Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
33 ವರ್ಷದ ನಟಿಯನ್ನೇ ಬಲಿಪಡೆದ ಕಪ್ಪೆ..! ಅಸಲಿಗೆ ಆಗಿದ್ದೇನು?
ಈ ಭೂಮಿ ಮೇಲೆ ಎಷ್ಟೊಂದು ವಿಚಿತ್ರ ಜೀವಿಗಳು, ವಿಷಕಾರಿ ಜೀವಿಗಳು ಇವೆ ಎಂಬುದನ್ನು ನಾವು ಊಹಿಸಿರಲು ಸಹ ಸಾಧ್ಯವಿಲ್ಲ. ಆಗಾಗ ಹೊಸ ಹೊಸ ಪ್ರಾಣಿಗಳು, ಅವುಗಳ ವಿಶೇಷ ಅಂಶಗಳು ತಿಳಿದು ಬರುತ್ತಲೇ ಇರುತ್ತದೆ. ಅದರಲ್ಲೂ ಅಮೇಜಾನ್ ಫಾರೆಸ್ಟ್ ಎಂಬುದು ಇಂತಹ ನಿಗೂಢಗಳನ್ನೇ ಹೊದ್ದು ಮಲಗಿದ ಪ್ರದೇಶವಾಗಿದೆ.
ಅಲ್ಲಿ ಕಾಣಸಿಗುವ ಹಲವು ರೀತಿ ಪ್ರಾಣಿ ಪ್ರಬೇಧಗಳು ವಿಷಕಾರಿಯೂ, ವಿಭಿನ್ನತೆಗೂ ಸಾಕ್ಷಿಯಾಗುತ್ತದೆ. ಹಾಗೆ ಇಲ್ಲೊಂದು ಕಪ್ಪೆ ಈಗ ನಟಿಯೊಬ್ಬರ ಪ್ರಾಣ ತೆಗೆದ ಕಾರಣಕ್ಕೆ ಸುದ್ದಿಯಾಗಿದೆ. ನಟಿ ಈ ಕಪ್ಪೆಯ ವಿಷದಿಂದ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಮೆಕ್ಸಿಕೋದ ನಟಿ ಕಾಂಬೋದಲ್ಲಿ ನಡೆಯುತ್ತಿದ್ದ ಆಧ್ಯಾತ್ನಿಕ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದರು. ಈ ಕಾರ್ಯಕ್ರಮದಲ್ಲಿ ಅವರಿಗೆ ಕಪ್ಪೆ ವಿಷ ನೀಡಲಾಗಿತ್ತು ಎನ್ನಲಾಗಿದೆ.

ಕಾಂಬೋ ಎಂಬ ದಕ್ಷಿಣ ಅಮೆರಿಕಾದ ಆಧ್ಯಾತ್ಮಿಕ ಶುದ್ಧೀಕರಣ ಸಮಾರಂಭದಲ್ಲಿ ನಟಿ ಭಾಗವಹಿಸಿದರು. ಈ ಆಚರಣೆಯು ಕಪ್ಪೆ ವಿಷವನ್ನು ಸೇವಿಸುವುದನ್ನು ಒಳಗೊಂಡಿರುತ್ತದೆ. ಈ ಕಾರ್ಯಕ್ರಮದಲ್ಲಿ ಶುದ್ಧೀಕರಣದ ಭಾಗವಾಗಿ ಈ ಕಪ್ಪೆಯ ನೀರನ್ನು ಎಲ್ಲರಿಗೂ ನೀಡಲಾಗಿತ್ತಂತೆ. ಆದ್ರೆ ಈ ಕಪ್ಪೆ ನೀರು ತುಂಬಾನೆ ವಿಷಕಾರಿ.
ಕಪ್ಪೆ ನೀರು ಸೇವಿಸಿದ ಆಕೆಗೆ ತೀವ್ರ ಅನಾರೋಗ್ಯ ಕಾಡಿತ್ತು, ಆಕೆ ವಾಂತಿ, ಭೇದಿಯ ಕಾರಣಕ್ಕೆ ಆಸ್ಪತ್ರೆಗೆ ದಾಖಲಾಗಬೇಕಾಯಿತು. ಆದರೆ ಆಸ್ಪತ್ರೆಯಲ್ಲಿ ಆಕೆ ಚಿಕಿತ್ಸೆ ಫಲಿಸದೆ ಮೃತಪಟ್ಟಿರುವುದು ತಿಳಿದುಬಂದಿದೆ. ಘಟನೆ ಬಳಿಕ ಈ ಕಾರ್ಯಕ್ರಮದ ರುವಾರಿಯಾಗಿದ್ದ ಷಾಮನ್ ತಲೆಮರೆಸಿಕೊಂಡಿದ್ದು ಪೊಲೀಸರು ಆತನಿಗಾಗಿ ಹುಡುಕಾಟ ನಡೆಸಿದ್ದಾರೆ.
33 ವರ್ಷದ ನಟಿ ಮಾರ್ಸೆಲಾ ಅಲ್ಕಾಜರ್ ರೋಡ್ರಿಗಸ್ ಅವರು ದಕ್ಷಿಣ ಅಮೆರಿಕಾದ ಸಾಂಪ್ರದಾಯಿಕ ಕಾಂಬೋ ಆಚರಣೆಯಲ್ಲಿ ಭಾಗವಹಿಸಿದರು. ಈ ಕಾರ್ಯಕ್ರಮದಲ್ಲಿ ಕಪ್ಪೆಯ ನೀರು ನೀಡಿ ಇದನ್ನು ಕುಡಿದರೆ ದೇಹದಲ್ಲಿನ ಗಾಯಗಳು, ದೇಹ ಶುದ್ಧಿಗೆ ಸಹಕಾರಿಯಾಗುತ್ತದೆ ಎಂದು ನಂಬಿಸಲಾಗುತ್ತದೆ. ಈ ವಿಷಕಾರಿ ಕಪ್ಪೆ ಅಮೇಜಾನ್ ಕಾಡುಗಳಲ್ಲಿ ಮಾತ್ರವೇ ಕಂಡುಬರುತ್ತದೆ. ಹಾಗೆ ಇದನ್ನು ಹಿಡಿದು ತಂದು ನೀರಿನಲ್ಲಿ ಬಿಟ್ಟಿರುತ್ತಾರೆ.
ಮೊದಲು 1 ಲೀಟರ್ ಕಪ್ಪೆ ನೀರನ್ನು ಕುಡಿಯಲು ಹೇಳಲಾಗುತ್ತದೆ. ಇದಾದ ಬಳಿಕ ದೇಹದ ಮೇಲೆ ಸಣ್ಣದಾಗಿ ತೂತು ಮಾಡಲಾಗುತ್ತದೆ. ಅದಕ್ಕೆ ಕಪ್ಪೆಯ ಲೋಳೆಯನ್ನು ಹಚ್ಚಿ ಪ್ರಾರ್ಥನೆ ಮಾಡಲಾಗುತ್ತದೆ. ಈ ನಟಿಗೂ ಕೂಡ ಇದೇ ವಿಧಾನದಲ್ಲಿ ನೀರು ಕುಡಿಸಿ ಅನಂತರ ಲೋಳೆಯನ್ನು ಕೈ ಮೇಲೆ ಹಾಕಲಾಗಿತ್ತು. ಆದ್ರೆ ಇದರಿಂದ ಆಕೆ ಆಸ್ಪತ್ರೆ ಸೇರಬೇಕಾಯಿತು.
ಈ ನೀರು ಕುಡಿದ ತಕ್ಷಣ ಆಕೆಯಲ್ಲಿ ರಕ್ತದೊಡ್ಡತ ಹೆಚ್ಚಾಗಿತ್ತು, ವಿಷ ನೇರವಾಗಿ ಹೃದಯ ಮತ್ತು ಶ್ವಾಸಕೋಶದ ಮೇಲೆ ಪರಿಣಾಮ ಬೀರಲು ಆರಂಭಿಸಿತ್ತು. ಆಕೆಯನ್ನು ಆಸ್ಪತ್ರೆಗೆ ಸೇರಿಸುವಾಗ ಆಕೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಳು. ಮೂರ್ಛೆ, ತಲೆತಿರುಗುವಿಕೆ, ಊದಿಕೊಂಡ ತುಟಿಗಳು ಮತ್ತು ಮುಖವನ್ನು ಒಳಗೊಂಡಿರುತ್ತದೆ. ಸಾಮಾನ್ಯವಾಗಿ, ರೋಗಲಕ್ಷಣಗಳು ಸುಮಾರು ಅರ್ಧ ಘಂಟೆಯವರೆಗೆ ಇರುತ್ತದೆ. ರಕ್ತಕ್ಕೆ ಈ ವಿಷ ಸೇರಿಕೊಂಡು ಇಡೀ ದೇಹಕ್ಕೆ ಹರಡುತ್ತದೆ.
ಆಕೆ ಆಸ್ಪತ್ರೆಗೆ ಆಗಮಿಸಿದ್ದಾಗ ತಡವಾಗಿತ್ತು. ಚಿಕಿತ್ಸೆಗೆ ಸ್ಪಂಧಿಸದ ಆಕೆಯ ದೇಹದಿಂದ ವಿಷ ಹೊರತೆಗೆಯಲು ಸಾಧ್ಯವಾಗಿರಲಿಲ್ಲ. ಹೀಗಾಗಿ 33 ವರ್ಷದ ನಟಿ ಕಪ್ಪೆಯ ವಿಷಕ್ಕೆ ಬಲಿಯಾದಳು.



Click it and Unblock the Notifications
