Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಪ್ರಭಾಸ್ ಮನೆಯಲ್ಲಿ ₹1 ಕೋಟಿಯ ಮರ..! ಏನಿದರ ಸ್ಪೆಷಲ್ ಗೊತ್ತಾ?
ಸಿನಿಮಾ ಮಂದಿ ಏನೇ ಮಾಡಿದ್ರು ಸುದ್ದಿಯಾಗೋದು ಕಾಮನ್. ಅವರ ಜೀವನ ಶೈಲಿ ಕುರಿತು ಎಲ್ಲರಿಗೂ ಕುತೂಹಲ ಇರೋದು ನೋಡಬಹುದು. ಹಾಗೆ ತೆಲುಗು ಸಿನಿಮಾದಿಂದ ಡಾರ್ಲಿಂಗ್ ಹೆಸರು ಪಡೆದಿರುವ ಹಾಗೆ ಬಾಹುಬಲಿ ಸಿನಿಮಾದಿಂದ ಪಾನ್ ಇಂಡಿಯಾ ಸ್ಟಾರ್ ಆಗಿರುವ ಪ್ರಭಾಸ್‌ಗೆ ಈಗ ವಿಶ್ವದಾದ್ಯಂತ ಅಭಿಮಾನಿಗಳಿದ್ದಾರೆ.
ಹಾಗೆ ಪ್ರಭಾಸ್ ತಮ್ಮ ಜೀವನ ಶೈಲಿಯಿಂದಾಗಿ ಬಹಳ ಸುದ್ದಿಯಾಗುತ್ತಾರೆ. ಅವರ ಜುಬ್ಲಿ ಹಿಲ್ಸ್‌ನಲ್ಲಿನ ದೊಡ್ಡ ಬಂಗಲೆ, ಅವರ ಫಾರ್ಮ್ ಹೌಸ್ ಸೇರಿ ಕಾರುಗಳಿಂದಲೂ ಸುದ್ದಿಯಾಗುವುದು ನೋಡಬಹುದು. ಆದ್ರೆ ಈಗ ಪ್ರಭಾಸ್ ತಮ್ಮ ಮನೆಗೆ ಅದೃಷ್ಟ ತರುವಂತಹ ಮರವೊಂದರ ವಿಚಾರವಾಗಿ ಸುದ್ದಿಯಾಗಿದ್ದಾರೆ. ಹೌದು ಪ್ರಭಾಸ್ ತಮ್ಮ ಮನೆಗೆ ಈ ಅದೃಷ್ಟ ತರುವ ಮರವನ್ನು ತಂದಿದ್ದು, ಈ ಎಲ್ಲೆಡೆ ಸುದ್ದಿಯಾಗಿದೆ.

ಈ ಅದೃಷ್ಟ ತರುವಂತಹ ಮರಕ್ಕೆ ಅವರು ಬರೋಬ್ಬರಿ 1 ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ ಎಂದು ವರದಿಯಾಗಿದೆ. ಅದು ಬೇರೆ ಯಾವುದು ಅಲ್ಲ, ಕಲ್ಪವೃಕ್ಷ ಮರವಾಗಿದೆ. ಹಿಂದೂ ಪುರಾಣಗಳಲ್ಲಿ ಈ ಕಲ್ಪವಕ್ಷ ಮರಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ. ದೇವರುಗಳ ಕಾಡಿನಲ್ಲಿ ಕಂಡುಬರುವ ಈ ಮರವು ಭಕ್ತರ ಇಚ್ಛೆಗಳನ್ನು ಪೂರೈಸುವ ಮರ ಎಂದು ಹೇಳಲಾಗುತ್ತದೆ.
ಶಾಂತಿ, ಸಂತತಿ ಮತ್ತು ಸಂಪತ್ತಿನ ಉದ್ದೇಶಗಳಿಗಾಗಿ ಕೆಲವರು ಗೃಹಪ್ರವೇಶದ ಸಮಯದಲ್ಲಿ ಪೂಜಾ ಸ್ಥಳಗಳಲ್ಲಿ ಅಥವಾ ವಿಶೇಷವಾಗಿ ಹಿತ್ತಲಿನಲ್ಲಿ ಈ ಮರವನ್ನು ನೆಡುತ್ತಾರೆ. ಆ ಮರದ ಮೌಲ್ಯವು ಅದರ ಆಯಸ್ಸಿನ ಮೇಲೆ ನಿರ್ಧರಿತ ಆಗಲಿದೆ. ಹಾಗೆ ಪ್ರಭಾಸ್ ಮನೆಗೆ ಬಂದಿರುವುದು ಸುಮಾರು 100 ವರ್ಷ ಹಳೆಯ ಮರ ಎನ್ನಲಾಗುತ್ತಿದೆ. ಇದರಿಂದ ಅದೃಷ್ಟದ ಹರಿವು ಹೆಚ್ಚಾಗಲಿದೆ ಎಂದು ನಂಬಲಾಗಿದೆ. ಹೀಗಾಗಿ ಈ ಮರದ ಬೆಲೆ ಕೂಡ 1 ಕೋಟಿ ರೂಪಾಯಿ ದಾಟಿದೆ ಎಂದು ತಿಳಿದುಬಂದಿದೆ.
ಈ ಮರವನ್ನು ವಿಶೇಷವಾಗಿ ಹೈದರಾಬಾದ್‌ನಲ್ಲಿ ನಿರ್ಮಿಸುತ್ತಿರುವ ಐಷಾರಾಮಿ ಹೊಸ ಮನೆಯಲ್ಲಿ ಇಡಲು ನಿರ್ಧರಿಸಲಾಗಿದೆ. ಹಾಗೆ ಈ ಮರವನ್ನು ಎಲ್ಲಿಂದ ತರಲಾಗಿದೆ ಎಂಬ ಕುರಿತಾಗಿಯೂ ಒಂದೊಂದು ರೀತಿಯ ವಿಚಾರಗಳು ಈಗ ಹರಿದಾಡುತ್ತಿವೆ.
ಮುಖೇಶ್ ಅಂಬಾನಿ ಮನೆಯಲ್ಲೂ ಇದೇ ಮರ!
ರಿಲಾಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಅವರ ನಿವಾಸದಲ್ಲು ಅದೃಷ್ಟಕರ ಹಾಗೆ ದುಬಾರಿ ಬೆಲೆಯ ಆಲಿವ್ ಮರವಿದೆ. ಇದನ್ನು ಆಂಧ್ರ ಪ್ರದೇಶದ ರಾಜಮಂಡ್ರಿ ಬಳಿಕ ಕಡಿಯಂನಲ್ಲಿರುವ ನರ್ಸರಿಯಿಂದ ಅವರ ಮನೆಗೆ ತರಲಾಗಿತ್ತು. ಇದು ಕೂಡ 170ರಿಂದ 200 ವರ್ಷ ಹಳೆಯ ಮರ ಎಂದು ತಿಳಿದುಬಂದಿದೆ. ಈ ಮರಗಳನ್ನು ಗುಜರಾತ್‌ನ ಜಾಮ್‌ನಗರದಲ್ಲಿರುವ ಅಂಬಾನಿ ನಿವಾಸದಲ್ಲಿ ಇರಿಲಾಗಿದೆ.
ದೀರ್ಘಕಾಲ ಬದುಕುಳಿಯಬಲ್ಲ ಸಾಮರ್ಥ್ಯ ಹೊಂದಿರುವ ಮರಗಳಲ್ಲಿ ಆಲಿವ್ ಮರಗಳು ಕೂಡ ಒಂದಾಗಿವೆ, ಇದು 1000ಕ್ಕಿಂತ ಹೆಚ್ಚು ವರ್ಷ ಬದುಕಲ್ಲವು ಎಂದು ಕೂಡ ಹೇಳಲಾಗಿದೆ. ಇನ್ನು ಅಂಬಾನಿ ನಿವಾಸಕ್ಕೆ ನೀಡಲಾದ ಮರವು 200 ವರ್ಷದ್ದಿರಬಹುದು ಎನ್ನಲಾಗಿದೆ. ಹಾಗೆ ಇದರ ಬೆಲೆ ಸುಮಾರು 70 ಲಕ್ಷಕ್ಕೂ ಅಧಿಕ ಎಂದು ವರದಿಯಾಗಿತ್ತು.
ಕಲ್ಪವೃಕ್ಷ ಮರದ ಪ್ರಯೋಜನವೇನು?
ಕಲ್ಪವೃಕ್ಷ ಎಂದರೆ ಬೇಡಿದನ್ನು ನೀಡುವುದು ಅಥವಾ ಅದರ ಪ್ರತಿಯೊಂದು ಭಾಗವು ಉಪಯೋಗಕ್ಕೆ ಬರುವುದು ಎಂದರ್ಥವಿದೆ. ಇಷ್ಟಾರ್ಥಗಳನ್ನು ಇಡೇರಿಸುವುದು ಎಂದು ಪುರಾಣಗಳಲ್ಲಿ ಹೇಳಲಾಗಿದೆ. ತೆಂಗಿನ ಮರಕ್ಕೂ ಕಲ್ಪವೃಕ್ಷ ಎನ್ನಲಾಗುತ್ತದೆ. ಏಕೆಂದರೆ ತೆಂಗಿನ ಮರದ ಯಾವುದೇ ಅಂಶವು ವ್ಯರ್ಥವಾಗುವುದಿಲ್ಲ ಎಲ್ಲ ಅಂಶಗಳು ಉಪಯೋಗಕ್ಕೆ ಬರುತ್ತವೆ. ಹಿಂದೂ ಪುರಾಣಗಳಲ್ಲಿ ಹಲವು ಮರಗಳನ್ನು ಕಲ್ಪವೃಕ್ಷ ಎಂದು ಸಂಬೋಧಿಸಲಾಗಿದೆ. ಪಾರಿಜಾತ ಮರವನ್ನು ಕೂಡ ಕಲ್ಪವೃಕ್ಷ ಎನ್ನಲಾಗುತ್ತದೆ. ಈ ಮರ ಸ್ವರ್ಗದಲ್ಲಿ ಮಾತ್ರ ಕಾಣಿಸುತ್ತಿತ್ತಂತೆ ಆದ್ರೆ ಅರ್ಜುನನು ಭೂಲೋಕಕ್ಕೆ ಅದನ್ನು ತಂದಿದ್ದನು ಎಂದು ನಂಬಲಾಗಿದೆ.



Click it and Unblock the Notifications









