Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಶನಿದೋಷದ ಪರಿಹಾರಕ್ಕೆ ಕಬ್ಬಿಣದ ರಿಂಗ್ ಧರಿಸುವುದು ಒಳ್ಳೆಯದೇ?
ಕಬ್ಬಿಣದ ರಿಂಗ್ ಧರಿಸುವುದರಿಂದ ನೆಗೆಟಿವ್ ಪರಿಣಾಮಗಳನ್ನು ತಗ್ಗಿಸುತ್ತದೆ ಎಂದು ಜ್ಯೋತಿಷ್ಯಶಾಸ್ತ್ರ ಹೇಳುತ್ತದೆ. ಕೆಲವರು ದೃಷ್ಟಿ ತಾಗಬಾರದೆಂದು ಈ ರೀತಿ ಕಬ್ಬಿಣದ ರಿಂಗ್ ಧರಿಸುತ್ತಾರೆ. ಜ್ಯೋತಿಷ್ಯದಲ್ಲಿ ನಮ್ಮ ಆರೋಗ್ಯ ಸಮಸ್ಯೆಗೆ ಗ್ರಹಗಳು ಕಾರಣವೆಂದು ಹೇಳಲಾಗುವುದು. ಈ ರೀತಿ ಗ್ರಹ ದೋಷವಿದ್ದಾಗ, ಶನಿ ದೋಷವಿದ್ದಾಗ ಆರೋಗ್ಯ ಸಮಸ್ಯೆ ಉಂಟಾಗುವುದು, ಇದಕ್ಕೆ ಕಬ್ಬಿಣದ ಉಂಗುರ ಧರಿಸುವ ಮೂಲಕ ಪರಿಹಾರ ಕಂಡುಕೊಳ್ಳಬಹುದು ಎಂದು ಹೇಳಲಾಗಿದೆ.

1. ಮೊಡವೆ ಮತ್ತು ತ್ವಚೆ ಸಮಸ್ಯೆ ತಗ್ಗಿಸುತ್ತದೆ
ಕಬ್ಬಿಣದ ರಿಂಗ್ ಅನ್ನು ಮಧ್ಯದ ಬೆರಳಿಗೆ ಧರಿಸುವುದರಿಂದ ಪುರುಷ ಹಾಗೂ ಮಹಿಳೆಯರಲ್ಲಿ ಮೊಡವೆ ಸಮಸ್ಯೆ ಕಡಿಮೆ ಮಾಡುತ್ತದೆ. ಮೊಡವೆ ಅತ್ಯಧಿಕ ಮಾನಸಿಕ ಒತ್ತಡದಿಂದ ಕೂಡ ಉಂಟಾಗುತ್ತದೆ, ಕಬ್ಬಿಣದ ರಿಂಗ್ ಧರಿಸುವುದರಿಂದ ಮಾನಸಿಕ ಒತ್ತಡ ಕಡಿಮೆಯಾಗುವುದು. ಕಬ್ಬಿಣದ ರಿಂಗ್ ಧರಿಸುವುದರಿಂದ ತ್ವಚೆ ಕ್ಲಿಯರ್ ಆಗಿರುತ್ತದೆ.
2. ರಕ್ತ ಸಂಚಾರಕ್ಕೆ ಒಳ್ಳೆಯದು
ಕಬ್ಬಿಣದ ರಿಂಗ್ ದೇಹದ ಉಷ್ಣಾಂಶವನ್ನು ನಿಯಂತ್ರಣದಲ್ಲಿಡುತ್ತದೆ, ಇದರಿಂದ ರಕ್ತ ಸಂಚಾರ ಸರಿಯಾಗಿ ನಡೆಯುವುದು. ಕಬ್ಬಿಣದ ರಿಂಗ್ ಧರಿಸುವುದರಿಂದ ರಕ್ತದೊತ್ತಡ ನಿಯಂತ್ರಣದಲ್ಲಿಡಲು ಸಹಕಾರಿಯಾಗಿದೆ.
3. ಸಂಧಿವಾತ ಕಡಿಮೆಯಾಗುವುದು
ಸಂಧಿವಾತ ಅತೀ ಹೆಚ್ಚಿನವರಿಗೆ ಕಾಡುತ್ತಿದೆ. 40 ವರ್ಷ ದಾಟುತ್ತಿದ್ದಂತೆ ಸಂಧಿವಾತದ ಸಮಸ್ಯೆ ಕಂಡು ಬರುತ್ತಿದೆ, ಸಂಧಿವಾತದ ಸಮಸ್ಯೆ ಇರುವವರು ಕಬ್ಬಿಣದ ರಿಂಗ್ ಧರಿಸುವುದರಿಂದ ಸಂಧಿವಾತದ ಸಮಸ್ಯೆ ಕಡಿಮೆಯಾಗುವುದು. ಇದು ನೋವನ್ನು ಕಡಿಮೆ ಮಾಡುತ್ತದೆ. ಕಬ್ಬಿಣದ ರಿಂಗ್ ಅನ್ನು ಮಧ್ಯದ ಬೆರಳಿಗೆ ಧರಿಸಿದರೆ ಒಳ್ಳೆಯದು.
4. ಕಿಡ್ನಿ ನೋವು ಕಡಿಮೆಯಾಗುವುದು
ಕಿಡ್ನಿ ಸಮಸ್ಯೆ ಇದೆಯೇ? ಕಬ್ಬಿಣದ ರಿಂಗ್ ಧರಿಸುವುದರಿಂದ ಕಿಡ್ನಿ ನೋವಿನ ಸಮಸ್ಯೆ ಕಡಿಮೆಯಾಗುವುದು. ಬಲಭಾಗದ ಕೈಯ ಮಧ್ಯದ ಬೆರಳಿಗೆ ಉಂಗುರು ಧರಿಸಿದರೆ ಒಳ್ಳೆಯದು. ಅಲ್ಲದೆ ಅಲ್ಸರ್, ಹೊಟ್ಟೆ ನೋವಿನ ಸಮಸ್ಯೆ ಇವುಗಳು ಬುಧ ದೋಷದಿಂದಾಗಿ ಉಂಟಾಗುವುದು ಎಂದು ಜ್ಯೋತಿಷ್ಯ ಹೇಳುತ್ತದೆ. ಇದಕ್ಕೆ ಕೂಡ ಕಬ್ಬಿಣದ ರಿಂಗ್ ಧರಿಸಿದರೆ ಒಳ್ಳೆಯದು ಎಂದು ಹೇಳಲಾಗಿದೆ.
5. ಒಬೆಸಿಟಿ ಹಾಗೂ ತೂಕ ಸಂಬಂಧಿತ ಸಮಸ್ಯೆಗಳಿಗೆ
ಕಬ್ಬಿಣದ ರಿಂಗ್ ಧರಿಸುವುದಂದ ತೂಕ ನಿಯಂತ್ರಣಕ್ಕೆ ಹಾಗೂ ಒಬೆಸಿಟಿ ಬಗೆಯ ಸಮಸ್ಯೆ ತಡೆಗಟ್ಟಲು ಸಹಕಾರಿ ಎಂದು ಜ್ಯೋತಿಷ್ಯದಲ್ಲಿ ಪರಿಹಾರ ಸೂಚಿಸಲಾಗಿದೆ. ಅಲ್ಲದೆ ಸಾಡೇಸಾತಿ ಪ್ರಭಾವ ತಗ್ಗಿಸಲು ಕೂಡ ಸಹಕಾರಿ ಎಂದ ಹೇಳಲಾಗಿದೆ.
6. ಅಸ್ತಮಾ, ಉಸಿರಾಟದ ಸಮಸ್ಯೆ ತಡೆಗಟ್ಟಲು
ಯಾರಿಗೆ ತುಂಬಾ ಅಸ್ತಮಾ ಸಮಸ್ಯೆ ಇದೆಯೋ ಅವರಿಗೆ ಕಬ್ಬಿಣದ ರಿಂಗ್ ಧರಿಸುವಂತೆ ಪರಿಹಾರ ಸೂಚಿಸಲಾಗುವುದು. ಉಸಿರಾಟದ ಸಮಸ್ಯೆ ಇರುವವರು, ಅಸ್ತಮಾ ಇರುವವರು ಮಧ್ಯದ ಬೆರಳಿಗೆ ಕಬ್ಬಿಣದ ಉಂಗುರ ಧರಿಸಿದರೆ ಒಳ್ಳೆಯದು.
7. ಮಾನಸಿಕ ಆರೋಗ್ಯಕ್ಕೆ
ಕಬ್ಬಿಣದ ರಿಂಗ್ ಧರಿಸುವುದರಿಂದ ಮಾನಸಿಕ ಒತ್ತಡ ಕಡಿಮೆ ಮಾಡುತ್ತದೆ ಅಲ್ಲದೆ ಮನಸ್ಸು ಶಾಂತವಾಗುವುದು. ಮಾನಸಿಕ ಸಮಸ್ಯೆಗಳು ಶನಿ ದೋಷದಿಂದಾಗಿ ಉಂಟಾಗುವುದು ಎಂದು ಜ್ಯೋತಿಷ್ಯದಲ್ಲಿ ಹೇಳಲಾಗಿದ್ದು ಈ ಮಾನಸಿಕ ಸಮಸ್ಯೆ ಕಡಿಮೆ ಮಾಡಲು ಕಬ್ಬಿಣದ ಉಂಗುರ ಧರಿಸಿದರೆ ಒಳ್ಳೆಯದು ಎಂದು ಹೇಳಲಾಗಿದೆ.
ಕಬ್ಬಿಣದ ರಿಂಗ್ ಧರಿಸುವ ಮುನ್ನ ಜ್ಯೋತಿಷಿಗಳ ಸಲಹೆ ಪಡೆಯಿರಿ
ಜ್ಯೋತಿಷ್ಯ ಶಾಸ್ತ್ರ ಪ್ರಕಾರ ಕಬ್ಬಿಣದ ರಿಂಗ್ ಎನ್ನು ಎಲ್ಲರೂ ಧರಿಸುವಂತಿಲ್ಲ, ಯಾರು ಕಬ್ಬಿಣದ ರಿಂಗ್ ಧರಿಸಬಾರದು ಎಂದು ನೋಡೋಣ:
* ಯಾರ ಕುಂಡಲಿಯಲ್ಲಿ ಬುಧ, ಶುಕ್ರ, ಸೂರ್ಯ ಜೊತೆಗಿದ್ದರೆ ಅವರು ಕಬ್ಬಿಣದ ರಿಂಗ್ ಧರಿಸಬಾರದು.
* ಬುಧ, ರಾಹು 12ನೇ ಮನೆಯಲ್ಲಿದ್ದರೆ ಆ ರಾಶಿಯವರು ಕಬ್ಬಿಣದ ರಿಂಗ್ ಧರಿಸಬಾರದು.
ಯಾರು ಕಬ್ಬಿಣದ ರಿಂಗ್ ಧರಿಸಬೇಕು?
* ಶನಿ ಸಾಡೇಸಾತಿ ದೋಷವಿದ್ದರೆ ಕಬ್ಬಿಣದ ರಿಂಗ್ ಧರಿಸಿದರೆ ಒಳ್ಳೆಯದು.
* ಕಬ್ಬಿಣದ ರಿಂಗ್ ಅನ್ನು ಧರಿಸುವುದಾದರೆ ಶನಿವಾರ ಸಂಜೆ ಹೊತ್ತಿನಲ್ಲಿ ಧರಿಸಬೇಕು.
* ಇದಲ್ಲದೆ ಕಬ್ಬಿಣದ ರಿಂಗ್ ಅನ್ನು ರೋಹಿಣಿ, ಪುಷ್ಯಾ, ಅನುರಾಧ, ಉತ್ತರ ಭಾದ್ರಪದ ನಕ್ಷತ್ರದಲ್ಲಿ ಧರಿಸಬಹುದು.
ಈ ರಿಂಗ್ ಧರಿಸುವ ಮೊದಲು ಬೆಳಗ್ಗೆ ಎದ್ದು ಸ್ನಾನ ಮಾಡಿ ಮಡಿ ಬಟ್ಟೆ ಧರಿಸಿ, ಶನಿ ದೇವಾಲಯಕ್ಕೆ ಹೋಗಿ ಪೂಜೆ ಸಲ್ಲಿಸಿ ಬರಬೇಕು.



Click it and Unblock the Notifications

