Latest Updates
-
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ!
2024ರಲ್ಲಿ ಅಧಿಕ ಮಾಸ ಇದೆಯೇ..? ಏನಿದು ಅಧಿಕ ಮಾಸ ನೋಡಿ..!
ಹಿಂದೂ ಕ್ಯಾಲೆಂಡರ್ ಪ್ರಕಾರ ಒಂದೊಂದು ಆಚರಣೆಗೂ ಒಂದೊಂದು ಕಾರಣವಿರುತ್ತದೆ. ಅದರ ಹಿಂದೆ ಪುರಾತನ ವಿಚಾರಗಳು ಅಡಗಿರುತ್ತವೆ. ಅದೇ ರೀತಿ ಅಧಿಕ ಮಾಸ ಸಹ ಒಂದಾಗಿದೆ. ಪ್ರತಿ ಮೂರು ವರ್ಷಗಳಿಗೊಮ್ಮೆ ಅಧಿಕ ಮಾಸ ಕಾಣಿಸಿಕೊಳ್ಳುತ್ತದೆ. ಈ ಮಾಸದಲ್ಲಿ ಯಾವುದೇ ಶುಭ ಕಾರ್ಯಗಳನ್ನು ಮಾಡುವುದಿಲ್ಲ.
ಹಾಗಾದರೆ ಈ ವರ್ಷವೂ ಅಧಿಕ ಮಾಸ ಬಂದಿದೆಯೇ.? ಯಾವ ಕಾಲವನ್ನು ಅಧಿಕ ಮಾಸ ಎನ್ನಲಾಗುತ್ತದೆ? ಈ ಅಧಿಕ ಮಾಸದಲ್ಲಿ ಯಾವ ಕಾರ್ಯ ಮಾಡಬಾರದು? ಏನಿದರ ವಿಶೇಷ ಎಂಬ ಕುರಿತ ಮಾಹಿತಿ ಇಲ್ಲಿದೆ.

ಮೊದಲೇ ಹೇಳಿದಂತೆ ಪ್ರತಿ ಮೂರು ವರ್ಷಕ್ಕೊಮ್ಮೆ ಅಧಿಕ ಮಾಸ ಬರುತ್ತದೆ. ಅಂದರೆ ಅಧಿಕ ಮಾಸದಲ್ಲಿ ಸೂರ್ಯನು ತನ್ನ ಸ್ಥಾನವನ್ನು ಬದಲಾಯಿಸುವುದಿಲ್ಲ. ಈ ಕಾರಣಕ್ಕಾಗಿ ಅಧಿಕ ಮಾಸವನ್ನು ಅಶುದ್ಧ ಮಾಸವೆಂದು ಕರೆಯಲಾಗುತ್ತದೆ. ಸೂರ್ಯ ಪ್ರತಿ ತಿಂಗಳು ರಾಶಿಚಕ್ರವನ್ನು ಬದಲಾಯಿಸುತ್ತಾನೆ. ಆದರೆ ಯಾವ ತಿಂಗಳಿನಲ್ಲಿ ಬದಲಾಗುವುದಿಲ್ಲವೋ ಅದನ್ನು ಅಧಿಕ ಮಾಸವೆಂದು ಕರೆಯಲಾಗಿದೆ. ಈ ಮಾಸದಲ್ಲಿ ಯಾವ ಬದಲಾವಣೆ ಕಾಣದಿರುವುದರಿಂದ ಇದನ್ನು ಅಶುಭ ತಿಂಗಳು ಅಂತಲೂ ಕರೆಯುತ್ತಾರೆ.
ಈ ವರ್ಷ ಅಧಿಕ ಮಾಸ ಬಂದಿದೆಯೇ..?
2024ರಲ್ಲಿ ಅಧಿಕ ಮಾಸ ಬರುವುದಿಲ್ಲ. ಏಕೆಂದರೆ 2020 ಮತ್ತು 2023ರಲ್ಲಿ ಅಧಿಕ ಮಾಸದ ತಿಂಗಳು ಬಂದಿವೆ. ಪ್ರತಿ ಮೂರು ವರ್ಷಕ್ಕೊಮ್ಮೆ ಅಧಿಕ ಮಾಸ ಬರುವುದರಿಂದ 2024ರಲ್ಲಿ ಅಧಿಕ ಮಾಸವಿರುವುದಿಲ್ಲ. ಕಳೆದ ವರ್ಷ ಜುಲೈ 18 ರಿಂದ ಅಧಿಕ ಮಾಸವು ಪ್ರಾರಂಭವಾಗಿ 2023ರ ಆಗಸ್ಟ್ 16 ರಂದು ಕೊನೆಗೊಂಡಿತ್ತು. ಹೀಗಾಗಿ ಈ ವರ್ಷ ಅಧಿಕ ಮಾಸ ಇರುವುದಿಲ್ಲ.
ಪುರುಷೋತ್ತಮ ಮಾಸ ಎಂದು ಏಕೆ ಕರೆಯಲಾಗುವುದು?
ಶಾಸ್ತ್ರದ ಪ್ರಕಾರ ಅಧಿಕ ಮಾಸವನ್ನು ಮಂಗಳಕರವೆಂದು ಪರಿಗಣಿಸಲಾಗುವುದಿಲ್ಲ, ಆದ್ದರಿಂದ ಅಧಿಕ ಮಾಸದ ಒಡೆಯನಾಗಲು ಯಾವ ದೇವರೂ ಒಪ್ಪಿಕೊಳ್ಳುವುದಿಲ್ಲ, ಆವಾಗ ಅಧಿಕಮರು ಶ್ರೀವಿಷ್ಣುವನ್ನು ಪ್ರಾರ್ಥಿಸಿ ಈ ತಿಂಗಳ ಒಡೆಯನಾಗುವಂತೆ ಕೇಳಿಕೊಳ್ಳುತ್ತಾರೆ. ಅಧಿಕಮಾಗಳ ಪ್ರಾರ್ಥನೆಯನ್ನು ಕೇಳಿದ ವಿಷ್ಣು ಜೀ ಈ ತಿಂಗಳಿಗೆ ಪುರುಷೋತ್ತಮ ಎಂಬ ಅತ್ಯುತ್ತಮ ಹೆಸರನ್ನು ನೀಡಿದರು. ಅಂದಿನಿಂದ ಈ ಮಾಸಕ್ಕೆ ಪುರುಷೋತ್ತಮ ಮಾಸ ಎಂದು ಹೆಸರಾಯಿತು.
ಅಧಿಕ ಮಾಸದ ಮಹತ್ವ
ಈ ಮಾಸದಲ್ಲಿ ಭಕ್ತಿಯಿಂದ ಪೂಜೆ ಮಾಡುವುದರಿಂದ ಹರ-ಹರಿ ಇಬ್ಬರ ಕೃಪೆಗೆ ಪಾತ್ರರಾಗುತ್ತೀರಿ. ಈ ತಿಂಗಳಿನಲ್ಲಿ ಭಗವದ್ಗೀತೆ ಓದುವುದು, ಮಂತ್ರಗಳನ್ನು ಪಠಿಸುವುದು, ಪೂಜೆ ಮಾಡುವುದು, ದಾನ ಮಾಡುವುದು ಶ್ರೇಷ್ಠ ಎಂದು ಪರಿಗಣಿಸಲಾಗುವುದು. ಈ ತಿಂಗಳಿನಲ್ಲಿ ಭಕ್ತಿಯಿಂದ ದೇವರ ಕಾರ್ಯ ಮಾಡಿದರೆ ಹರ-ಹರಿಯ ಕೃಪೆಗೆ ಪಾತ್ರರಾಗುವಿರಿ ಎಂಬ ನಂಬಿಕೆಯಿದೆ.
ಶುಭ ಕಾರ್ಯಕ್ಕೆ ನಿರ್ಬಂಧ
ಅಧಿಕ ಮಾಸದಲ್ಲಿ ಯಾವುದೇ ಶುಭ ಕಾರ್ಯಗಳು ನಡೆಯುವುದಿಲ್ಲ. ಮದುವೆ ಅಥವಾ ವಿವಾಹ ಕಾರ್ಯ ಮಾಡುವುದನ್ನು ನಿಷೇಧಿಸಲಾಗಿದೆ. ಈ ಸಮಯದಲ್ಲಿ ನೀವು ಮದುವೆಯಾದರೆ, ದಾಂಪತ್ಯ ಚೆನ್ನಾಗಿರುವುದಿಲ್ಲ ಎಂದು ನಂಬಲಾಗಿದೆ. ಹೀಗಾಗಿ ಅಧಿಕ ಮಾಸದಲ್ಲಿ ವಿವಾಹ ನಡೆಯುವುದೇ ಇಲ್ಲ. ಇದರ ಜೊತೆಗೆ ನಾಮಕರಣ, ಹೊಸ ಮನೆ, ಹೊಸ ಕೆಲಸ, ಹೊಸ ಉದ್ಯೋಗ, ವ್ಯಾಪಾರ ಮಾಡಲು ಮುಂದಾಗುವುದೇ ಇಲ್ಲ.
ಆದರೆ ಮನಸ್ಸಿನಲ್ಲಿ ಸಂಕಲ್ಪ ಮಾಡಿ ಅಧಿಕ ಮಾಸದಲ್ಲಿ ವ್ರತಾಚರಣೆ ಮಾಡಿದರೆ ಇದರಿಂದ ಬಯಕೆ ಈಡೇರುವುದು ಎಂದು ನಂಬಲಾಗಿದೆ. ಅಧಿಕ ಮಾಸದಲ್ಲಿ ಉತ್ತಮ ಫಲಕ್ಕಾಗಿ ಧಾರಣ ಪಾರಣ ವ್ರತ (ಒಂದು ದಿನ ಉಪವಾಸವಿದ್ದು ಮಾರನೇಯ ದಿನ ಬೆಳಗ್ಗೆ ಆಹಾರ ಸೇವಿಸುವುದು), ಕಭುಕ್ತೌ ವ್ರತ (ದಿನದಲ್ಲಿ ಒಂದು ಹೊತ್ತು ಮಾತ್ರ ಊಟ ಮಾಡುವುದು) ನಕ್ತಭೋಜನ ವ್ರತ (ಸೋರ್ಯಾಸ್ತದ ನಂತರ ಊಟ), ಅಲವಣ ವ್ರತ(ಉಪ್ಪು ಹಾಕಿರದ ಊಟ ಮಾಡುವುದು) ಇಂಥ ವ್ರತ ಪಾಲಿಸುತ್ತಾರೆ.



Click it and Unblock the Notifications

