Latest Updates
-
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ? -
ಬೇಕರಿಯಲ್ಲಿ ಸಿಗುವ ಕೊಬ್ಬರಿ ತುರಿ ಬರ್ಫಿ ನಿಮಿಷದಲ್ಲಿ ಮಾಡಿ! ಇಲ್ಲಿದೆ ಸುಲಭದ ಸ್ವೀಟ್ ವಿಧಾನ -
ಮಧುರೈಗೆ ಹೋಗ್ತಿದ್ದೀರಾ? ಈ ಪವಿತ್ರ ದೇಗುಲಗಳಿಗೂ ಭೇಟಿ ನೀಡೋದನ್ನ ಮರೀಬೇಡಿ.. ಪಟ್ಟಿ ಇಲ್ಲಿದೆ
ಸುಂದರ ಹೆಂಡತಿ ಬೇಕಾ? ಈ 5 ಜನರು ಸುಂದರ ಸ್ತ್ರೀಯನ್ನು ಮದುವೆಯಾಗಬಾರದು! ಜೀವನ ನರಕ
ಸುಂದರ ಹೆಂಡತಿ ಎಲ್ಲರಿಗೂ ವರವಲ್ಲ! ಈ 5 ಜನ ಸುಂದರ ಸ್ತ್ರೀಯನ್ನು ಮದುವೆಯಾಗಬಾರದು. ಇಲ್ಲದಿದ್ದರೆ ಜೀವನ ನರಕಕ್ಕಿಂತ ಕೆಟ್ಟದಾಗುತ್ತದೆ. ಹೌದು, ಆಚಾರ್ಯ ಚಾಣಕ್ಯರು ಶತಮಾನಗಳ ಹಿಂದೆಯೇ ಸುಂದರ ಹೆಂಡತಿಯು (beautiful women) ಪ್ರತಿಯೊಬ್ಬ ಪುರುಷನಿಗೆ ವರವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಕೆಲವು ನಿರ್ದಿಷ್ಟ ಮನಸ್ಥಿತಿ ಮತ್ತು ಪರಿಸ್ಥಿತಿಗಳಿರುವ ಪುರುಷರಿಗೆ ಈ ಸೌಂದರ್ಯವು ಜೀವನದಲ್ಲಿ ವಿಷವನ್ನುಂಟುಮಾಡಬಹುದು. ಚಾಣಕ್ಯ ನೀತಿಯ (Chanakya Niti) ಪ್ರಕಾರ, ಯಾವ 5 ಪುರುಷರು ಸುಂದರ ಮಹಿಳೆಯನ್ನು ಮದುವೆಯಾಗಬಾರದು (marriage) ಎಂಬುದನ್ನು ತಿಳಿಯೋಣ ಬನ್ನಿ.
ಸುಂದರ ಪತ್ನಿಯನ್ನು ಪಡೆಯುವ ಆಸೆ ಯಾರಿಗಿಲ್ಲ? ಇಂದು ಜನರು ಮದುವೆಗೆ ಹುಡುಗಿಯನ್ನು ನೋಡುವಾಗ, ಅವರ ಮೊದಲ ಆಯ್ಕೆ ಸುಂದರ ಮಹಿಳೆಯಾಗಿರುತ್ತಾಳೆ. ಆದರೆ ಸುಂದರ ಮಹಿಳೆ ಪ್ರತಿಯೊಬ್ಬರಿಗೂ ಉತ್ತಮವಾಗಿರುವುದಿಲ್ಲ. ಆಚಾರ್ಯ ಚಾಣಕ್ಯರು ಬಹಳ ಹಿಂದೆಯೇ, ಯಾರಿಗೆ ಸುಂದರ ಮಹಿಳೆ ಸರಿಯಾಗಿಲ್ಲ ಎಂದು ತಿಳಿಸಿದ್ದರು. ಅಂತಹ ಸ್ತ್ರೀ ಅವರ ಜೀವನಕ್ಕೆ ಬಂದರೆ, ಅವಳ ಸುಂದರ ರೂಪವು ಅವರ ಜೀವನವನ್ನು ನರಕಕ್ಕಿಂತ ಕೆಟ್ಟದಾಗಿ ಮಾಡುತ್ತದೆ. ಅವರು ಇದನ್ನು ಕೇವಲ ಸೌಂದರ್ಯದ ಆಧಾರದ ಮೇಲೆ ಹೇಳಿರಲಿಲ್ಲ, ಬದಲಾಗಿ ಪರಿಸ್ಥಿತಿ ಮತ್ತು ಮನಸ್ಥಿತಿಯ ಆಧಾರದ ಮೇಲೆ ಹೇಳಿದ್ದರು. ಅವರ ಪ್ರಕಾರ, ಸುಂದರ ಪತ್ನಿ ಪ್ರತಿಯೊಬ್ಬರಿಗೂ ವರವಾಗುವುದಿಲ್ಲ. ಚಾಣಕ್ಯನ ಪ್ರಕಾರ ಆ ತಪ್ಪುಗಳಾವುವು?

ಚಾಣಕ್ಯರು ಹೀಗೆ ಹೇಳಲು ಕಾರಣವೇನು?
ಆಚಾರ್ಯ ಚಾಣಕ್ಯನು ಹೀಗೆ ಹೇಳಿದ್ದಾನೆ. 'ಸುಂದರಿ ಭಾರ್ಯಾ ಯದಿ ದರಿದ್ರಸ್ಯ ಭವನಂ ಗಚ್ಛತಿ, ತದಾ ಸಾಕ್ಷಾತ್ ವಿಷಸಮಂ ಭವತಿ'. ಇದರರ್ಥ, ಬಡವನ ಮನೆಯನ್ನು ಸುಂದರಿ ಸೇರಿದರೆ ಅದು ವಿಷಕ್ಕೆ ಸಮಾನ ಎಂದು ಚಾಣಕ್ಯರು ಹೇಳಿದ್ದಾರೆ. ಒಬ್ಬ ಬಡವನು ಸುಂದರ ಪತ್ನಿಯನ್ನು ಪಡೆದರೆ, ಅದು ಅವನಿಗೆ ವಿಷದಂತೆ ಆಗುತ್ತದೆ. ಇದರಿಂದ ಗಂಡ-ಹೆಂಡತಿಯ ನಡುವೆ ಬಿರುಕು ಉಂಟಾಗುತ್ತದೆ.
ಇದರ ಹಿಂದಿನ ಅವರ ತರ್ಕವೆಂದರೆ, ಗಂಡ ಆರ್ಥಿಕವಾಗಿ ಅಸಮರ್ಥನಾಗಿದ್ದರೆ ಮತ್ತು ಅವನ ಪತ್ನಿ ಅತ್ಯಂತ ಸುಂದರವಾಗಿದ್ದರೆ, ಅವನಲ್ಲಿ ಕೀಳರಿಮೆ ಅಥವಾ ಅಭದ್ರತೆಯ ಭಾವನೆಗಳು ಮನೆಮಾಡಬಹುದು. ಇದು ಸಂಬಂಧವನ್ನು ವಿಷಕಾರಿಯಾಗಿಸಬಹುದು. ಇಂತಹ ಸಂಬಂಧಗಳಲ್ಲಿ, ಅನೇಕ ಬಾರಿ ಹೊರಗಿನ ಜನರು ತಪ್ಪಾದ ದೃಷ್ಟಿಯಿಂದ ನೋಡುತ್ತಾರೆ ಮತ್ತು ಟೀಕೆ ಮಾಡುತ್ತಾರೆ. ಇದರಿಂದ ಪತಿ-ಪತ್ನಿಯ ನಡುವೆ ಒತ್ತಡ ಮತ್ತು ಅಪನಂಬಿಕೆಯ ಗೋಡೆ ಸೃಷ್ಟಿಯಾಗಬಹುದು.
ಅತಿ ಕಾಮುಕ ಅಥವಾ ಸಂಯಮ ಇಲ್ಲದ ಜನ
ಅತಿಯಾದ ಕಾಮಿಯಾದ ಅಥವಾ ಇಂದ್ರಿಯಗಳನ್ನು ನಿಯಂತ್ರಿಸಲಾಗದ ಜನರಿಗೆ ಸುಂದರ ಹೆಂಡತಿ ಅಪಾಯಕಾರಿ ಎಂದು ಚಾಣಕ್ಯ ಹೇಳಿದ್ದಾನೆ. ಏಕೆಂದರೆ, ಅಂತಹ ಹೆಂಡತಿ ಗಂಡನಿಗೆ ಒಂದು ರೀತಿಯ ಆಕರ್ಷಣೆ ಮತ್ತು ಒತ್ತಡವನ್ನು ಉಂಟುಮಾಡಬಹುದು. ಅಂತಹ ಗಂಡ ಹೆಂಡತಿಯನ್ನು ಆಸ್ತಿಯಂತೆ ನೋಡುತ್ತಾನೆ ಮತ್ತು ಸಂಬಂಧದ ಮೌಲ್ಯವನ್ನು ಅರ್ಥಮಾಡಿಕೊಳ್ಳುವುದಿಲ್ಲ.
ಮೂರ್ಖ ಅಥವಾ ಕಡಿಮೆ ಬುದ್ಧಿಯ ಪುರುಷರು
ಮೂರ್ಖ ಅಥವಾ ಕಡಿಮೆ ಬುದ್ಧಿ ಉಳ್ಳ ಪುರುಷರಿಗೆ ಸುಂದರ ಹೆಂಡತಿ ಸಿಕ್ಕರೆ ಅಪಾಯ ಕಟ್ಟಿಟ್ಟ ಬುತ್ತಿ. ಚಾಣಕ್ಯರ ಪ್ರಕಾರ, ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವಿಲ್ಲದ ವ್ಯಕ್ತಿ ಹೆಂಡತಿಯ ಸೌಂದರ್ಯಕ್ಕೆ ಮಾರು ಹೋಗಿ ಮದುವೆಯಾದರೆ, ಜೀವನದಲ್ಲಿ ಅನೇಕ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಸುಂದರ ಹೆಂಡತಿಯೇ ಅವನ ದೌರ್ಬಲ್ಯವಾಗಿ ಪರಿಣಮಿಸುತ್ತಾಳೆ ಎಂದು ಚಾಣಕ್ಯರು ತಿಳಿಸಿದ್ಧಾನೆ.
ಅಹಂಕಾರಿ ಮತ್ತು ಅಧಿಕಾರಶಾಹಿ ಪುರುಷರು
ಹೆಂಡತಿಯನ್ನು ತನ್ನ ಸ್ವತ್ತೆಂದು ಪರಿಗಣಿಸುವ ಪುರುಷರು, ಸುಂದರ ಹೆಂಡತಿಯ ಸ್ವಾತಂತ್ರ್ಯ ಅಥವಾ ಜನಪ್ರಿಯತೆಯನ್ನು ಕಂಡು ಸ್ವಯಂ ಆಗಿ ಹೊಟ್ಟೆಕಿಚ್ಚು ಪಡುತ್ತಾರೆ. ಈ ಹೊಟ್ಟೆಕಿಚ್ಚು ಸಂಬಂಧವನ್ನು ವಿಷಪೂರಿತವಾಗಿಸುತ್ತದೆ ಎಂದು ಚಾಣಕ್ಯರು ಹೇಳುತ್ತಾನೆ.
ಅಸೂಯೆ ಅಥವಾ ಸಂಶಯದ ಸ್ವಭಾವದ ಜನರು
ಪ್ರತಿಯೊಂದಕ್ಕೂ ಅನುಮಾನ ಪಡುವ ಪುರುಷರಿಗೆ ಸುಂದರ ಹೆಂಡತಿ ಒಂದು ದೊಡ್ಡ ಪರೀಕ್ಷೆಯಾಗುತ್ತಾಳೆ ಎಂದು ಚಾಣಕ್ಯ ಹೇಳುತ್ತಾರೆ. ಅವರು ಯಾವುದೇ ಕಾರಣವಿಲ್ಲದೆ ಮಾನಸಿಕವಾಗಿ ನರಳುತ್ತಾರೆ ಎಂಬುವುದು ಚಾಣಕ್ಯರ ಮಾತು.



Click it and Unblock the Notifications













