Latest Updates
-
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ! -
ಸಕ್ಕರೆ ಬೆಲೆ ಏರಿಕೆ ಬಿಸಿ: ಹಬ್ಬದ ಸಿಹಿ ಬಜೆಟ್ ಉಳಿಸಲು ಇಲ್ಲಿದೆ 300 ರೂಪಾಯಿಯ ಸ್ಮಾರ್ಟ್ ಟಿಪ್ಸ್ -
ವರಮಹಾಲಕ್ಷ್ಮೀ ವ್ರತದ ಶಾಸ್ತ್ರೋಕ್ತ ವಿಧಾನ ಮತ್ತು ಪೂಜಾ ನಿಯಮಗಳು -
ವರಮಹಾಲಕ್ಷ್ಮೀ ಹಬ್ಬದ ಸಂಭ್ರಮಕ್ಕೆ ಬೆಲೆ ಏರಿಕೆಯ ಬಿಸಿ: ಕೆ.ಆರ್. ಮಾರುಕಟ್ಟೆಯಲ್ಲಿ ಗಗನಕ್ಕೇರಿದ ಹೂವು-ಹಣ್ಣುಗಳ ದರ -
BWF ವಿಶ್ವ ಚಾಂಪಿಯನ್ಷಿಪ್: ದೆಹಲಿಯಲ್ಲಿ ಭಾರತೀಯ ಆಟಗಾರರ ಅಬ್ಬರ, ಅಭಿಮಾನಿಗಳಿಗೆ ಇಲ್ಲಿದೆ ವಿಶೇಷ ಗೇಮ್ ಪ್ಲಾನ್! -
ವರಮಹಾಲಕ್ಷ್ಮಿ ಹಬ್ಬದ ದಿನಾಂಕದ ಗೊಂದಲ: ಆಗಸ್ಟ್ 21 ಅಥವಾ 28? ಇಲ್ಲಿದೆ ಸ್ಪಷ್ಟ ಮಾಹಿತಿ! -
ವಿಶ್ವ ಸೊಳ್ಳೆ ದಿನ: ಮಳೆಗಾಲದಲ್ಲಿ ಬಾಲ್ಕನಿಯಲ್ಲಿ ಯೋಗ ಮಾಡುವಾಗ ಸೊಳ್ಳೆ ಕಡಿತದಿಂದ ಪಾರಾಗುವುದು ಹೇಗೆ? -
BWF ವರ್ಲ್ಡ್ಸ್ ದೆಹಲಿ: ಕ್ಯೂನಲ್ಲಿ ನಿಂತು ಸುಸ್ತಾಗಿದ್ದೀರಾ? ಈ 8 ನಿಮಿಷದ ವ್ಯಾಯಾಮ ನಿಮ್ಮ ನೋವನ್ನು ಮರೆಸುತ್ತೆ!
ಶಾರ್ಟ್ ಡ್ರೆಸ್ ನಲ್ಲಿ ಹಾಟ್ ಆಗಿ ಕಾಣಿಸಿಕೊಂಡ ನಟಿ ರಮ್ಯಾ ಡಾನ್ಸ್ ವಿಡಿಯೋ ವೈರಲ್!
ಮೋಹಕ ತಾರೆ ರಮ್ಯಾ ಒಂದು ಕಾಲದಲ್ಲಿ ಕನ್ನಡದ ಟಾಪ್ ಹಿರೋಯಿನ್ ಆಗಿ ಮೆರೆದವರು. ಎಲ್ಲಾ ಟಾಪ್ ಹೀರೋಗಳ ಜೊತೆಗೆ ತೆರೆ ಹಂಚಿಕೊಂಡು ಕನ್ನಡ ಸಿನಿ ದುನಿಯಾಕ್ಕೆ ಸಾಕಷ್ಟು ಉತ್ತಮ ಸಿನಿಮಾಗಳನ್ನು ನೀಡಿದ್ದಾರೆ. ಹೀಗಿದ್ದ ರಮ್ಯಾ ಕೆಲ ವರ್ಷಗಳ ಹಿಂದಿನಿಂದ ಸಿನಿ ದುನಿಯಾದಿಂದ ದೂರ ಉಳಿದಿದ್ರು. ಯಾವುದೇ ಸಿನಿಮಾಗಳಲ್ಲೂ ಆಕೆ ಅಭಿನಯ ಮಾಡಿರ್ಲಿಲ್ಲ.
ಕೆಲ ಸಮಯ ಅವರು ರಾಜಕೀಯದಲ್ಲೂ ಸಕ್ರೀಯರಾಗಿದ್ರು. ಹೀಗಾಗಿ ಇನ್ನೇನು ಬಣ್ಣದ ಲೋಕಕ್ಕೆ ರಮ್ಯಾ ಗುಡ್ ಬಾಯ್ ಹೇಳಿದ್ರು ಅನ್ನೋವಾಗ ಮತ್ತೆ ಸಿನಿಮಾಗಳತ್ತ ಮುಖ ಮಾಡಿದ್ದಾರೆ. ಅಷ್ಟಕ್ಕು ರಮ್ಯಾ ಮುಂದಿನ ಸಿನಿಮಾ ಯಾವುದು? ಯಾವೆಲ್ಲಾ ಸಿನಿಮಾ ಆಫರ್ ಗಳು ಅವರ ಕೈನಲ್ಲಿದೆ ಅನ್ನೋದನ್ನು ತಿಳಿದುಕೊಳ್ಳೋಣ. ಅದಕ್ಕೂ ಮೊದಲೂ ರಮ್ಯಾ ಅವರ ವೈರಲ್ ಆಗಿರೋ ವಿಡಿಯೋ ಬಗ್ಗೆ ತಿಳಿದುಕೊಳ್ಳೋಣ.

ವೈರಲ್ ಆಯ್ತು ರಮ್ಯಾ ಹಾಟ್ ವಿಡಿಯೋ!
ಕೆಲ ಸಮಯದಿಂದ ರಮ್ಯಾ ಮತ್ತೆ ಆಕ್ಟೀವ್ ಆಗಿದ್ದು, ಆಗಾಗ್ಗೆ ತಮ್ಮ ಹೊಸ ಹೊಸ ಫೋಟೋ ಹಾಗೂ ವಿಡಿಯೋಗಳನ್ನು ಪೋಸ್ಟ್ ಮಾಡ್ತಿರ್ತಾರೆ. ಇತ್ತೀಚಿಗಷ್ಟೇ ಬಿಳಿ ಬಣ್ಣದ ಶರ್ಟ್ ನಲ್ಲಿ ಕಣ್ಣು ಕುಕ್ಕುವಂತೆ ಪೋಸ್ ಕೊಟ್ಟಿದ್ದ ರಮ್ಯಾ ಇದೀಗ ಮತ್ತೊಂದು ವಿಡಿಯೋವನ್ನು ತನ್ನ ಇನ್ಸ್ಟಾ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಈ ವಿಡಿಯೋದಲ್ಲಿ ಬ್ಲಾಕ್ ಟಾಪ್ ಹಾಗೂ ಬ್ಲಾಕ್ ಶಾರ್ಟ್ಸ್ ಹಾಕಿಕೊಂಡಿರುವ ರಮ್ಯಾ ಕನ್ನಡಿ ಮುಂದೆ ಬಂದು ಕುಣಿದಿದ್ದಾರೆ. ಕೈಯಲ್ಲಿ ಮೊಬೈಲ್ ಹಿಡ್ಕೊಂಡು ಕನ್ನಡಿ ಮುಂದೆ ಒಂದು ಹಿಂದಿ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಈ ವಿಡಿಯೋ ಪೋಸ್ಟ್ ಆಗ್ತಿದ್ದಂತೆ ಲಕ್ಷ ಲಕ್ಷ ವೀಕ್ಷಣೆಯನ್ನು ಪಡೆದುಕೊಂಡಿದೆ.
ಜಿಮ್ ನಲ್ಲಿ ಬೆವರಿಳಿಸ್ತಿದ್ದಾರಾ ರಮ್ಯಾ?
ಸಿನಿಮಾ ರಂಗದಿಂದ ಹೊರ ಬಂದ ನಂತರ ರಮ್ಯಾ ಅವರು ಕೊಂಚ ದಪ್ಪ ಆಗಿದ್ರು. ಆದ್ರೆ ಇದೀಗ ಅವರು ಮತ್ತೆ ಜಿಮ್ ಗೆ ಹೋಗ್ತಿದ್ದಾರಾ ಅನ್ನೋ ಅನುಮಾನ ಹುಟ್ಟಿಸಿದೆ. ಯಾಕಂದ್ರೆ ಇತ್ತೀಚಿನ ಫೋಟೋಗಳಲ್ಲಿ ರಮ್ಯಾ ಕೊಂಚ ಸಣ್ಣ ಆದಂತೆ ಕಾಣಿಸ್ತಿದ್ದು, ಅಷ್ಟೇ ಅಲ್ಲದೇ ವೈರಲ್ ಆದ ವಿಡಿಯೋದಲ್ಲಿ ಅವರು ಧರಿಸಿರುವ ಬಟ್ಟೆ ನೋಡಿದ್ರೆ ಜಿಮ್ ನ ಔಟ್ ಫಿಟ್ ತರಾನೇ ಕಾಣಿಸ್ತಿದೆ.
ಎಷ್ಟೋ ವರ್ಷಗಳ ನಂತರ ಮತ್ತೆ ಸಿನಿಮಾಕ್ಕೆ ಕಮ್ ಬ್ಯಾಕ್ ಆದ ರಮ್ಯಾ!
ರಮ್ಯಾ ರಾಜಕೀಯಕ್ಕೆ ಹೋಗಿದ್ದನ್ನು ನೋಡಿ ಇನ್ನೇನು ಈ ನಟಿ ಸಿನಿಮಾ ಕಡೆಗೆ ಬರೋದೇ ಇಲ್ವೇನೂ ಅಂತ ಅಭಿಮಾನಿಗಳು ಬೇಸರಗೊಂಡಿದ್ರು. ಆದ್ರೆ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಅನ್ನೋ ಸಿನಿಮಾ ಮೂಲಕ ಮತ್ತೆ ರಮ್ಯಾ ಬಣ್ಣದ ಲೋಕಕ್ಕೆ ಎಂಟ್ರಿ ಕೊಡ್ತಿದ್ದಾರೆ.
ಜುಲೈ 10 ರಂದು ಈ ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು, ರಮ್ಯಾ ನ್ಯೂ ಲುಕ್ ಎಲ್ಲರಿಗೂ ಇಷ್ಟ ಆಗಿದೆ. ಹಲವು ವರ್ಷಗಳ ನಂತರ ಮತ್ತೆ ರಮ್ಯಾ ಸ್ಕ್ರೀನ್ ಮೇಲೆ ಬರ್ತಿರೋದ್ರಿಂದ ರಮ್ಯಾ ರನ್ನು ತೆರೆ ಮೇಲೆ ನೋಡೋದಕ್ಕೆ ಅಭಿಮಾನಿಗಳು ಕಾತರರಾಗಿದ್ದಾರೆ. ಇನ್ನೂ ಈ ಸಿನಿಮಾ ಜುಲೈ 21 ರಂದು ರಿಲೀಸ್ ಆಗಲಿದ್ದು, ರಮ್ಯಾ ಕಮ್ ಬ್ಯಾಕ್ ಮಾಡಿರೋ ಚಿತ್ರ ಹೇಗಿದೆ ಅನ್ನೋದನ್ನು ಕಾದು ನೋಡ್ಬೇಕಿದೆ.
ಸಿನಿಮಾ ಪ್ರೊಡ್ಯೂಸ್ ಮಾಡೋದಕ್ಕೆ ಹೊರಟ ರಮ್ಯಾ!
ಇನ್ಮುಂದೆ ರಮ್ಯಾ ಸಿನಿಮಾಗಳಲ್ಲಿ ಆಕ್ಟ್ ಮಾಡೋ ಜೊತೆ ಜೊತೆಗೆ ಸಿನಿಮಾ ಪ್ರೊಡ್ಯೂಸ್ ಕೂಡ ಮಾಡಲಿದ್ದಾರೆ. ಆಪಲ್ ಬಾಕ್ಸ್ ಸ್ಟೂಡಿಯೋ ಎಂಬ ಪ್ರೊಡಕ್ಷನ್ ಹೌಸ್ ಅನ್ನು ರಮ್ಯಾ ಲಾಂಚ್ ಮಾಡಿದ್ದಾರೆ. ಈ ಪ್ರೊಡಕ್ಷನ್ ಹೌಸ್ ನ ಮೊದಲ ಪ್ರಾಜೆಕ್ಟ್ ಆಗಿ 'ಸ್ವಾತಿ ಮುತ್ತಿನ ಮಳೆ ಹನಿಯೇ' ಸಿನಿಮಾ ತಯಾರಾಗ್ತಿದೆ.
ಸಿನಿ ರಂಗದಲ್ಲಿ ಇಪತ್ತು ವರ್ಷಗಳ ಸುದೀರ್ಘ ಪಯಣ!
ಒರ್ವ ನಟಿಯಾಗಿ ಸಿನಿ ರಂಗದಲ್ಲಿ ಇಪ್ಪತ್ತು ವರ್ಷಗಳ ಕಾಲ ಉಳಿದುಕೊಳ್ಳೋದಂದ್ರೆ ಸಾಮಾನ್ಯದ ಮಾತಲ್ಲ. ರಮ್ಯಾ ಅತ್ಯುತ್ತಮ ಸಿನಿಮಾಗಳನ್ನು ಕೊಟ್ಟು ಯಶಸ್ವಿಯಾಗಿರೋದು ಎಲ್ಲರಿಗೂ ಗೊತ್ತಿದೆ. ಅದೇ ರೀತಿ ಅವರು ಈ ಇಪ್ಪತ್ತು ವರ್ಷಗಳ ಪಯಣದಲ್ಲಿ ಅನೇಕ ಏಳು-ಬೀಳುಗಳನ್ನು ಕೂಡ ಎದುರಿಸಿದ್ದಾರೆ. ಆದ್ರೂ ಕೂಡ ದೈರ್ಯಗೆಡದೇ ಮತ್ತೆ ಪ್ರಯತ್ನ ಪಟ್ಟು ಯಶಸ್ವಿಯಾಗಿದ್ದಾರೆ.
ಇದೀಗ ಮತ್ತೆ ಸಿನಿ ದುನಿಯಾಕ್ಕೆ ಎಂಟ್ರಿ ಕೊಟ್ಟಿರುವ ರಮ್ಯಾಗೆ ಆಲ್ ದಿ ಬೆಸ್ಟ್ ಹೇಳೋಣ.



Click it and Unblock the Notifications