Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಗಮನಿಸಿ: ಜೂನ್ 1ರಿಂದ ಆಧಾರ್, ಡ್ರೈವಿಂಗ್ ಲೈಸೆನ್ಸ್ ನಿಯಮದಲ್ಲಿ ಬದಲು..!
ಮೇ ತಿಂಗಳು ಮುಗಿದು ಜೂನ್ ಆಗಮಿಸುತ್ತಿದೆ. ಇದರ ಜೊತೆಗೆ ಹಲವು ನಿಯಮಗಳು ಸಹ ಬದಲಾಗುತ್ತಿವೆ. ಸರ್ಕಾರದ ನಿಯಮದಂತೆ ಕೆಲವು ನಿಯಮಗಳು ಜೂನ್ 1ರಿಂದ ಬದಲಾಗುತ್ತಿವೆ. ಈ ಬದಲಾವಣೆಗಳು ನಿಮ್ಮ ದೈನಂದಿನ ಜೀವನದ ಮೇಲೂ ಪರಿಣಾಮ ಬೀರಲಿದೆ. ಮೂಖ್ಯವಾಗಿ ಬ್ಯಾಂಕ್, ಆಧಾರ್, ಡ್ರೈವಿಂಗ್ ಲೈಸೆನ್ಸ್ ಸೇರಿ ಇನ್ನಿತರೆ ನಿಮಯಗಳಲ್ಲಿ ಬದಲಾವಣೆಯಾಗಲಿದೆ.
ಜೂನ್ 1ರಿಂದ ಡ್ರೈವಿಂಗ್ ಲೈಸೆನ್ಸ್ ಪಡೆಯೋದು ಸುಲಭ
ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು ಇತ್ತೀಚೆಗೆ ಭಾರತದಲ್ಲಿ ಡ್ರೈವಿಂಗ್ ಲೈಸೆನ್ಸ್ ಪಡೆಯಲು ಹೊಸ ನಿಯಮಗಳನ್ನು ಜಾರಿ ಮಾಡಿದೆ. ಜೂನ್ 1, 2024 ರಿಂದ, ಸರ್ಕಾರಿ RTO ಗಳ ಬದಲಿಗೆ ಖಾಸಗಿ ಡ್ರೈವಿಂಗ್ ತರಬೇತಿ ಕೇಂದ್ರಗಳಲ್ಲಿ ವ್ಯಕ್ತಿಗಳು ಡ್ರೈವಿಂಗ್ ಪರೀಕ್ಷೆಗಳನ್ನು ತೆಗದುಕೊಳ್ಳಬಹುದು. ಇದರಿಂದ ದಿನಾಲು ಕಾಯುವುದು ತಪ್ಪಲಿದೆ. ಪರವಾನಗಿ ಅರ್ಹತೆಗಾಗಿ ಪರೀಕ್ಷೆಗಳನ್ನು ನಡೆಸಲು ಮತ್ತು ಪ್ರಮಾಣೀಕರಣಗಳನ್ನು ನೀಡಲು ಈ ಚಾಲನ ತರಬೇತಿ ಕೇಂದ್ರಗಳಿಗೆ ಅಧಿಕಾರ ನೀಡಲಾಗಿದೆ. ಹೀಗಾಗಿ ಈ ಕೇಂದ್ರಗಳ ಮೂಲಕವೇ ನೀವು ಡ್ರೈವಿಂಗ್ ಲೈಸೆನ್ಸ್ ಪಡೆಯಬಹುದು.

ಜೂನ್ 1ರಿಂದ ಟ್ರಾಫಿಕ್ ನಿಯಮ ಉಲ್ಲಂಘಟನೆ ದಂಡ ಏರಿಕೆ
ಜೂನ್ 1ರಿಂದ ನಿಮ್ಮ ಜೇಬಿಗೆ ಕತ್ತರಿ ಬೀಳೋದು ಖಚಿತ. ಸಂಚಾರಿ ನಿಯಮ ಉಲ್ಲಂಘನೆಯ ದಂಡ ಪ್ರಮಾನದಲ್ಲ ಶೇ 100ರಷ್ಟು ಏರಿಕೆಯಾಗಲಿದೆ. ಅತಿವೇಗದ ಚಾಲನೆಗೆ ಮೊದಲು 1 ಸಾವಿರ ರೂಪಾಯಿ ದಂಡ ವಿದ್ದರೆ ಜೂನ್ 1 ರಿಂದ ಈ ದಂಡ 2 ಸಾವಿರ ರೂಪಾಯಿ ಆಗಲಿದೆ. ಆದಾಗ್ಯೂ, ಅಪ್ರಾಪ್ತ ವಯಸ್ಕರು ವಾಹನ ಚಲಾಯಿಸುವಾಗ ಸಿಕ್ಕಿಬಿದ್ದರೆ, ಅವರು ₹ 25,000 ದಂಡವನ್ನು ಎದುರಿಸಬೇಕಾಗುತ್ತದೆ. ಹೆಚ್ಚುವರಿಯಾಗಿ ವಾಹನ ಮಾಲೀಕರ ನೋಂದಣಿಯನ್ನು ಸಹ ರದ್ದುಗೊಳಿಸಲಾಗುತ್ತದೆ ಮತ್ತು ಅಪ್ರಾಪ್ತ ವಯಸ್ಕರು 25 ವರ್ಷ ವಯಸ್ಸಿನವರೆಗೆ ಪರವಾನಗಿಗೆ ಪಡೆಯಲು ಅನರ್ಹರಾಗುತ್ತಾರೆ.
ಆಧಾರ್ ಕಾರ್ಡ್ ನವೀಕರಣ
ನೀವು ಹಳೆಯ ಆಧಾರ್ ಅಥವಾ ಆಧಾರ್ ಕಾರ್ಡ್‌ನಲ್ಲಾಗಿರುವ ತಪ್ಪನ್ನು ಸರಿಪಡಿಸಲು ಕೇಂದ್ರ ದಿನಾಂಕ ಘೋಷಿಸಿತ್ತು. ಈ ಅವಧಿಯನ್ನು ಜೂನ್ 14ರ ವರೆಗೆ ಮುಂದೂಡಲಾಗಿದೆ. ಬಳಕೆದಾರರು ತಮ್ಮ ಆಧಾರ್ ಕಾರ್ಡ್ ಅನ್ನು ಆನ್‌ಲೈನ್‌ನಲ್ಲಿ ಸರಳವಾಗಿ ನವೀಕರಿಸಬಹುದು. ಜೊತೆಗೆ ಆಫ್‌ಲೈನ್‌ನಲ್ಲಿ 50 ರೂಪಾಯಿ ಶುಲ್ಕ ಪಾವತಿ ಮಾಡಿಯೂ ಆಧಾರ್ ತಪ್ಪು ಸರಿ ಪಡಿಸಿಕೊಳ್ಳಬಹುದಾಗಿದೆ.
ಎಲ್‌ಪಿಜಿ ಸಿಲಿಂಡರ್ ಬೆಲೆ
ಎಲ್‌ಪಿಜಿ ಸಿಲಿಂಡರ್ ಬೆಲೆಗಳನ್ನು ಪ್ರತಿ ತಿಂಗಳ ಮೊದಲನೆಯ ದಿನದಲ್ಲಿ ಬದಲಾವಣೆ ಮಾಡಲಾಗುತ್ತದೆ. ಜೂನ್ 1ರಂದು ಸಹ ಈ ದರ ಏರುಪೇರಾಗುವ ಸಂಭವವಿದೆ. ಜೂನ್ 1 ರಂದು ತೈಲ ಕಂಪನಿಗಳು ಹೊಸ ಗ್ಯಾಸ್ ಸಿಲಿಂಡರ್ ಬೆಲೆಗಳನ್ನು ನಿಗದಿಪಡಿಸುತ್ತವೆ. ಮೇ ತಿಂಗಳಲ್ಲಿ, ಈ ಕಂಪನಿಗಳು ವಾಣಿಜ್ಯ ಸಿಲಿಂಡರ್‌ಗಳ ಬೆಲೆಯನ್ನು ಇಳಿಕೆ ಮಾಡಿದ್ದವು ಮತ್ತು ಜೂನ್‌ನಲ್ಲಿ ಮತ್ತೆ ಸಿಲಿಂಡರ್ ಬೆಲೆಗಳನ್ನು ಇಳಿಸಬಹುದು ಎಂದು ನಿರೀಕ್ಷಿಸಲಾಗಿದೆ.
ಜೂನ್‌ನಲ್ಲಿ ಬ್ಯಾಂಕ್ ರಜಾದಿನಗಳು
ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಹೊರಡಿಸಿದ ಬ್ಯಾಂಕ್ ರಜಾದಿನಗಳ ಪಟ್ಟಿಯ ಪ್ರಕಾರ, ಜೂನ್‌ನಲ್ಲಿ 10 ದಿನಗಳವರೆಗೆ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ. ಇವುಗಳಲ್ಲಿ ಭಾನುವಾರಗಳು ಮತ್ತು ಎರಡನೇ ಮತ್ತು ನಾಲ್ಕನೇ ಶನಿವಾರಗಳು ಸೇರಿವೆ. ಅಲ್ಲದೆ ಕೆಲವು ಹಬ್ಬಗಳಿಗೂ ರಜೆ ನೀಡಲಾಗುತ್ತದೆ.
ಜೂನ್ ತಿಂಗಳಿನಲ್ಲಿ ಪಿತೃದೋಷ ನಿವಾರಣೆಗಾಗಿ ಅಪರಾ ಏಕಾದಶಿ, ವಟ ಸಾವಿತ್ರಿ ವ್ರತ, ಅಪ್ಪಂದಿರ ದಿನ ಹೀಗೆ ಅನೇಕ ಕಾರಣಗಳಿಂದ ಈ ಮಾಸ ವಿಶೇಷವಾಗಿದೆ. ಜೂನ್ ಮಾಸದಲ್ಲಿ ಬರುವ ಹಬ್ಬಗಳು, ವ್ರತಗಳು ವಿಶೇಷ ದಿನಗಳ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ:



Click it and Unblock the Notifications