Latest Updates
-
ವಿಶ್ವ ಸೊಳ್ಳೆ ದಿನ: ಮಳೆಗಾಲದಲ್ಲಿ ಬಾಲ್ಕನಿಯಲ್ಲಿ ಯೋಗ ಮಾಡುವಾಗ ಸೊಳ್ಳೆ ಕಡಿತದಿಂದ ಪಾರಾಗುವುದು ಹೇಗೆ? -
BWF ವರ್ಲ್ಡ್ಸ್ ದೆಹಲಿ: ಕ್ಯೂನಲ್ಲಿ ನಿಂತು ಸುಸ್ತಾಗಿದ್ದೀರಾ? ಈ 8 ನಿಮಿಷದ ವ್ಯಾಯಾಮ ನಿಮ್ಮ ನೋವನ್ನು ಮರೆಸುತ್ತೆ! -
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು
ಕಾಲಿನಲ್ಲಿ ಮೊಮೊಸ್ ಹಿಟ್ಟು ತುಳಿದು ಹದ ಮಾಡುವ ಅಂಗಡಿ ಮಾಲೀಕ..! ವಿಡಿಯೋ ವೈರಲ್
ಮೊಮೊಸ್ ತಿಂಡಿ ಅಂದ್ರೆ ಯಾರಿಗೆ ಇಷ್ಟವಾಗಲ್ಲ ಹೇಳಿ. ಮಕ್ಕಳಂತು ಮೊಮೊಸ್ ಸವಿಯಲು ನಾಮುಂದು ತಾಮುಂದು ಎಂದು ಅಂಗಡಿಗಳಲ್ಲಿ ಕಾಣಸಿಗುತ್ತಾರೆ. ಇದರಲ್ಲೂ ವೆಜ್ ಹಾಗೂ ನಾನ್‌ವೆಜ್ ಮೊಮೊಸ್‌ಗಳನ್ನು ನಾವು ನೋಡಬಹುದು. ರಸ್ತೆ ಬದಿಯಲ್ಲಿ ಹತ್ತಾರೊ ಮೊಮೊಸ್ ಅಂಗಡಿಗಳ ಹಿಡಿದು ದೊಡ್ಡ ದೊಡ್ಡ ಅಂಗಡಿಗಳಲ್ಲಿ ಮೊಮೊಸ್ ಇಂದು ಪ್ರಸಿದ್ಧಿ ಪಡೆದಿರುವ ಖಾದ್ಯ.
ಆದ್ರೆ ಈ ಮೊಮೊಸ್ ಅನ್ನು ಹೇಗೆ ರೆಡಿ ಮಾಡುತ್ತಾರೆ? ಮೊಮೊಸ್‌ಗೆ ಹೇಗೆ ಹಿಟ್ಟನ್ನು ರೆಡಿ ಮಾಡುತ್ತಾರೆ ಎಂಬುದು ನಿಮಗೆ ಗೊತ್ತಾ? ಗೊತ್ತಿಲ್ಲಾ ಅಂದ್ರೆ ಇಲ್ಲೊಂದು ವೈರಲ್ ಆಗಿರುವ ವಿಡಿಯೋ ನೋಡಿದರೆ ನಿಮಗೆ ಅಚ್ಚರಿಗೆಯ ಜೊತೆಗೆ ಶಾಕ್ ಸಹ ಆಗುತ್ತೆ. ಆತ ಮೊಮೊಸ್ ಮಾಡಲು ಹಿಟ್ಟನ್ನು ಕಲಿಸುತ್ತಿರುವುದು ವೈರಲ್ ಆಗಿದೆ.

ಇತ್ತೀಚಿಗೆ ಬೀದಿ ಬದಿ ಸ್ನ್ಯಾಕ್ಸ್ ಅನಾರೋಗ್ಯ ತರುತ್ತಿವೆ ಎಂಬ ಆರೋಪ ಹಾಗೂ ಅಪಾಯಗಳ ನಡುವೆ ಇಲ್ಲೊಂದು ಕಡೆ ಮೊಮೊಸ್ ಹಿಟ್ಟನ್ನು ವ್ಯಕ್ತಿಯೊಬ್ಬ ಕಾಲಿನಿಂದ ತುಳಿದು ರೆಡಿ ಮಾಡಿಕೊಳ್ಳುತ್ತಿದ್ದಾನೆ. ದೊಡ್ಡದೊಂದು ಪಾತ್ರೆಗೆ ಹಿಟ್ಟನ್ನು ಹಾಕಿ ಆ ಹಿಟ್ಟನ್ನು ಹದ ಮಾಡಲು ಆಯ ಕಾಲಿನಿಂದ ತುಳಿಯುತ್ತಿದ್ದಾನೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಇದನ್ನು ನೋಡಿದ ನೆಟ್ಟಿಗರು ಅಕ್ಷರಶಃ ಶಾಕ್‌ಗೆ ಒಳಗಾಗಿದ್ದಾರೆ. ಆಹಾರವನ್ನು ಎಷ್ಟು ಶುಚಿಯಾದ ಸ್ಥಳದಲ್ಲಿ ಮಾಡಬೇಕು ಎಂಬುದನ್ನು ಪ್ರತಿಯೊಬ್ಬರು ಹೇಳುತ್ತಿರುತ್ತಾರೆ, ಆಹಾರೊತ್ಪನ್ನ ತಯಾರಿಸಿ ಮಾರಾಟ ಮಾಡುವಾಗ ಶುಚಿತ್ವ ಕಾಪಾಡುವುದು ಕೂಡ ಅಷ್ಟೇ ಮುಖ್ಯ.
ಹೀಗಿರುವಾಗ ಇಲ್ಲೊಬ್ಬ ಇಷ್ಟೊಂದು ಹೇಯವಾಗಿ ಹಿಟ್ಟನ್ನು ರೆಡಿ ಮಾಡಿಕೊಳ್ಳುತ್ತಿರುವುದು ಎಲ್ಲರಲ್ಲೂ ಆಘಾತ ಉಂಟು ಮಾಡಿದೆ. ಮಧ್ಯಪ್ರದೇಶದ ಜಬಲ್ಪುರದ ಇಬ್ಬರು ಮೊಮೊಸ್ ಅಂಗಡಿ ಮಾಲೀಕರನ್ನು ಹಿಟ್ಟನ್ನು ಬೆರೆಸಲು ಕಾಲನ್ನು ಬಳಸಿರುವ ಆರೋಪದಲ್ಲಿ ಬಂಧಿಸಲಾಗಿದೆ. ರಾಜ್ ಕುಮಾರ್ ಮತ್ತು ಸಚಿನ್ ಗೋಸ್ವಾಮಿ ಅವರು ಬರ್ಗಿ ಪೊಲೀಸ್ ಠಾಣೆಯ ಬಳಿ ಇರುವ ಅವರ ಮೊಮೊಸ್ ಅಂಗಡಿ ಕುರಿತಂತೆ ಸ್ಥಳೀಯರಿಂದಲೇ ದೂರು ಕೇಳಿಬಂದಿತ್ತು.
ಈ ವಿಡಿಯೋವನ್ನು ಸಚಿನ್ ಗುಪ್ತಾ ಎಂಬ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೊದಲ್ಲಿ ಬನಿಯನ್ ಧರಿಸಿರುವ ವ್ಯಕ್ತಿ ಪಾತ್ರೆಯಲ್ಲಿ ಮೊಮೊಸ್ ಹಿಟ್ಟು ಹಾಕಿ ಕಾಲಿನಿಂದ ಹದ ಮಾಡುತ್ತಿದ್ದಾನೆ. ಈ ವಿಡಿಯೋ ಆಧರಿಸಿ ಪೊಲೀಸರು ಕ್ರಮಕ್ಕೆ ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.
ಇಬ್ಬರು ಮೊಮೊಸ್ ಅಂಗಡಿ ಮಾಲೀಕರ ವಿರುದ್ಧ ಹಲವು ಸೆಕ್ಷನ್ ಅಡಿಯಲ್ಲಿ ದೂರು ದಾಖಲಾಗಿದೆ. ಹಾಗೆ ಆತನ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಲಾಗುತ್ತಿದೆ. ಹಾಗೆ ಈ ವಿಡಿಯೋ ನೋಡಿದ ಮಂದಿ ಆತನ ಅಂಗಡಿ ತೆರವಿಗೆ ಆಗ್ರಹಿಸಿದ್ದಾರೆ. ಇದು ಪ್ರತಿಯೊಬ್ಬ ಮೊಮೊಸ್ ಮಾರಾಟಗಾರನ ಕಥೆ. ಅವರು ಹಣದ ಹಿಂದೆ ಬಿದ್ದು ಶುಚಿತ್ವ ಮರೆತಿದ್ದಾರೆ . ನಾನ್ ವೆಜ್ ಮೊಮೊಸ್ ಕಥೆ ಇನ್ನೂ ಕೆಟ್ಟದಾಗಿದೆ ಎಂದು ಬಳಕೆದಾರರು ಕಮೆಂಟ್ ಮಾಡಿದ್ದಾರೆ.
ಈ ಮೊದಲು ಪಾನಿಪೂರಿ ಹಾಗೂ ಗೋಲ್ಗಪ್ಪ ಮಾರಾಟಗಾರರ ಕೆಲವೊಂದು ವಿಡಿಯೋಗಳು ವೈರಲ್ ಆಗಿದ್ದವು, ಕೊಳೆತ ಆಲೂಗಡ್ಡೆ ಬಳಸಿರುವುದು, ಹಳೆಯ ನೀರು, ಹಾಳಾಗಿದ್ದ ಪೂರಿ ಬಳಸಿರುವುದು ಸೇರಿ ಹಲವು ರೀತಿಯ ವಿಡಿಯೋಗಳು ವೈರಲ್ ಆಗಿದ್ದವು.
ಸದ್ಯ ಈಗ ಮೊಮೊಸ್ ಅಂಗಡಿಯ ಮಾಲಿಕನ ಈ ವಿಡಿಯೋ ಸಹ ಆಹಾರ್ ಪ್ರಿಯರಲ್ಲಿ ಆಘಾತ ಮೂಡಿಸಿದೆ. ಸಂಜೆ ವೇಳೆ ರಸ್ತೆ ಬದಿ ಬಿಸಿ ಬಿಸಿ ಮೊಮೊಸ್ ಅವಿಯುತ್ತಿದ್ದರು ಈ ವಿಡಿಯೋ ನೋಡಿದ ಮೇಲೆ ಮತ್ತೊಮ್ಮೆ ಪ್ರಶ್ನೆ ಹಾಕಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ.



Click it and Unblock the Notifications