Latest Updates
-
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ! -
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್ -
ಮಳೆಗಾಲದಲ್ಲಿ ನಿಮ್ಮ ಮನೆಯ ಗಿಡಗಳು ಸಾಯುತ್ತಿವೆಯೇ? ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಮಳೆಗಾಲದಲ್ಲಿ ಕರೆಂಟ್ ಹೋದರೆ ಫ್ರಿಜ್ ಆಹಾರ ಹಾಳಾಗುತ್ತಾ? ಸುರಕ್ಷಿತವಾಗಿಡಲು ಇಲ್ಲಿವೆ ಸರಳ ಟಿಪ್ಸ್
ರಾಕ್ಷಸ ಮುಖದ ವಿಚಿತ್ರ ಮೀನು ನೀವೆಂದು ನೋಡಿರಲು ಸಾಧ್ಯವಿಲ್ಲ..! ಇಲ್ಲಿದೆ ವಿಡಿಯೋ..!
ಸಾಗರದ ಆಳ ಎಂಬುದು ಗೌಪ್ಯ ಪ್ರಪಂಚ ಅಲ್ಲಿ ಯಾವ ರೀತಿಯ ಚಿತ್ರ ವಿಚಿತ್ರ ಜೀವ ರಾಶಿಗಳು ನೆಲೆಸಿವೆ ಎಂಬುದನ್ನು ನಾವು ಕಲ್ಪಿಸಿಕೊಳ್ಳಲು ಸಹ ಸಾಧ್ಯವಿಲ್ಲ. ಅತ್ಯಂತ ಅಪರೂಪದ ಜೀವ ಸಂಕುಲ ಸಮುದ್ರದಲ್ಲಿ ಮಾತ್ರ ನೋಡಲು ಸಿಗುತ್ತವೆ. ಕೆಲವು ಬಾರಿ ಅವು ನಮ್ಮ ಊಹೆಗೂ ಮೀರಿದ ಕಲ್ಪನೆಗಿಂತಲೂ ವಿಚಿತ್ರ ಎನಿಸುತ್ತವೆ.
ಹೀಗೆ ಇಲ್ಲೊಂದು ವೈರಲ್ ಆಗಿರುವ ವಿಡಿಯೋದಲ್ಲೂ ಸಹ ಅಂತಹದ್ದೆ ವಿಚಿತ್ರ ರೀತಿಯ ಮೀನು ಕಂಡು ಜನ ದಂಗಾಗಿದ್ದಾರೆ. ಕಡಲ ಆಳದಲ್ಲಿ ಇರುವ ಈ ಅಚ್ಚರಿ ಸಮುದ್ರದ ದಡದಲ್ಲಿ ಕಂಡು ಅಚ್ಚರಿ ವ್ಯಕ್ತಪಡಿಸಿದ್ದಾರೆ. ವೈರಲ್ ಅಗಿರುವ ವಿಡಿಯೋದಲ್ಲಿ ಮೀನೊಂದು ತನ್ನ ಅರ್ಧ ತಲೆ ಹೊರಗೆ ಹಾಕಿಕೊಂಡಿದ್ದು ಇಡೀ ದೇಹ ಮರಳಿನಲ್ಲಿ ಮುಚ್ಚಿರುವುದು ನೋಡಬಹುದು.

ಈ ಮೀನು ನೋಡಲು ಭಯಾನಕ ನೋಟ ಹೊಂದಿದೆ. ಜೊತೆಗೆ ಅವರ ಕಣ್ಣುಗಳು ಹಾಗೂ ಮುಖದ ಆಕೃತಿ ನೋಡಲು ಭಯ ಹುಟ್ಟಿಸುವಂತಿದೆ. ಸ್ಟಾರ್‌ಗೇಜರ್ ಮೀನು ಎಂದು ಕರೆಲ್ಪಡುವ ಇದು ಮರಳಿನಲ್ಲಿ ಅಡಗಿಕೊಂಡು ತನ್ನ ಬೇಟೆ ಹುಡುಕುವ ಮಾದರಿಯದ್ದಾಗಿದೆ. ಇಲ್ಲಿ ದಡದಲ್ಲಿ ಬಂದಿರುವ ಮೀನು ಅರ್ಧ ದೇಹ ಮರಳಿನಲ್ಲಿದ್ದರೆ ಉಳಿದಂತೆ ಅದರ ತಲೆ ಭಾಗ ಆಕಾಶವನ್ನು ನೋಡುತ್ತಿದೆ. ಅವರ ಎದೆಯ ರೆಕ್ಕೆಗಳು ಮರಳಿನಲ್ಲಿ ತಮ್ಮನ್ನು ಹೂತುಕೊಳ್ಳಲು ಸಹಾಯ ಮಾಡುತ್ತದೆ.
ಸಿಂಗಾಪುರದ ಕಡಲತೀರದಲ್ಲಿ ಇದೇ ರೀತಿಯ ಘಟನೆ ಸಂಭವಿಸಿದೆ, ಅಲ್ಲಿ ಮರಳಿನಿಂದ ಇಣುಕಿ ನೋಡುತ್ತಿರುವ ದೈತ್ಯಾಕಾರದ ಮೀನನ್ನು ಕಂಡು ವ್ಯಕ್ತಿಯೊಬ್ಬರು ವಿಡಿಯೋ ಸೆರೆ ಹಿಡಿದಿದ್ದಾರೆ. ಈ ಅಪರೂಪದ ವಿದ್ಯಮಾನ ಕಂಡ ಜನರು ಅಕ್ಷರಶಃ ಶಾಕ್ ಆಗಿದ್ದಾರೆ.
ಡೆನಿಸ್ ಚಾನ್ ಎಂಬ ವ್ಯಕ್ತಿ ಇಂಟರ್‌ಟೈಡಲ್ ಎಕ್ಸ್‌ಪ್ಲೋರೇಶನ್ ಸಮಯದಲ್ಲಿ ಈ ಮೀನನ್ನು ನೋಡಿದನು. ಡೆನ್ನಿಸ್ ಸಮುದ್ರತೀರದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ, ದೈತ್ಯಾಕಾರದ ಮೀನಿನಂತೆ ಕಾಣುವ ವಿಷಪೂರಿತ ಮುಳ್ಳುಗಳಿಂದ ಕೂಡಿದ ವಿಚಿತ್ರ ಜೀವಿ ಗಮನಿಸಿದ್ದಾರೆ.
ಸ್ಟಾರ್‌ಗೇಜರ್ ಮೀನು ತನ್ನ ಬೇಟೆಯನ್ನು ಪಡೆಯಲು ಮರಳಿನಲ್ಲಿ ಹೂತುಕೊಂಡಿದೆ ಎಂದು ಅವನು ಅರಿತುಕೊಂಡನು. ಕೆಲ ಹೊತ್ತು ಅದರ ಅರ್ಧ ತಲೆ ಮರಳಿನ ಮೇಲ್ಭಾಗದಲ್ಲಿರುವುದು ನೋಡಬಹುದು. ಆದರೆ ಕೆಲವೇ ನಿಮಿಷದಲ್ಲಿ ಅದು ಮರಳಿನಲ್ಲಿ ಮರೆಯಾಗುವುದನ್ನು ನಾವು ನೋಡಬಹುದು.
ಅಚ್ಚರಿ ಎಂದರೆ ಈ ಮೀನು ವಿಷಕಾರಿಯಂತೆ, ಅದರ ಮೈಮೇಲೆ ಸಣ್ಣ ಸಣ್ಣ ಮುಳ್ಳಿನ ಆಕೃತಿ ಇರಲಿದ್ದು, ಇದು ವಿಷಕಾರಿ ಅಂಶ ಹೊಂದಿರಲಿದೆ. ಜೊತೆಗೆ ಈ ಮೀನು ತನ್ನ ದೇಹದಲ್ಲಿ ವಿದ್ಯುತ್ ಅಂಶವನ್ನು ಉತ್ಪಾದಿಸುವ ಶಕ್ತಿ ಹೊಂದಿದ್ದು, ಹೊರಗಿನ ಭಕ್ಷಕಗಳಿಂದ ತನ್ನನ್ನು ರಕ್ಷಿಸಿಕೊಳ್ಳಲಿದೆಯಂತೆ.
ಈ ಮೀನಿನ ವಿಡಿಯೋ ವೈರಲ್ ಆದ ಬಳಿಕ ಜನರು ವಿಚಿತ್ರ ಮೀನು ಕಂಡು ಶಾಕ್ ಆಗಿರುವ ಜೊತೆಗೆ ಕಮೆಂಟ್‌ಗಳ ಮಾಡಿದ್ದಾರೆ. ಈ ಮೀನು ನಿಜವಾಗಲು ಸಮುದ್ರ ರಾಕ್ಷಸ ಇರಬೇಕು ಎಂದು ಬಳಕೆದಾರರೊಬ್ಬರು ಬರೆದುಕೊಂಡಿದ್ದಾರೆ. ಈ ಮೀನು ನೋಡಲು ಎಷ್ಟು ಭಯಾನಕ ವಾಗಿದೆ, ಇದು ಸಮುದ್ರದಲ್ಲಿರುವ ಭೂತ ಆಗಿರಬಹುದು ಎಂದು ಮತ್ತೊಬ್ಬರು ಹೇಳಿದ್ದಾರೆ.
ಈ ಮೊದಲು ಅಸ್ಸಾಂನ ಪ್ರವಾಹದಲ್ಲಿ 4 ಕಣ್ಣುಗಳ ಹೊಂದಿರುವ ಅಪರೂಪದ ಮೀನೊಂದು ಬಲೆಗೆ ಬಿದ್ದಿದ್ದು, ಈ ಮೀನು ಸಹ ಜನರಲ್ಲಿ ಅಚ್ಚರಿಗೆ ಕಾರಣವಾಗಿತ್ತು. ಸಮುದ್ರದ ಆಳದಲ್ಲಿ ಕಂಡು ಬರುವ ಈ ವಿಚಿತ್ರ ಮೀನುಗಳು ಕೆಲವೊಮ್ಮೆ ದಡದಲ್ಲಿ ಕಂಡುಬಂದು ನೋಡುಗರಲ್ಲಿ ಅಚ್ಚರಿಗೆ ಕಾರಣವಾಗುತ್ತವೆ.
ಅಲ್ಲದೆ ಜಪಾನ್ ಸಮುದ್ರ ತೀರದಲ್ಲಿ ಮತ್ತೊಂದು ವಿಚಿತ್ರ ಮೀನು ಪತ್ತೆಯಾಗಿತ್ತು. ಅದರ ತಲೆಯ ಮೇಲೆ ಕೂದಲು ಆಕೃತಿಯುಳ್ಳ ರಚನೆ ಹೊಂದಿತ್ತು. ಈ ಮೀನು ಆಳ ಸಮುದ್ರದಿಂದ ದಡಕ್ಕೆ ತಲುಪಿತ್ತು.



Click it and Unblock the Notifications