Latest Updates
-
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ! -
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ! -
ಗಣೇಶ ವಿಸರ್ಜನೆ ಮೆರವಣಿಗೆ: ಬೆನ್ನು, ಮೊಣಕಾಲು ನೋವು ತಡೆಯಲು 12 ನಿಮಿಷದ ಸ್ಮಾರ್ಟ್ ರೊಟೀನ್ ಇಲ್ಲಿದೆ!
₹20 ಲಕ್ಷದ ಟಾಯ್ಲೆಟ್ ಕಮೋಡ್ ಇದು..! ವಿಶೇಷ ಕೇಳಿದ್ರೆ ಶಾಕ್ ಆಗ್ತಿರಾ..!
ಐಷಾರಾಮಿ ಜೀವನ ನಡೆಸಬೇಕು ಅನ್ನೋದು ಎಲ್ಲರ ಆಸೆಯಾಗಿರುತ್ತೆ, ಆದ್ರೆ ಎಲ್ಲರಿಂದ ಇದು ಸಾಧ್ಯವಿರುವುದಿಲ್ಲ. ಐಷಾರಾಮಿ ಜೀವನ ಅಂದ್ರೆ ಕೈತುಂಬ ಹಣವಿರಬೇಕು ಇದೊಂದೇ ಐಷಾರಾಮಿಗೆ ಮೂಲ. ಇತ್ತೀಚಿಗೆ ಐಷಾರಾಮಿ ಜೀವನವೇ ಹೊಸ ಟ್ರೆಂಡ್ ಆಗಿದೆ.
ಜನ ಐಷಾರಾಮಿ ಜೀವನ ನಡೆಸೋದನ್ನು ಟ್ರೆಂಡ್ ಮಾಡಿಕೊಳ್ಳುತ್ತಾರೆ. ಹೇಗೆ ಅಂದ್ರೆ ದುಬಾರಿ ಫೋನ್ ಖರೀದಿಸೋದು, ದುಬಾರಿ ವಾಚ್‌ಗಳು, ಡೈಮಂಡ್, ಗೋಲ್ಡ್‌ನಿಂದ ಮಾಡಲಾದ ವಸ್ತುಗಳ ಖರೀದಿಸುವುದು, ಲಕ್ಷ ಲಕ್ಷ ಬೆಲೆಯ ಬ್ಯಾಗ್‌ಗಳ ಖರೀದಿ ಮಾಡುವುದು ಹೀಗೆ ಅಗತ್ಯವಿಲ್ಲದ ವಸ್ತುವಿಗೂ ಹೆಚ್ಚುವರಿಯಾಗಿ ಹಣ ನೀಡಿ ಖರೀದಿಸುವುದೇ ಐಷಾರಾಮಿ ಜೀವನಕ್ಕೆ ಉದಾಹರಣೆಯಾಗಿದೆ.

ಆದರೆ ಈ ವಸ್ತುಗಳಿಲ್ಲದೆ ಇದ್ದರೂ ಯಾವ ಬದಲಾವಣೆಯೂ ಆಗುವುದಿಲ್ಲ ಆದರೆ ಜನ ಐಷಾರಾಮಿ ವಸ್ತುವಿನಿಂದ ಹೆಚ್ಚು ಸಂತೋಷ ಮತ್ತು ಆತ್ಮತೃಪ್ತಿ ಪಡೆಯುತ್ತಾರೆ. ಇದೀಗ ಇಂತಹ ಐಷಾರಾಮಿ ವಸ್ತುಗಳ ಸಾಲಿಗೆ ಬಾತ್‌ರೂಮ್ ಕಮೋಡ್ ಸಹ ಸೇರಿಕೊಂಡಿದೆ. ಹೌದು ಇತ್ತೀಚಿನ ಎಲ್ಲಾ ಮನೆಯಲ್ಲೂ ಬಾತ್‌ರೂಮ್ ಸಹ ಐಷಾರಾಮಿಯಾಗಿ ಕಾಣಬೇಕು ಎಂದು ಎಲ್ಲರು ಬಯಸುತ್ತಾರೆ. ಬಾತ್‌ರೂಮ್‌ಗೂ ಲಕ್ಷ ಲಕ್ಷ ಖರ್ಚು ಮಾಡಿ ಸುಂದರವಾಗಿಸುತ್ತಾರೆ.
ಆದರೆ ನಾವಿಲ್ಲಿ ಹೇಳ ಹೊರಟಿರೋದು ಲಕ್ಷ ಲಕ್ಷ ಬೆಲೆಯ ಕಮೋಡ್‌ಗಳ ಕುರಿತು. ಹೌದು ಈ ಎರಡು ಕಮೋಡ್‌ಗಳ ಬೆಲೆ ಬರೋಬ್ಬರಿ 16ರಿಂದ 20 ಲಕ್ಷ ರೂಪಾಯಿಗಳು, ಇದು ಅಚ್ಚರಿಯಾದರು ಸತ್ಯ, ಬರೋಬ್ಬರಿ 20 ಲಕ್ಷ ರೂಪಾಯಿ ನೀಡಿದರೆ ಈ ಸ್ಮಾರ್ಟ್ ಕಮೋಡ್ ನಿಮ್ಮ ಬಾತ್‌ರೂಮ್‌ನಲ್ಲಿ ಜಾಗ ಪಡೆಯುತ್ತದೆ. ಹಾಗಾದ್ರೆ ಈ ಕಮೋಡ್‌ನಲ್ಲಿ ಅಂತಹದ್ದೇನಿದೆ ಅನ್ನೋದನ್ನು ನೋಡಿ.
ಬಾತ್‌ರೂಮ್ ವಸ್ತುಗಳ ತಯಾರು ಮಾಡುವ ಪ್ರಸಿದ್ಧ ಕಂಪನಿಯಾದ ಕೊಹ್ಲರ್ ಈ ಎರಡು ಕಮೋಡ್‌ಗಳ ಬಿಡುಗಡೆ ಮಾಡಿದೆ. ಇದನ್ನು ನ್ಯೂಮಿ 2.0 ಎಂದು ಹೆಸರಿಸಿದೆ. ಇದೊಂದು ಅತ್ಯಾಧುನಿಕ ಸ್ಮಾರ್ಟ್ ಟಾಯ್ಲೆಟ್ ಕಮೋಡ್ ಆಗಿದೆ. ಈ ಟಾಯ್ಲೆಟ್ ಕಮೋಡ್ ಅನ್ನು ಪ್ರದರ್ಶಿಸಲು ದೊಡ್ಡ ಈವೆಂಟ್ ಅನ್ನೇ ಕಂಪನಿ ಮಾಡಿತ್ತು.
ಈ ಈವೆಂಟ್‌ನಲ್ಲಿ ಮಾತನಾಡಿದ್ದ ಏಷ್ಯಾ ಪೆಸಿಫಿಕ್ ಅಧ್ಯಕ್ಷ ನಾವು ಗ್ರಾಹಕರ ಜೊತೆ ಗಿಮಿಕ್ ಪ್ರದರ್ಶನ ಮಾಡಲ್ಲ, ನಾವು ಏನು ಹೇಳುತ್ತೇವೋ ಅದನ್ನೇ ಮಾಡುತ್ತೇವೆ. ಇಲ್ಲಿರೋದು ಬರಿ ಕಮೋಡ್ ಅಲ್ಲ, ಇದೊಂದು ಸ್ಮಾರ್ಟ್ ಕಮೋಡ್ ನೀವು ಇದನ್ನು ಊಹಿಸಿರಲು ಸಾಧ್ಯವಿಲ್ಲ ಎಂದಿದ್ದಾರೆ.
Numi 2.0 ವಿಶೇಷತೆ ಏನು.?
Numi ವಿಶೇಷವಾಗಿ ಅದರ ವಿನ್ಯಾಸದಿಂದಲೇ ಸುದ್ದಿಯಾಗಿದೆ. ಇದರ ಜೊತೆ ಟೈಟಾನಿಯಂ-ಲೇಪಿತ ಕಪ್ಪು ಗಾಜಿನ ಹೊರಭಾಗ ಹೊಂದಿದೆ. ಈ ಕಮೋಡ್ ಅನ್ನು ನೀವಿ ನಿಮ್ಮ ಧ್ವನಿಯಿಂದಲೇ ಬಳಸಬಹುದು ಇಲ್ಲವೆ ನಿಯಂತ್ರಿಸಬಹುದು. ಜೊತೆಗೆ ಇದು ಸಂಗೀತವನ್ನು ನುಡಿಸುತ್ತದೆ. ಅತೀ ಚಿಕ್ಕ ಜಾಗದಲ್ಲೂ ಇದನ್ನು ಇಡಬಹುದು. ಜೊತೆಗೆ ಲೈಟ್ ಆಕ್ಟೀವ್, ಸೆನ್ಸಾರ್‌ಗಳು, ಯುವಿ ಲೈಟ್ ಕ್ಲೀನಿಂಗ್, ಸ್ವಯಂ ಚಾಲಿತ ಮುಚ್ಚಳ ಹೀಗೆ ಹತ್ತಾರು ವೈಶಿಷ್ಟ್ಯ ಹೊಂದಿದೆ.
ಸ್ಮಾರ್ಟ್ ಫೋನ್‌ಗೆ ಕನೆಕ್ಟ್ ಮಾಡಬಹುದು
ಇನ್ನೂ ಅಚ್ಚರಿ ಎಂದರೆ ನೀವು ನಿಮ್ಮ ಸ್ಮಾರ್ಟ್‌ಫೋನ್‌ಗೆ ಈ ಕಮೋಡ್ ಜೊತೆ ಕನೆಕ್ಟ್ ಮಾಡಬಹುದು. ನೀವು ಮೊಬೈಲ್‌ನಲ್ಲಿ ಆಪರೇಟ್ ಮಾಡಿದರೆ ಸಾಕು ಇದು ನಿಯಂತ್ರಿಸಲ್ಪಡುತ್ತದೆ. ಮೊಬೈಲ್‌ನಿಂದ ಮುಚ್ಚಳ ತೆಗೆಯಬಹುದು, ನೀರು ಹಾಕಬಹುದು, ಲೈಟ್ ಆನ್ ಆಫ್, ಮ್ಯೂಸಿಕ್ ಹೀಗೆ ಹತ್ತಾರು ಕೆಲಸ ಮೊಬೈಲ್‌ನಿಂದಲೇ ಮಾಡಬಹುದು.



Click it and Unblock the Notifications
