Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
21ನೇ ವಯಸ್ಸಲ್ಲಿ ಇಬ್ಬರು ಮಕ್ಕಳ ದತ್ತು ಪಡೆದಿದ್ದ ಶ್ರೀಲೀಲಾ; ಈಗ ಮೂವರು ಮಕ್ಕಳ ಜವಾಬ್ದಾರಿ ಹೊತ್ತ ನಟಿ!
ಕಿಸ್ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದ ನಟಿ ಶ್ರೀಲೀಲಾ ಈಗ ಬಹುಭಾಷಾ ನಟಿ, ತೆಲುಗು ತಮಿಳು ಸಿನಿಮಾಗಳಲ್ಲು ಅವರು ದಿಗ್ಗಜರ ಜೊತೆ ನಟಿಸುತ್ತಿದ್ದಾರೆ. ಹಾಗೆ ಸಾಲು ಸಾಲು ಚಿತ್ರಗಳು ಬಿಡುಗಡೆಗೆ ಸಿದ್ದವಾಗಿವೆ. ಹಾಗೆ ಹಿಂದಿಯಲ್ಲೂ ಸಹ ಮೊದಲ ಸಿನಿಮಾ ಸಹ ಬಿಡುಗಡೆಯ ಹೊಸ್ತಿಲಲ್ಲಿದೆ. ಹಾಗೆ ಅವರು ಈಗ ನಟಿಸುತ್ತಿರುವ ಪರಾಶಕ್ತಿ ಕೂಡ ಬಿಡುಗಡೆಯಾಗುತ್ತಿದೆ.
ಈ ನಡುವೆ ಅವರು ಎಲ್ಲಿಯೂ ಹೇಳಿಕೊಂಡಿರದ ಮಕ್ಕಳ ದತ್ತು ಪಡೆದ ವಿಚಾರವಾಗಿ ಸಿನಿಮಾದ ಪ್ರೆಸ್‌ಮೀಟ್‌ನಲ್ಲಿ ಹೇಳಿಕೊಂಡಿದ್ದಾರೆ. ತಮ್ಮ 21ನೇ ವಯಸ್ಸಿನಲ್ಲೇ ಅವರು ಇಬ್ಬರು ಮಕ್ಕಳನ್ನು ದತ್ತು ಪಡೆದಿದ್ದರಂತೆ ಹಾಗೆ ಇತ್ತೀಚಿಗೆ ಇನ್ನೊಂದು ಮಗುವನ್ನು ಸಹ ದತ್ತು ಪಡೆದಿರುವುದಾಗಿ ಹೇಳಿಕೊಂಡಿದ್ದಾರೆ. ಹೀಗಾಗಿ ಅವರೀಗ ಮೂರು ಮಕ್ಕಳನ್ನು ದತ್ತು ಪಡೆದಿರುವ ನಟಿ ಎಂಬ ಖ್ಯಾತಿ ಪಡೆದಿದ್ದಾರೆ.

ಹಾಗೆ ಶ್ರೀಲೀಲಾ ಮಕ್ಕಳನ್ನು ದತ್ತು ಪಡೆದಿದ್ದು ಏಕೆ ಅನ್ನೋದನ್ನು ಸಹ ಹಂಚಿಕೊಂಡಿದ್ದಾರೆ. ಒಂದು ಕನ್ನಡ ಸಿನಿಮಾದ ಕಾರಣದಿಂದಾಗಿ ಅವರು ಮಕ್ಕಳನ್ನು ದತ್ತು ಪಡೆದಿರುವುದಾಗಿ ಹೇಳಿದ್ದಾರೆ. ನಿರ್ದೇಶಕರೊಬ್ಬರ ಜೊತೆಗೆ ಅನಾಥಾಶ್ರಮಕ್ಕೆ ಭೇಟಿ ನೀಡಿದ್ದ ವೇಳೆ ಅಲ್ಲಿನ ಮಕ್ಕಳ ನೋಡಿ ಭಾವುಕರಾಗಿದ್ದರಂತೆ. ಅದಾದ ಬಳಿಕ ಅನಾಥಾಶ್ರಮದೊಂದಿಗೆ ಶ್ರೀಲೀಲಾ ಉತ್ತಮ ಸಂಬಂಧ ಹೊಂದಿದ್ದರಂತೆ. ಆಗಾಗ ಮಕ್ಕಳನ್ನು ನೋಡುವ ಬಯಕೆಯಲ್ಲಿ ಭೇಟಿ ನೀಡುತ್ತಿದ್ದರಂತೆ. ತದನಂತರ ಮೊದಲು ಇಬ್ಬರು ಮಕ್ಕಳನ್ನು ದತ್ತು ಪಡೆದರಂತೆ.
ಆ ಕುರಿತು ಮಾತನಾಡುವಾಗ ನಾನು ಭಾವುಕಳಾಗುತ್ತೇನೆ. ನನ್ನ ವೃತ್ತಿಜೀವನದ ಆರಂಭದಲ್ಲಿ ನಾನು ಮಾಡಿದ ಕನ್ನಡ ಚಿತ್ರ (2019 ರಲ್ಲಿ ಕಿಸ್) ನನ್ನ ನಿರ್ದೇಶಕರು ನನ್ನನ್ನು ಆಶ್ರಮಕ್ಕೆ ಕರೆದೊಯ್ಯಲು ನಿರ್ಧರಿಸಿದರು. ಅಲ್ಲಿಂದ ದತ್ತು ಪಡೆಯುವ ಪ್ರಕ್ರಿಯೆ ಆರಂಭವಾಗಿದ್ದು. ನಾನು ಎಲ್ಲಿಯೂ ಮಕ್ಕಳ ದತ್ತು ಪಡೆದ ವಿಚಾರ ಹೇಳಿಕೊಂಡಿರಲಿಲ್ಲ. ಆದ್ರೆ ಆ ಸಂಸ್ಥೆ ನಾನು ದತ್ತು ಪಡೆದ ವಿಚಾರವನ್ನು ಹೇಳಿಕೊಳ್ಳಲು ಪ್ರೋತ್ಸಾಹಿಸಿತ್ತು. ಇದರಿಂದ ಇನ್ನಷ್ಟು ಜನರಿಗೆ ಪ್ರೇರೇಪಣೆ ಆಗಲಿದೆ ಎಂದಿತ್ತು. ಹೀಗಾಗಿ ನಾನು ಎಲ್ಲಾ ಕಡೆಯು ಈ ಕುರಿತು ಹೇಳಿಕೊಳ್ಳುತ್ತೇನೆ ಎಂದಿದ್ದಾರೆ.
ಶ್ರೀಲೀಲಾಗೆ 21 ವರ್ಷ ಆಗಿದ್ದ ಸಮಯದಲ್ಲಿ ಅವರು ಗುರು ಹಾಗೂ ಶೋಭಿತಾ ಎಂಬ ಮಕ್ಕಳನ್ನ ದತ್ತು ಪಡೆದರು. ಹಾಗೆ ತಮ್ಮ 24ನೇ ವರ್ಷದ ಹುಟ್ಟುಹಬ್ಬದ ಸಮಯದಲ್ಲಿ ಅವರು ಮೂರನೇ ಮಗುವನ್ನು ದತ್ತು ಪಡೆದಿರುವುದಾಗಿ ಹೇಳಿಕೊಂಡಿದ್ದಾರೆ. ಕಳೆದ ವರ್ಷ ಏಪ್ರಿಲ್‌ನಲ್ಲಿ, ಅವರ 24 ನೇ ಹುಟ್ಟುಹಬ್ಬದ ಮೊದಲು, ಅವರು ಹೆಚ್ಚಿನ ಸ್ಪಷ್ಟೀಕರಣವಿಲ್ಲದೆ ಹೆಣ್ಣು ಮಗುವಿನ ಚಿತ್ರವನ್ನು ಹಂಚಿಕೊಂಡಿದ್ದರು. ಬಳಿಕ ಮಗುವನ್ನು ದತ್ತು ಪಡೆದಿರುವುದಾಗಿ ಸ್ಪಷ್ಟನೆ ನೀಡಿದ್ದರು.
ಮಕ್ಕಳ ದತ್ತು ಪಡೆಯಲು ಏನೆಲ್ಲಾ ನಿಯಮವಿದೆ
ಭಾರತದಲ್ಲಿ ಮಕ್ಕಳನ್ನು ದತ್ತು ಪಡೆಯಲು ಹಲವು ರೀತಿಯ ನಿಯಮಗಳಿವೆ. ಈ ನಿಯಮಗಳಿಗೆ ಒಪ್ಪಿಗೆ ಇದ್ದರೆ ಮಾತ್ರವೇ ಮಕ್ಕಳ ದತ್ತು ಪಡೆಯಬಹುದು. ಇದು ಕಾನೂನಾತ್ಮಕ ಪ್ರಕ್ರಿಯೆ ಆಗಿರಲಿದೆ. ದತ್ತು ಪಡೆಯುವ ವಿಧಾನದಲ್ಲಿ ಹಲವು ರೀತಿಗಳಿವೆ. ಮಕ್ಕಳನ್ನು ತಾವೇ ನೋಡಿಕೊಳ್ಳುವುದು ಹಾಗೆ ಬೇರೆಯವರು ಅಥವಾ ಕೇಂದ್ರದಲ್ಲಿಯೇ ಮಕ್ಕಳು ಬೆಳೆಯುವುದು ಅವರ ಖರ್ಚುನ್ನು ನೋಡಿಕೊಳ್ಳುವುದು ಈ ರೀತಿಯಾಗಿಯೂ ದತ್ತು ಪಡೆಯುವ ವಿಧಾನವಿದೆ. ಈಗ ಶ್ರೀಲೀಲಾ ಸಹ ಮಕ್ಕಳ ಖರ್ಚುಗಳನ್ನು ನೋಡಿಕೊಳ್ಳುತ್ತಾರೆ, ಆದ್ರೆ ಮಕ್ಕಳು ಅವರ ಬಳಿ ಬೆಳೆಯುವುದಿಲ್ಲ.
ಮಗುವನ್ನು ಕುಟುಂಬದಲ್ಲಿ ಇಟ್ಟುಕೊಳ್ಳಲು ಆಸಕ್ತಿ ಇರುವ ದಂಪತಿಗಳು ದತ್ತು ತೆಗೆದುಕೊಳ್ಳಬಹುದು. ದತ್ತು ಪೋಷಕರ ಗರಿಷ್ಟ ವಯೋಮಿತಿ ಸಂಯೋಜಿತ (ಗಂಡ-ಹೆಂಡತಿ ಸೇರಿ) 85 ವರ್ಷ ಮತ್ತು 40 ವರ್ಷ ವಯಸ್ಸಿನ ಏಕ ಪೋಷಕರು 0 ಯಿಂದ 2 ವರ್ಷ ವಯಸ್ಸಿನ ಮಕ್ಕಳನ್ನು ದತ್ತು ಪಡೆಯಬಹುದು. ಹಾಗೆ ಪೋಷಕರ ವಯಸ್ಸು ಹೆಚ್ಚಾದಂತೆ ಅವರು ಚಿಕ್ಕ ಮಕ್ಕಳನ್ನು ದತ್ತು ಪಡೆಯಲಾಗದು. ಇದಿಷ್ಟೇ ಅಲ್ಲ ಇದು ದಂಪತಿಯ ಒಪ್ಪಿಗೆ ಹಾಗೆ ಅವರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಮಟ್ಟವನ್ನು ಆಧರಿಸಿ ನಿರ್ಧರಿತವಾಗುತ್ತದೆ.



Click it and Unblock the Notifications