Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಸಿಟಿ ಸ್ಕ್ಯಾನ್ ಯಂತ್ರದೊಳಗೆ ಹೋದ ಯುವತಿ ಕೊನೆಯುಸಿರು..! ಏಕೆ ಗೊತ್ತಾ?
ಹಲವು ಅನಾರೋಗ್ಯಗಳ ತಪಾಸಣೆಯ ಸಮಯದಲ್ಲಿ ನೀವು ಕೂಡ ಸಿಟಿ ಸ್ಕ್ಯಾನ್‌ಗೆ ಒಳಗಾಗಿರಬಹುದು. ಇದನ್ನು Computed Tomography Scan ಎಂದು ಕರೆಯಲಾಗುತ್ತದೆ. ನಿಮ್ಮ ಇಡೀ ದೇಹವು ಕ್ಷಕಿರಣ ಹೊಂದಿರುವ ದೊಡ್ಡ ಯಂತ್ರದೊಳಗೆ ಹೋಗುವ ವಿಧಾನವಿದು. ಈ ಸಮಯದಲ್ಲಿ ನಿಮ್ಮ ದೇಹದ ಅಂಗದಲ್ಲಿ ಯಾವುದಾದರು ಸಮಸ್ಯೆಗಳಿದ್ದರೆ ವೈದ್ಯರಿಗೆ ತಿಳಿಯಲು ಸುಲಭವಾಗಿಸುವ ಪ್ರಕ್ರಿಯೆ ಇದು.
ಹಾಗೆ ಈ ಸ್ಕ್ಯಾನಿಂಗ್ ಮಾಡುವಾಗ ಹಲವು ನಿಯಮಗಳ ಪಾಲಿಸಲಾಗುತ್ತದೆ. ನಿಮ್ಮ ಮೈಮೇಲೆ ಯಾವುದೇ ಲೋಹಗಳು ಇಲ್ಲದಂತೆ ನೋಡಿಕೊಳ್ಳಲಾಗುತ್ತದೆ. ಹಾಗೆ ಒಂದಿಷ್ಟು ವೈದ್ಯಕೀಯ ಮುನ್ನೆಚ್ಚರಿಕೆ ಕೂಡ ಪಾಲಿಸುವುದು ಕಡ್ಡಾಯವಾಗಿದೆ. ಹಾಗೆ ಈ ಸ್ಕ್ಯಾನಿಂಗ್ ನಿರ್ವಹಿಸಲು ತಜ್ಞ ವೈದ್ಯರು ಹಾಗೂ ಸಿಬ್ಬಂದಿ ಜೊತೆಯಲ್ಲಿ ಇರುತ್ತಾರೆ.

ಆದ್ರೆ ಇಲ್ಲೊಂದು ಪ್ರಕರಣದಲ್ಲಿ 22 ವರ್ಷದ ಯುವತಿ ಸ್ಕ್ಯಾನಿಂಗ್ ಯಂತ್ರದಲ್ಲಿ ತೆರಳಿದ ಬಳಿಕ ಮೃತಪಟ್ಟಿರುವ ಆಘಾತಕಾರಿ ಘಟನೆ ನಡೆದಿದೆ. ಬ್ರೆಜಿಲ್‌ನ ಆಲ್ಟೋ ವೇಲ್ ಪ್ರಾದೇಶಿಕ ಆಸ್ಪತ್ರೆಯಲ್ಲಿ ಇಂತಹದೊಂದು ಘಟನೆ ವರದಿಯಾಗಿದೆ. ಮೃತರನ್ನು 22 ವರ್ಷದ ಲೆಟಿಸಿಯಾ ಪಾಲ್ ಎಂದು ಗುರುತಿಸಲಾಗಿದೆ.
ಆಕೆಯ ಸಾವಿಗೆ ಆಕೆಯ ಮೈಯಲ್ಲಿದ್ದ ಅಲರ್ಜಿ ಕಾರಣ ಎಂದು ತಿಳಿದುಬಂದಿದೆ. ಕಡಲೆಕಾಯಿ, ಚಿಪ್ಪುಮೀನು, ಪರಾಗ ಮತ್ತು ಜೇನುನೊಣ ಕಚ್ಚಿದಾಗ ಉಂಟಾಗುವ ಅಲರ್ಜಿಯ ಇತಿಹಾಸ ಹೊಂದಿದ್ದರು. ಆದ್ರೆ ಆಕೆ ಅಲರ್ಜಿಯನ್ನು ನಿರ್ಲಕ್ಷಿಸುವುದರ ಜೊತೆಗೆ ಅದಕ್ಕೆ ಚಿಕಿತ್ಸೆಯನ್ನು ಪಡೆದಿರಲಿಲ್ಲ ಎಂದು ತಿಳಿದುಬಂದಿದೆ. ಆಕೆಗೆ ಕಾಂಟ್ರಾಸ್ಟ್ ಏಜೆಂಟ್ ಅನ್ ಚುಚ್ಚಲಾಯಿತು, ಇದು ಸ್ಕ್ಯಾನಿಂಗ್ ಸಮಯದಲ್ಲಿ ನೀಡಲಾಗುವ ಇಂಜೆಕ್ಷನ್ ಆಗಿದೆ. ಇದು ದೇಹದ ಒಳಗಿನ ಅಂಗಗಳು ಮತ್ತು ರಕ್ತನಾಳಗಳನ್ನು ಹೈಲೆಟ್ ಮಾಡುತ್ತದೆ. ಇದರಿಂದ ಸ್ಕ್ಯಾನಿಂಗ್‌ನ ಫಲಿತಾಂಶ ಉತ್ತಮವಾಗುತ್ತದೆ.
ಅನಾಫಿಲ್ಯಾಕ್ಸಿಸ್ ಎಂದರೇನು?
ಆದರೆ ಈ ಇಂಜೆಕ್ಷನ್ ನೀಡಿದ ಕೆಲವ ನಿಮಿಷದಲ್ಲಿ ಆಕೆಯ ದೇಹ ವ್ಯತಿರಿಕ್ತವಾಗಿ ಪರಿಣಾಮ ಎದುರಿಸಿತು. ಅಂದರೆ ದೇಹವು ಅನಾಫಿಲ್ಯಾಕ್ಟಿಕ್ ಆಘಾತಕ್ಕೆ ತುತ್ತಾಯಿತು. ಇದು ಅಪರೂಪದ ಹಾಗೂ ಮಾರಣಾಂತಿಕ ಸ್ಥಿತಿ ಎಂದು ಪರಿಗಣಿಸಲಾಗಿದೆ. ಅನಾಫಿಲ್ಯಾಕ್ಟಿಕ್ ಎಂದರೆ ಇಡೀ ದೇಹದ ತೀವ್ರ, ಮಾರಣಾಂತಿಕ ಅಲರ್ಜಿಯ ಪ್ರತಿಕ್ರಿಯೆಯಾಗಿದ್ದು, ಇದು ತ್ವರಿತವಾಗಿ ಪ್ರಾರಂಭವಾಗುತ್ತದೆ. ಇದರಿಂದ ತಕ್ಷಣದ ಉಸಿರಾಟ ಸಮಸ್ಯೆ ಎದುರಾಗುವ ಅಪಾಯ ಹೆಚ್ಚಾಗಿರುತ್ತದೆ.
ಅನಾಫಿಲ್ಯಾಕ್ಸಿಸ್ ಆಘಾತವನ್ನು ಅಲರ್ಜಿಯ ಪ್ರತಿಕ್ರಿಯೆಗಳ ಅತ್ಯಂತ ಅಪಾಯಕಾರಿ ರೂಪಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಸಾಮಾನ್ಯ ಅಲರ್ಜಿಗಳಲ್ಲಿ ಮೂಗು ಸೋರುವಿಕೆ, ಸೀನುವಿಕೆ ಅಥವಾ ಸೌಮ್ಯವಾದ ದದ್ದುಗಳು ಉಂಟಾಗುವುದಕ್ಕಿಂತ ಭಿನ್ನವಾಗಿರುತ್ತದೆ. ಕೆಲವೇ ನಿಮಿಷದಲ್ಲಿ ಇಡಈ ದೇಹದ ತುಂಬ ಇದು ಹರಡುತ್ತದೆ.
ಕಾಂಟ್ರಾಸ್ಟ್ ಡೈಗಳು ಅಯೋಡಿನ್ ಆಧಾರಿತ ದ್ರವಗಳಾಗಿವೆ, ಇವುಗಳನ್ನು ರಕ್ತನಾಳಗಳಿಗೆ ಚುಚ್ಚಲಾಗುತ್ತದೆ ಇಲ್ಲವೆ ಹಾಗೆ ಕುಡಿಯಲು ಕೂಡ ನೀಡಬಹುದು. ಈ ದ್ರವವು ರಕ್ತನಾಳಗಳಲ್ಲಿನ ಅಡೆತಡೆಯಿಂದ ಹಿಡಿದು ಆಂತರಿಕ ರಕ್ತಸ್ರಾವ ಗುರುತಿಸಲು ಕೂಡ ಸಹಕಾರಿಯಾಗುತ್ತದೆ. ಈ ಚುಚ್ಚುಮದ್ದಿನಿಂದ ಯಾವುದೇ ಅಡ್ಡಪರಿಣಾಮ ಇಲ್ಲದೆ ಇದ್ದರೂ ಕೆಲವೇ ಕೆಲವು ರೋಗಿಗಳು ಕೆಲವು ನಿಮಿಷಗಳ ಕಾಲ ಅಥವಾ ಗಂಟೆಗಳ ಕಾಲ ಅದರಿಂದ ಅಡ್ಡಪರಿಣಾಮ ಎದುರಿಸಬಹುದು. ಆದ್ರೆ ಇದರಿಂದ ಪ್ರಾಣಕ್ಕೆ ಹಾನಿಯಾಗುವುದು ಅಪರೂಪ.
ಹಾಗೆ ಈ ಕಾಂಟ್ರಾಸ್ಟ್ ಚುಚ್ಚು ಮದ್ದು ನೀಡಿದಾಗಲೆಲ್ಲ. ಆಸ್ಪತ್ರೆಗಳು ಅದರ ವಿರೋಧಿ ಔಷಧಿಯನ್ನು ಕೂಡ ಸಿದ್ದ ಮಾಡಿಟ್ಟುಕೊಂಡಿರುತ್ತವೆ. ಆದ್ರೆ ಈ ಪ್ರಕರಣದಲ್ಲಿ ಆಕೆಯ ದೇಹ ವೇಗವಾಗಿ ಅಲರ್ಜಿಗೆ ಗುರಿಯಾದ ಪರಿಣಾಮ ಜೀವ ಉಳಿಸಲು ಸಮಯ ಸಿಗಲಿಲ್ಲ ಎಂದು ತಿಳಿದುಬಂದಿದೆ. ಈ ಕಾಂಟ್ರಾಸ್ಟ್ ಚುಚ್ಚು ಮದ್ದಿನ ಅಡ್ಡಪರಿಣಾಮ ತಡೆಯಲು ಹೆಚ್ಚಿನದಾಗಿ ಎಪಿನ್ಪ್ರಿನ್ ಅಥವಾ ಅಡ್ರಿನಾಲಿನ್ ಇಂಜೆಕ್ಷನ್ ನೀಡಲಾಗುತ್ತದೆ. ಇದು ರಕ್ತದ ಚಲನೆಯನ್ನು ಸಲೀಸಾಗಿಸುತ್ತದೆ.



Click it and Unblock the Notifications


