Latest Updates
-
ಸುಪ್ರೀಂ ಕೋರ್ಟ್ ಲೋಕ್ ಅದಾಲತ್ ದಿನ 2: ನಿಮ್ಮ ಪ್ರಕರಣ ಇತ್ಯರ್ಥವಾಗಲು ಈ ದಾಖಲೆಗಳು ಕಡ್ಡಾಯ! -
ರಕ್ಷಾ ಬಂಧನ 2026: ಹಬ್ಬದ ಸಂಭ್ರಮಕ್ಕೆ ಬಜೆಟ್ ಮತ್ತು ಪ್ಲಾನಿಂಗ್ ಹೀಗಿರಲಿ! -
ಮಳೆಗಾಲದಲ್ಲಿ ಬೆಂಗಳೂರಿನ ಮನೆ ಮತ್ತು ಬಾಲ್ಕನಿ ರಕ್ಷಣೆ: 40 ನಿಮಿಷದ ಸಿಂಪಲ್ ಚೆಕ್ಲಿಸ್ಟ್ -
ಬೆಂಗಳೂರಿನಲ್ಲಿ 2 ದಿನ ಭಾರಿ ಪವರ್ ಕಟ್: ಈ 70 ಪ್ರದೇಶಗಳಲ್ಲಿ ಕರೆಂಟ್ ಇರಲ್ಲ, ಮುನ್ನೆಚ್ಚರಿಕೆ ವಹಿಸಿ! -
ಈರುಳ್ಳಿ ಬೆಲೆ ಏರಿಕೆ ಬಿಸಿ: ₹800ರಲ್ಲಿ ವಾರಪೂರ್ತಿ ಪ್ರೋಟೀನ್ ಯುಕ್ತ ಆರೋಗ್ಯಕರ ಊಟದ ಪ್ಲಾನ್! -
ಹಬ್ಬದ ಸಿಹಿ ತಯಾರಿಗೆ ಸಕ್ಕರೆ ಬೆಲೆ ಬಿಸಿ: ಜೇಬಿಗೆ ಹೊರೆಯಾಗದಂತೆ ಸಂಭ್ರಮಿಸುವುದು ಹೇಗೆ? -
LPG e-KYC ಗಡುವು: ನಾಳೆಯೇ ಕೊನೆಯ ದಿನ, ನಿಮ್ಮ ಗ್ಯಾಸ್ ಸಂಪರ್ಕ ಕಡಿತವಾಗದಂತೆ ತಡೆಯುವುದು ಹೇಗೆ? -
BWF ಸೆಮಿಫೈನಲ್ ವೀಕ್ಷಿಸುವಾಗ ಮೈಕೈ ನೋವೇ? 8 ನಿಮಿಷದ ಈ ಸಿಂಪಲ್ ವ್ಯಾಯಾಮ ಮಾಡಿ! -
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ?
96 ವರ್ಷದಿಂದ ಒಂದೇ ಒಂದು ಮಗು ಜನಿಸಿಲ್ಲ..! ಈ ದೇಶದಲ್ಲಿ ಆಸ್ಪತ್ರೆಯೂ ಇಲ್ಲ..!
ನಿಮಿಷವೊಂದಕ್ಕೆ ವಿಶ್ವದಾದ್ಯಂತ ಎಷ್ಟು ಶಿಶುಗಳು ಜನಿಸಲಿವೆ ಎಂದರೆ ಸುಮಾರು 250ಕ್ಕೂ ಹೆಚ್ಚು ಎಂದು ಉತ್ತರಿಸಬಹುದು. ವಿಶ್ವದ ಎಲ್ಲಾ ಕಡೆಗಳಲ್ಲು ಮಕ್ಕಳು ಜನಿಸುವುದು ಕಾಮನ್. ಅದರಲ್ಲೂ ಮಕ್ಕಳು ಇಲ್ಲದೆ ಇರುವ ದೇಶ ಯಾವುದಾದರು ಇದೆಯೇ ಎಂದು ಪ್ರಶ್ನಿಸಿದರೆ ಇಲ್ಲ ಎಂದು ಹೇಳಬಹುದು. ಆದ್ರೆ ಇಲ್ಲೊಂದು ದೇಶದಲ್ಲಿ ಮಕ್ಕಳೇ ಇಲ್ಲ. ಹಾಗೆ ಇಲ್ಲಿ ಒಂದೇ ಒಂದು ಆಸ್ಪತ್ರೆಯೂ ಇಲ್ಲ.
ನಿಮಗೆ ಈ ವಿಚಾರ ಹೊಸದು ಅಥವಾ ವಿಚಿತ್ರ ಎನಿಸಬಹುದು, ಆದ್ರೆ ಈ ರೀತಿಯ ವಿಚಿತ್ರ ದೇಶವೊಂದಿದೆ. 21ನೇ ಶತಮಾನದಲ್ಲೂ ಆಸ್ಪತ್ರೆಯನ್ನೇ ತೆರೆಯದ ದೇಶ ಯಾವುದಾದರು ಇದೆಯೇ ಎಂಬ ಕುತೂಹಲ ನಿಮ್ಮಲ್ಲೂ ಮೂಡಬಹುದು. ಏಕೆಂದರೆ ಈ ಹೆಜ್ಜೆ ಹೆಜ್ಜೆಗೂ ಆಸ್ಪತ್ರೆ, ಕ್ಲೀನಿಕ್, ಮೆಡಿಕಲ್‌ಗಳ ನೋಡಬಹುದು. ಆದರಲ್ಲೂ ಭಾರತದಲ್ಲಿ ಈ ಸಂಖ್ಯೆ ದುಪಟ್ಟಾಗುತ್ತಿದೆ.

ಆದ್ರೆ ಈ ದೇಶದಲ್ಲಿ ಹುಡುಕಿದರು ಒಂದೇ ಒಂದು ಆಸ್ಪತ್ರೆ ಇಲ್ಲ. ಹೌದು ವಿಶ್ವದ ಅತ್ಯಂತ ಚಿಕ್ಕ ದೇಶ ಎಂದು ಕರೆಸಿಕೊಳ್ಳುವ ವ್ಯಾಟಿಕನ್ ಸಿಟಿ ಈ ಅಚ್ಚರಿಗೆ ಕಾರಣವಾಗುವ ದೇಶ ಎನ್ನಬಹುದು. ಇಲ್ಲಿ ರೋಮನ್ ಕ್ಯಾಥೋಲಿಕ್ ಜನರು ಹೆಚ್ಚಾಗಿ ವಾಸವಿದ್ದಾರೆ, ಈ ದೇಶದ ವಿಸ್ತೀರ್ಣವೂ ಚಿಕ್ಕದಾಗಿದ್ದು ಜನಸಂಖ್ಯೆ ಕೂಡ ಬಹಳ ಚಿಕ್ಕದು.
ಅಚ್ಚರಿಯ ವಿಚಾರ ಅಂದರೆ ಈ ದೇಶ 1929ರಲ್ಲಿ ಸ್ಥಾಪನೆಗೊಂಡಿದೆ. ಅಲ್ಲಿಂದ ಇಲ್ಲಿಯವರೆಗೆ ಸರ್ಕಾರದ ಮಾಹಿತಿಯಂತೆ ಆ ದೇಶದಲ್ಲಿ ಒಂದೇ ಒಂದು ಮಗು ಜನಿಸಿಲ್ಲ. ಅರೇ ಇದು ಹೇಗೆ ಸಾಧ್ಯ ಅಲ್ಲಿ ಜನರು ಹೇಗೆ ವಾಸಿಸುತ್ತಿದ್ದಾರೆ ಎಂದು ನಿಮಗೆ ಅಚ್ಚರಿಯಾಗುತ್ತಿರಬಹುದು. ಈ ದೇಶ ರೂಪುಗೊಂಡ ಬಳಿಕ ಈವರೆಗೂ ಒಂದೇ ಒಂದು ಆಸ್ಪತ್ರೆ ನಿರ್ಮಾಣ ಮಾಡಿಲ್ಲ. ಆಸ್ಪತ್ರೆ ನಿರ್ಮಾಣ ಕುರಿತು ಕೂಗುಗಳು ಕೇಳಿಬಂದಾಗಲು ಅಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ಮುಂದಾಗಲೇ ಇಲ್ಲ.
ಇನ್ನು ಈ ದೇಶದಲ್ಲಿ ಮಕ್ಕಳು ಜನಿಸಿಲ್ಲ ಅಂದ ಮಾತ್ರಕ್ಕೆ ಅಲ್ಲಿ ಮಕ್ಕಳಿಲ್ಲ ಎಂದಲ್ಲ. ಈ ದೇಶದಲ್ಲಿ ಮಕ್ಕಳ ಜನಸಂಖ್ಯೆಯೂ ಇದೆ. ಅಚ್ಚರಿ ಏನೆಂದರೆ ಈ ದೇಶದಲ್ಲಿ ಒಂದೇ ಒಂದು ಆಸ್ಪತ್ರೆ ಇಲ್ಲದ ಕಾರಣ ಅಲ್ಲಿ ಹೆರಿಗೆ ಆಗುವುದೇ ಇಲ್ಲ. ಬದಲಿಗೆ ಗರ್ಭಿಣಿಯರು ತಮ್ಮ ಹೆರಿಗೆಯ ಸಮಯಕ್ಕೂ ಮೊದಲೇ ಅವರು ಒಕ್ಕದ ರೋಮ್ ನಗರಕ್ಕೆ ಬರುತ್ತಾರೆ. ರೋಮ್‌ನಲ್ಲಿರುವ ಆಸ್ಪತ್ರೆಗೆ ಅವರು ದಾಖಲಾಗುತ್ತಾರೆ.
ಇನ್ನೊಂದು ಕಡೆ ಈ ವ್ಯಾಟಿಕನ್ ಸಿಟಿಯಲ್ಲಿ ಮನೆಯಲ್ಲಿ ಹೆರಿಗೆ ಮಾಡಿಸುವ ಸಂಪ್ರದಾಯವಿಲ್ಲ, ಅದನ್ನು ಪರಿಗಣಿಸುವುದು ಇಲ್ಲ. ಹೀಗಾಗಿ ಅಲ್ಲಿನ ಗರ್ಭಿಣಿಯರು ರೋಮ್ ನಗರದಲ್ಲಿಯೇ ಮಕ್ಕಳಿಗೆ ಜನ್ಮ ನೀಡುತ್ತಾರೆ, ಇದರಿಂದ ಈ ವ್ಯಾಟಿಕನ್ ಸಿಟಿಯಲ್ಲಿ ಕಳೆದ 90ಕ್ಕೂ ಹೆಚ್ಚು ವರ್ಷದಿಂದ ಒಂದೇ ಒಂದು ಮಗು ಕೂಡ ಜನಿಸಿಲ್ಲ ಎಂದು ಹೇಳಲಾಗುತ್ತದೆ.
ವ್ಯಾಟಿಕನ್ ಸಿಟಿ ಕೇವಲ 118 ಎಕರೆ ಅಷ್ಟು ದೊಡ್ಡದಾದ ದೇಶವಾಗಿದೆ. ಕೆಲವೇ ನಿಮಿಷದಲ್ಲಿ ಪಕ್ಕದ ರೋಮ್‌ಗೆ ಪ್ರಯಾಣಿಸಬಹುದು. ಅಲ್ಲಿ ಗಡಿಗಳು ಕೂಡ ಇಲ್ಲ. ಹಾಗೆ ರೋಮ್‌ನಲ್ಲಿ ಅತ್ಯಾಧುನಿಕ ಆಸ್ಪತ್ರೆಗಳಿವೆ. ಹೀಗಾಗಿ ವ್ಯಾಟಿಕನ್ ಸಿಟಿಯಲ್ಲಿ ಆಸ್ಪತ್ರೆ ತೆರೆಯುವ ಅನಿವಾರ್ಯವೇ ಎದುರಾಗಿಲ್ಲ. ಹಾಗೆ ಇತ್ತೀಚಿನ 2023ರ ವರದಿಯಂತೆ ಈ ದೇಶದಲ್ಲಿ ನೆಲೆಸಿರುವುದು ಕೇವಲ 764 ಮಂದಿ ಅಷ್ಟೇ ಎಂದು ತಿಳಿದುಬಂದಿದೆ. ಇಷ್ಟು ಕಡಿಮೆ ಮಂದಿ ನೆಲೆಸಿರುವ ಈ ಪ್ರದೇಶದಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ಮುಂದಾಗಿಲ್ಲ ಎಂದು ತಿಳಿದುಬಂದಿದೆ.
ಇಷ್ಟು ಕಡಿಮೆ ಜನಸಂಖ್ಯೆ ಇದ್ದರೂ ಈ ದೇಶದಲ್ಲಿ ಅಪರಾಧ ಪ್ರಮಾಣ ಅಧಿಕವಾಗಿದೆ, ಅಲ್ಲಿ ಕಳ್ಳತನ, ದರೋಡೆಯಂತಹ ಕೃತ್ಯಗಳು ನಡೆಯುವುದು ಸಾಮಾನ್ಯ ಎನ್ನುವಂತಾಗಿದೆ. ಹಾಗೆ ಈ ಪುಟ್ಟ ದೇಶಕ್ಕೆ ಲಕ್ಷ ಲಕ್ಷ ಮಂದಿ ಪ್ರವಾಸಿಗರು ವಾರ್ಷಿಕವಾಗಿ ಭೇಟಿ ನೀಡುತ್ತಾರೆ. ಈ ಪುಟ್ಟ ದೇಶ ಎರಡು ರೈಲ್ವೆ ನಿಲ್ದಾಣಗಳನ್ನೂ ಹೊಂದಿದೆ. ಅವು ಸುಮಾರು 300 ಮೀಟರ್ ಉದ್ದವಿದೆ. ಇವು ಸರಕು ಸಾಗಾಣಿಕೆಗೆ ಮಾತ್ರ ಬಳಸಲ್ಪಡುತ್ತಿವೆ.



Click it and Unblock the Notifications