Latest Updates
-
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ! -
ಚೆನ್ನೈ ಮಳೆ ಅಲರ್ಟ್: ಹೊರಗೆ ಹೋಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ
ಬಹುತೇಕ ಖಚಿತವಾಯ್ತಾ ಟಿಕ್‌ಟಾಕ್ ರಿಟರ್ನ್..? ಹೊಸ ಹುದ್ದೆಗೆ ನೇಮಕಾತಿ!!
ಟಿಕ್ ಟಾಕ್ ಹೆಸರು ಬಹುತೇಕರು ಕೇಳಿರುತ್ತಾರೆ. ಭಾರತದಲ್ಲಿ ಅತೀ ಕಡಿಮೆ ಸಮಯದಲ್ಲಿ ಫೇಮಸ್ ಆಗಿದ್ದಲ್ಲದೆ ಯುವ ಜನತೆಯ ಮನ ಗೆದ್ದಿದ್ದ ಚೈನೀಸ್ ಮೂಲದ ಮೊಬೈಲ್ ಆಪ್ ಆಗಿತ್ತು. ಶಾರ್ಟ್ ವಿಡಿಯೋ ಹಂಚಿಕೊಳ್ಳುವ ಮೂಲಕ ಲಕ್ಷಾಂತರ ಮಂದಿ ನಿತ್ಯ ಬಳಸುತ್ತಿದ್ದ ಆಪ್ ಇದಾಗಿತ್ತು. ಆದ್ರೆ ಭಾರತದಲ್ಲಿ 2020ರಲ್ಲಿ ಈ ಅಪ್ಲಿಕೇಶನ್ ಬ್ಯಾನ್ ಮಾಡಲಾಗಿತ್ತು.
ಆದ್ರೆ ಆಗಾಗ ಟಿಕ್‌ಟಾಕ್ ಮತ್ತೆ ಭಾರತಕ್ಕೆ ಮರಳಲಿದೆ ಎಂಬ ಸುದ್ದಿ ಹರಿದಾಡುವುದು ನೋಡಬಹುದು. ಇದಕ್ಕೆ ಸಾಕ್ಷಿ ಎನ್ನುವಂತೆ ಈಗ ಬಲವಾದ ಕಾರಣ ಕೂಡ ಸಿಕ್ಕಿದೆ. ಟಿಕ್ ಟಾಕ್ ಭಾರತಕ್ಕೆ ಮರಳುವ ಸಾಧ್ಯತೆ ದಟ್ಟವಾಗಿದೆ. ಏಕೆಂದರೆ ಬೈಟ್‌ಡ್ಯಾನ್ಸ್ ಎಂಬ ಚೀನಾ ಮೂಲದ ಸಂಸ್ಥೆಯ ಅಡಿಯಲ್ಲಿ ಟಿಕ್‌ಟಾಕ್ ಕಾರ್ಯ ನಿರ್ವಹಿಸುತ್ತಿದ್ದು, ಈಗ ಭಾರತದಲ್ಲಿ ನೇಮಕಾತಿಗೆ ಮುಂದಾಗಿರುವುದು ಅಚ್ಚರಿ ಮೂಡಿಸಿದೆ.

ಟಿಕ್‌ಟಾಕ್ ತನ್ನ ಲಿಂಕ್ಡ್‌ಇನ್ ಖಾತೆಯಲ್ಲಿ 2 ಹೊಸ ನೇಮಕಾತಿ ಪೋಸ್ಟ್ ಹಂಚಿಕೊಂಡಿದೆ. ತನ್ನ ಗುರುಗ್ರಾಮ್‌ನಲ್ಲಿರುವ ಕಚೇರಿಗೆ ಉದ್ಯೋಗಿಗಳ ನೇಮಿಸಿಕೊಳ್ಳಲು ಮುಂದಾಗಿದೆ. ಈ ಕಾರಣಕ್ಕೆ ಟಿಕ್‌ಟಾಕ್ ಸದ್ಯದಲ್ಲೇ ಭಾರತಕ್ಕೆ ಮರಳುವುದು ಖಚಿತ ಎಂಬ ಮಾತುಗಳ ಹರಿದಾಡುತ್ತಿವೆ.
ಲಿಂಕ್ಡ್‌ಇನ್‌ನಲ್ಲಿ ಹಂಚಿಕೊಂಡ ಪೋಸ್ಟ್ ಪ್ರಕಾರ, ಟಿಕ್‌ಟಾಕ್ ಗುರುಗ್ರಾಮ್ ಕಚೇರಿಯಲ್ಲಿ ಎರಡು ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲು ಮುಂದಾಗಿದೆ. ಕಳೆದ ಆಗಸ್ಟ್ 29ರಂದು ಈ ಎರಡು ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಪೋಸ್ಟ್ ಹಂಚಿಕೊಂಡಿದೆ. ಇದಕ್ಕೆ 100ಕ್ಕೂ ಹೆಚ್ಚು ಮಂದಿ ಅರ್ಜಿ ಸಲ್ಲಿಸಿದ್ದಾರೆ.
ಈ ಹಿಂದೆ ಟಿಕ್‌ಟಾಕ್ ಕೆಲ ಬಳಕೆದಾರರಿಗೆ ಲಭ್ಯವಾಗಿತ್ತು, ಇದು ಭಾರೀ ಸುದ್ದಿಯಾಗಿತ್ತು. ಆದ್ರೆ ಇದೊಂದು ಟೆಕ್ನಿಕಲ್ ಗ್ಲಿಚ್ ಎಂದು ಮಾಹಿತಿ ತಂತ್ರಜ್ಞಾನ ಇಲಾಖೆ ದೃಢೀಕರಿಸಿತ್ತು. ಟಿಕ್‌ಟಾಕ್ ಭಾರತಕ್ಕೆ ಮರಳಿಲ್ಲ, ಬದಲಿಗೆ ಇಲ್ಲಿ ಟೆಕ್ನಿಕಲ್ ಗ್ಲಿಚ್ ಕಾಣಿಸಿಕೊಂಡಿದೆ ಎಂದು ಹೇಳಲಾಗಿತ್ತು. 2020ರಿಂದ ಆಪಲ್ ಸ್ಟೋರ್ ಹಾಗೂ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಅಪ್ಲಿಕೇಶನ್ ಡೌನ್‌ಲೋಡ್ ಮಾಡಲು ಆಗುತ್ತಿಲ್ಲ. ಆದ್ರೆ ಭಾರತದಲ್ಲಿ ಮರಳಿ ಬರುವ ಮಾತುಗಳು ಹರಡುತ್ತಲೇ ಇದೆ.
ಆದಾಗ್ಯೂ ಟಿಕ್‌ಟಾಕ್‌ನ ಸ್ಥಿತಿಯಲ್ಲಿ ಯಾವುದೇ ಬದಲಾವಣೆಯನ್ನು ಸರ್ಕಾರಿ ಮೂಲಗಳು ದೃಢಪಡಿಸಿಲ್ಲ. ಭಾರತದಲ್ಲಿ ಟಿಕ್‌ಟಾಕ್ ಪ್ರವೇಶಸಾಧ್ಯತೆಯನ್ನು ಸೂಚಿಸುವ ವರದಿಗಳು ಸತ್ಯಕ್ಕೆ ದೂರಾಗಿವೆ ಎಂದು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಸ್ಪಷ್ಟಪಡಿಸಿದೆ.
ಭಾರತದಲ್ಲಿ ಟಿಕ್ ಟಾಕ್ ಬ್ಯಾನ್ ಆಗಿದ್ದು ಏಕೆ?
ಚೀನಾದ ಬೈಟ್‌ಡ್ಯಾನ್ಸ್ ಒಡೆತನದ ಟಿಕ್‌ಟಾಕ್, ಜೂನ್ 2020 ರಲ್ಲಿ ಭಾರತ ಸರ್ಕಾರದಿಂದ ನಿಷೇಧಿಸಲ್ಪಟ್ಟಿತು. ಇದರ ಜೊತೆಗೆ 58 ಅಪ್ಲಿಕೇಶನ್‌ಗಳು ಅಂದು ಬ್ಯಾನ್ ಆಗಿದ್ದವು. ಲಡಾಖ್ ಭಾಗದ ಗಾಲ್ವಾನ್ ಕಣಿವೆಯಲ್ಲಿ ಭಾರತ ಹಾಗಗೂ ಚೀನಾ ಸೈನಿಕರ ನಡುವಿನ ಕಾದಾಟ ಹಾಗೂ ಬಳಿಕ ಗಡಿಯಲ್ಲಿ ಉದ್ವಿಗ್ನತೆ ಉಂಟಾಗಿತ್ತು. ಇದಾದ ಬಳಿಕ ಭಾರತ ಚೀನಾ ಸಂಬಂಧಿಸಿದ್ದ ಹಲವು ಅಪ್ಲಿಕೇಶನ್ ಬ್ಯಾನ್ ಮಾಡುವ ನಿರ್ಧಾರ ಮಾಡಿತ್ತು.
ಈ ಬ್ಯಾನ್ ಆದ ಅಪ್ಲಿಕೇಶನ್‌ಗಳಲ್ಲಿ ಪ್ಲೇಯರ್ಸ್ ಅನೌನ್ ಬ್ಯಾಟಲ್ ಗ್ರೌಂಡ್ (PUBG) ಭಾರತದಲ್ಲಿ ತನ್ನ ಹೆಸರು ಬದಲಾಯಿಸಿಕೊಂಡು ಮರಳಿದೆ. BGMI ಆಗಿ ಈಗ ಕಾರ್ಯ ನಿರ್ವಹಿಸುತ್ತಿದೆ. ಹಾಗೆ ಇದು ಚೀನಾದ ಫಂಡಿಂಗ್‌ನಿಂದ ಹೊರಗುಳಿದ ಅಪ್ಲಿಕೇಶನ್ ಆಗಿದೆ. ಇನ್ನು ಟಿಕ್‌ಟಾಕ್ ಕೂಡ ಭಾರತಕ್ಕೆ ಮರಳುವ ಸಾಧ್ಯತೆಗಳು ಹೆಚ್ಚುತ್ತಲೇ ಇದೆ. ಭಾರತದಲ್ಲಿ ಟಿಕ್‌ಟಾಕ್ ನಿಷೇಧಕ್ಕೂ ಮೊದಲು ಅಂದಾಜು 200 ಮಿಲಿಯನ್ ಬಳಕೆದಾರರನ್ನು ಹೊಂದಿತ್ತು. ಈಗ ಸಂಸ್ಥೆಯ ನೇಮಕಾತಿ ಜಾಹೀರಾತು ಪೋಸ್ಟ್ ವೈರಲ್ ಆಗಿದೆ. ಹಾಗೆ ಭಾರತಕ್ಕೆ ಮರಳುವುದು ಖಚಿತ ಎಂಬ ಮಾತುಗಳು ಕೇಳಿಬರುತ್ತಿದೆ.



Click it and Unblock the Notifications
