Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಆಕಾಶದಲ್ಲಿ ಸಂಭವಿಸಲಿದೆ ಅಪರೂಪದ ಸ್ಪೋಟ..! ಬರಿಗಣ್ಣಿನಲ್ಲೇ ನೋಡಬಹುದು..!
ಆಕಾಶದಲ್ಲಿ ಎಷ್ಟೊಂದು ವಿತ್ರ ವಿಚಿತ್ರ ಘಟನಾವಳಿಗಳು ನಡೆಯುತ್ತಿರುತ್ತೆ ಅಂದ್ರೆ ನಮ್ಮನ್ನು ಯೋಚನೆಗೆ ತಳ್ಳುತ್ತವೆ. ಅದರಲ್ಲೂ ಆಕಾಶ ಕಾಯಗಳು, ಧೂಮಕೇತುಗಳು, ಉಲ್ಕೆಗಳು, ಉಪಗ್ರಹಗಳು, ಗ್ಯಾಲಕ್ಸಿ ಹೀಗೆ ಹತ್ತಾರು ವಿಚಾರಗಳು ನಮ್ಮಲ್ಲಿ ಕುತೂಹಲಕ್ಕೆ ಕಾರಣವಾಗಿವೆ. ಜೊತೆಗೆ ಈಗ ಆಕಾಶದಲ್ಲಿ ಸಂಭವಿಸುತ್ತಿರುವ ಇದೊಂದು ವಿದ್ಯಾಮಾನ ಎಲ್ಲರ ಗಮನ ಸೆಳೆದಿದೆ.
ಇದೇ ವರ್ಷದ ಸೆಪ್ಟೆಂಬರ್‌ನಲ್ಲಿ ಆಕಾಶದಲ್ಲಿ ಬೃಹತ್ ಸ್ಪೋಟವೊಂದು ಸಂಭವಿಸಲಿದೆ ಎಂದು ವರದಿಯಾಗಿದೆ. ಇದನ್ನು ನಾವು ಬರಿಗಣ್ಣಿನಿಂದೂ ನೋಡಬಹುದು ಎಂದು ಖಗೋಳ ಶಾಸ್ತ್ರಜ್ಞರು ಹೇಳುತ್ತಿದ್ದಾರೆ. ಪ್ರತಿ 80 ವರ್ಷಗಳಿಗೊಮ್ಮೆ ಈ ರೀತಿಯಾಗಿ ಎರಡು ನಕ್ಷತ್ರಗಳ ನಡುವಿನ ಸ್ಫೋಟ ಸಂಭವಿಸಲಿದೆಯಂತೆ.

ಈ ಸ್ಪೋಟದಿಂದ ಹೊರಹೊಮ್ಮು ಬೆಳಕು ಆಕಾಶದಲ್ಲಿ ಚಲಿಸಲಿದೆ. ಹಲವು ದಿನಗಳ ವರೆಗೂ ಇದನ್ನು ಬರಿಗಣ್ಣಿನಿಂದ ವೀಕ್ಷಿಸಬಹುದಂತೆ. ಇದಕ್ಕೂ ಮೊದಲು 1866ರಲ್ಲಿ ಮೊದಲ ಬಾರಿಗ ಐರಿಶ್ ಪಾಲಿಮ್ಯಾತ್ ಜಾನ್ ಬರ್ಮಿಂಗ್‌ಹ್ಯಾಮ್ ಕಂಡುಕೊಂಡಿದ್ದರಯ. ನಂತರ 1946ರಲ್ಲಿ ಮತ್ತೆ ಕಾಣಿಸಿಕೊಂಡಿತ್ತು. ಇದೀಗ 3ನೇ ಬಾರಿ ಈ ಘಟನಾವಳಿ ನಡೆಯುತ್ತಿದೆ.
ಅರಿಜೋನಾ ಸ್ಟೇಟ್ ಯೂನಿವರ್ಸಿಟಿಯ ಖಗೋಳಶಾಸ್ತ್ರಜ್ಞರಾದ ಸಮ್ನರ್ ಸ್ಟಾರ್‌ಫೀಲ್ಡ್ ಅವರು ಈ ವಿಸ್ಮಯ ಕಣ್ತುಂಬಿಕೊಳ್ಳಲು ಉತ್ಸುಕನಾಗಿರುವುದಾಗಿ ಹೇಳಿದ್ದಾರೆ. ಸಾಮಾನ್ಯವಾಗಿ ಈ ನೋವಾಗಳು ಗಾತ್ರದಲ್ಲಿ ಒಂದಕ್ಕಿಂತ ಒಂದು ಬೇರೆ ಬೇರೆಯಾಗಿರುತ್ತವೆ. ಜೊತೆಗೆ ಅವುಗಳ ರಾಸಾಯನಿಕ ಕ್ರಿಯೆ ಸಹ ಬೇರೆಯದ್ದಾಗಿರುತ್ತದೆ. ಹೀಗಾಗಿ ಎರಡೂ ಸ್ಫೋಟಗೊಂಡಾಗ ಅಗಾಧ ಪ್ರಮಾಣದ ಶಕ್ತಿ ಅದರಿಂದ ಹೊರಬರುತ್ತದೆ.
ಸಾಮಾನ್ಯ ನೋವಾಗಳು "ಬಹುಶಃ ಪ್ರತಿ 100,000 ವರ್ಷಗಳಿಗೊಮ್ಮೆ" ಸ್ಫೋಟಗೊಳ್ಳುತ್ತವೆ ಎಂದು ಅವರು ಹೇಳಿದರು. ಆದರೆ ಪುನರಾವರ್ತಿತ ನೋವಾಗಳು ತಮ್ಮ ಎರಡು ನಕ್ಷತ್ರಗಳ ನಡುವಿನ ವಿಲಕ್ಷಣ ಸಂಬಂಧದಿಂದಾಗಿ ನಮ್ಮ ಜೀವಿತಾವಧಿಯಲ್ಲಿ ಎರಡು ಸ್ಫೋಟ ನೋಡುವಷ್ಟು ಸಮಯದಲ್ಲಿ ಅವು ಸ್ಫೋಟಗೊಳ್ಳುತ್ತವೆ.
ಈ ಬಾರಿ ಒಂದು ಬಿಳಿಯಾದ ಮತ್ತೊಂದು ಕೆಂಪು ನೋವಾಗಳು ಪರಸ್ಪರ ಮುಖಾಮುಖಿಯಾಗುತ್ತಿವೆ. ಅವುಗಳ ಗಾತ್ರದ ಅಸಮಾನತೆಯು ಎಷ್ಟು ದೊಡ್ಡದಾಗಿದೆ ಎಂದರೆ ಟಿ ಕರೋನೇ ಬೊರಿಯಾಲಿಸ್‌ನ ಬಿಳಿ ಕುಬ್ಜ ತನ್ನ ಕೆಂಪು ನೋವಾವನ್ನು ಸುತ್ತಲು 227 ದಿನಗಳನ್ನು ತೆಗೆದುಕೊಳ್ಳುತ್ತದೆ ಎಂದು ಸ್ಟಾರ್‌ಫೀಲ್ಡ್ ಹೇಳಿದರು.
ಇದು "ದೊಡ್ಡ ಸ್ಫೋಟದಲ್ಲಿ ಕೊನೆಗೊಳ್ಳುತ್ತದೆ ಮತ್ತು ಕೆಲವೇ ಸೆಕೆಂಡುಗಳಲ್ಲಿ ತಾಪಮಾನವು 100-200 ಮಿಲಿಯನ್ ಡಿಗ್ರಿಗಳಷ್ಟು ಹೆಚ್ಚಾಗುತ್ತದೆ" ಎಂದು ನೋವಾವನ್ನು ಅಧ್ಯಯನ ಮಾಡಿದ ನಿವೃತ್ತ ಜರ್ಮನ್ ಖಗೋಳಶಾಸ್ತ್ರಜ್ಞ ಜೋಕಿಮ್ ಕ್ರೌಟರ್ ಹೇಳಿದರು.
ನಾಸಾದ ಪ್ರಕಾರ, ಈ ಘಟನೆಯು 'ಟಿ ಕರೋನೇ ಬೋರಿಯಾಲಿಸ್' ಎಂಬ ವ್ಯವಸ್ಥೆಯಲ್ಲಿ ನಡೆಯುತ್ತದೆ ಮತ್ತು ನಮ್ಮ ಗ್ರಹದ ಉತ್ತರ ಗೋಳಾರ್ಧದಲ್ಲಿರುವವರು ಇದನ್ನು ವೀಕ್ಷಿಸಬಹುದು. ದೂರದ ನಕ್ಷತ್ರ ವ್ಯವಸ್ಥೆಯು ಸತ್ತ ನಕ್ಷತ್ರವನ್ನು ಹೊಂದಿದೆ, ಇದನ್ನು ಸಾಮಾನ್ಯವಾಗಿ 'ಬಿಳಿ ಕುಬ್ಜ' ಎಂದು ಕರೆಯಲಾಗುತ್ತದೆ. 'ಇದು ಕೆಂಪು ನಕ್ಷತ್ರದ ಸುತ್ತ ನಿಕಟವಾಗಿ ಪರಿಭ್ರಮಿಸುತ್ತದೆ.
ಈ ವೇಳೆ ಬಿಳಿ ಕುಬ್ಜದಲ್ಲಿ ಒತ್ತಡ ಮತ್ತು ಶಾಖದಿಂದಾಗಿ ಅದು ಸ್ಫೋಟಗೊಳ್ಳುತ್ತದೆ. ನಕ್ಷತ್ರ ವ್ಯವಸ್ಥೆಯು ಬರಿಗಣ್ಣಿನಿಂದ ನೋಡಲು ತುಂಬಾ ದೂರದಲ್ಲಿದ್ದರೂ, ಸ್ಫೋಟವು ಅದರ ಉತ್ತುಂಗವನ್ನು ತಲುಪಿದ ನಂತರ ದುರ್ಬೀನುಗಳ ಮೂಲಕ ಗೋಚರಿಸುತ್ತದೆ.
ಇದು ಮಾನವರು ಹಾಗೂ ಪ್ರಾಣಿ ಸಂಕುಲದ ಮೇಲೆ ಯಾವುದೇ ರೀತಿಯ ಪ್ರಭಾವ ಬೀರದಿದ್ದರೂ ಆಕಾಶದಲ್ಲಿ ಸಂಭವಿಸುವ ಅಪರೂಪದ ವಿಸ್ಮಯವಾಗಿದೆ. 80 ವರ್ಷಗಳಲ್ಲಿ ಒಮ್ಮೆ ಮಾತ್ರ ಸಂಭವಿಸಬಹುದಾದ ಪ್ರಕ್ರಿಯೆ ಇದಾಗಿದೆ. ಹೀಗಾಗಿ ಎಲ್ಲರ ದೃಷ್ಟಿ ಈಗ ಈ ನೋವಾ ಸ್ಫೋಟದ ಮೇಲೆ ನೆಟ್ಟಿದ್ದು, ಉತ್ರರ ಗೋಳಾರ್ಧದ ಜನರು ಬರಿಗಣ್ಣಿನಿಂದ ಈ ಅಪರೂಪದ ವಿದ್ಯಮಾನ ಕಣ್ತುಂಬಿಕೊಳ್ಳಬಹುದು. ಮುಂದಿನ ದಿನಗಳಲ್ಲಿ ಈ ಕುರಿತ ನಿಖರ ಮಾಹಿತಿಗಳು ಹೊರಬೀಳಬಹುದು.



Click it and Unblock the Notifications