Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಒಂದೇ ಮಂಟಪದಲ್ಲಿ ಇಬ್ಬರು ಬಾಲ್ಯ ಸ್ನೇಹಿತೆಯರ ವಿವಾಹವಾದ ಯುವಕ!!
ವಿವಾಹ ಅನ್ನೋದು ಸ್ವರ್ಗದಲ್ಲಿ ನಿಶ್ಚಯ ಆಗುತ್ತೆ ಅನ್ನೋ ಮಾತಿದೆ. ಸೂಕ್ತ ವಧು ಅಥವಾ ವರನನ್ನು ಹುಡುಕುವಾಗಲೇ ಹಲವರಿಗೆ ವಯಸ್ಸಾಗುತ್ತದೆ. ಹೀಗಾಗಿ ಸಂಬಂಧಿಕರ ವಿವಾಹವಾಗುವುದು, ಹಾಗೆ ಚಿಕ್ಕವರಿಂದ ಒಟ್ಟಿಗೆ ಬೆಳೆದ ಸ್ನೇಹಿತರು ದಂಪತಿಗಳಾಗುವುದು ನೋಡಬಹುದು. ಅಥವಾ ಸಂಬಂಧಿಕರಲ್ಲಿ ವಿವಾಹವಾಗುವುದು ಭಾರತೀಯ ಸಂಸ್ಕ್ರತಿಯಲ್ಲಿ ಸಾಮಾನ್ಯ ಎನ್ನುವಂತಾಗಿದೆ. ಆದ್ರೆ ಇಲ್ಲೊಬ್ಬ ವ್ಯಕ್ತಿ ಇಬ್ಬರು ಸ್ನೇಹಿತೆಯರನ್ನು ಒಂದೇ ವೇದಿಕೆಯಲ್ಲಿ ವಿವಾಹವಾಗುವ ಮೂಲಕ ಅಚ್ಚರಿಗೆ ಕಾರಣನಾಗಿದ್ದಾನೆ.
ಚಿತ್ರದುರ್ಗದ ಹೊರಪೇಟೆಯಲ್ಲಿ 28 ವರ್ಷದ ವಸೀಮ್ ಶೇಖ್ ಎಂಬಾತ ಇಬ್ಬರು ಯುವತಿಯನ್ನು ವಿವಾಹವಾಗಿದ್ದಾನೆ. ವಸೀಮ್ ಶೇಖ್, ಶಿಫಾ ಶೇಖ್ ಮತ್ತು ಜನ್ನತ್ ಮಖಂಡರ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಈ ವಿವಾಹ ಕಂಡು ಹಲವರು ಅಚ್ಚರಿ ಹಾಗೆ ಮತ್ತೆ ಕೆಲವರು ದಂಗಾಗಿದ್ದಾರೆ. ಇತ್ತೀಚಿನ ದಿನದಲ್ಲಿ ವಿವಾಹಕ್ಕೆ ಸೂಕ್ತ ವಧು ವರರನ್ನು ಹುಡುಕುವುದು ಸವಾಲಿನ ಕೆಲಸ ಆಗಿದೆ. ಆದ್ರೆ ಈತ ಇಬ್ಬರನ್ನು ವರಿಸಿರುವುದು ನೋಡಿ ಜನರು ಅಚ್ಚರಿಗೊಳಗಾಗಿದ್ದಾರೆ.

ವರದಿಯ ಪ್ರಕಾರ, ಅಕ್ಟೋಬರ್ 16 ರಂದು ವಾಸಿಮ್ ಶೇಖ್ ಎಂಬ ವ್ಯಕ್ತಿ ಇಬ್ಬರು ಯುವತಿಯರ ವಿವಾಹವಾದರು. ಇಬ್ಬರೂ ಹುಡುಗಿಯರು ಹುಡುಗನ ಬಾಲ್ಯದ ಸ್ನೇಹಿತರು ಎಂದು ಹೇಳಲಾಗುತ್ತಿದೆ. ಒಬ್ಬರು ಶಿಫಾ ಶೇಖ್ ಮತ್ತು ಇನ್ನೊಬ್ಬರು ಜನ್ನತ್ ಮಖಂಡರ್. ಅವರು ಮೂವರು ಒಟ್ಟಿಗೆ ವಿವಾಹವಾದರು ಮಾತ್ರವಲ್ಲ, ವಿವಾಹ ಸಮಾರಂಭವೂ ಅದ್ಧೂರಿಯಾಗಿತ್ತು ಮತ್ತು ಅವರ ಕುಟುಂಬಗಳು ಸಂತೋಷದಿಂದ ನವದಂಪತಿಗೆ ಹರಿಸಿದರು.
ಫೋಟೋದಲ್ಲಿ ಇಬ್ಬರು ವಧು ಒಂದೇ ರೀತಿಯ ಬಟ್ಟೆಗಳನ್ನು ಧರಿಸಿರುವುದನ್ನು ನೋಡಬಹುದು. ಹಾಗೆ ವರನು ಸೂಟ್ ಮತ್ತು ಬೂಟಿನಲ್ಲಿ ಕಾಣಿಸಿಕೊಂಡಿದ್ದಾನೆ. ಸಮಾರಂಭದಲ್ಲಿ ಮೂವರು ತಮ್ಮ ಸಂಬಂಧಿಕರು ಮತ್ತು ಸ್ನೇಹಿತರನ್ನು ಸಂತೋಷದಿಂದ ಸ್ವಾಗತಿಸುತ್ತಿರುವುದು ವೀಡಿಯೊದಲ್ಲಿ ನೋಡಬಹುದು.
ಹಾಗೆ ಮೂರು ಕುಟುಂಬಗಳು ಒಪ್ಪಿದ ಬಳಿಕವೇ ಈ ವಿವಾಹಕ್ಕೆ ಒಪ್ಪಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ. ಹಾಗೆ ಇಬ್ಬರು ಒಟ್ಟಿಗೆ ಇರುವುದಾಗಿ ಒಪ್ಪಿಕೊಂಡಿದ್ದಾರೆ. ಆದ್ರೆ ಕಾನೂನಿನ ಅಡಿಯಲ್ಲಿ ಬಹುಪತ್ನಿತ್ವ ನಿಷೇಧವಾಗಿದೆ. ಈ ವಿವಾಹಗಳಿಗೆ ಕಾನೂನಿನ ಅಡಿಯಲ್ಲಿ ಮಾನ್ಯವಿಲ್ಲ ಆದ್ರೆ ಈವರೆಗೆ ಬಹುತ್ನಿತ್ವದಂತಹ ಪ್ರಕರಣದಲ್ಲಿ ಯಾರನ್ನು ಬಂಧಿಸಿರುವುದು ವರದಿಯಾಗಿಲ್ಲ. ಇತ್ತೀಚಿಗೆ ತೆಲಂಗಾಣದಲ್ಲೂ ಇದೇ ರೀತಿಯ ಪ್ರಕರಣವೊಂದು ವರದಿಯಾಗಿತ್ತು. ಆದ್ರೆ ಅಲ್ಲಿಯೂ ಯಾವುದೇ ಕಾನೂನು ಕ್ರಮ ಆಗಿರಲಿಲ್ಲ ಎಂದು ತಿಳಿದುಬಂದಿದೆ.
ಚಿತ್ರದುರ್ಗದ ಈ ಘಟನೆ ಈಗ ಚರ್ಚೆಯ ವಿಷಯವಾಗಿದೆ. ಹಾಗೆ ಸಾಮಾಜಿಕ ಜಾಲಯಾಣದಲ್ಲಿ ವಿಡಿಯೋ ಫೋಟೋಗಳು ವೈರಲ್ ಆಗುತ್ತಿವೆ. ಈ ಮದುವೆಯನ್ನು ಹಲವರು ಬೆಂಬಲಿಸಿದರೂ, ಅನೇಕರು ಇದನ್ನು ವಿರೋಧಿಸಿದ್ದಾರೆ. ಬಾಲ್ಯ ಸ್ನೇಹಿತರು ಒಟ್ಟಿಗೆ ಇರಬೇಕಾದರೆ ವಿವಾಹವೊಂದೇ ಮಾರ್ಗವಲ್ಲ ಎಂಬ ಒಂದು ವರ್ಗದ ವಾದವನ್ನು ನೋಡಬಹುದು. ಹಾಗೆ ಇದರಿಂದ ಕಾನೂನು ಉಲ್ಲಂಘನೆ ಹಾಗೆ ಮುಂದಿನ ಪೀಳಿಗೆಗೆ ಇಂತಹ ಉದಾಹರಣೆಗಳು ಮತ್ತಷ್ಟು ಪ್ರೇರೇಪಿಸಬಹುದು ಎಂದು ಎಲ್ಲರ ಶಂಕೆಯಾಗಿದೆ. ಇಂತಹ ವಿವಾಹವನ್ನು ಕಾನೂನಿನ ಅಡಿ ತರಬೇಕು ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಪೋಸ್ಟ್ ಅನ್ನು ಇನ್ಸ್‌ಸ್ಟಾಗ್ರಾಮ್ ಖಾತೆಗಳಲ್ಲಿ ಹಂಚಿಕೊಳ್ಳಲಾಗಿದೆ. ಹಾಗೆ ಈ ಪೊಸ್ಟ್ ಕೆಳಗೆ ಸಾವಿರಾರು ಮಂದಿ ಕಮೆಂಟ್ ಮಾಡಿದ್ದಾರೆ. ಅದರಲ್ಲೀ ಹಲವರು ಈ ವಿವಾಹ ನೋಡಿ ಶಾಕ್ ಆಗಿದ್ದಾರೆ. ಒಂದು ಹುಡುಗಿಯೊಂದಿಗೆ ವಿವಾಹವಾಗಲು ಪರದಾಡುತ್ತಿರುವಾಗ ಈತ ಯಾರೋ ಇಬ್ಬರನ್ನು ಒಂದೇ ವೇದಿಕೆಯಲ್ಲಿ ಮದುವೆಯಾಗಿರುವುದು ಕಂಡು ಅಚ್ಚರಿ ಹೊರಹಾಕಿದ್ದಾರೆ.
ಹಾಗೆ ಆತನನ್ನು ಅದೃಷ್ಟವಂತ ಎಂದು ಕರೆದಿದ್ದಾರೆ. ಹಾಗೆ ಹಲವರು ಆತನಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಇಬ್ಬರನ್ನು ರಾಜಿ ಮಾಡುವಲ್ಲಿ ಆತ ಯಾವ ಪ್ಲಾನ್ ಮಾಡಿದ್ದಾನೆ ಕೇಳಬೇಕು ಎಂದು ಬಳಕೆದಾರರೊಬ್ಬರು ಬರೆದುಕೊಂಡಿದ್ದಾರೆ.



Click it and Unblock the Notifications
