Latest Updates
-
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ! -
ಡೆಂಗ್ಯೂ ಭೀತಿ: ಕೇವಲ 10 ನಿಮಿಷದಲ್ಲಿ ನಿಮ್ಮ ಮನೆಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಿರಿ -
ಹಬ್ಬದ ಸೀಸನ್: ಕಲಬೆರಕೆ ಆಹಾರದಿಂದ ಎಚ್ಚರ! ಮಹಾರಾಷ್ಟ್ರ FDA ಕಠಿಣ ತಪಾಸಣೆ ಆರಂಭ -
ಶಿಕ್ಷಕರ ದಿನಾಚರಣೆ 2026: ನಿಮ್ಮ ಪೋಸ್ಟ್ ಟ್ರೆಂಡ್ ಆಗಲು ಬೆಸ್ಟ್ ಕ್ಯಾಪ್ಷನ್ಸ್ ಮತ್ತು ಗಿಫ್ಟ್ ಐಡಿಯಾಗಳು! -
ಮಳೆಗಾಲದ ಎಚ್ಚರಿಕೆ: ಹೊರಗೆ ವಾಕಿಂಗ್ ಹೋಗುವ ಮುನ್ನ ಈ ವಿಷಯ ಗಮನಿಸಿ, ಮನೆಯಲ್ಲೇ ಫಿಟ್ ಆಗಿರಿ -
ಗೃಹಹಿಂಸೆಯ ಸುಳಿಯಲ್ಲಿ ಸಿಲುಕಿದ್ದೀರಾ? ಸುರಕ್ಷಿತವಾಗಿ ಪಾರಾಗಲು ಈ ಮಾರ್ಗದರ್ಶಿ ಮತ್ತು ತುರ್ತು ಸಹಾಯವಾಣಿಗಳು ನಿಮಗೆ ನೆರವಾಗಲಿವೆ
ಭೂಮಿ ಮೇಲೆ ಮಾನವ ಕುಲ ನಾಶ ಹತ್ತಿರ: ಇಲಿಗಳ ಮೇಲಿನ ಪ್ರಯೋಗದಲ್ಲಿ ಅಚ್ಚರಿ!
ಭೂಮಿ ಮೇಲೆ ಸೃಷ್ಟಿಯಾದ ಪ್ರತಿಯೊಂದು ವಸ್ತುಗಳಿಗೂ ಅಂತ್ಯ, ನಾಶ ಅನ್ನೋದು ಇದ್ದೇ ಇದೆ. ಅದ್ರಲ್ಲೂ ಮಾನವ ನಿರ್ಮಿತ ಆಗಿರಲಿ ಅಥವಾ ಪ್ರಕೃತಿಯ ಸೃಷ್ಟಿಯಾಗಲಿ ಅದಕ್ಕೆ ಕೊನೆ ಎಂಬುದು ಕೂಡ ಇದ್ದೇ ಇರಲಿದೆ. ಕೆಲವೊಮ್ಮೆ ಮಾನವ ಅದನ್ನು ನಾಶ ಮಾಡಿದರೆ ಮತ್ತೆ ಕೆಲವೊಮ್ಮೆ ವರ್ಷಗಳು ಉರುಳಿದಂತೆ ಪ್ರಕೃತಿಯೇ ಅದನ್ನು ನಾಶ ಮಾಡಿಬಿಡುತ್ತದೆ.
ಹಾಗೆ ಈ ಭೂಮಿ ಮೇಲೆ ನೂರಾರು ದಶಕದಿಂದ ಜೀವಿಸಿರುವ ಮಾನವನು ಕೂಡ ಮುಂದೊಂದು ದಿನ ನಾಶವಾಗಲಿದ್ದಾನೆ. ಭೂಮಿ ಮೇಲೆ ಈಗ ಬರೋಬ್ಬರಿ 814.21 ಕೋಟಿ ಜನಸಂಖ್ಯೆ ಇದೆ. ಈ ಪ್ರಮಾಣದಲ್ಲಿ ಬೇರೆ ಯಾವ ಪ್ರಾಣಿಯೂ ಭೂಮಿ ಮೇಲಿಲ್ಲ ಎನ್ನಬಹುದು. ಹಾಗೆ ಮಾನವ ಕೂಡ ಮುಂದೊಂದು ದಿನ ಈ ಭೂಮಿಯಿಂದ ನಾಶವಾಗುತ್ತಾನೆ ಎಂದು ವಿಜ್ಞಾನಿಗಳ ತಂಡವೊಂದು ನಡೆಸಿದ ಅಧ್ಯಯನದಲ್ಲಿ ತಿಳಿದುಬಂದಿದೆ.

1968 ರಲ್ಲಿ ಯುಎಸ್ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ (NIMH) ನಲ್ಲಿ ನಡವಳಿಕೆಯ ಸಂಶೋಧಕರಾಗಿರುವ ಡಾ. ಜಾನ್ ಬಿ ಕ್ಯಾಲ್ಹೌನ್, ಈ ಕುರಿತಾದ ಅಧ್ಯಯನಕ್ಕೆ ಮುಂದಾದರು. ಈ ಆಧ್ಯಯನಕ್ಕೆ ಅವರು ಯೂನಿವರ್ಸ್ 25 ಎಂಬ ಉಪನಾಮ ಇಟ್ಟಿದ್ದರು. ಅದರಲ್ಲೂ ಅಧ್ಯಯನಕ್ಕೆ ಇಲಿಗಳ ಬಳಸಿಕೊಂಡರು. ಈ ಇಲಿಗಳಿಗೆ ಸಾವು ಬಾರದೆ ಇರುವಂತಹ ಕೃತಕ ಪರಿಸರವನ್ನು ಅವರು ನಿರ್ಮಿಸಿದ್ದರು.
ಪ್ರತಿ ಇಲಿಯನ್ನು 4.6 ಅಡಿಯ ಜಾಗದಲ್ಲಿ ಯಾವುದೇ ಹಾನಿ ಇಲ್ಲದ ಪರಿಸರದಲ್ಲಿ ಇರಿಸಲಾಗಿತ್ತು. ಅವುಗಳಿಗೆ ಅನಿಯಮಿತ ಆಹಾರ, ನೀರು, ಸೂಕ್ತ ಗೂಡು, ನಿಯಂತ್ರಿತ ಹವಾಮಾನ ಕೂಡ ನಿರ್ಮಿಸಲಾಗಿತ್ತು. ಈ ಜಾಗವು ಜಾಲರಿ ಸುರಂಗಗಳಿಂದ ಸಂಪರ್ಕ ಹೊಂದಿದ 256 ಗೂಡಿನ ಪೆಟ್ಟಿಗೆಗಳನ್ನು ಒಳಗೊಂಡಿತ್ತು. ಈ ಅಧ್ಯಯನವು ಮಾನವರ ಅಳಿವಿನ ಕುರಿತಾದ ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನ ಮಾಡಿದೆ.
ಈ ಅಧ್ಯಯನಕ್ಕಾಗಿ 4 ಗಂಡು ಹಾಗೆ 4 ಹೆಣ್ಣು ಇಲಿಗಳನ್ನು ಬಳಸಿಕೊಳ್ಳಲಾಯಿತು. ಸುಮಾರು ಮೂರುವರೆ ತಿಂಗಳ ನಂತರ ಈ ಇಲಿಗಳ ಮೊದಲ ಸಂತತಿ ಜನಿಸಿತು. ಹಾಗೆ ಈ ಇಲಿಗಳ ಸಂಖ್ಯೆ ಪ್ರತಿ 55 ದಿನಗಳಿಗೆ ದ್ವಿಗುಣವಾಗುವುದು ಗಮನಿಸಲಾಯಿತು. ಸುಮಾರು 19ನೇ ತಿಂಗಳಿನಲ್ಲಿ ಈ ಇಲಿಗಳ ಸಂಖ್ಯೆ ಬರೋಬ್ಬರಿ 2,200ಕ್ಕೆ ತಲುಪಿತು. ಆದ್ರೆ ಈ ಮಟ್ಟ ತಲುಪಿದ ಬಳಿಕ ಅದೇ ವೇಗದಲ್ಲಿ ಇಲಿಗಳ ಸಂಖ್ಯೆ ಹೆಚ್ಚಾಗಲಿಲ್ಲ ಎಂಬುದನ್ನು ಕೂಡ ವಿಜ್ಞಾನಿಗಳು ಅರಿತುಕೊಂಡರು. ಇಲಿಗಳ ಸಂಖ್ಯೆ ಹೆಚ್ಚಾದಂತೆ ಸಂತಾನೋತ್ಪತ್ತಿಯ ವೇಗ ಕಡಿಮೆ ಆಗುತ್ತಿರುವುದು ಗಮನಕ್ಕೆ ಬಂದಿತು.
ಅತಿಯಾದ ಜನದಟ್ಟಣೆಯೊಂದಿಗೆ ಸಾಮಾಜಿಕ ಸ್ಥಗಿತ ಎದುರಾಯಿತು ಎಂದು ವಿಶ್ಲೇಷಿಸಲಾಯಿತು. ಹಾಗೆ ಗಂಡು ಇಲಿಗಳು ತಮ್ಮ ಸಮುದಾಯದಲ್ಲಿ ಪ್ರಾಭಲ್ಯ ಸಾಧಿಸಲು ಮುಂದಾದವು. ಆಗಾಗ ಹಿಂಸಾತ್ಮಕ ಕಾದಾಟಗಳು ಸಾಮಾನ್ಯವಾದವು. ಪ್ರಬಲ ಗಂಡು ಇಲಿಗಳು ಮರಿಗಳ ಮೇಲೆಯೂ ದಾಳಿ ಮಾಡಿದವು. ಹಾಗೆ ಹೆಣ್ಣು ಇಲಿಗಳು ಕೂಡ ಮರಿಗಳಿಗೆ ಹಾಲುಣಿಸುವುದು, ಪಾಲನೆಯಂತಹ ಕೆಲಸದಿಂದ ದೂರ ಉಳಿದವು. ಅವುಗಳ ಮೇಲೆ ಆಕ್ರಮಣಕಾರಿಯಾಗಿ ತಿರುಗಿ ಬೀಳುತ್ತಿದ್ದವು. ಇದು ಅಸಹಜ ನಡುವಳಿಕೆಯಾಗಿತ್ತು.
ಹೆಣ್ಣು ಇಲಿಗಳು ತಮ್ಮನ್ನು ಪ್ರತ್ಯೇಕಿಸಿಕೊಂಡವು, ಆದರೆ ಗಂಡು ಇಲಿಗಳು ಸಾಮಾಜೀಕರಣ ಪ್ರಕ್ರಿಯೆಯಿಂದ ದೂರ ಉಳಿದಿರುವುದು ಕಂಡುಬಂದಿತು, ಅವು ಕೇವಲ ಆಹಾರ ಸೇವನೆ ಹಾಗೂ ನಿದ್ರೆಗೆ ಹೆಚ್ಚು ಒತ್ತು ನೀಡಿದವು. ಇದನ್ನು ವರ್ತನೆಯ ಕುಸಿತ ಎಂದು ಕರೆದರು. ತೀವ್ರ ಜನಸಂಖ್ಯೆಯ ಅಡಿ ಇದು ವರ್ತನೆಯ ಕುಸಿತಕ್ಕೆ ಕಾರಣವಾಗಲಿದೆ ಎಂದು ತಿಳಿದುಬಂದಿತು.
ಹೀಗಾಗಿ ಈ ಅಧ್ಯಯನ ಆರಂಭಗೊಂಡ 600 ದಿನಗಳಲ್ಲಿ ಮರಿಗಳ ಸಂಖ್ಯೆ ತೀವ್ರ ಕುಸಿತ ಕಂಡಿತು. ಹಾಗೆ 1970ರಲ್ಲಿ ಈ ಅಧ್ಯಯನದಲ್ಲಿದ್ದ ಎಲ್ಲಾ ಇಲಿಗಳು ಮೃತಪಟ್ಟವು. ಇದರಿಂದ ಮಾನವನ ಜನಸಂಖ್ಯೆಯು ಕೂಡ ಇದೇ ರೀತಿ ನಾಶವಾಗಬಹುದು ಎಂದು ಅಂದಾಜಿಸಲಾಯಿತು. ಜನಸಂಖ್ಯಾ ಪ್ರಮಾಣ ಹಾಗೆ ಸಾಮಾಜೀಕರಣ ಪ್ರಕ್ರಿಯೆಯಲ್ಲಿ ತ್ವರಿತ ಬದಲಾವಣೆಗಳು ಮುಂದೊಂದು ದಿನ ಮಾನವ ಜನಸಂಖ್ಯಾ ನಾಶಕ್ಕೆ ನಾಂದಿಯಾಗಲಿದೆ ಎಂದು ತಿಳಿದುಬಂದಿತು.



Click it and Unblock the Notifications