Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಸಮುದ್ರ ತೀರಕ್ಕೆ ಬಂತು ವಿಚಿತ್ರ ಮೀನು..! ಇದರ ವಿಶೇಷ ಏನು ಗೊತ್ತಾ?
ಸಾಗರದಾಳದಲ್ಲಿ ಎಷ್ಟು ಜೀವರಾಶಿಗಳಿವೆ ಎಂಬುದನ್ನು ಊಹಿಸುವುದು ಸಹ ಕಷ್ಟವೇ. ಏಕೆಂದರೆ ಸಮುದ್ರದಾಳದ ಸಂಪೂರ್ಣ ಅಧ್ಯಯನ ಇಂದಿಗೂ ಸಾಧ್ಯವಾಗಿಲ್ಲ. ಆಳ ಸಮುದ್ರ ಜೀವಿಗಳೆಂದು ಒಂದಿಷ್ಟು ಪ್ರಾಣಿಗಳ ಗುರುತಿಸಿದ್ದರೂ ಕೆಲವೊಂದನ್ನು ಇಂದಿಗೂ ಕಂಡುಹಿಡಿಯಲು ಆಗಿಲ್ಲ.
ಹೀಗಾಗಿಯೇ ಹಲವು ಬಾರಿ ನಮಗೆ ವಿಚಿತ್ರ ರೀತಿಯ ಪ್ರಾಣಿಗಳು ಸಮುದ್ರದ ತೀರದಲ್ಲಿ, ಬೆಲೆ ಸಿಲುಕುವುದು ನಡೆಯುತ್ತಲೇ ಇರುತ್ತದೆ. ಜೊತೆಗೆ ಹಲವು ಬಾರಿ ಹೊಸ ಹೊಸ ಪ್ರಬೇದದ ಪ್ರಾಣಿಗಳು ಕಾಣಸಿಗುತ್ತವೆ. ಅದರಲ್ಲೂ ಮೀನುಗಳ ಜಾತಿಗೆ ಸೇರಿದ ಅದೇಷ್ಟೊ ಪ್ರಾಣಿಗಳು ಇಂದಿಗೂ ಆಳ ಸಮುದ್ರದಲ್ಲಿವೆ.

ಈಗ ಇಂತಹದ್ದೆ ಒಂದು ವಿಚಿತ್ರ ಮೀನೊಂದು ಸಮುದ್ರ ತೀರ ತಲುಪಿದ್ದು ನೋಡುಗರು ಶಾಕ್ ಆಗಿದ್ದಾರೆ. ಅಮೆರಿಕದ ಒರೆಗಾನ್ ಸ್ಟೇಟ್‌ನ ಕ್ಯಾನನ್ ಬೀಚ್‌ನಲ್ಲಿ ಈ ವಿಚಿತ್ರ ಮೀನೊಂದು ಕಂಡುಬಂದಿದೆ. ತಲೆಯ ಮೇಲೆ ಸಣ್ಣ ಕೂದಲಿನಂತಹ ಆಕೃತಿ ಹೊಂದಿರುವ ಈ ಕಪ್ಪು ಮೀನನ್ನು ಪೆಸಿಫಿಕ್ ಫುಟ್‌ವಾಲ್ ಫಿಶ್ ಎಂದು ಕರೆಯಲಾಗಿದೆ. ಇದರ ವೈಜ್ಞಾನಿಕ ಹೆಸರು ಹಿಮಾಂಟೊಲೋಫಸ್ ಸಾಗಮಿಯಸ್ ಎಂದು ಕರೆಯಲಾಗುತ್ತದೆ.
ಇದು ಸಮುದ್ರದ ಆಳದಲ್ಲಿ ಕಂಡು ಬರುವ ಜೀವಿಯಾಗಿದ್ದು, ಬರೋಬ್ಬರಿ 2,000-3,300ಕ್ಕೂ ಹೆಚ್ಚೂ ಆಳ ಸಮುದ್ರದಲ್ಲಿ ಇದು ಜೀವಿಸುತ್ತದೆ ಎಂದು ತಿಳಿದುಬಂದಿದೆ. ಪೆಸಿಫಿಕ್ ಫುಟ್ಬಾಲ್ ಮೀನು ಅತ್ಯಂತ ಅಪರೂಪ ಆಳದಲ್ಲಿ ಸಂಪೂರ್ಣ ಕತ್ತಲೆಯಲ್ಲಿ ವಾಸಿಸುತ್ತದೆ. ಈ ಮೀನನ್ನು ಮನುಷ್ಯ ಜೀವಂತವಾಗಿ ಸೆರೆಹಿಡಿದ ಅಥವಾ ನೋಡಿದ ಉದಾಹರಣೆ ಇಲ್ಲವಂತೆ.
ಕೇವಲ 31 ಬಾರಿ ನೋಡಿರುವ ದಾಖಲೆ
ಜಗತ್ತಿನಾದ್ಯಂತ ಕೇವಲ 31 ಬಾರಿ ಈ ಜಾತಿಯ ಮೀನಿನ ಮಾದರಿಗಳನ್ನು ನೋಡಿರುವುದಾಗಿ ದಾಖಲಿಸಲಾಗಿದೆ. ನ್ಯೂಜಿಲೆಂಡ್, ಜಪಾನ್, ರಷ್ಯಾ, ಹವಾಯಿ, ಈಕ್ವೆಡಾರ್, ಚಿಲಿ ಮತ್ತು ಕ್ಯಾಲಿಫೋರ್ನಿಯಾದಲ್ಲಿ ಬೆರಳೆಣಿಕೆಯಷ್ಟು ಫುಟ್‌ಬಾಲ್ ಮೀನುಗಳು ದಾಖಲಾಗಿವೆ, ಇದು ನಮ್ಮ ಜ್ಞಾನಕ್ಕೆ ಒರೆಗಾನ್ ಕರಾವಳಿಯಲ್ಲಿ ವರದಿಯಾದ ಮೊದಲನೆಯ ಪ್ರಕರಣವಿದು ಎಂದು ಹೇಳಲಾಗಿದೆ.
ಈ ಮೀನು ಬೇಟೆಯಾಡುವುದೇ ವಿಚಿತ್ರ
ಈ ಮೀನು ಕತ್ತಲೆಯಲ್ಲಿ ಮಾತ್ರ ಬೇಟೆಯಾಡಲು ಮುಂದಾಗುತ್ತದೆ. ಅದರ ಬೆನ್ನ ಮೇಲಿರುವ ಕೂದಲಿನಂತ ಆಕೃತಿಯು ಕತ್ತಲೆಯಲ್ಲಿ ಹೊಳೆಯುತ್ತದೆ. ಅದು ಹುಳುಗಳಂತೆ ಕಾಣಿಸುತ್ತದೆ. ಅದನ್ನು ತನ್ನ ಬಾಯಿ ಮುಂದೆ ನೇರವಾಗಿ ಬಾಗಿಸಿ ಅಲುಗಾಡಿಸಲು ಮುಂದಾಗುತ್ತದೆ. ಅದರ ಬೆಳಕು ದೂರದ ವರೆಗೂ ಹೊಳೆಯುತ್ತದೆ. ಹೀಗಾದಾಗ ದೂರದಲ್ಲಿ ಅದನ್ನು ಕಂಡ ಸಣ್ಣ ಸಣ್ಣ ಮೀನು, ಕೀಟಗಳು ಅದನ್ನು ತಿನ್ನಲು ಬರುತ್ತವೆ. ಆಗ ಫುಟ್‌ಬಾಲ್ ಫಿಶ್ ಅವುಗಳ ಬೇಟೆಯಾಡುತ್ತದೆ.
ಇದು ವರ್ಷಕ್ಕೆ ಒಮ್ಮೆ ಸಂತಾನೋತ್ಪತ್ತಿಯಲ್ಲಿ ತೊಡಗುತ್ತವೆ. ಅಚ್ಚರಿ ಅಂದರ ಒಂದು ಗಂಡು ಮೀನು ಜೀವನದಲ್ಲಿ ಒಮ್ಮೆ ಮಾತ್ರವೇ ಸಂತಾನೋತ್ಪತ್ತಿ ಕರುಣಿಸಬಹುದಂತೆ. ಆಳ ಸಮುದ್ರದಲ್ಲಿಯೇ ಮೊಟ್ಟೆಗಳ ಮೂಲಕ ಮರಿ ಮಾಡುತ್ತವೆ. ಇತ್ತ ಈ ಮೀನುಗಳ ಆಯಸ್ಸು ಸಹ ಹೆಚ್ಚಾಗಿರುತ್ತದೆ ಎನ್ನಲಾಗಿದೆ.
ಇತ್ತ ಇವು ಆಳ ಸಮುದ್ರದಲ್ಲಿದ್ದರೂ ಸಮುದ್ರ ತೀರ ತಲುಪಿದ್ದು ಹೇಗೆ ಎಂಬುದು ಪ್ರಶ್ನೆಯಾಗಿಯೇ ಉಳಿದಿದೆ. ಇಲ್ಲಿ ತಜ್ಞರಿಗೂ ಇದಕ್ಕೆ ಉತ್ತರ ಸಿಕ್ಕಿಲ್ಲ. ಕಡಲ ಆಳದಿಂದ ಈ ಮೀನು ತೀರಕ್ಕೆ ತಲುಪಿದ್ದು ಹೇಗೆ ಎಂಬುದು ತಿಳಿದುಬಂದಿಲ್ಲ. ಅವು ಕಡಲಾಳದಲ್ಲಿ ಮೃತಪಟ್ಟು ತೀರ ತಲುಪುತ್ತವೆ ಎಂದು ನಂಬಲಾಗಿದೆ. ಅವು ಮೃತಪಟ್ಟಾಗ ಯಾವ ಜಲಚರಗಳು ಅವುಗಳನ್ನು ತಿನ್ನದಿದ್ದರೆ ಅವು ಸಮುದ್ರ ತೀರಕ್ಕೆ ತಲುಪುತ್ತವೆ ಎಂದು ಹೇಳಲಾಗುತ್ತಿದೆ. ಸದ್ಯ ಇಂತಹ ಜೀವಸಂಕುಲಗಳ ರಕ್ಷಿಸಬೇಕಾದ ಅನಿವಾರ್ಯತೆ ಇದ್ದು, ಆದ್ರೆ ಸಮುದ್ರದಲ್ಲಿ ಉಂಟಾಗುತ್ತಿರುವ ಕಲುಶಿತ ವಾತಾವರಣ ಜಲಚರಗಳ ಜೀವಕ್ಕೆ ಅಪಾಯವಂತು ತಂದೊಡ್ಡಿದೆ.



Click it and Unblock the Notifications
