Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಇವನ ಸ್ಯಾಲರಿ 4.5 ಲಕ್ಷ! ಏನಪ್ಪಾ ಅವನ ಕೆಲಸ? ತಿಳಿದ್ರೆ ಶಾಕ್ ಆಗ್ತೀರಾ
ನಂಬ್ತೀರಾ? ನಾಯಿ ವಾಕಿಂಗ್ ಮಾಡಿಸಿ ತಿಂಗಳಿಗೆ 4.5 ಲಕ್ಷ ಗಳಿಸ್ತಿದ್ದಾನೆ ಈ ಹುಡುಗ! ನಾವೂ ಕಲಿಯಬಹುದು ಅಲ್ವಾ? ಓದು ಮತ್ತು ಸಂಪಾದನೆಗೆ ಸಂಬಂಧವಿಲ್ಲ ಅಂತ ಕೆಲವರು ಹೇಳ್ತಾರೆ. ಏಕೆಂದರೆ ಕೆಲವರು ದೊಡ್ಡ ಶಿಕ್ಷಣವನ್ನು ಪಡೆದು ಸಾವಿರ ರೂಪಾಯಿ ಗಳಿಸಿದರೆ, ಇನ್ನೂ ಕೆಲವರು ಸ್ಮಾರ್ಟ್ ಆಗಿ ಯೋಚಿಸಿ ಲಕ್ಷಾಂತರ ರೂಪಾಯಿ ಗಳಿಸುತ್ತಿದ್ದಾರೆ. ಇಲ್ಲಿ ಶಿಕ್ಷಣದ ಪ್ರಸ್ತಾಪವಿಲ್ಲ ಎಂಬುದು ಗಮನಾರ್ಹ ಸಂಗತಿ. ಇತ್ತೀಚೆಗೆ ಮಹಾರಾಷ್ಟ್ರದ ಡಾಗ್ ವಾಕರ್ (Dog Walker) ಕಥೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈತ ತಿಂಗಳಿಗೆ 4.5 ಲಕ್ಷ ಗಳಿಸ್ತಾನೆ. ಶಾಕ್ ಆಗಬೇಡಿ, ಇದು ಸತ್ಯಕ್ಕೆ ಹತ್ತಿರ.
ದೇಶದಲ್ಲಿ ಪದವಿಗಳನ್ನು ಪಡೆಯಲು ಮತ್ತು ದೊಡ್ಡ ಉದ್ಯೋಗಗಳನ್ನು ಹುಡುಕಲು ಯುವಕರು ಹತಾಶರಾಗಿ ಓಡುತ್ತಾರೆ. ಹೆಚ್ಚಿನ ಪೋಷಕರು ತಮ್ಮ ಮಕ್ಕಳು ಇಂಜಿನಿಯರ್, ವೈದ್ಯರು ಅಥವಾ ಎಂಬಿಎ ಪದವಿ ಪಡೆಯಬೇಕೆಂದು ಬಯಸುತ್ತಾರೆ. ಆದರೆ, ಮಹಾರಾಷ್ಟ್ರದ ಓರ್ವ ಯುವಕ ಅಚ್ಚರಿಯ ದಿಕ್ಕಿನಲ್ಲಿ ಸಾಗಿ ಇಡೀ ದೇಶವೇ ಬೆರಗಾಗುವಂತೆ ತನ್ನ ಜೀವನವನ್ನು ಬದಲಾಯಿಸಿಕೊಂಡಿದ್ದಾನೆ. ಆತನೇ ಈ ಡಾಗ್ ವಾಕರ್. ಅಂದರೆ ಸಾಕು ನಾಯಿಗಳನ್ನು ಪ್ರತಿದಿನ ಹೊರಗೆ ಕರೆದುಕೊಂಡು ಹೋಗಿ ವಾಕಿಂಗ್ (pet walking) ಮಾಡಿಸುವ ವ್ಯಕ್ತಿ. ಈ ಯುವಕ ಅನೇಕ ಯುವಕರಿಗೆ ಮಾದರಿಯಾಗಿದ್ದಾನೆ.

ಪ್ರತಿ ನಾಯಿಗೂ ಕನಿಷ್ಠ 15,000 ರೂ.!
ಈಗ ವಿಷಯಕ್ಕೆ ಬರೋಣ. ಇತ್ತೀಚಿನ ದಿನಗಳಲ್ಲಿ ಪ್ರಾರಂಭವಾದ 'ಪೆಟ್ ವಾಕಿಂಗ್' ಒಂದು ಸಣ್ಣ ಕೆಲಸದಂತೆ ತೋರುತ್ತದೆ. ಆದರೆ, ಈತ ತಿಂಗಳಿಗೆ ಬರೋಬ್ಬರಿ 4.5 ಲಕ್ಷ ರೂಪಾಯಿ ಸಂಪಾದಿಸುತ್ತಾನೆ. ಆತ ಮಾಡುವ ಕೆಲಸ ಅನೇಕರಿಗೆ ಅಸಡ್ಡೆಯೆನಿಸಿದರೂ, ನಿತ್ಯ 38 ನಾಯಿಗಳನ್ನು ವಾಕಿಂಗ್ ಮಾಡಿಸುತ್ತಾನೆ. ಪ್ರತಿ ಸಾಕು ಪ್ರಾಣಿಗೂ ದಿನಕ್ಕೆ ಎರಡು ಬಾರಿ ವಾಕಿಂಗ್ ಮಾಡಿಸುತ್ತಾನೆ. ಪ್ರತಿ ನಾಯಿಗೂ ತಿಂಗಳಿಗೆ ಕನಿಷ್ಠ 15,000 ರೂ. ಪಡೆಯುತ್ತಾನೆ. ಒಟ್ಟಾರೆಯಾಗಿ, ತಿಂಗಳಿಗೆ ಸುಮಾರು 4.5 ಲಕ್ಷ ರೂ. ಜೇಬಿಗೆ ಇಳಿಸುತ್ತಾನೆ. ಇದು ಸಾಫ್ಟ್‌ವೇರ್ ಇಂಜಿನಿಯರ್ ಅಥವಾ ವೈದ್ಯರಿಗಿಂತ ಹೆಚ್ಚಿನ ಆದಾಯವಾಗಿದೆ.
ತಮ್ಮನಿಗಿಂತ ಆರು ಪಟ್ಟು ಹೆಚ್ಚು ಸ್ಯಾಲರಿ
ಇಲ್ಲಿ ಆಶ್ಚರ್ಯಕರ ವಿಷಯವೆಂದರೆ, ಆತನ ತಮ್ಮ ವಿದೇಶದಲ್ಲಿ ಎಂಬಿಎ ವ್ಯಾಸಂಗ ಮಾಡಿ ಈಗ ಕಂಪನಿಯೊಂದರಲ್ಲಿ ಉತ್ತಮ ಹುದ್ದೆಯಲ್ಲಿದ್ದಾನೆ. ಈತ ತಿಂಗಳಿಗೆ 70,000 ರೂ. ಸಂಪಾದಿಸುತ್ತಿದ್ದಾನೆ. ಆದರೆ, ಪದವಿಗಿಂತ ಸಾಕುಪ್ರಾಣಿಗಳ ಮೇಲಿನ ಪ್ರೀತಿಯಿಂದ ದುಡಿಯುತ್ತಿರುವ ಅಣ್ಣನಿಗೆ ಆರು ಪಟ್ಟು ಹೆಚ್ಚು ಹಣ ಸಿಗುತ್ತಿದೆ. ನೋಡಲು 'ನೀವು ಡಾಗ್ ವಾಕರ್' ಎಂದು ಮೂಗು ಮುರಿಯುತ್ತೀರಿ. ಆದರೆ, ಮಹಾನಗರಗಳಲ್ಲಿ ಪೆಟ್ ಕೇರ್ ಮೇಲಿನ ಆಸಕ್ತಿ ದಿನದಿಂದ ದಿನಕ್ಕೆ ಬದಲಾಗುತ್ತಿದೆ. ವರದಿಯ ಪ್ರಕಾರ, 2026ರ ವೇಳೆಗೆ ಭಾರತೀಯ ಪೆಟ್ ಕೇರ್ ಮಾರುಕಟ್ಟೆಯ ಮೌಲ್ಯ 7,500 ಕೋಟಿ ರೂ. ದಾಟುತ್ತದೆ.
ಇವನಿಗೆ ಬೇಡಿಕೆ ಹೆಚ್ಚು, ಕೇಳಿದಷ್ಟು ಹಣ
ಈ ಯುವಕ ನಾಯಿಗಳನ್ನು ಎರಡು ಹೊತ್ತು ವಾಕಿಂಗ್‌ಗೆ ಕರೆದೊಯ್ಯುತ್ತಾನೆ. ಕೇವಲ ವಾಕಿಂಗ್ ಮಾತ್ರವಲ್ಲದೆ, ಅವುಗಳ ಫಿಟ್‌ನೆಸ್ ಮತ್ತು ಯೋಗಕ್ಷೇಮವನ್ನು ಸಹ ಈತನೇ ನೋಡಿಕೊಳ್ಳುತ್ತಾನಂತೆ. ಇದರಿಂದ ಆತನಿಗೆ ಬೇಡಿಕೆ ಹೆಚ್ಚಾಗಿದೆ. ಐಷಾರಾಮಿ ಪ್ರದೇಶಗಳಲ್ಲಿ ವಾಸಿಸುವ ಜನರು ತಮ್ಮ ಸಾಕುಪ್ರಾಣಿಗಳಿಗಾಗಿ ಇವನನ್ನು ನೇಮಿಸಿಕೊಳ್ಳುತ್ತಿದ್ದಾರೆ. ಕೇಳಿದಷ್ಟು ಹಣವನ್ನು ಸಹ ನೀಡುತ್ತಿದ್ದಾರೆ. ಇದರಿಂದ ಈತನ ಸ್ಟೋರಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಪ್ರಾಮಾಣಿಕತೆ, ಬದ್ಧತೆ ಮತ್ತು ಶಿಸ್ತು ಇರಬೇಕು
ಮುಂಬೈ, ದೆಹಲಿಯಂತಹ ಮಹಾನಗರಗಳಲ್ಲಿ ಡಾಗ್ ವಾಕರ್‌ಗಳ ಬೇಡಿಕೆ ಹೆಚ್ಚಾಗಿದೆ. ಮೆಟ್ರೋ ನಗರಗಳಲ್ಲಿ ಈಗ ಡಾಗ್ ವಾಕರ್‌ಗಳು ಮತ್ತು ಪೆಟ್ ಸಿಟ್ಟರ್‌ಗಳು ತಿಂಗಳಿಗೆ ಲಕ್ಷಗಳಲ್ಲಿ ಆದಾಯ ಗಳಿಸುವ ಸಾಧ್ಯತೆಯಿದೆ. ದಿನಕ್ಕೆ ಹತ್ತು, ಇಪ್ಪತ್ತು ನಾಯಿಗಳನ್ನು ನೋಡಿಕೊಳ್ಳಲು ಸಾಧ್ಯವಾದರೆ, ಶಿಫ್ಟ್, ಪ್ರೀಮಿಯಂ ಕ್ಲೈಂಟ್‌ಗಳು, ವೈಯಕ್ತಿಕ ಸೇವೆಗಳೊಂದಿಗೆ ಅದು ಒಂದು ಶಕ್ತಿಯುತ ವೃತ್ತಿಯಾಗುತ್ತದೆ. ಆದರೆ, ಈ ಕ್ಷೇತ್ರದಲ್ಲಿ ಸ್ಥಿರವಾಗಿರಲು ಪ್ರಾಮಾಣಿಕತೆ, ಬದ್ಧತೆ ಮತ್ತು ಶಿಸ್ತು ಇರಬೇಕು.
ಒಟ್ಟಾರೆಯಾಗಿ, ತಿಂಗಳು ಪೂರ್ತಿ ಕಷ್ಟಪಟ್ಟು ದುಡಿದರೂ ಕೆಲವೇ ಸಾವಿರಗಳನ್ನು ಗಳಿಸಲು ಸಾಧ್ಯವಾಗದವರು ಇಲ್ಲಿ ಹೆಚ್ಚಾಗಿದ್ದಾರೆ. ಆದರೆ, ಮಹಾರಾಷ್ಟ್ರದ ಒಬ್ಬ ಯುವಕ (maharashtra dog walker) ಪ್ರತಿದಿನ 38 ನಾಯಿಗಳನ್ನು ವಾಕಿಂಗ್ ಕರೆದುಕೊಂಡು ಹೋಗಿ, ತಿಂಗಳಿಗೆ 4.5 ಲಕ್ಷ ಆದಾಯ ಗಳಿಸುತ್ತಿದ್ದಾನೆ. 'ಡಾಗ್ ವಾಕರ್' ಎಂಬ ಈ ಉದ್ಯೋಗದ ಮೂಲಕ ಇವನು ಎಂಬಿಎ ಪದವೀಧರನಾಗಿರುವ ತನ್ನ ತಮ್ಮನಿಗಿಂತಲೂ ಹೆಚ್ಚು ಸಂಪಾದಿಸುತ್ತಿದ್ದಾನೆ. ನಮ್ಮೂರಲ್ಲೂ ಇಂತಹ ಉದ್ಯೋಗ ಜಾರಿಗೆ ಬಂದ್ರೆ ಹೇಗಿರುತ್ತೆ ಅಂತಾ ಅನೇಕರು ಕುತೂಹಲಗೊಂಡಿದ್ದಾರೆ.



Click it and Unblock the Notifications
