Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಬೆಂಕಿ ಸಹಾಯವಿಲ್ಲದೆ ಬಿಸಿಲಿನಲ್ಲಿ ಮೀನು ಫ್ರೈ ಮಾಡಿದ ಮಹಿಳೆ..!
ಉತ್ತರ ಭಾರತದಲ್ಲಿ ಹೀಟ್ ವೇವ್ ಮುನ್ನೆಚ್ಚರಿಕೆ ನಡುವೆ ತಾಪಪಾನ ಏರಿಕೆ ಜನರನ್ನು ಚಿಂತೆಗೀಡು ಮಾಡಿದೆ. ಈ ನಡುವೆ ಅಲ್ಲಿನ ಬಿಸಿಗಾಳಿ ಎಷ್ಟು ಭೀಕರ ತಾಪಮಾನಕ್ಕೆ ಕಾರಣವಾಗಿದೆ ಎಂಬ ಕುರಿತ ಹಲವು ವಿಡಿಯೋಗಳು ಹರಿದಾಡುತ್ತಿವೆ.
ಆದರೆ ಇಲ್ಲೊಂದು ವಿಡಿಯೋದಲ್ಲಿ ಮಹಿಳೆ ಬಿಸಿಲಿನಲ್ಲಿ ಮೀನು ಫ್ರೈ ಮಾಡುತ್ತಿದ್ದಾಳೆ. ಹೌದು ನಿಮಗೆ ಅಚ್ಚರಿ ಎನಿಸಬಹುದು. ಆಕೆ ಬಿಸಿಲಿನಲ್ಲಿ ಕುಳಿತು ಮೀನು ಫ್ರೈ ಮಾಡುತ್ತಿರುವು ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಉತ್ತರ ಭಾರತದಲ್ಲಿ ತಾಪಮಾನವು ಗಗನಕ್ಕೇರುತ್ತಲೇ ಇದೆ. ಈ ಬಿರು ಬೇಸಿಗೆಯಲ್ಲಿ ಜನ ಮನೆಯಿಂದ ಹೊರಬರುವುದೇ ಕಷ್ಟವಾಗಿದೆ. ಹೊರಬಂದರೆ ನೆತ್ತು ಸುಡುವಷ್ಟು ಶಾಖಕ್ಕೆ ಬಸವಳಿದು ಬೆಂಡಾಗುತ್ತಿದ್ದಾರೆ. ಹೀಗಾಗಿ ಜನರಿಗೆ ಐಎಂಡಿ ಬಿಸಿಗಾಳಿಯ ಸಮಯದಲ್ಲಿ ಎಚ್ಚರಿಕೆಯಿಂದಿರಲು ಸೂಚಿಸಿರುತ್ತದೆ.
ಆದರೆ ಜನರು ಮಾತ್ರ ಈ ತಾಪಮಾನದ ದಿನದಲ್ಲೂ ಚಿತ್ರ ವಿಚಿತ್ರ ಕೆಲಸಗಳ ಮಾಡಿ ಸುದ್ದಿಯಾಗುತ್ತಿದ್ದರೆ. ಈಗ ಮಹಿಳೆಯೊಬ್ಬಳು ಬಿಸಿಲಿನಲ್ಲಿ ಎಣ್ಣೆ ಇಟ್ಟು ಅದಕ್ಕೆ ಮೀನು ಹಾಕಿ ಫ್ರೈ ಮಾಡುತ್ತಿರುವುದು ಕಂಡುಬಂದಿದ್ದು, ಈ ವಿಡಿಯೋ ಚರ್ಚೆಯ ಜೊತೆಗೆ ಸಾಕಷ್ಟು ವೈರಲ್ ಆಗಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ ಮಹಿಳೆಯೊಬ್ಬರು ಸೂರ್ಯನ ಬೆಳಕಿನಲ್ಲಿ ಮೀನುಗಳನ್ನು ಫ್ರೈ ಮಾಡಲು ಪ್ರಯತ್ನಿಸುತ್ತಿದ್ದಾರೆ. ಬಿಸಿಲ ಬೇಗೆಯ ನಡುವೆಯೂ ಮಹಿಳೆ ರೈಲ್ವೆ ಹಳಿಯ ಪಕ್ಕದಲ್ಲಿ ಕುಳಿತು ಸ್ಟೌವ್ ಇಲ್ಲದೆ ಮೀನು ಫ್ರೈ ಮಾಡುತ್ತಿದ್ದಾಳೆ. ಆ ಪಾತ್ರೆಗೆ ಯಾವುದೇ ಬೆಂಕಿ ಹಚ್ಚಿರುವುದಾಗಲಿ, ಪಾತ್ರೆಯ ಕೆಳಗೆ ಬೆಂಕಿ ಉರಿಯುತ್ತಿರುವುದಾಗಲಿ ಕಾಣಿಸುವುದಿಲ್ಲ.
ಆದರೆ ಎಣ್ಣೆಯಲ್ಲಿ ಮೀನು ಫ್ರೈ ಆಗುತ್ತಿರುವುದನ್ನು ನಾವು ನೋಡಬಹುದು. ಈ ವಿಡಿಯೋ ನೋಡಿದ ಮಂದಿ ನಿಜಕ್ಕೂ ಶಾಕ್ ಆಗಿದ್ದಾರೆ. ಇದು ಹೇಗೆ ಸಾಧ್ಯ ಎಂಬ ಪ್ರಶ್ನೆ ಸಹ ಎದುರಾಗಿದೆ. ಎಷ್ಟೇ ಬಿಸಿಲು ಇದ್ದರೂ ಎಣ್ಣೆ ಕುದಿಯಲು ಹೇಗೆ ಸಾಧ್ಯ ಎಂಬ ಪ್ರಶ್ನೆ ಮೂಡಿದೆ. ಜೊತೆಗೆ ಹಲವರು ಇದೊಂದು ನಕಲಿ ವಿಡಿಯೋ ಎನ್ನುತ್ತಿದ್ದಾರೆ.
ಏಕೆಂದರೆ ಬಿಸಿಲಿನಲ್ಲಿ ಎಣ್ಣೆ ಕುದಿಯಲು ಸಾಧ್ಯವೇ ಇಲ್ಲ ಎಂಬುದು ವಾದವಾಗಿದೆ. ಆಕೆ ಮೊದಲೇ ಬಿಸಿ ಮಾಡಿದ್ದ ಎಣ್ಣೆಯಲ್ಲಿ ಮೀನು ಹಾಕಿ ಪ್ರೈ ಮಾಡುವ ವಿಡಿಯೋ ಮಾಡಿದ್ದಾರೆ. ಏಕೆಂದರೆ ಎಣ್ಣೆ ಒಮ್ಮೆ ಬಿಸಿಯಾದರೆ ಬಹಳ ಸಮಯದ ವರೆಗೂ ಅದರ ಬಿಸಿ ಹಾಗೆಯೇ ಇರುತ್ತದೆ. ಈ ವಿಡಿಯೋದಲ್ಲಿ ಇದೇ ರೀತಿ ಆಗಿದೆ ಎಂದು ಹಲವರು ಹೇಳುತ್ತಿದ್ದಾರೆ. ಎಣ್ಣೆ ಕುದಿಯುವಷ್ಟು ತಾಪಮಾನ ಇರಲು ಸಾಧ್ಯವೇ ಇಲ್ಲ ಏಕೆಂದರೆ ಅವರು ಸಹ ಅದೇ ಬಿಸಿಲಿನಲ್ಲಿದ್ದಾರೆ. ಒಂದು ವೇಳೆ ಎಣ್ಣೆ ಕುದಿಯುತ್ತಿದ್ದರೆ ಅವರು ಆ ಬಿಸಿಲಿನಲ್ಲಿ ನಿಂತುಕೊಳ್ಳಲು ಹೇಗೆ ಸಾಧ್ಯ ಎಂಬುದು ಇಲ್ಲಿ ಪ್ರಶ್ನೆಯಾಗಿದೆ.
ಈ ವಿಡಿಯೋ ನೋಡಿದ ಲಕ್ಷ ಲಕ್ಷ ಮಂದಿಯ ಪ್ರಶ್ನೆಯೂ ಇದೇ ಆಗಿದೆ. ಹಾಗಾದ್ರೆ ಈ ರೀತಿ ವಿಡಿಯೋ ಮಾಡುವ ಉದ್ದೇಶವೇನು ಎಂದು ಪ್ರಶ್ನಿಸಿದ್ದಾರೆ. ಈ ವಿಡಿಯೋ 8 ಮಿಲಿಯನ್‌ಗೂ ಅಧಿಕ ವೀಕ್ಷಣೆ ಕಂಡಿದೆ.
ಇದೊಂದೆ ಅಲ್ಲ ಇದಕ್ಕು ಮೊದಲು ಮಹಿಳೆಯೊಬ್ಬರು ನಡು ರಸ್ತೆಯಲ್ಲಿ ಮೊಟ್ಟೆ ಒಡೆದು ಆಮ್ಲೆಟ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿತ್ತು. ಆಕೆ ರಸ್ತೆಯ ಮಧ್ಯದಲ್ಲಿ ಮೊಟ್ಟೆಯನ್ನು ಹಾಕಿ ಆಮ್ಲೆಟ್ ಮಾಡುವ ಯತ್ನ ಮಾಡಿದ್ದು ಸಹ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿತ್ತು. ಈ ಪ್ರಯತ್ನ ಮಾಡುವ ಬದಲು ಮನೆಯಲ್ಲೇ ಮಾಡಿ ಸವಿಯಬಹುದು. ಈ ರೀತಿ ರಸ್ತೆಯಲ್ಲಿ ಹಾಕಿ ಯಾರು ಈ ಆಹಾರ ಸೇವಿಸುತ್ತಾರೆ. ಇದೆಲ್ಲ ಹುಚ್ಚುತನ ಎಂದು ನೆಟ್ಟಿಗರು ಆಕೆಗೆ ಕ್ಲಾಸ್ ತೆಗೆದುಕೊಂಡಿದ್ದರು.



Click it and Unblock the Notifications
