Latest Updates
-
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್ -
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ -
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ -
ಯುಜಿಸಿ ನೆಟ್ 2026 ಪ್ರವೇಶ ಪತ್ರ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಸಿಡಿಲು-ಮಳೆಯ ಎಚ್ಚರಿಕೆ: ಹೊರಗೆ ಹೋಗುವ ಸಾಹಸ ಬೇಡ, ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ! -
ನೀಟ್ ಮರುಪರೀಕ್ಷೆ: ಅಡ್ಮಿಟ್ ಕಾರ್ಡ್ ಬಿಡುಗಡೆ, ಪರೀಕ್ಷೆಗೆ ಹೋಗುವ ಮುನ್ನ ವಿದ್ಯಾರ್ಥಿಗಳು ಮತ್ತು ಪೋಷಕರು ತಪ್ಪದೇ ಮಾಡಬೇಕಾದ ಕೆಲಸಗಳಿವು! -
ಮಳೆಗಾಲದ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವೇ? ಸೋರಿಕೆ ಮತ್ತು ಹಾನಿ ತಪ್ಪಿಸಲು ಈ ಸರಳ ಟಿಪ್ಸ್ ಪಾಲಿಸಿ -
ಸುಡುವ ಬಿಸಿಲಿಗೆ ಹವಾಮಾನ ಇಲಾಖೆ ಎಚ್ಚರಿಕೆ: ದೇಹ ತಂಪಾಗಿಡಲು ಈ ಪಾನೀಯಗಳೇ ರಾಮಬಾಣ! -
ಲಕ್ನೋದಲ್ಲಿ ಭಾರತ-ಅಫ್ಘಾನಿಸ್ತಾನ ಹೈ-ವೋಲ್ಟೇಜ್ ಕದನ: ಪಂದ್ಯದ ಮಜಾ ಸವಿಯಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಯೋಗ ದಿನಾಚರಣೆ: ಮೈದಾನದಲ್ಲಿ ಯೋಗ ಮಾಡಲು ಸಿದ್ಧರಿದ್ದೀರಾ? ಇಲ್ಲಿದೆ ಅಗತ್ಯ ಮುನ್ನೆಚ್ಚರಿಕೆಗಳು!
ಉರಗ ತಜ್ಞನಿಗೆ ಕಚ್ಚಿದ ಅಪರೂಪದ ಎರಡು ತಲೆ ಹಾವು..! ಆಮೇಲೆ ಏನಾಯ್ತು..?
ಹಾವುಗಳೆಂದರೆ ಯಾರಿಗೆ ತಾನೆ ಭಯವಿಲ್ಲ ಹೇಳಿ. ಭೂಮಿ ಮೇಲೆ ವಾಸಿಸುವ ಅತ್ಯಂತ ವಿಷಕಾರಿ ಪ್ರಾಣಿಗಳಲ್ಲಿ ಹಾವುಗಳು ಸಹ ಒಂದು. ಕೆಲವು ಹಾವು ಅತ್ಯಂತ ವಿಷಕಾರಿಯಾದರೆ ಮತ್ತೆ ಕೆಲವು ಸೌಮ್ಯ ಸ್ವಭಾವದಾಗಿವೆ. ಅದರೆ ಬಹುತೇಖ ಹಾವುಗಳು ಅಪಾಯಕಾರಿಯೇ. ಅವು ಕಚ್ಚಿದ ಕೆಲವೇ ನಿಮಿಷದಲ್ಲಿ ಸಾವು ತರುವಷ್ಟು ವಿಷ ಹೊಂದಿವೆ.
ಇನ್ನು ಈ ಭೂಮಿಯ ಮೇಲೆ ವಿಚಿತ್ರ ರೀತಿಯ ಹಾವುಗಳಿಗೇನು ಕಡಿಮೆ ಇಲ್ಲ. ವಿಚಿತ್ರ ಅಂದರೆ ಎರಡು ತಲೆ ಹಾವುಗಳು, ನೀರಿನಲ್ಲಿ ಬದುಕುವ ಹಾವುಗಳು ಸೇರಿದಂತೆ ವಿಚಿತ್ರ ದೇಹ ರಚನೆಯ ಹಾವು ನಾವು ನೋಡಿರಬಹುದು. ಆದ್ರೆ ಇಲ್ಲೊಂದು ಕಡೆ ಅಪರೂಪದ ಎರಡು ತಲೆಯ ಹಾವೊಂದು ಉರಗ ತಜ್ಞರಿಗೆ ಕಚ್ಚಿರುವ ಘಟನೆ ನಡೆದಿದೆ.

ಜೇ ಬ್ರೂಕರ್ ಎಂಬ ಖ್ಯಾತ ಉರಗ ತಜ್ಞ ಈ ಎರಡು ತಲೆ ಹೊಂದಿರುವ ಅಪರೂಪದ ಹಾವನ್ನು ಹಿಡಿದು ಅದರ ಕುರಿತು ವಿವರಿಸುತ್ತಿರುವಾಗಲೇ ಅದು ಕಡಿದಿದೆ. ಈ ವಿಡಿಯೋ ಸಾಮಾಜಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಜನ ಶಾಕ್ ಆಗಿದ್ದಾರೆ.
ಅಪರೂಪದ ಎರಡು ತಲೆಯ ಹಾವಿನ ವಿಡಿಯೋ ಸದ್ಯ ವೈರಲ್ ಆಗಿದೆ.
ಯುಎಸ್ ಮೂಲದ ಝೂ ಕೀಪರ್, ಜೇ ಬ್ರೂವರ್ ಎರಡು ತಲೆಯ ವಿಶಿಷ್ಟವಾದ ಹಾವಿನ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಆದರೆ ಅವರು ಹಾವನ್ನು ಕೈಯಲ್ಲಿ ಹಿಡಿದುಕೊಂಡಿದ್ದಾಗ ಅದು ಅವರಿಗೆ ಕಚ್ಚಿರುವುದು ವಿಡಿಯೋದಲ್ಲಿ ನೋಡಬಹುದು.
ಕ್ಲಿಪ್ ಬ್ರೂವರ್ ತನ್ನ ಕುತ್ತಿಗೆಯಿಂದ ಹಾವನ್ನು ಹಿಡಿದುಕೊಂಡು ತನ್ನ ತೋರು ಬೆರಳನ್ನು ಎರಡು ತಲೆಗಳ ಮುಂದೆ ಚಲಿಸುವಂತೆ ಮಾಡುವಾಗ ಎರಡು ಬಾರಿ ಕಚ್ಚಿದೆ.
ಇನ್‌ಸ್ಟಾಗ್ರಾಮ್‌ನಲ್ಲಿ ಕ್ಲಿಪ್ ಅನ್ನು ಹಂಚಿಕೊಂಡ ಬ್ರೂವರ್ ಈ ರೀತಿ ಬರೆದುಕೊಂಡಿದ್ದಾರೆ. 'ಎರಡು ತಲೆಯ ಹಾವು ನನ್ನನ್ನು ಕಚ್ಚಿದೆ ಎಂದು ನಾನು ಭಾವಿಸಿದೆವು ಒಂದು ಕೋಪಗೊಂಡ ಹಾವಿನೊಂದಿಗೆ ವ್ಯವಹರಿಸುವುದು ಸಾಕು ಆದರೆ ಈಗ ನಾನು ಅವುಗಳಲ್ಲಿ ಎರಡನ್ನು ನಿಭಾಯಿಸಬೇಕಾಗಿದೆ. ಈ ಹುಡುಗಿಯರಲ್ಲಿ ಒಬ್ಬಳು ಇನ್ನೊಬ್ಬಳಿಗಿಂತ ಉಗ್ರಳಾಗಿದ್ದಾಳೆ ಆದರೆ ಇಬ್ಬರೂ ನನ್ನನ್ನು ಕಚ್ಚಬೇಕೆಂದು ನಿರ್ಧರಿಸಿದಂತೆ ತೋರುತ್ತಿದೆ' ಎಂದು ಬರೆದಿದ್ದಾರೆ.
ಮೇಲ್ನೋಟಕ್ಕೆ ಈ ಹಾವು ಕಚ್ಚಿದರೂ ಆವರಿಗೆ ಏನು ಆಗುತ್ತಿಲ್ಲ ಎಂದು ತೋರುತ್ತಿದೆ. ಆದರೆ ಈ ಹಾವಿನಿಂದ ವಿಷವನ್ನು ತೆಗೆದಿರಬಹುದು ಇಲ್ಲವೆ ಆ ಹಾವಿನಲ್ಲಿ ವಿಷವಿಲ್ಲದೆಯೂ ಇರಬಹುದು. ಆದರೆ ಹಾವಿನೊಂದಿಗಿನ ಸರಸ ಕಂಡು ಜನ ಮಾತ್ರ ಶಾಕ್ ಆಗಿದ್ದಾರೆ.
ಈ ಹಾವಿಗೆ ಎರಡು ತಲೆಗಳಿರುವುದನ್ನು ಕಂಡ ಜನ ಮತ್ತಷ್ಟು ಅಚ್ಚರಿಗೆ ಒಳಗಾಗಿದ್ದಾರೆ. ಒಂದೇ ಹಾವು ಎರಡು ತಲೆಗಳಿದ್ದು, ಬೇರೆ ಬೇರೆ ಕ್ರಿಯೆ ತೋರುತ್ತಿವೆ. ಈ ರೀತಿಯ ಹಾವು ನೋಡುವುದು ತೀರ ಅಪರೂಪವಾಗಿದೆ.
ವಿಡಿಯೋಗೆ ಜನರು ಹಲವಾರು ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಕೆಲವರು ಇದು ನಿಜವಾದ ಹಾವು ಹೌದಾ ಎಂಬ ಪ್ರಶ್ನೆ ಎತ್ತಿದ್ದಾರೆ. ಒಂದು ವೇಳೆ ನಿಜವಾಗಿದ್ದರೆ ಈ ಹಾವಿನ ಕುರಿತು ನೀವ್ಯಾಕೆ ಮಾಹಿತಿ ಹಂಚಿಕೊಂಡಿಲ್ಲ ಎಂದಿದ್ದಾರೆ. ಇನ್ನೊಂದೆಡೆ ಈ ಹಾವಿಗೆ ವಿಷ ಇರುವುದಿಲ್ಲವೇ. ಇದ್ದರೆ ನಿಮಗ್ಯಾಕೆ ಹಾನಿಯಾಗಿಲ್ಲ ಎಂದು ಸಹ ಕೇಳಿದ್ದಾರೆ.
ಕೆಲವರು ಇದೊಂದು ಹುಚ್ಚುತನ. ಇಂತಹ ಹಾವಿನ ಕುರಿತು ಅಧ್ಯಯನ ನಡೆಸಬೇಕೆ ಹೊರತು ಅವುಗಳ ಜೊತೆ ಹುಡುಕಾಟ ಮಾಡಬಾರದು. ಆದರೂ ಈ ವಿಡಿಯೋ ರೋಮಾಂಚನ ಗೊಳಿಸುತ್ತಿದೆ ಎಂದು ಮತ್ತೊಬ್ಬ ಬಳಕೆದಾರರು ಬರೆದುಕೊಂಡಿದ್ದಾರೆ. ಇದರಲ್ಲಿ ಅಚ್ಚರಿ ಏನೆಂದರೆ ಈ ಹಾವಿಗೆ ಎರಡು ಮೆದುಳುಗಳಿರುತ್ತದೆ. ಆದರೆ ಯಾವ ಮೆದುಳಿನ ಆಜ್ಞೆಯಂತೆ ಈ ಹಾವು ಕೆಲವ ಮಾಡುತ್ತದೆ ಎಂಬುದು ನಿಗೂಢವಾಗಿದೆ.



Click it and Unblock the Notifications