Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ನಟ ವಿಜಯ್-ಸಂಗೀತಾ ದಾಂಪತ್ಯದಲ್ಲಿ ಬಿರುಗಾಳಿ, ವಿಚ್ಛೇದನಕ್ಕೆ ಅರ್ಜಿ: ನಟನ ಒಟ್ಟು ಆಸ್ತಿ ಎಷ್ಟಿದೆ ಗೊತ್ತಾ?
ದಳಪತಿ ವಿಜಯ್ ಸಿನಿಮಾ ಮಾತ್ರವಲ್ಲದೆ ಈಗ ರಾಜಕೀಯದಿಂದಲೂ ಸುದ್ದಿಯಾಗುತ್ತಿರುವ ನಟ. ತಮಿಳುನಾಡು ರಾಜಕೀಯದಲ್ಲಿ ಹೊಸ ಅಲೆ ಸೃಷ್ಟಿಸಲು ಸಿದ್ಧತೆ ನಡೆಸಿದ್ದಾರೆ. ಆದ್ರೆ ಈಗ ಅವರ ದಾಂಪತ್ಯ ವಿಚಾರದಲ್ಲಿ ದೊಡ್ಡ ಬಿರುಗಾಳಿ ಎದ್ದಿದೆ. ನಟ ವಿಜಯ್ ಪತ್ನಿ ಸಂಗೀತಾ ಸೊರ್ನಲಿಂಗಂ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಇದು ತಮಿಳುನಾಡು ರಾಜಕೀಯ ಹಾಗೆ ಚಿತ್ರರಂಗದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.
25 ವರ್ಷಗಳ ಸುದೀರ್ಘ ದಾಂಪತ್ಯದ ನಂತರ ವಿಜಯ್ ಪತ್ನಿ ಈ ನಿರ್ಧಾರಕ್ಕೆ ಬಂದಿರುವುದು ಹಾಗೆ ವಿಜಯ್ ಕುರಿತಾಗಿ ಹಲವು ರೀತಿ ಆರೋಪ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಈ ವಿಚ್ಛೇದನ ಅರ್ಜಿಯು ಪ್ರಸ್ತುತ ಚೆಂಗಲ್ಪಟ್ಟು ಜಿಲ್ಲಾ ನ್ಯಾಯಾಲಯದಲ್ಲಿ ಬಾಕಿ ಇದೆ. ವಿಶೇಷ ವಿವಾಹ ಕಾಯ್ದೆ, 1954 ರ ಸೆಕ್ಷನ್ 27(1)(ಎ), (ಬಿ) ಮತ್ತು (ಡಿ) ಅಡಿಯಲ್ಲಿ ಅವರ ವಿವಾಹವನ್ನು ವಿಸರ್ಜಿಸುವಂತೆ ಅರ್ಜಿಯಲ್ಲಿ ಕೋರಲಾಗಿದೆ.

ವಿಚ್ಛೇದನದ ಜೊತೆಗೆ ಅರ್ಜಿಯಲ್ಲಿ ಶಾಶ್ವತ ಜೀವನಾಂಶ, ನಿವಾಸ ಹಕ್ಕುಗಳು ಮತ್ತು ಗೌಪ್ಯತೆಯನ್ನು ರಕ್ಷಿಸಲು ವಿಚಾರಣೆಯನ್ನು ರಹಸ್ಯವಾಗಿ ನಡೆಸಬೇಕೆಂದು ವಿನಂತಿಸಲಾಗಿದೆ. 2021ರಿಂದ ಇಬ್ಬರ ದಾಂಪತ್ಯದಲ್ಲಿ ಸಮಸ್ಯೆಗಳು ಕಾಣಿಸಿಕೊಳ್ಳಲು ಆರಂಭಿಸಿವು ಎಂದು ಹೇಳಲಾಗಿದೆ. ಸದ್ಯ ತಮಿಳುನಾಡು ಚುನಾವಣೆಯ ಸಂದರ್ಭದಲ್ಲಿ ಈ ವಿಚ್ಛೇದನ ಸಂಬಂಧಿತ ವಿಚಾರ ಹೊರಬಂದಿರುವುದು ಬೇರೊಂದು ಚರ್ಚೆಗೂ ಕೂಡ ಕಾರಣವಾಗಿದೆ.
ರಾಜಕೀಯಕ್ಕೆ ಆಗಮಿಸುವುದಾಗಿ ಘೋಷಿಸಿದ ಬಳಿಕ ನಟ ವಿಜಯ್ ಅವರ ಸುತ್ತ ಹಲವು ರೀತಿಯ ಘಟನೆಗಳು ನಡೆಯುತ್ತಿದೆ. ಇತ್ತೀಚಿಗೆ ಕಾಲ್ತುಳಿತ ಪ್ರಕರಣ ವಿಚಾರಣೆ ಕೂಡ ಅವರು ಎದುರಿಸಿದ್ದರು. ವಿಜಯ್ ಅವರು ಸಿನಿಮಾ ರಂಗದಿಂದ ಆಸ್ತಿಗಳಿಕೆಯಲ್ಲೂ ಮುಂದಿದ್ದಾರೆ. ಹಾಗಾದ್ರೆ ಅವರ ಒಟ್ಟು ಆಸ್ತಿ ಎಷ್ಟು?
ನಟ ದಳಪತಿ ವಿಜಯ್ ತಮಿಳು ಚಿತ್ರರಂಗದ ಪ್ರಭಾವಿ ನಟರಲ್ಲಿ ಒಬ್ಬರು. ರಜನಿಕಾಂತ್, ಕಮಲ್ ಹಸನ್, ನಂತರದಲ್ಲಿ ಪ್ರಭಾವಿ ವ್ಯಕ್ತಿಯೂ ಹೌದು. ಮೂರು ದಶಕಗಳಿಂದ ಚಿತ್ರರಂಗದಲ್ಲಿರುವ ಅವರು ಬಹುದೊಡ್ಡ ಅಭಿಮಾನಿ ಬಳಗ ಹೊಂದಿದ್ದಾರೆ. ಸಿನಿಮಾ ಮಾತ್ರವಲ್ಲದೆ ಅವರು ಸಾರ್ವಜನಿಕವಾಗಿ ಎಲ್ಲಿಯೇ ಕಾಣಿಸಿಕೊಂಡರೂ ಅವರ ಸುತ್ತ ಸಾವಿರಾರು ಮಂದಿ ಕ್ಷಣದಲ್ಲಿ ಸೇರಿರುತ್ತಾರೆ. ಇತ್ತೀಚಿಗೆ ಅವರು ತಮಿಳಿಗ ವೆಟ್ರಿ ಕಳಗಂ (ಟಿವಿಕೆ) ಪಕ್ಷ ಕಟ್ಟಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಸಿದ್ದತೆ ನಡೆಸಿದ್ದಾರೆ.
ನಟ ವಿಜಯ್ ಅವರ ನಿವ್ವಳ ಆಸ್ತಿ ಮೌಲ್ಯವು ಬರೋಬ್ಬರಿ 600 ಕೊಟಿ ರೂಪಾಯಿ ಎಂದು ವರದಿಯಾಗಿದೆ. ಹಾಗೆ ಅವರು ಭಾರತದ ಶ್ರೀಮಂತ ನಟರಲ್ಲಿ ಒಬ್ಬರೆಂದು ಇದು ಗುರುತಿಸಲಿದೆ. ವಿಜಯ್ ಪ್ರತಿ ಚಿತ್ರಕ್ಕೆ 130 ಕೋಟಿ ರೂ.ಗಳಿಂದ 275 ಕೋಟಿ ರೂ.ಗಳವರೆಗೆ ಸಂಭಾವನೆ ಪಡೆಯುತ್ತಾರೆ ಎಂದು ವರದಿಯಾಗಿದೆ. ಅಂದಾಜಿನ ಪ್ರಕಾರ ಅವರು ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್ (2024) ಗಾಗಿ ಸುಮಾರು 200 ಕೋಟಿ ರೂ.ಗಳ ಸಂಭಾವನೆ ಪಡೆದಿದ್ದಾರೆ. ಮುಂಬರುವ ಅವರ ಜನನಾಯಗನ್ ಸಿನಿಮಾಗೆ ಬರೋಬ್ಬರಿ 250ರಿಂದ 275 ಕೋಟಿ ರೂಪಾಯಿಯಷ್ಟು ಸಂಭಾವನೆ ಪಡೆದಿದ್ದಾರೆ ಎಂದು ಹೇಳಲಾಗಿದೆ. ಹಾಗೆ 2024ರಲ್ಲಿ ಅವರು 80 ಕೋಟಿ ರೂಪಾಯಿ ತೆರಿಗೆ ಪಾವತಿಸಿದ್ದಾರೆ.
ಸಂಗೀತಾ ಸೊರ್ನಲಿಂಗಂ ಯಾರು?
ನಟ ವಿಜಯ್ ಅವರನ್ನು ವಿವಾಹವಾಗಿರುವ ಸಂಗೀತಾ ಸೊರ್ನಲಿಂಗಂ ಶ್ರೀಲಂಕಾದಲ್ಲಿ ಜನಿಸಿದವರು. 48 ವರ್ಷದ ಅವರು, ಇಂಗ್ಲೆಂಡ್‌ನಲ್ಲಿ ಬೆಳೆದರು. ಹಾಗೆ ಅವರು ಕೂಡ ಬರೋಬ್ಬರಿ 400 ಕೋಟಿ ರೂಪಾಯಿ ಒಡತಿಯಾಗಿದ್ದಾರೆ. ನ್ಯಾಯಾಲಯದ ದಾಖಲೆಗಳ ಪ್ರಕಾರ ವಿಜಯ್ ಮತ್ತು ಸಂಗೀತಾ ಅವರ ವಿವಾಹವನ್ನು ಮೊದಲು ಜುಲೈ 10 1998 ರಂದು ಯುನೈಟೆಡ್ ಕಿಂಗ್‌ಡಮ್‌ನಲ್ಲಿ ನೋಂದಾಯಿಸಲಾಯಿತು. ಇದರ ನಂತರ ಆಗಸ್ಟ್ 25, 1999 ರಂದು ಚೆನ್ನೈನ ಎಗ್ಮೋರ್‌ನಲ್ಲಿರುವ ರಾಜಾ ಮುತ್ತಯ್ಯ ಮಂದ್ರಂನಲ್ಲಿ ಹಿಂದೂ ಪದ್ಧತಿಗಳ ಪ್ರಕಾರ ಸಾಂಪ್ರದಾಯಿಕ ವಿವಾಹ ಸಮಾರಂಭ ನಡೆಯಿತು.



Click it and Unblock the Notifications
