Latest Updates
-
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ!
ಸಮುದ್ರ ತೀರದಲ್ಲಿ ಧ್ಯಾನ ಮಾಡುತ್ತಿದ್ದ ನಟಿಯನ್ನ ಕೊಚ್ಚಿಕೊಂಡು ಹೋದ ರಕ್ಕಸ ಅಲೆ: ವೀಡಿಯೋ ವೈರಲ್
ಅಲ್ಲಾ ಕೆಲವರಿಗೆ ಎಷ್ಟು ಹೇಳಿದರು ವೈರಲ್ ಹುಚ್ಚಿಗಾ ಅಥವಾ ಅತಿಯಾದ ಆತ್ಮವಿಶ್ವಾಸನಾ ಗೊತ್ತಿಲ್ಲ ಪ್ರಾಣ ಕಳೆದುಕೊಂಡು ಬಿಡುತ್ತಾರೆ, ಇಲ್ಲಿಯೂ ಅಷ್ಟೇ ನಟಿಯೊಬ್ಬರು ಸಮುದ್ರ ದಡದಲ್ಲಿ ಯೋಗಾಭ್ಯಾಸ ಮಾಡುವಾಗ ದೊಡ್ಡ ಅಲೆಬಂದು ಅವರನ್ನು ಕೊಚ್ಚಿಕೊಂಡು ಹೋಗಿದೆ, ಅಲ್ಲಿದ್ದವರು ನೋಡು ನೀಡುತ್ತಿದ್ದಂತೆ ಕೊಚ್ಚಿ ಹೋಗಿದ್ದಾರೆ, ಅವರನ್ನು ಉಳಿಸಲು ಅಲ್ಲಿದ್ದ ಗಾರ್ಡ್‌ಗಳಿಗೂ ಸಾಧ್ಯವಾಗಿಲ್ಲ.

ಇದೀಗ ಆ ಭಯಾನಕ ವೀಡಿಯೋ ವೈರಲ್ ಆಗುತ್ತಿದೆ
ಈ ಘಟನೆ ನಡೆದಿರುವುದು ನವೆಂಬರ್ 29ಕ್ಕೆ, ಆ ವೀಡಿಯೋದಲ್ಲಿ ಅವರು ಕಡೆ ಕೂತು ಪ್ರಾಣಯಾಮ ಮಾಡುತ್ತಿದ್ದಾರೆ. ಸಮುದ್ರದ ದಡದಲ್ಲಿ ಕೂತು ಧ್ಯಾನ ಮಾಡಬೇಕು ಅಥವಾ ಕೂತು ಆ ಅನಂತ ಸಮುದ್ರವನ್ನುಕಣ್ತುಂಬಿಕೊಳ್ಳಬೇಕು ಎಂಬ ಆಸೆ ಎಲ್ಲರಿಗೂ ಬರುತ್ತದೆ. ಏಕೆಂದರೆ ಸಮುದ್ರವೇ ಹಾಗೆ ಒಂದು ಕಡೆ ನಯನಮನೋಹರ ದೃಶ್ಯ, ಅದೇ ಸಮುದ್ರ ಭೀಭತ್ಸವೂ ಹೌದು, ಹಾಗಾಗಿ ಅದರ ಸೌಂದರ್ಯವನ್ನು ಕಣ್ತುಂಬಿಕೊಳ್ಳು ಕೂರುವಾಗ ಅಪಾಯದ ಎಚ್ಚರವೂ ಇಲ್ಲದಿದ್ದರೆ ಈ ರೀತಿಯ ಘಟನೆ ಸಂಭವಿಸುವುದು.
ಆ ವೀಡಿಯೋದಲ್ಲಿ ನೋಡಬಹುದು, ಅವರು ಕಾರ್‌ನಲ್ಲಿ ಬಂದಿಯುತ್ತಾರೆ, ನಂತರ ಯೋಗಾ ಮ್ಯಾಟ್ ತೆಗೆದು ಯೋಗ ಮಾಡಲು ಸಮುದ್ರದ ದಡದತ್ತ ಹೆಜ್ಜೆ ಹಾಕುತ್ತಾರೆ, ಅದೊಂದು ಕಲ್ಲು ಕಾಣುತ್ತೆ, ಅಲ್ಲಿ ಧ್ಯಾನ ಮಾಡುತ್ತಿರುವಾಗಲೇ ದೊಡ್ಡದೊಂದು ಅಲೆ ಅವರತ್ತ ನುಗ್ಗಿ ಬಂದು ಹಾಗೆಯೇ ಅವರನ್ನು ಕೊಂಡೊಯ್ಯದ್ದು ಬಿಡುತ್ತೆ. ಅವರು ಸಮುದ್ರ ಅಲೆಯಲ್ಲಿ ಕೊಚ್ಚಿಕೊಂಡು ಹೋಗುವುದು ಆ ದೃಶ್ಯದಲ್ಲಿ ಕಾಣಬಹುದು.
Hình ảnh cuối của nữ du khách tập yoga trên mỏm đá trước khi bị sóng cuốn
— South of Vietnam (@vincent31473580) December 1, 2024
Một nữ du khách Nga 24 tuổi đã bị sóng cuốn xuống biển khi tập yoga trên mỏm đá tại điểm ngắm cảnh Lad Koh, đảo Koh Samui, Thái Lan vào ngày 29-11. pic.twitter.com/7VYbwevCzM
ಕಳೆದ ವರ್ಷ ಸಮುದ್ರದಲ್ಲಿ ಆಟವಾಡುತ್ತಿದ್ದಾಗ ಪತ್ನಿ ಕೊಚ್ಚಿ ಹೋಗಿದ್ದು ನೆನಪಿದೆಯೇ?
ಅವರು ಕುಟುಂಬ ಸಮೇತ ಸಮುದ್ರದ ಅಲೆಗಳ ಜೊತೆ ಆಟವಾಡಿ ಸಮಯ ಕಳೆದು ಹೋಗೋಣ ಅಂತ ಬಂದಿದ್ದರು, ಮಕ್ಕಳು ವೀಡಿಯೋ ಮಾಡ್ತಾ ಇದ್ದರು, ಈ ಮಹಿಳೆ ಪತಿ ಜೊತೆ ಕೂತಿದ್ದರು ಅಷ್ಟರಲ್ಲಿ ಬಂದ ಜೋರು ಅಲೆಗೆ ಮಹಿಳೆಕೊಚ್ಚಿಕೊಂಡು ಹೋದರು, ಸಂತೋಷದಿಂದ ಸಮಯ ಕಳೆಯಲು ಬಂದ ಕುಟುಂಬ ದುಃಖ ಮಡುವಿನಲ್ಲಿ ಮುಳುಗಿತು.
ಸಮುದ್ರಕ್ಕೆ ಹೋಗುವಾಗ ಯಾವಾಗಲೂ ಎಚ್ಚರಿಕೆವಹಿಸಲೇಬೇಕು
ಸಮುದ್ರದ ಅಲೆಗಳ ನರ್ತನೆ ನೋಡುವಾಗ ಕೆಲವರಿಗೆ ತುಂಬಾನೇ ಜೋಶ್, ಕೋಸ್ಟಲ್ ಗಾರ್ಡ್‌ಗಳು ಅತ್ತ ಕಡೆ ಹೋಗಬೇಡಿ ಎಂದು ವಿಶಲ್ ಹಾಕುತ್ತಿದ್ದರೂ ಲೆಕ್ಕಿಸದೆ ಮುಂದೆ ಮುಂದೆ ಹೋಗುತ್ತಾರೆ, ಕೊನೆಗೆ ಏನಾದರೂ ಅಪಾಯ ಉಂಟಾದಾಗ ಛೇ ಕೈಯಾರೆ ತಮ್ಮ ಸಾವನ್ನು ತಂದುಕೊಂಡರಲ್ಲ ಎಂದು ನೋವಾಗುವಂತೆ ಮಾಡಿಕೊಳ್ಳುತ್ತಾರೆ, ಮನೆಯವರನ್ನು, ಅವರ ಆಪ್ತರನ್ನು ದುಃಖಕ್ಕೆ ದೂಡುತ್ತಾರೆ.
ಮಕ್ಕಳನ್ನು ಕರೆದುಕೊಂಡು ಸಮುದ್ರ ಬಳಿ ಹೋದಾಗ ಇನ್ನಷ್ಟು ಜಾಗ್ರತೆವಹಿಸಬೇಕು
ಜನರು ಹೆಚ್ಚಿರುವ ಕಡೆ ಅಲ್ಲದೆ ಸುರಕ್ಷತೆ ಅನಿಸುವ ಕಡೆ ಇರಬೇಕು, ಈಜು ಗೊತ್ತಿದ್ದರೂ ಸಮುದ್ರದಲ್ಲಿ ಈಜಿ ಗೊತ್ತಿರಲ್ಲ, ಹಾಗಾಗಿ ಈ ಬಗ್ಗೆ ಕೂಡ ಜಾಗ್ರತೆವಹಿಸಬೇಕು, ರೀಲ್ಸ್ ಹುಚ್ಚು, ಅತಿಯಾದ ಆತ್ಮವಿಶ್ವಾಸ ಇದರಿಂದಾಗಿ ಪ್ರಾಣವನ್ನು ಕಳೆದುಕೊಳ್ಳುತ್ತಾರೆ.
ಅಮವಾಸ್ಯೆ ಸಮಯದಲ್ಲಿ ಸಮುದ್ರ ಬಳಿ ಹೋಗಬಾರದು ಅಂತಾರೆ
ಅಮವಾಸ್ಯೆ ಸಮಯದಲ್ಲಿ ಸಮುದ್ರದ ಅಲೆಗಳ ರಭಸ ಅಧಿಕವಿರುತ್ತದೆ, ಈ ಸಮಯದಲ್ಲಿ ಸಮುದ್ರದ ಬಳಿ ಹೋಗಬಾರದು ಎಂದು ಹೇಳಲಾಗುವುದು. ಇನ್ನು ಮಳೆ- ಗಾಳಿಯ ರಭಸ ಅಧಿಕವಿರುವ ಸಮಯದಲ್ಲಿಯೂ ಸಮುದ್ರದ ತೀರಕ್ಕೆ ಹೋಗದಿರುವುದು ಸುರಕ್ಷಿತ.
ಬರೀ ಸಮುದ್ರ ಅಂತಲ್ಲ, ನದಿ, ಜಲಪಾತ ಇಂಥ ಸ್ಥಳಗಳಲ್ಲಿ ಸಾಕಷ್ಟು ಮುನ್ನಚ್ಚರಿಕೆವಹಿಸಬೇಕು, ಸ್ವಲ್ಪ ಎಚ್ಚರಿಕೆ ತಪ್ಪಿದರೂ ಅವಘಡ ತಪ್ಪಿದ್ದಲ್ಲ.



Click it and Unblock the Notifications











