Latest Updates
-
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್!
ಪವನ್ ಕಲ್ಯಾಣ್ ಸಿನಿಮಾದ ಟಿಕೆಟ್ 5 ಲಕ್ಷ ರೂ.ಗೆ ಮಾರಾಟ: ಅವರ ಆಸ್ತಿ ಎಷ್ಟಿದೆ ಗೊತ್ತಾ?
ಭಾರತದಲ್ಲಿ ಸಿನಿಮಾ ಹಾಗೂ ಸಿನಿಮಾ ನಟರಿಗೆ ಬಹಳ ಗೌರವ ಹಾಗೂ ಅಭಿಮಾನಿಗಳಿರುವುದು ಸಹಜ. ನೀವು ಯಾವುದೇ ಭಾಷೆಯ ಯಾವುದೇ ನಟ, ನಟಿಯರನ್ನು ತೆಗೆದುಕೊಳ್ಳಿ ಅವರಿಗೆ ವಿಶ್ವದ ಮೂಲೆ ಮೂಲೆಯಲ್ಲಿಯೂ ಭಾರತೀಯ ಅಭಿಮಾನಿಗಳು ಇರುವುದು ಸಹಜ. ಹಾಗೆ ಅವರ ಅಭಿಮಾನಿಗಳು ನೆಚ್ಚಿನ ನಟರಿಗಾಗಿ ಎಂತಹ ಕಾರ್ಯವನ್ನಾದರೂ ಮಾಡುವುದು ನೋಡಬಹುದು.
ಇನ್ನು ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬದ ಸಮಯದಲ್ಲಿ ಅಭಿಮಾನಿಗಳು ಹಲವು ರೀತಿಯ ಕೆಲಸಗಳಲ್ಲಿ ತೊಡಗುತ್ತಾರೆ. ನಟನ ನೋಡಲು ಅವರ ಮನೆ ಮುಂದೆ ಜಮಾಯಿಸುವುದು, ಅನ್ನ ಸಂತರ್ಪಣೆ ಮಾಡುವುದು, ಸಾಂಸ್ಕೃತಿಕ ಕಾರ್ಯಕ್ರಮಗಳು ಸೇರಿ ಸಮಾಜಮುಖಿ ಕಾರ್ಯಗಳ ಮಾಡುವುದು ನೋಡಬಹುದು. ಇನ್ನು ಹುಟ್ಟುಹಬ್ಬದಂದು ನಟನ ಸಿನಿಮಾ ರೀ ರಿಲೀಸ್ ಮಾಡಿಸಿ ನೋಡುವುದು, ಕಟೌಟ್‌ಗೆ ಹಾಲಿನ ಅಭಿಷೇಕ ಇಂತಹ ಹಲವು ಕಾರ್ಯಗಳ ಮಾಡುವುದು ನೋಡಬಹುದು.

ಸದ್ಯ ಟಾಲಿವುಡ್ ಸೂಪರ್‌ಸ್ಟಾರ್ ಪವನ್ ಕಲ್ಯಾಣ್ ಅವರ ಹುಟ್ಟುಹಬ್ಬ ಸೆಪ್ಟೆಂಬ್ 2ರಂದು ಆಚರಿಸಿಕೊಂಡರು. ಸಿನಿಮಾ ಮಾತ್ರವಲ್ಲದೆ ರಾಜಕೀಯದಲ್ಲಿ ಗುರುತಿಸಿಕೊಂಡಿರುವ ಅವರು ಈಗ OG ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸದ್ಯ ಈ ಸಿನಿಮಾದ ಮೊದಲ ಟಿಕೆಟ್ ಅನ್ನು ಹರಾಜು ಹಾಕಲಾಗಿದ್ದು, ಬರೋಬ್ಬರಿ 5 ಲಕ್ಷ ರೂಪಾಯಿ ನೀಡಿ ಖರೀದಿಸಲಾಗಿದೆ.
ನಿಜಾಮ್‌ನಲ್ಲಿ ಅವರ ಮುಂಬರುವ ಚಿತ್ರ OG ಯ ಮೊದಲ ಟಿಕೆಟ್ ಮಾರಾಟ ಮಾಡಲು ಆನ್‌ಲೈನ್ ಹರಾಜನ್ನು ನಡೆಸಲಾಗಿತ್ತು. ಇದರಲ್ಲಿ ನಾರ್ತ್ ಅಮೆರಿಕದ ಟೀಮ್ ಪವನ್ ಕಲ್ಯಾಣ್ ಈ ಟಿಕೆಟ್ ಅನ್ನು ದುಬಾರಿ ಬೆಲೆ ನೀಡಿ ಖರೀದಿಸಿದೆ. ಈ ಟಿಕೆಟ್‌ನಿಂದ ಬರುವ ಆದಾಯವನ್ನು ಪವನ್ ಕಲ್ಯಾಣ್ ಅವರ ರಾಜಕೀಯ ಪಕ್ಷವನ್ನು ಬೆಂಬಲಿಸಲು ದೇಣಿಗೆ ನೀಡಲಾಗುವುದು.
ಪವನ್ ಕಲ್ಯಾಣ್ ಅವರ OG ಟಿಕೆಟ್ 5 ಲಕ್ಷ ರೂಪಾಯಿಗೆ ಮಾರಾಟವಾಗಿದೆ. ಈ ಕುರಿತು ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಳ್ಳಲಾಗಿದೆ. OG ಸಿನಿಮಾದ ಪ್ರದರ್ಶನದ ಮೊದಲ ಟಿಕೆಟ್‌ಗಾಗಿ ಆನ್‌ಲೈನ್ ಹರಾಜನ್ನು ಆಯೋಜಿಸಿದರು. ಬಿಡ್ಡಿಂಗ್ ಹೆಚ್ಚಾಯಿತು ಮತ್ತು ಅಭಿಮಾನಿ ಸಂಘವೊಂದು ಹರಾಜಿನಲ್ಲಿ ಖರೀದಿ ಮಾಡಿದೆ. ಈ ಹಣವನ್ನು ಜನಸೇನಾ ಪಕ್ಷಕ್ಕೆ ದೇಣಿಗೆಯಾಗಿ ನೀಡಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ.
ಪವನ್ ಕಲ್ಯಾಣ್ ರಾಜಕೀಯ ಪ್ರವೇಶಿಸುವ ಮೊದಲು ಮತ್ತು ಆಂಧ್ರಪ್ರದೇಶದ ಉಪಮುಖ್ಯಮಂತ್ರಿಯಾಗುವ ಮೊದಲು ನಟಿಸಲು ಒಪ್ಪಿಕೊಂಡ ಮೂರು ಚಿತ್ರಗಳಲ್ಲಿ OG ಕೂಡ ಒಂದು. ಅವರ ಜನ ಸೇನಾ ಪಕ್ಷ (ಜೆಎಸ್‌ಪಿ), ಟಿಡಿಪಿ ಮತ್ತು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು 2024 ರ ಆಂಧ್ರಪ್ರದೇಶ ಚುನಾವಣೆಯಲ್ಲಿ ಜಯಗಳಿಸಿತು.
ಪವನ್ ಕಲ್ಯಾಣ್ ಆಸ್ತಿ ಎಷ್ಟಿದೆ ಗೊತ್ತಾ?
ಪವನ್ ಕಲ್ಯಾಣ್ 1996 ರಲ್ಲಿ ಸತ್ಯನಾರಾಯಣ ನಿರ್ದೇಶನದ ಅಕ್ಕಡ ಅಮ್ಮಿ ಇಕ್ಕಡ ಅಬ್ಬಾಯಿ ಚಿತ್ರದ ಮೂಲಕ ಬೆಳ್ಳಿತೆರೆಗೆ ಪ್ರವೇಶಿಸಿದರು. ಅವರ ಮೂವತ್ತು ವರ್ಷಗಳ ವೃತ್ತಿಜೀವನದಲ್ಲಿ 30ಕ್ಕೂ ಹೆಚ್ಚು ಸಿನಿಮಾದಲ್ಲಿ ನಟಿಸಿದ್ದಾರೆ. 1999 ರಲ್ಲಿ ತೆರೆಕಂಡ 'ಥೋಲಿ ಪ್ರೇಮ' ಚಿತ್ರ ಅವರಿಗೆ ರಾಷ್ಟ್ರೀಯ ಪ್ರಶಸ್ತಿ ಮತ್ತು ಆರು ನಂದಿ ಪ್ರಶಸ್ತಿಗಳನ್ನು ತಂದುಕೊಟ್ಟಿತು.
ಪವನ್ ಕಲ್ಯಾಣ್ ಅವರ ಒಟ್ಟು ಆಸ್ತಿ ಸುಮಾರು 140 ಕೋಟಿ ರೂಪಾಯಿ ಇರಬಹುದು ಎಂದು ಅಂದಾಜಿಸಲಾಗಿದೆ. ಪವನ್ ಕಲ್ಯಾಣ್ ಅವರ ಶಾಸಕರ ನಾಮನಿರ್ದೇಶನ ಅಫಿಡವಿಟ್ ಪ್ರಕಾರ, ಒಟ್ಟು ಆಸ್ತಿ 164 ಕೋಟಿ ರೂ. ಹಾಗೆ 65 ಕೋಟಿ ರೂ. ಸಾಲ ಇರುವುದಾಗಿ ಅವರು ನಮೂದಿಸಿದ್ದಾರೆ. ಅರು ಪ್ರತಿ ಸಿನಿಮಾಗೆ 50 ಕೋಟಿ ರೂಪಾಯಿ ವರೆಗೂ ಸಂಭಾವನೆ ಪಡೆಯುತ್ತಾರೆ ಎಂದು ವರದಿಗಳಿವೆ. ವಿಜಯವಾಡದಲ್ಲಿರುವ ಮನೆಯ ಬೆಲೆ ರೂ. 16 ಕೋಟಿ, ಹೈದರಾಬಾದ್‌ನ ಜುಬಿಲಿ ಹಿಲ್ಸ್‌ನಲ್ಲಿರುವ ಒಂದು ಮನೆ ರೂ. 12 ಕೋಟಿ, ಬಂಜಾರ ಹಿಲ್ಸ್‌ನಲ್ಲಿರುವ ಒಂದು ಫ್ಲಾಟ್ ರೂ. 1.75 ಕೋಟಿ ಎಂದು ತಿಳಿದುಬಂದಿದೆ.



Click it and Unblock the Notifications