Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಏಷ್ಯಾದ ಶ್ರೀಮಂತರ ಪಟ್ಟಿಯಲ್ಲಿ ಅಂಬಾನಿ ಹಿಂದಿಕ್ಕಿ ಮೊದಲ ಸ್ಥಾನಕ್ಕೇರಿದ ಅದಾನಿ
ವಿಶ್ವದ ಶ್ರೀಮಂತ ವ್ಯಕ್ತಿಗಳ ಪಟ್ಟಿ ಅಂದರೆ ಅಲ್ಲಿ ಅಂಬಾನಿ ಹಾಗೂ ಅದಾನಿ ಹೆಸರು ಇದ್ದೇ ಇರುತ್ತದೆ. ಇಬ್ಬರು ಭಾರತದ ದಿಗ್ಗಜ ಉದ್ಯಮಿಗಳು. ಅದಾನಿ ಸಮೂಹ ಈಗ ವಿಶ್ವದ ಬಲಿಷ್ಟ ಉದ್ಯಮಗಳಲ್ಲಿ ಒಂದಾಗಿ ಬೆಳೆದು ನಿಂತಿದೆ. ಈಗ ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿಯೂ ಗೌತಮ್ ಅದಾನಿ ಹೊರಹೊಮ್ಮಿದ್ದಾರೆ.
ಬ್ಲೂಮ್‌ಬರ್ಗ್ ಬಿಲಿಯನೇರ್ ಇಂಡೆಕ್ಸ ಪ್ರಕಾರ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಅವರನ್ನು ಹಿಂದಿಕ್ಕರುವ ಗೌತಮ್ ಅದಾನಿ ಈಗ ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಅದಾನಿ ಸಮೂಹದ ಶೇರು ಮೌಲ್ಯ ಹೆಚ್ಚಳಾಗಿದ್ದ ಹಿನ್ನೆಲೆ ಅವರು ಏಷ್ಯಾದ ಶ್ರೀಮಂತ ವ್ಯಕ್ತಿ ಎಂಬ ಹೆಗ್ಗಳಿಗೆ ಪಡೆಯುವಲ್ಲಿ ಯಶಸ್ವಿಯಾಗದ್ದಾರೆ.

ಅದಾನಿ ಗ್ರೂಪ್‌ನ ಅಧ್ಯಕ್ಷರಾಗಿರುವ ಗೌತಮ್ ಅದಾನಿ ಅವರು 111 ಬಿಲಿಯನ್ ಡಾಲರ್ ನಿವ್ವಳ ಮೌಲ್ಯದೊಂದಿಗೆ ಸೂಷ್ಯಂಕದಲ್ಲಿ 11ನೇ ಸ್ಥಾನದಲ್ಲಿದ್ದಾರೆ. ಅದಾನಿ ಗ್ರೂಪ್‌ನ ಎಲ್ಲಾ ಶೇರುಗಳ ಮೌಲ್ಯ ಏಕಾಏಕಿ ಏರಿಕೆ ಕಂಡುಬಂದಿದೆ. ಅವರು ಫೇಟಿಯಂ ಇಂಡಿಯಾ ಸಂಸ್ಥೆಯ ಖರೀದಿಸಲು ಮುಂದಾಗಿದ್ದಾರೆ ಎಂಬ ಸುದ್ದಿ ಹರಡಿದ ಬಳಿಕ ಈ ಬೆಳವಣಿಗೆ ನಡೆದಿತ್ತು. ಆದರೆ ಅವರು ಪೇಟಿಯಂ ಸಂಸ್ಥೆಯ ಖರೀದಿಗೆ ಮುಂದಾಗಿಲ್ಲ ಎಂಬ ಸ್ಪಷ್ಟನೆ ನೀಡಿದ್ದರು.
ಹೀಗಿದ್ದರೂ ಅದಾನಿ ಗ್ರೂಪ್ ಶೇರುಗಳು ಹೂಡಿಕೆದಾರರ ಸಂಪತ್ತನ್ನು ₹1.23 ಲಕ್ಷ ಕೋಟಿಗಳಷ್ಟು ಹೆಚ್ಚಿಸಿವೆ, ದಿನದ ಒಟ್ಟು ಮಾರುಕಟ್ಟೆ ಬಂಡವಾಳವನ್ನು ₹17.94 ಲಕ್ಷ ಕೋಟಿಗೆ ತಂದಿದೆ. ವಹಿವಾಟಿನ ಮುಕ್ತಾಯದ ವೇಳೆಗೆ, ಮಾರುಕಟ್ಟೆ ಬಂಡವಾಳವು ₹ 84,064 ಕೋಟಿಗಳಷ್ಟು ಹೆಚ್ಚಳದೊಂದಿಗೆ ₹ 17.51 ಲಕ್ಷ ಕೋಟಿಗೆ ತಲುಪಿದೆ.
61 ವರ್ಷದ ಗೌತಮ್ ಅದಾನಿ ಅವರು ಭಾರತದ ಮತ್ತು ಏಷ್ಯಾದ ಶ್ರೀಮಂತ ವ್ಯಕ್ತಿ ಎಂಬ ಬಿರುದನ್ನು ಮರಳಿ ಪಡೆದುಕೊಂಡಿದ್ದಾರೆ, ಅವರ ನಿವ್ವಳ ಮೌಲ್ಯವು ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿಯವರಿಗಿಂತಲೂ ಹೆಚ್ಚಾಗಿದೆ.
ಈಗ ಅಂಬಾನಿ ಕುಟುಂಬ ಪುತ್ರನ ವಿವಾಹ ಪೂರ್ವ ಸಮಾರಂಭ ಹಾಗೂ ಮದುವೆಯ ಸಡಗರದಲ್ಲಿದೆ. ಈ ಮದುವೆಗಾಗಿಯೇ ಕೋಟಿ ಕೋಟಿ ರೂಪಾಯಿ ಖರ್ಚು ಮಾಡಿದೆ. ಸಾವಿರಾರು ಕೋಟಿ ರೂಪಾಯಿ ಈ ಸಮಾರಂಭಕ್ಕಾಗಿ ಅಂಬಾನಿ ಕುಟುಂಬ ವ್ಯಯಿಸಿದೆ. ಈಗ ಇಟಲಿಯ ಕ್ರೂಸ್ ಶಿಪ್‌ನಲ್ಲಿ ಅನಂತ್ ಅಂಬಾನಿಯ ಎರಡನೇ ಪ್ರಿ ವೆಡ್ಡಿಂಗ್ ನಡೆಯುತ್ತಿದೆ.
ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಸೂಚ್ಯಂಕವು ಪ್ರಪಂಚದ ಅತ್ಯಂತ ಶ್ರೀಮಂತ ವ್ಯಕ್ತಿಗಳ ಪಟ್ಟಿ ಬಿಡುಗಡೆ ಮಾಡುತ್ತಲೇ ಇರುತ್ತದೆ. ನ್ಯೂಯಾರ್ಕ್‌ನಲ್ಲಿನ ಪ್ರತಿ ವ್ಯಾಪಾರದ ದಿನದ ಅಂತ್ಯದಲ್ಲಿ ನವೀಕರಿಸಲಾಗುತ್ತದೆ. ಅದರ ಪ್ರಕಾರ ವಿಶ್ವದ ಶ್ರೀಮಂತ ಉದ್ಯಮಿಗಳ ಪಟ್ಟಿ ಈ ರೀತಿ ಇದೆ. ಇದರಲ್ಲಿ ಭಾರತೀಯರು ಯಾರು ಸ್ಥಾನ ಪಡೆದಿಲ್ಲ.
- ಬರ್ನಾರ್ಡ್ ಅರ್ನಾಲ್ಟ್ (ಎಲ್‌ವಿಎಂಹೆಚ್) - 207 ಬಿಲಿಯನ್ ಡಾಲರ್
- ಎಲೋನ್ ಮಸ್ಕ್ (ಟೆಸ್ಲಾ, ಸ್ಪೇಸ್ ಎಕ್ಸ್, ಎಕ್ಸ್) - 203 ಬಿಲಿಯನ್ ಡಾಲರ್
- ಜೆಫ್ ಬೆಜೋಸ್ (ಅಮೇಜಾನ್) - 199 ಬಿಲಿಯನ್ ಡಾಲರ್
- ಮಾರ್ಕ್ ಜುಕರ್‌ಬರ್ಗ್ (ಮೆಟಾ) - 166 ಬಿಲಿಯನ್ ಡಾಲರ್
- ಲ್ಯಾರಿ ಪೇಜ್ (ಗೂಗಲ್) - 153 ಬಿಲಿಯನ್ ಡಾಲರ್
- ಬಿಲ್ ಗೇಟ್ಸ್ (ಮೈಕ್ರೋಸಾಫ್ಟ್) - 152 ಬಿಲಿಯನ್ ಡಾಲರ್
- ಸೆರ್ಗೆ ಬ್ರಿನ್ (ಅಲ್ಪಾಬೆಟ್) - 145 ಬಿಲಿಯನ್ ಡಾಲರ್
- ಸ್ಟೀವ್ ಬಾಲ್ಮರ್ (ಮೈಕ್ರೋಸಾಫ್ಟ್) - 144 ಬಿಲಿಯನ್ ಡಾಲರ್
- ವಾರೆನ್ ಬಫೆಟ್ - 137 ಬಿಲಿಯನ್ ಡಾಲರ್
- ಲ್ಯಾರಿ ಎಲಿಸನ್ (ಒರಾಕಲ್) - 132 ಬಿಲಿಯನ್ ಡಾಲರ್



Click it and Unblock the Notifications
