Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಜ್ಯೋತಿಷ್ಯಶಾಸ್ತ್ರದ ಪ್ರಕಾರ ಗುರುವಾರ ವಿಷ್ಣುವನ್ನು ಪೂಜಿಸಿ..! ಈ ಸಮಸ್ಯೆಗೆ ಮುಕ್ತಿ .!
ಹಿಂದೂ ಧರ್ಮದಲ್ಲಿ ಗುರುವಾರದ ಪೂಜೆಗೆ ವಿಶೇಷ ಮಹತ್ವವಿದೆ. ಗುರುವಾರದಂದು ಭಗವಾನ್ ವಿಷ್ಣುವಿನ ಆರಾಧನೆಗೆ ಸಮರ್ಪಿಸಲಾಗಿದೆ. ಗುರುವಾರ ವಿಷ್ಣುವನ್ನು ಪೂಜಿಸುವುದರಿಂದ ಹಲವು ಲಾಭವಿದೆ. ಹೀಗಾಗಿ ಗುರುವಾರದಂದು ಉಪವಾಸ, ವಿಶೇಷ ಗುರು ಪೂಜೆ, ವಿಷ್ಣು ವ್ರತ ಮಾಡಲಾಗುತ್ತದೆ.
ಈ ಗುರುವಾರದ ಉಪವಾಸಕ್ಕೆ ವಿಶೇಷ ಮಹತ್ವವಿದೆ. ಈ ದಿನದಂದು ಭಗವಾನ್ ವಿಷ್ಣುವಿನ ಆರಾಧನೆ ಮತ್ತು ಉಪವಾಸವನ್ನು ಆಚರಿಸುವುದರಿಂದ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ ಎಂಬ ನಂಬಿಕೆ ಉಳಿದುಕೊಂಡು ಬಂದಿದೆ. ವಾಸ್ತವವಾಗಿ ಗುರುವಾರ ಭಗವಾನ್ ವಿಷ್ಣು ನಾರಾಯಣ ಮತ್ತು ಬೃಹಸ್ಪತಿ ದೇವ ಅವರಿಗೆ ಸಮರ್ಪಿತವಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಈ ದಿನದಂದು ಉಪವಾಸ ಮತ್ತು ಪೂಜೆಯ ಮಹತ್ವವು ಮತ್ತಷ್ಟು ಹೆಚ್ಚಾಗುತ್ತದೆ.
ನಂಬಿಕೆಗಳ ಪ್ರಕಾರ, ಗುರುವಾರ ಉಪವಾಸವನ್ನು ಆಚರಿಸುವ ಮೂಲಕ ವಿಷ್ಣುವಿನ ಜೊತೆಗೆ ಲಕ್ಷ್ಮಿ ದೇವಿಯ ಆಶೀರ್ವಾದವನ್ನು ಪಡೆಯುತ್ತಾನೆ. ಇದಲ್ಲದೇ ವಿವಾಹ, ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳೂ ದೂರವಾಗುತ್ತವೆ.

ಪೌಷ ಮಾಸದಲ್ಲಿ ಗುರುವಾರ ಉಪವಾಸವನ್ನು ಪ್ರಾರಂಭಿಸಬಾರದು. ಗುರುವಾರ ಉಪವಾಸವನ್ನು ಪ್ರಾರಂಭಿಸಲು, ಮಾಸದ ಅನುರಾಧ ನಕ್ಷತ್ರ ಮತ್ತು ಶುಕ್ಲ ಪಕ್ಷದ ದಿನಾಂಕವನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಈ ದಿನಾಂಕಗಳಲ್ಲಿ ಗುರುವಾರ ಉಪವಾಸವನ್ನು ಪ್ರಾರಂಭಿಸುವುದರಿಂದ ಭಗವಾನ್ ವಿಷ್ಣು ಮತ್ತು ಗುರುವಿನ ಅಪಾರವಾದ ಆಶೀರ್ವಾದ ನಿಮ್ಮ ಮೇಲಿರಲಿದೆ ಎಂದು ನಂಬಲಾಗಿದೆ.
ಎಷ್ಟು ಗುರುವಾರ ಉಪವಾಸ ಮಾಡಬೇಕು?
ಪುರುಷರು ಮತ್ತು ಮಹಿಳೆಯರು ಇಬ್ಬರೂ ಗುರುವಾರ ಉಪವಾಸವನ್ನು ಆಚರಿಸಬಹುದು. ಕೆಲವರು ತಮ್ಮ ವ್ರತ ನೆರವೇರುವವರೆಗೆ ಈ ಉಪವಾಸವನ್ನು ಆಚರಿಸುತ್ತಾರೆ. 16 ಗುರುವಾರದಂದು ಉಪವಾಸ ಮಾಡುವುದು ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಇದಲ್ಲದೆ, ಇದನ್ನು 1, 3, 4, 7 ಅಥವಾ ಒಂದು ವರ್ಷದವರೆಗೆ ಮಾಡಬಹುದು.
ವಿಷ್ಣವಿಗೆ ಏನು ಅರ್ಪಿಸಬೇಕು?
ಜ್ಯೋತಿಷ್ಯಶಾಸ್ತ್ರದ ಪ್ರಕಾರ, ನೀವು ಪ್ರಪಂಚದ ರಕ್ಷಕನಾದ ವಿಷ್ಣುವನ್ನು ಮೆಚ್ಚಿಸಲು ಗುರುವಾರ ಧ್ಯಾನ ಮಾಡಬೆಂಕಂತೆ. ಇಂದು ಹಳದಿ ಬಣ್ಣದ ಬಟ್ಟೆಗಳನ್ನು ಧರಿಸಿ. ನಿಮಗೆ ಹಳದಿ ಬಟ್ಟೆಗಳನ್ನು ಧರಿಸಲು ಸಾಧ್ಯವಾಗದಿದ್ದರೆ, ಹಳದಿ ಬಟ್ಟೆಗಳನ್ನು ನಿಮ್ಮೊಂದಿಗೆ ಇಟ್ಟುಕೊಳ್ಳಿ. ಇದರ ನಂತರ ಸೂರ್ಯ ದೇವನಿಗೆ ನೀರನ್ನು ಅರ್ಪಿಸಿ. ಇದಾದ ನಂತರ ವಿಧಿವಿಧಾನಗಳ ಪ್ರಕಾರ ಲಕ್ಷ್ಮೀ ನಾರಾಯಣನನ್ನು ಪೂಜಿಸಿ. ಶ್ರೀ ಹರಿಗೆ ಅಷ್ಟಭುಜಾಕೃತಿಯ ಕಮಲವನ್ನು ಅರ್ಪಿಸಿ.
ಆರ್ಥಿಕ ಸ್ಥಿತಿಯನ್ನು ಬಲಪಡಿಸಲು, ಗುರುವಾರ ಪೂಜೆಯ ಸಮಯದಲ್ಲಿ ವಿಷ್ಣುವಿಗೆ ತೆಂಗಿನಕಾಯಿಯನ್ನು ಅರ್ಪಿಸಿ. ತೆಂಗಿನಕಾಯಿಯನ್ನು ಕೆಂಪು ಅಥವಾ ಹಳದಿ ಬಟ್ಟೆಯಲ್ಲಿ ಸುತ್ತಿ ಸುರಕ್ಷಿತವಾಗಿ ಇರಿಸಿ. ಈ ಪರಿಹಾರವನ್ನು ಸರಿಯಾಗಿ ಅನುಸರಿಸುವುದರಿಂದ ಆದಾಯ ಹೆಚ್ಚಾಗುತ್ತದೆ. ಅಲ್ಲದೆ ವಿಷ್ಣುವಿನ ಮೂರ್ತಿಗೆ ಕೇಸರಿ, ಅರಶಿನ ಮಿಶ್ರಿತ ಹಾಲಿನ ಅಭಿಷೇಕ ಮಾಡಬೇಕು. ಇದರಿಂದ ಭಗವಾನ್ ವಿಷ್ಣುವು ಪ್ರಸನ್ನನಾಗುತ್ತಾನೆ ಮತ್ತು ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸುತ್ತಾನೆ.



Click it and Unblock the Notifications