Latest Updates
-
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು ಒಟ್ಟಾಗಿ ಕುಳಿತು ಈ ಕೆಲಸ ಮಾಡಿದರೆ ಟೆನ್ಷನ್ ಫ್ರೀ! -
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ!
ಫೆ.7ಕ್ಕೆ ಅದಾನಿ ಪುತ್ರನ ವಿವಾಹ: ಆತ ಎಷ್ಟು ಸಾವಿರ ಕೋಟಿ ಒಡೆಯ ಗೊತ್ತಾ?
ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಹಾಗೂ ಭಾರತದ ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬರಾದ ಗೌತಮ್ ಅದಾನಿ ಪುತ್ರನ ವಿವಾಹ ಈಗ ಸುದ್ದಿಯಾಗುತ್ತಿದೆ. ಈ ಹಿಂದೆ ಮುಖೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ ವಿವಾಹ ಇಡೀ ವಿಶ್ವದಲ್ಲಿ ಸುದ್ದಿಯಾಗಿತ್ತು. ಈಗ ಗೌತಮ್ ಅದಾನಿ ಪುತ್ರನ ವಿವಾಹ ಕೂಡ ಸುದ್ದಿಯಾಗುತ್ತಿದೆ.
ಜೀತ್ ಅದಾನಿ ಗೌತಮ್ ಅದಾನಿಯ ಪುತ್ರನಾಗಿದ್ದು ಮುಂದಿನ ತಿಂಗಳು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಕೈಗಾರಿಕೋದ್ಯಮಿ ಗೌತಮ್ ಅದಾನಿಯವರ ಕಿರಿಯ ಪುತ್ರ ಫೆಬ್ರವರಿ 7 ರಂದು ದಿವಾ ಜೈಮಿನ್ ಶಾ ಅವರನ್ನು ವಿವಾಹವಾಗುತ್ತಿದ್ದಾರೆ. ಈ ಮದುವೆಯು ಅತ್ಯಂತ ಸರಳವಾಗಿ ನಡೆಯಲಿದೆ ಎಂದು ಅವರು ಹೇಳಿದ್ದಾರೆ.

27 ವರ್ಷದ ಜೀತ್ ಅದಾನಿ ವಿವಾಹವು ಸಾಮಾಜಿಕ ಜಾಲತಾಣಗಳಲ್ಲಿ ಬಹುದೊಡ್ಡ ಟ್ರೆಂಡ್ ಉಂಟು ಮಾಡಿದೆ. ಅವರ ವಿವಾಹದಲ್ಲಿ ಟೇಲರ್ ಸ್ವಿಫ್ಟ್ ಸೇರಿದಂತೆ ಹಲವಾರು ಸೆಲೆಬ್ರಿಟಿಗಳು ಇದರಲ್ಲಿ ಭಾಗವಹಿಸಲಿದ್ದಾರೆ ಎಂದು ಅನೇಕ ಮಾಧ್ಯಮಗಳಲ್ಲಿ ವರದಿಯಾಗಿದೆ. ಹಾಗೆ ವಿಶ್ವದ ಪ್ರಮುಖ ಉದ್ಯಮಿಗಳು ಕೂಡ ಭಾಗಿಯಾಗಲಿದ್ದಾರಂತೆ, ಆದ್ರೆ ಅವರು ಹೇಳಿದಂತೆ ಈ ಮದುವೆ ಹೇಗೆ ಸರಳವಾಗಿರಲಿದೆ ಎಂಬ ಕುತೂಹಲ ಕೂಡ ಮೂಡಿದೆ.
ಉದ್ಯಮಿ ಎಲಾನ್ ಮಸ್ಕ್, ಬುಲ್ ಗೇಟ್ಸ್, ಮಾರ್ಕ್ ಬುಕರ್ ಬರ್ಗ್, ಡೇನಿಯಲ್ ಕ್ರೇಗ್, ಟೇಲರ್ ಸ್ವಿಫ್ಟ್, ಜಸ್ಟಿನ್ ಬೀಬರ್, ಕಾನ್ಯೆ ವೆಸ್ಟ್, ಕಾರ್ಡಶಿಯಾನ್ ಸಹೋದರಿಯರು, ರಾಫೆಲ್ ನಡಾಲ್, ದಿಲ್ಜಿತ್ ದೋಸಾಂಜ್, ಸುಂದರ್ ಪಿಚೈ, ಸತ್ಯ ನಾಡೆಲ್ಲಾ, ಬಿಲ್ಲಿ ಎಲಿಶ್, ಕೋಲ್ಡ್‌ಪ್ಲೇ ಮತ್ತು ಕಿಂಗ್ ಚಾರ್ಲ್ಸ್ ಸಹ ಭಾಗಿಯಾಗುತ್ತಾರೆ ಎಂಬ ವರದಿಗಳು ಹರಿದಾಡಿವೆ.
ಫೆಬ್ರವರಿ 7 ರಂದು ಅಹಮದಾಬಾದ್‌ನಲ್ಲಿ ವಿವಾಹ ನಿಶ್ಚಯವಾಗಿದೆ, ಆದರೆ ಫೆಬ್ರವರಿ 5ರಂದು ವಿವಾಹ ಪೂರ್ವ ಸಂಭ್ರಮಗಳು ಆರಂಭಗಗೊಳ್ಳುವ ನಿರೀಕ್ಷೆ ಇದೆ. ಈ ಜೋಡಿ ಎರಡು ವರ್ಷಗಳ ಹಿಂದೆ ಅಂದರೆ 2023ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆದರೆ 2 ವರ್ಷದ ಬಳಿಕ ಮದುವೆಯಾಗುತ್ತಿದ್ದಾರೆ.
ಜೀತ್ ಅದಾನಿ ಯಾರು?
ಜೀತ್ ಅದಾನಿ ಕೈಗಾರಿಕೋದ್ಯಮಿ ಗೌತಮ್ ಅದಾನಿಯವರ ಕಿರಿಯ ಪುತ್ರ ಆಗಿದ್ದಾರೆ. ಭಾರತದಲ್ಲಿರುವ 6 ವಿಮಾನ ನಿಲ್ದಾಣಗಳನ್ನು ನಿರ್ವಹಿಸುತ್ತಿರುವ ಅದಾನಿ ಗ್ರೂಪ್‌ನ ನಿರ್ದೇಶಕರಾಗಿ ಇವರು ಕೆಲಸ ಮಾಡುತ್ತಿದ್ದಾರೆ. ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ಎಂಜಿನಿಯರಿಂಗ್ ಮತ್ತು ಅನ್ವಯಿಕ ವಿಜ್ಞಾನದಲ್ಲಿ ಪದವೀಧರರಾಗಿದ್ದಾರೆ. ಹಾಗೆ ಪೈಲಟ್ ಟ್ರೈನಿಂಗ್ ಪಡೆಯುತ್ತಿದ್ದಾರೆ ಎಂದು ಹೇಳಲಾಗಿದೆ.
ಜೀತ್ ಅದಾನಿ 2019ರಿಂದ ಅದಾನಿ ಗ್ರೂಪ್‌ನಲ್ಲಿ ಗುರುತಿಸಿಕೊಂಡಿದ್ದಾರೆ. ಹಾಗೆ ಅವರ ಸಹೋದರ ಕರಣ್ ಅದಾನಿ ಈ ಅದಾನಿ ಪೋರ್ಟ್ಸ್‌ನ ಮುಖ್ಯಸ್ಥರಾಗಿದ್ದಾರೆ. ಹಾಗೆ ಪರಿಧಿ ಎಂಬಾಕೆಯನ್ನು ಅವರು ವಿವಾಹವಾಗಿದ್ದಾರೆ. ಈಗ ಜೀತ್ ಅದಾನಿ ವಿವಾಹವಾಗುತ್ತಿರುವ ಯುವತಿ ಕೂಡ ದೊಡ್ಡ ಉದ್ಯಮಿಯ ಮಗಳಾಗಿದ್ದಾಳೆ. ದಿವಾ ಜೈಮಿನ್ ಶಾ ಗುಜರಾತ್‌ನ ಹೆಸರಾಂತ ವಜ್ರದ ವ್ಯಾಪಾರಿ ಜೈಮಿನ್ ಶಾ ಅವರ ಪುತ್ರಿ ಆಗಿದ್ದಾರೆ. ಜಗತ್ತಿನಾದ್ಯಂತ ಅವರ ಉದ್ಯಮಿ ಹರಡಿಕೊಂಡಿದ್ದು, ಗುಜರಾತ್‌ನಲ್ಲಿ ಬಹುದೊಡ್ಡ ಹೆಸರು ಮಾಡಿದ್ದಾರೆ.
ಜೀತ್ ಅದಾನಿ ಅವರ ನಿವ್ವಳ ಆಸ್ತಿ ಮೌಲ್ಯ ಸುಮಾರು 1.2 ಬಿಲಿಯನ್ ಡಾಲರ್ ಆಗಿದೆ. ಅದಾನಿ ಗ್ರೂಪ್ ನಡೆಸುತ್ತಿರುವ ಎಲ್ಲಾ ವಿಮಾನ ನಿಲ್ದಾಣಗಳ ನಿರ್ವಹಣೆಯ ಹೊಣೆಗಾರಿಕೆ ಅವರ ಮೇಲಿದೆ.



Click it and Unblock the Notifications