Latest Updates
-
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು? -
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ
ಸೆಟ್ಟೇರಿದ ಐಪಿಎಸ್ ಅಧಿಕಾರಿ ಕಿರಣ್ ಬೇಡಿ ಜೀವನಾಧಾರಿತ ಸಿನಿಮಾ..! ಯಾರು ಈ ಅಧಿಕಾರಿ
ಭಾರತದ ಖಡಕ್ ಪೊಲೀಸ್ ಆಫಿಸರ್ ಯಾರು ಅಂದ್ರೆ ಒಂದಿಷ್ಟು ಹೆಸರು ನಿಮ್ಮ ನೆನಪಿಗೆ ಬರುತ್ತದೆ. ಅದರಲ್ಲೀ ಒಂದಿಷ್ಟು ಮಂದಿ ಮಹಿಳಾ ಐಪಿಎಸ್ ಅಧಿಕಾರಿ ಕಿರಣ್ ಬೇಡಿ ಹೆಸರನ್ನು ಸಹ ಹೇಳಬಹುದು. ಭಾರತದ ಮೊದಲ ಮಹಿಳಾ ಐಪಿಎಸ್ ಅಧಿಕಾರಿಯಾಗಿದ್ದ ಅವರು ವೃತ್ತಿ ಜೀವನದಲ್ಲಿ ಗಮನಾರ್ಹ ಸಾಧನೆ ಮಾಡಿದ್ಧರು.
ಶೀಘ್ರದಲ್ಲೇ ಭಾರತದ ಮೊದಲ ಮಹಿಳಾ ಐಪಿಎಸ್ ಅಧಿಕಾರಿ ಕಿರಣ್ ಬೇಡಿ ಅವರ ಜೀವನ ಚರಿತ್ರೆ ಸಿನಿಮಾವಾಗುತ್ತಿದೆ. ಡ್ರೀಮ್ ಸ್ಲೇಟ್ ಪಿಕ್ಚರ್ಸ್ ಅವರ ಜೀವನ ಚರಿತ್ರೆಯನ್ನು ಸಿನಿಮಾ ಮಾಡಲು ಮುಂದಾಗಿದೆ. ಹೀಗಾಗಿ ಮೊದಲ ಮಹಿಳಾ ಐಪಿಎಸ್ ಅಧಿಕಾರಿಯ ಜೀವನ ಚರಿತ್ರೆಯ ಸಿನಿಮಾದಲ್ಲಿ ಏನೆಲ್ಲಾ ಇರಲಿದೆ ಎಂಬ ಕುತೂಹಲ ಮೂಡಿದೆ.

ಯಾರು ಈ ಕಿರಣ್ ಬೇಡಿ
ಕಿರಣ್ ಬೇಡಿ ಅವರು 1972 ರಲ್ಲಿ ಸೇವೆಗೆ ಸೇರುವ ಮೂಲಕ ಭಾರತದ ಮೊದಲ ಮಹಿಳಾ IPS ಅಧಿಕಾರಿಯಾಗುವ ಮೂಲಕ ಇತಿಹಾಸ ಬರೆದಿದ್ದರು. ಇದಕ್ಕೂ ಮೊದಲು ಅವರು ರಾಷ್ಟ್ರೀಯ ಜೂನಿಯರ್ ಟೆನಿಸ್ ಚಾಂಪಿಯನ್ ಆಗಿದ್ದರು ಮತ್ತು ನಂತರ 2016 ರಿಂದ 2021 ರವರೆಗೆ ಪುದುಚೇರಿಯ ಲೆಫ್ಟಿನೆಂಟ್ ಗವರ್ನರ್ ಆಗಿ ಸೇವೆ ಸಲ್ಲಿಸಿದರು. ಅವರು ದೆಹಲಿಯ ತಿಹಾರ್ ಜೈಲಿನಲ್ಲಿ ಗಮನಾರ್ಹ ಸುಧಾರಣೆಗಳ ತಂದು ಹೆಸರಾಗಿದ್ದರು. ಭ್ರಷ್ಟಾಚಾರದ ವಿರುದ್ಧ ಸಿಡಿದೆದ್ದು ಪ್ರಭಾವಿಗಳನ್ನೇ ಎದುರು ಹಾಕಿಕೊಂಡು ಹಲವಾರು ಬಾರಿ ವರ್ಗಾವಣೆಯ ರುಚಿ ಕಂಡಿದ್ದರು.
ಅವರ ಬಯೋಪಿಕ್‌ನ ಉದ್ದೇಶವು ಕಿರಣ್ ಬೇಡಿಯ ಜೀವನದ ಕುರಿತು ಹಾಗೂ ಅವರ ಕಷ್ಟದ ದಿನಗಳಲ್ಲಿ ಅವರು ತೆಗೆದುಕೊಂಡಿದ್ದ ನಿರ್ಧಾರಗಳನ್ನು ಜನರ ಮುಂದಿಡುವುದಂತೆ. ನಿರ್ದೇಶಕ ಕುಶಾಲ್ ಚಾವ್ಲಾ ಈ ಯೋಜನೆಯನ್ನು ನಾಲ್ಕು ವರ್ಷಗಳಿಂದ ಕೆಲಸ ಮಾಡುತ್ತಿರುವ ಪ್ರೀತಿಯ ಶ್ರಮ ಎಂದು ಬಣ್ಣಿಸಿದ್ದಾರೆ.
ಸದ್ಯ ಅವರ ಜೀವನ ಚರಿತ್ರೆಯ ಈ ಸಿನಿಮಾ 2025ಕ್ಕೆ ತೆರೆ ಮೇಲೆ ಬರುವ ಸಾಧ್ಯತೆ ಇದೆ. ಇದು ಅಂತರಾಷ್ಟ್ರೀಯ ಮಹಿಳಾ ದಿನದ 50ನೇ ವಾರ್ಷಿಕೋತ್ಸವದ ಅಂಗವಾಗಿ ಬಿಡುಗಡೆ ಆಗಲಿದೆ ಎಂದು ತಿಳಿದುಬಂದಿದೆ. ಇದಕ್ಕೂ ಮೊದಲು 2008ರಲ್ಲಿ ತೆರೆಕಂಡ ಕಿರಣ್ ಬೇಡಿ: ಯೆಸ್ ಮೇಡಮ್, ಸರ್ ಎಂಬ ಸಿನಿಮಾದಲ್ಲಿಯೂ ಕಿರಣ್ ಬೇಡಿ ಅವರ ಜೀವನದ ಕುರಿತ ಉಲ್ಲೇಖಗಳಿವೆ. ಆದರೆ ಇದರಲ್ಲಿ ಕಿರಣ್ ಬೇಡಿ ಜೀವನದ ಸಂಪೂರ್ಣ ಚಿತ್ರಣ ಇರಲಿಲ್ಲ. ಆಕೆಯ ಆರಂಭಿಕ ಜೀವನ ಹಾಗೂ ಅಧಿಕಾರ ವಹಿಸಿಕೊಂಡ ಕೆಲವೇ ವರ್ಷಗಳ ಚಿತ್ರಣ ಮಾತ್ರ ಇತ್ತು.
ಈಗ ಬೇಡಿ: ಎ ನೇಮ್ ಯು ನೌ, ದ ಸ್ಟೋರಿ ಯು ಡೋಂಟ್ ಎಂಬಬ ಶೀರ್ಷಿಕೆ ಅಡಿಯಲ್ಲಿ ಮಹಿಳಾ ಅಧಿಕಾರಿಯ ಸಿನಿಮಾ ತೆಗೆರೆ ಬರುತ್ತಿದೆ. ಸದ್ಯ ಈ ಸಿನಿಮಾ 2025ಕ್ಕೆ ತೆರೆ ಮೇಲೆ ಬರಲಿದೆ.
ಕನ್ನಡದಲ್ಲೂ ಬಂದಿತ್ತು ಕಿರಣ್ ಬೇಡಿ ಹೆಸರಿನ ಸಿನಿಮಾ
ಸ್ಯಾಂಡಲ್‌ವುಡ್‌ನಲ್ಲಿ ನಟಿ ಮಾಲಾಶ್ರೀ ಅಭಿನಯದ ಕಿರಣ್ ಬೇಡಿ ಸಿನಿಮಾ ಬಂದಿತ್ತು. ಆದರೆ ಈ ಸಿನಿಮಾಗೂ ಐಪಿಎಸ್ ಅಧಿಕಾರಿ ಕಿರಣ್ ಬೇಡಿಗೂ ಯಾವುದೇ ಸಂಬಂಧವಿರಲಿಲ್ಲ. ಇದು ಕಿರಣ್ ಬೇಡಿ ಅವರ ಹೆಸರಿನ ಮೇಲೆ ನಿರ್ಮಾಣಗೊಂಡಿದ್ದ ಸಿನಿಮಾ ಆಗಿತ್ತು, ಆದರೆ ಅಂದು ಈ ಹೆಸರಿನ ಮೇಲೆ ಸಿನಿಮಾ ರೆಡಿಯಾದಾಗ ವಿವಾದ ಸಹ ಹುಟ್ಟಿಕೊಂಡಿತ್ತು. ಬಳಿಕ ಸಿನಿಮಾದ ಹೆಸರು ಕನ್ನಡದ ಕಿರಣ್ ಬೇಡಿ ಎಂದು ಬದಲಾಯಿಸಲಾಗಿತ್ತು.
ಸದ್ಯ ಕಿರಣ್ ಬೇಡಿ ಈಗ ಸೇವೆಯಿಂದ ನಿವೃತ್ತಿ ಪಡೆದಿದ್ದು, ರಾಜಕೀಯದಲ್ಲಿ ಗುರುತಿಸಿಕೊಂಡಿದ್ದಾರೆ. ಬಿಜೆಪಿ ನಾಯಕಿಯಾಗಿಯೂ ಹೆಸರು ಮಾಡಿದ್ದಾರೆ.



Click it and Unblock the Notifications











