Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಫಹಾದ್ ಫಾಸಿಲ್ ಬಳಸುವ ಈ ಕೀಪ್ಯಾಡ್ ಮೊಬೈಲ್ ಬೆಲೆ ಎಷ್ಟು ಗೊತ್ತಾ? ನಿಮಗೂ ಕಾದಿದೆ ಅಚ್ಚರಿ!
ಫಫಾ ಈ ಹೆಸರು ಸಿನಿಮಾ ಪ್ರಿಯರಿಗೆ ಚಿರಪರಿಚಿತ ಆದ್ರೆ ಮತ್ತೆ ಕೆಲವರಿಗೆ ಹೊಸ ಪದ. ಫಾಹದ್ ಫಾಸಿಲ್ ಮಲಯಾಳಂ ಚಿತ್ರರಂಗ ಮಾತ್ರವಲ್ಲ ದಕ್ಷಿಣ ಭಾರತದಲ್ಲಿ ಬಹಳ ಫೇಮಸ್. ಅಲ್ಲು ಅರ್ಜುನ್ ನಟನೆಯ ಫುಷ್ಪ ಸಿನಿಮಾದಲ್ಲಿ ಶೇಖಾವತ್ ಆಗಿ ಖಡಕ್ ಪೊಲೀಸ್ ಪಾತ್ರ ನೋಡಿದ ಉತ್ತರ ಭಾರತೀಯರು ಕೂಡ ಅವರ ನಟನೆಗೆ ಫಿದಾ ಆಗಿದ್ದಾರೆ.
ಈಗ ಫಹಾದ್ ಫಾಸಿಲ್ ಸಿನಿಮಾ ಹೊರತು ಪಡಿಸಿ ಬೇರೊಂದು ವಿಚಾರವಾಗಿ ಆನ್‌ಲೈನ್‌ನಲ್ಲಿ ಸುದ್ದಿಯಾಗುತ್ತಿದ್ದಾರೆ. ಆಡಂಬರವಿಲ್ಲದೆ, ಬಹಳ ಸಿಂಪಲ್ ಆಗಿ ಕಾಣಿಸುವ ಫಾಫಾ ಅವರ ಮೊಬೈಲ್ ಕೂಡ ಬಹಳ ಸಿಂಪಲ್ ಆಗಿದೆ. ಆದ್ರೆ ಅದರ ಬೆಲೆ ಕೇಳಿದ್ರೆ ನಿಮಗೆ ಅಚ್ಚರಿ ಜೊತೆಗೆ ಶಾಕ್ ಕೂಡ ಕಾದಿರಲಿದೆ.

ಫಾಸಿಲ್ ಬಳಸುವ ಮೊಬೈಲ್ ಫೋನ್ ಈಗ ತಯಾರಿಕೆಯಲಿಲ್ಲ. ಆದ್ರೆ ಅದು ಲಕ್ಷ ಲಕ್ಷ ಬೆಲೆ ಬಾಳುವಂತದ್ದು, ಹಿಂದಿನ ನೋಕಿಯಾ ಫೋನ್‌ನಂತೆ ಕೀಪ್ಯಾಡ್ ಹೊಂದಿರುವ ಅತ್ಯಂತ ಚಿಕ್ಕ ಗಾತ್ರದ ಫೋನ್ ಇದಾಗಿದ್ದು, ಅದು ಲಕ್ಷಕ್ಕೂ ಹೆಚ್ಚಿನ ಬೆಲೆ ಹೊಂದಿದೆ ಎಂದು ತಿಳಿದು ಮಂದಿ ಶಾಕ್ ಆಗಿದ್ದಾರೆ. ಈ ಡಿಜಿಟಲ್ ಯುಗದಲ್ಲಿ ಎಲ್ಲರು ಸ್ಮಾರ್ಟ್ ಫೋನ್ ಹಿಂದೆ ಬಿದ್ದಿದ್ದಾರೆ. ಆದಷ್ಟು ಫೋನ್‌ಗಳು ದೊಡ್ಡದಾಗಿರಬೇಕು. ಕ್ಯಾಮೆರಾ ಅದ್ಭುತ ಚಿತ್ರಗಳ ಸೆರೆಹಿಡಿಯಬೇಕು ಎಂಬ ಕಾರಣದಿಂದ ಅವರು ಲಕ್ಷ ಲಕ್ಷ ನೀಡಿ ಮೊಬೈಲ್ ಖರೀದಿಸುತ್ತಾರೆ.
ಆದ್ರೆ ನಟ ಫಾಸಿಲ್ ಬಳಸುತ್ತಿರುವ ಮೊಬೈಲ್ ಫೋನ್, ಹಳೆಯ ನೋಕಿಯಾ ಫೋನ್‌ನಂತಿದೆ. ಇದು ನೋಡಲು ಮಾತ್ರ ಸಿಂಪಲ್ ಆಗಿದ್ದರು ಅದರ ಬೆಲೆ ನಿಮ್ಮ ಸ್ಮಾರ್ಟ್‌ಫೋನ್‌ಗಿಂತ ಬಲು ದುಬಾರಿಯಾಗಿದೆ.
ಯಾವ ಕಂಪನಿ ಫೋನ್? ಅದು ದುಬಾರಿ ಏಕೆ?
ಫಾಸಿಲ್ ಬಳಸುತ್ತಿರುವ ಈ ಪೋನ್ ವಿಶೇಷವಾಗಿ ತಯಾರಾಗಿದೆ. ಹಾಗೆ ಇದು ದುಬಾರಿ ಬೆಲೆಯ ಫೋನ್ ಎಂದು ತಿಳಿದುಬಂದಿದೆ. ಈ ಕುರಿತಾಗಿ ಇನ್ಸ್ಪೂಯೆನ್ಸರ್ ಎಫಿನ್ ಎಂ ವಿಡಿಯೋ ಹಂಚಿಕೊಂಡಿದ್ದು, ಅದರಲ್ಲಿ ಫಾಸಿಲ್ ಬಳಸುತ್ತಿರುವ ಫೋನ್‌ನ ವೈಶಿಷ್ಟ್ಯತೆಗಳ ಕುರಿತು ಹಂಚಿಕೊಂಡಿದ್ದಾರೆ. ಇದು ವರ್ಟು ಅಸೆಂಟ್ ಟಿ ಎಂಬ ಕಂಪನಿಯ ಫೋನ್ ಆಗದೆ. ಇದು 2007ರಲ್ಲಿ ಬಿಡುಗಡೆಯಾಗಿತ್ತು. ಇದು ಸಾಮಾನ್ಯವಾಗಿ ತಯಾರಿಸಲಾದ ಫೋನ್ ಅಲ್ಲ ಬದಲಿಗೆ ಇದನ್ನು ಟೈಟಾನಿಯಂನಿಂದ ತಯಾರಿಸಲ್ಪಟ್ಟಿದೆ. ಇದು ಕೆಳಗೆ ಬಿದ್ದರೆ ಸುಲಭವಾಗಿ ಒಡೆಯೋದಿಲ್ಲ. ಹಾಗೆ ಕೈಯಿಂದ ಹೊಲಿಗೆ ಮಾಡಲಾದ ಚರ್ಮದ ಹಿಂಭಾಗವನ್ನು ಹೊಂದಿದೆ.
ಈಗಲೂ ಈ ಫೋನ್ ವರ್ಟುವಿನ ಯುಕೆ ವೆಬ್‌ಸೈಟ್‌ನಲ್ಲಿ ನಾವು ನೋಡಬಹುದು. ಸದ್ಯ ಭಾರತದಲ್ಲಿ ಇದು ಸಿಗುವುದು ಕಷ್ಟವಾಗಿದೆ. ಹಾಗೆ ಅದರ ಬೆಲೆಗೆ ಈಗ ಸ್ಮಾರ್ಟ್‌ಫೋನ್‌ಗಳು ಲಗ್ಗೆ ಇಟ್ಟಿವೆ. ಈ ಫೋನ್ ಬಿಡುಗಡೆಯಾದಾಗ ಆರಂಭಿಕ ಬೆಲೆಯೇ 5 ಲಕ್ಷ ರೂಪಾಯಿ ಆಗಿತ್ತು. ಹಾಗೆ ಅಸೆಂಟ್ ರೆಟ್ರೋ ಕ್ಲಾಸಿಕ್ ಕೀಪ್ಯಾಡ್ ಫೋನ್ ಪ್ರಸ್ತುತ $11,920 (ಸರಿಸುಮಾರು 10 ಲಕ್ಷ ರೂ.) ನಲ್ಲಿ ಪಟ್ಟಿ ಮಾಡಲಾಗಿದೆ.
ಆನ್‌ಮನೋರಮಾ ಪ್ರಕಾರ ವರ್ಟು ₹1 ಲಕ್ಷದಿಂದ ಹಿಡಿದು ₹70 ಲಕ್ಷದವರೆಗೆ ಬೆಲೆಯ ಮಾದರಿಗಳ ನೋಡಬಹುದು. ಇದು ದುಬಾರಿಯಾಗಿರಲು ಹಲವು ಕಾರಣಗಳಿವೆ. ಅದರಲ್ಲೂ ಕರಕುಶಲತೆಯ ಕಾರಣಕ್ಕೆ ಇದು ಬಹಳ ದುಬಾರಿಯಾಗಲಿದೆ. ಲೆದರ್ ಬ್ಯಾಕ್ ಹಾಗೆ ಟೈಟಾನಿಯಂ ಬಾಡಿ ಹೊಂದಿರುವುದಲ್ಲದೆ ವರ್ಷಗಳ ಕಾಲ ಬಾಳಿಕೆ ಬರಲಿದೆ.
ಸದ್ಯ ಫಹಾದ್ ಫಾಸಿಲ್ ಈ ಫೋನ್ ಬಳಸುತ್ತಿರುವ ಫೋಟೋವೊಂದು ಈಗ ಹರಿದಾಡುತ್ತಿದ್ದು, ಇದು ಯಾವ ಕಂಪನಿ ಫೋನ್ ಇರಬಹುದು ಎಂದು ಜನರು ಹುಡುಕಾಡಿದ್ದಾರೆ. ಹಾಗೆ ಅದರ ಬೆಲೆ ಕೇಳಿ ಶಾಕ್ ಕೂಡ ಆಗಿದ್ದಾರೆ. ಇದು ಅತ್ಯುತ್ತಮ ಸ್ಮಾರ್ಟ್‌ಫೋನ್ ಅಲ್ಲೆದೆಯೂ ಲಕ್ಷ ಲಕ್ಷ ರೂಪಾಯಿ ದರ ಕೇಳಿ ಎಲ್ಲರು ಅಚ್ಚರಿ ಹೊರಹಾಕಿದ್ದಾರೆ.



Click it and Unblock the Notifications
