಇರಬೇಕು. ದತ್ತು ಪಡೆಯುವವರ ವಯಸ್ಸು ಹಾಗೂ ಮಗುವಿನ ವಯಸ್ಸು 25 ವರ್ಷ ಮೀರಿರಬಾರದು.
ದತ್ತು ಪಡೆಯುವವರು ದೈಹಿಕವಾಗಿ, ಮಾನಸಿಕವಾಗಿ ಹಾಗೂ ಆರ್ಥಿಕವಾಗಿಯೂ ಸದೃಢವಿರಬೇಕು. ಈಗಾಗಲೆ 4ಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವವರು ಮಕ್ಕಳನ್ನು ದತ್ತು ಪಡೆಯುವಂತಿಲ್ಲ.
ದತ್ತು ಮಕ್ಕಳನ್ನು ಆರಿಸುವ ಪ್ರಕ್ರಿಯೆ ಹೇಗೆ?
ಪೋಷಕರಿಂದ ನೇರವಾಗಿಯೂ ದತ್ತು ಪಡೆಯಬಹುದು. ಆದರೆ ಅಲ್ಲಿ ಸಹ ದಂಪತಿ ಒಪ್ಪಿಗೆ ಅಗತ್ಯ. ಜೊತೆಗೆ ದತ್ತು ನೀಡುವವರು ದತ್ತು ಪಡೆಯುವವರಿಗಿಂತಲೂ ಅನುಕೂಲಸ್ಥರಾಗಿದ್ದರೆ ಈ ದತ್ತು ಅಸಿಂಧುವಾಗುವ ಸಂಭವವಿರುತ್ತದೆ. ಆದರೆ ಪೋಷಕರು ಇಲ್ಲದೆ ಸಂಘ, ಸಂಸ್ಥೆ ಬಾಲಾಶ್ರಮದಲ್ಲಿ ಬೆಳೆದ ಮಕ್ಕಳನ್ನು ದತ್ತು ಪಡೆಯಬೇಕಾದರೆ ಅಧಿಕಾರಿಗಳು ಪೋಷಕರ ಮುಂದೆ 6 ಮಕ್ಕಳ ಫೋಟೋವನ್ನು ಇಡುತ್ತಾರೆ, ಈ ಮಕ್ಕಳ ಹಲವು ರೀತಿಯ ಪರೀಕ್ಷೆಗೆ ಒಳಗಾಗಿರುತ್ತಾರೆ. ಅವರ ಮಾನಸಿಕ ಸ್ಥಿತಿ, ಆರೋಗ್ಯ ಕುರಿತ ಸಂಪೂರ್ಣ ಪರೀಕ್ಷೆಯಾಗಿರುತ್ತದೆ. ಈ 6 ಮಕ್ಕಳಲ್ಲಿ ಒಬ್ಬರನ್ನು 1 ಗಂಟೆಯ ಒಳಗೆ ಆ ದಂಪತಿ ಇಲ್ಲವೆ ದತ್ತು ಪಡೆಯಲು ಬಂದವರು ಆರಿಸಬೇಕಾಗುತ್ತದೆ.
ಹೀಗೆ ಆರಿಸಿಕೊಂಡ ಮಗುವನ್ನು ಒಂದೇ ದಿನದಲ್ಲಿ ಪೋಷಕರ ಜೊತೆ ಕಳುಹಿಸುವುದಿಲ್ಲ. ಬದಲಿಗೆ ಇಬ್ಬರ ನಡುವೆ ಭೇಟಿ ಮಾಡಿಸಲಾಗುತ್ತದೆ. ಮಗು ಒಪ್ಪದಿದ್ದರೆ ಈ ದತ್ತು ಸ್ವೀಕಾರ ಯಶಸ್ವಿಯಾಗುವುದಿಲ್ಲ. ಒಂದು ವೇಳೆ ಮಗು ಒಪ್ಪಿದರೆ ಮುಂದಿನ ನ್ಯಾಯಾಲಯದ ಪ್ರಕ್ರಿಯೆ ಆರಂಭವಾಗಿತ್ತದೆ. ಅಂದರೆ ದತ್ತು ನೀಡುತ್ತಿರುವ ಸಂಸ್ಥೆ ಇಲ್ಲವೆ ಪೋಷಕರು ದತ್ತು ಪಡೆಯಲು ಮತ್ತು ಸ್ವೀಕರಿಸಲು ನ್ಯಾಯಾಲಯ ಸಮ್ಮತಿ ಅಗತ್ಯವಾಗುತ್ತದೆ. ಹೀಗಾಗಿ ಪ್ರತಿಯೊಂದು ಮಾಹಿತಿ ಇರುವ ಅರ್ಜಿ ನ್ಯಾಯಾಲಯದಲ್ಲಿ ವಿಚಾರಣೆಯಾಗುತ್ತದೆ. ನ್ಯಾಯಾಲಯ ಈ ಸರ್ಜಿ ಪರಿಶೀಲಿಸಿ ಅನುಮತಿ ನೀಡಿದರೆ ಮಾತ್ರ ಮುಂದಿನ ಹಂತ ತಲುಪುತ್ತದೆ.
ಮಗುವನ್ನು ದತ್ತು ಪಡೆದ ಪೋಷಕರ ಮನೆಗೆ ಈ ಸಂಸ್ಥೆ ಅಥವಾ ಅಧಿಕಾರಿಗಳು ಪ್ರತಿ 6 ತಿಂಗಳಿಗೆ ಒಮ್ಮೆ ಅಂದರೆ ಒಟ್ಟು 4 ಬಾರಿ ಭೇಟಿ ನೀಡಿ ಮಗುವಿನ ಆರೋಗ್ಯ, ಅಲ್ಲಿನ ಪರಿಸ್ಥಿತಿಯನ್ನು ನ್ಯಾಯಾಲಯಕ್ಕೆ ವರದಿ ನೀಡಬೇಕಾಗುತ್ತದೆ.



Click it and Unblock the Notifications