Latest Updates
-
ವಿಶ್ವ ಶಿಕ್ಷಕರ ದಿನ: ಶಿಕ್ಷಕರಿಗೆ ಗೌರವ ಸಲ್ಲಿಸುವಾಗ ಪೋಷಕರು ಪಾಲಿಸಬೇಕಾದ ಶಿಷ್ಟಾಚಾರಗಳೇನು? -
ಕೇರಳ-ತಮಿಳುನಾಡು ಮಳೆ ಅಲರ್ಟ್: ನಿಮ್ಮ ಮನೆ ಮತ್ತು ಕಾರನ್ನು ಸುರಕ್ಷಿತವಾಗಿಡಲು ಈ 5 ತಕ್ಷಣದ ಕ್ರಮಗಳನ್ನು ಕೈಗೊಳ್ಳಿ! -
ಜಿಮ್ಗೆ ಹೋಗುವವರೇ ಎಚ್ಚರ! ಪ್ರೊಟೀನ್ ಸಪ್ಲಿಮೆಂಟ್ಸ್ ಮೇಲೆ FDA ದಾಳಿ, ನಕಲಿ ಉತ್ಪನ್ನ ಪತ್ತೆಹಚ್ಚುವುದು ಹೇಗೆ? -
ಏಷ್ಯನ್ ಗೇಮ್ಸ್ ಕ್ರಿಕೆಟ್ ಫೈನಲ್: ಭಾರತದ ಗೆಲುವಿನ ಸಂಭ್ರಮಕ್ಕೆ ಇಲ್ಲಿದೆ ವೈರಲ್ ಮೀಮ್ಸ್ ಮತ್ತು ಸೇಫ್ ಸೆಲೆಬ್ರೇಷನ್ ಗೈಡ್! -
ಕೋಲ್ಕತ್ತಾದಲ್ಲಿ ಕಳಪೆ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಸುರಕ್ಷಿತ ಸಮಯ ಮತ್ತು ಮಾರ್ಗಗಳನ್ನು ತಪ್ಪದೇ ತಿಳಿಯಿರಿ -
ಎಆರ್ ರಹಮಾನ್ ಬೆಂಗಳೂರು ಕಾನ್ಸರ್ಟ್: ಮೆಟ್ರೋ ಟೈಮಿಂಗ್ಸ್ ಮತ್ತು ಸುರಕ್ಷಿತವಾಗಿ ಮನೆ ಸೇರಲು ಇಲ್ಲಿದೆ ಪಕ್ಕಾ ಪ್ಲಾನ್! -
ಮುಂಬೈನಲ್ಲಿ 10% ನೀರು ಕಡಿತ: ನೀರಿನ ಅಭಾವ ಎದುರಿಸಲು ಮತ್ತು ಉಳಿತಾಯ ಮಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಹಬ್ಬದ ಸಿಹಿ ಖರೀದಿಸುವ ಮುನ್ನ ಎಚ್ಚರ! FSSAI ದಾಳಿ: ಕಳಪೆ ಖೋವಾ, ಪನ್ನೀರ್ ಪತ್ತೆ ಹೇಗೆ? -
ಭಾರತ vs ಪಾಕಿಸ್ತಾನ ಏಷ್ಯನ್ ಗೇಮ್ಸ್ ಫೈನಲ್: ಹೈ-ವೋಲ್ಟೇಜ್ ಕದನಕ್ಕೆ ಸಜ್ಜಾಗಿ, ಲೈವ್ ವೀಕ್ಷಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಮುಂಬೈನಲ್ಲಿ ಕಲುಷಿತ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಎಚ್ಚರಿಕೆ ವಹಿಸಿ, ಇಲ್ಲದಿದ್ದರೆ ಆರೋಗ್ಯಕ್ಕೆ ಕುತ್ತು!
35 ದಿನದಲ್ಲಿ 14 ಕೆ.ಜಿ ತೂಕ ಇಳಿಸಿಕೊಂಡ ಯುವತಿ; 94 ಸಾವಿರ ರೂ. ಬಹುಮಾನವನ್ನೂ ಗೆದ್ದಳು!!
ತೂಕ ಹೆಚ್ಚಳವಾಗುವುದು ಇತ್ತಿಚಿನ ಸಮಸ್ಯೆಗಳಲ್ಲಿ ಬಹುದೊಡ್ಡ ತಲೆನೋವಿಗೆ ಕಾರಣವಾಗಿರುವ ಸಮಸ್ಯೆಯಾಗಿದೆ. ತೂಕ ಇಳಿಸಲು ಈಗ ಹಲವು ರೀತಿಯ ಹರಸಾಹಸ ಪಡುವುದು ನೋಡಬಹುದು. ಡಯೆಟ್, ಊಟ ಬಿಡುವುದು, ವ್ಯಾಯಾಮ, ಜಿಮ್, ವಾಕಿಂಗ್, ರನ್ನಿಂಗ್, ಯೋಗ ಹೀಗೆ ಹತ್ತು ಹಲವು ಪ್ರಯತ್ನಗಳ ನಡುವೆ ತಿಂಗಳಲ್ಲಿ 1 ಕೆ.ಜಿ ಇಳಿಸಿಕೊಳ್ಳುವುದು ಕಷ್ಟವಾಗುತ್ತೆ.
ಹಾಗೆ ಈ ತೂಕ ಇಳಿಸಲು ಹಲವು ರೀತಿಯ ಔಷಧಿಗಳು ಸಹ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಕೆಲವೊಂದು ತೂಕ ಇಳಿಸುವ ಜೊತೆಗೆ ದೇಹಕ್ಕೆ ಹಾನಿ ಮಾಡುವುದು ಸಹ ನೋಡಬಹುದು. ಆದ್ರೆ ಯಾವುದೇ ರೀತಿಯ ಉಪಾಯದಿಂದ ನಿಮ್ಮ ತೂಕ ಇಳಿಸುವ ಪ್ರಯತ್ನ ಫಲ ನೀಡದೆ ಇರಬಹುದು. ಆದ್ರೆ ಇಲ್ಲೊಬ್ಬ ಯುವತಿ ಯಾರು ಕೂಡ ಅಂದಾಜಿಸದ ರೀತಿಯಲ್ಲಿ ತೂಕ ಇಳಿಸಿಕೊಂಡಿರುವುದು ಎಲ್ಲರ ಅಚ್ಚರಿಕೆ ಕಾರಣವಾಗಿದೆ.

ಚೀನಾದ 25 ವರ್ಷದ ಯುವತಿ ಝಾವೋ ಟೈಝು ಎಂಬಾಕೆ 35 ದಿನದಲ್ಲಿ ಬರೋಬ್ಬರಿ 14 ಕೆ.ಜಿ ತೂಕ ಇಳಿಸಿಕೊಂಡಿರುವುದು ಎಲ್ಲರ ಅಚ್ಚರಿಕೆ ಕಾರಣವಾಗಿದೆ. ಅಲ್ಲಿನ ಝೆಜಿಯಾಂಗ್ ಪ್ರಾಂತ್ಯದಲ್ಲಿ ಆಯೋಜಿಸಲಾಗಿದ್ದ ಸ್ಪರ್ಧೆಯಲ್ಲಿ ಭಾಗಿಯಾಗಿ ಬರೋಬ್ಬರಿ 14 ಕೆ.ಜಿ ಇಳಿಸಿಕೊಂಡಿದ್ದಾಳೆ.
ಈ ಸ್ಪರ್ಧೆಯ ಪ್ರಕಾರ ಕಾಡಿನಲ್ಲಿ ಅಷ್ಟು ದಿನ ಉಳಿಯುವುದು ಹಾಗೆ ಕಡಿಮೆ ಆಹಾರ ಸೇವಿಸುವುದಾಗಿತ್ತು. ಆಕೆ ಅಕ್ಟೋಬರ್ 1 ರಿಂದ ನವೆಂಬರ್ 5 ರವರೆಗೆ ಝಾವೋ ದ್ವೀಪದಲ್ಲಿಯೇ ಉಳಿದರು. ಇಷ್ಟು ದಿನಗಳ ಕಾಲ ಉಳಿದ ಆಕೆ ಮೂರನೆ ಸ್ಥಾನ ಪಡೆದು ಸುಮಾರು 7,500 ಯುವಾನ್ ಅಂದರೆ ಸುಮಾರು 94 ಸಾವಿರ ರೂಪಾಯಿ ಗೆದ್ದಿದ್ದಾಳೆ.
ಇದಲ್ಲದಕ್ಕಿಂತ ಆಕೆ 14 ಕೆ,ಜಿ ತೂಕ ಇಳಿಸಿಕೊಂಡಿದ್ದಾಳೆ. 35 ದಿನದಲ್ಲಿ ಯಾವುದೇ ಡಯೆಟ್ ಮಾಡಿದ್ರೂ ಕೂಡ ಇಷ್ಟು ಪ್ರಮಾಣದಲ್ಲಿ ತೂಕ ಇಳಿಸಲು ಸಾಧ್ಯವಾಗುತ್ತಿರಲಿಲ್ಲ. ಇದೊಂದು ಸರ್ವೈವಲ್ ಟಾಸ್ಕ್ ಆಗಿತ್ತು. ಈ ಸಮಯದಲ್ಲಿ ಎಷ್ಟು ದಿನಗಳ ಕಾಲ ಅವರು ಕಾಡಿನಲ್ಲಿ ನೆಲೆಸುತ್ತಾರೋ ಅಷ್ಟು ಹಣ ಅವಿಗೆ ಸಿಗಲಿದೆ.
ಕಾಡಿನಲ್ಲಿ ಇಲಿಗಳ ತಿಂದ ಯುವತಿ
34 ದಿನಗಳ ಕಾಲ ಕಾಡಿನಲ್ಲಿ ಉಳಿದ ಯುವತಿ ಆಹಾರಕ್ಕಾಗಿ ಅಲೆದಾಡುತ್ತಿದ್ದಳು, ಹಣ್ಣು, ಗಡ್ಡೆ ಗೆಣಸು ಸಹ ತಿಂದಿರುವುದಾಗಿ ಆಕೆ ಹೇಳಿಕೊಂಡಿದ್ದಾಳೆ. ಹಾಗೆ ಸಮುದ್ರದ ಅಂಚಿನಲ್ಲಿ ಸಿಗುವ ಬಸವನ ಹುಳು, ಇಲಿಗಳನ್ನು ಹಿಡಿದು ತಿಂದಿರುವುದಾಗಿ ಹೇಳಿದ್ದಾಳೆ. 35 ದಿನದಲ್ಲಿ ಆಕೆ ಸುಮಾರು 50 ಇಲಿಗಳನ್ನು ತಿಂದಿರುವುದಾಗಿ ಹೇಳಿದ್ದಾಳೆ. ಈ ಇಲಿಗಳು ಪ್ರೋಟೀನ್‌ನಿಂದ ತುಂಬಿದ್ದಲ್ಲದೆ ಅವುಗಳನ್ನು ಹುರಿದ ಬಳಿಕ ರುಚಿ ಕೂಡ ಅದ್ಭುತವಾಗಿತ್ತಂತೆ.
ನವೆಂಬರ್ 4 ರಂದು ಈ ದ್ವೀಪಕ್ಕೆ ಚಂಡಮಾರುತ ಅಪ್ಪಳಿಸಿತು, ಝಾವೋ ತನ್ನ ಸುರಕ್ಷತೆಯ ಬಗ್ಗೆ ಯೋಚಿಸುವಂತೆ ಮಾಡಿತು. ಇದರಿಂದ ಇನ್ನುಮುಂದೆ ಕಾಡಿನಲ್ಲಿ ಉಳಿಯಬಾರದು ಎಂದು ನಿರ್ಧರಿಸಿದಳು. ಹಾಗೆ ಮೂರನೇ ಸ್ಥಾನಕ್ಕೆ ಒಪ್ಪಿಕೊಂಡು ಕಾಡಿನಿಂದ ಹೊರಬಂದಳು. ಈ ಕಾಡಿನಲ್ಲಿ ಅತೀ ಹೆ್ಚ್ಚು ದಿನ ಉಳಿಯುವ ಮಂದಿಗೆ ಮೊದಲ ಬಹುಮಾನವಾಗಿ ಬರೋಬ್ಬರಿ 50 ಸಾವಿರ ಯುವಾನ ಅಂದರೆ ಭಾರತೀಯ ರೂಪಾಯಿಯಲ್ಲಿ ಬರೋಬ್ಬರಿ 6 ಲಕ್ಷ ರೂಪಾಯಿ ಸಿಗಲಿದೆ.
ಹಾಗೆ ಇಲ್ಲಿನ ಹುವಾನ್ ಪ್ರಾಂತ್ಯದ ಸೆವೆನ್ ಸ್ಟಾರ್ ಪರ್ವತದಲ್ಲಿ ಅತೀದೊಡ್ಡ ಸರ್ವೈವಲ್ ಸ್ಪರ್ಧೆ ಏರ್ಪಡಿಸಲಾಗುತ್ತದೆ. ಈ ಅಪಾಯಕಾರಿ ಪರ್ವತದಲ್ಲಿ ಅತೀ ಹೆಚ್ಚು ದಿನ ಉಳಿಯುವಂತಹ ಮೊದಲ ವಿಜಯಶಾಲಿಗೆ ಬರೋಬ್ಬರಿ 200,000 ಯುವಾನ್ ಅಂದರೆ 25 ಲಕ್ಷ ರೂಪಾಯಿ ನೀಡಲಾಗುತ್ತದೆ. ಹೀಗಾಗಿ ಈ ಸ್ಪರ್ಧೆಗಳಲ್ಲಿ ಭಾಗಿಯಾಗಲು ಸಾವಿರಾರು ಮಂದಿ ನೋಂದಾಯಿಸಿಕೊಳ್ಳುತ್ತಾರೆ.



Click it and Unblock the Notifications
